Tuesday, June 27, 2023

ಶ್ರೀರಂಗ ವಚನಾಮೃತ (Sriranga Vachanamruta)

ಧ್ಯೇಯ ಒಂದೇ ಆಗಿದ್ದರೆ ದೇಶದಲ್ಲಿ ಒಗ್ಗಟ್ಟು ಉಳಿಯುತ್ತದೆ. ಸಂಗೀತಗಾರನ ಮನೋಧರ್ಮವನ್ನು ಅನುಸರಿಸಿ ಮೃದಂಗ, ಪಿಟೀಲು, ಘಟ ಎಲ್ಲವನ್ನೂ ನುಡಿಸಿದರೆ ಪಕ್ಕವಾದ್ಯವಾಗುತ್ತದೆ. ಪಕ್ಕದಲ್ಲಿ ಕುಳಿತಿದ್ದರೂ ಸಂಗೀತಗಾರನು ಹಾಡುವುದೇ ಒಂದು, ಇವನು ನುಡಿಸುವುದೇ ಒಂದಾದರೆ ಪಕ್ಕವಾದ್ಯ ವಾಗಲಾರದು. ಸಂಗೀತಗಾರನು ಹಾಡುವ ಹಾಡನ್ನು ವಾದ್ಯಗಳ ಮೂಲಕ ತರುವ ಧ್ಯೇಯ ಒಂದಾಗಿದ್ದರೆ ಅಲ್ಲಿ ಒಡಕಿಗೆ ಅವಕಾಶವಿಲ್ಲ. ಅಂತೆಯೇ ಪುರುಷಾರ್ಥಕ್ಕನುಗುಣವಾದ ಬಾಳಾಟವೇ ಧ್ಯೇಯವಾಗಿದ್ದರೆ ಅಲ್ಲಿ ಒಡಕಿಗೆ ಅವಕಾಶವಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 22, 2023

ಶ್ರೀರಂಗ ವಚನಾಮೃತ (Sriranga Vachanamruta)

ನಾವು ಕಟ್ಟುವ ನಾಡೇ ಆಗಲೀ, ಬೀಡೇ ಆಗಲೀ ನಮ್ಮ ಜೀವನದ ಮಹಾಧ್ಯೇಯಕ್ಕೆ ತಕ್ಕಂತಿರಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 20, 2023

ಶ್ರೀರಂಗ ವಚನಾಮೃತ (Sriranga Vachanamruta)

ಬುದ್ಧಿ ಚೆನ್ನಾಗಿರುವಾಗ ಒಂದು ರೀತಿ ಕೆಲಸ ಮಾಡುತ್ತಾನೆ. ಕುಡಿದು ಮತ್ತೇರಿದಾಗ ಮತ್ತೊಂದು ರೀತಿ ಕೆಲಸ ಮಾಡುತ್ತಾನೆ. ಕೆಲಸ ಮಾಡುವ ವಿಚಾರದಲ್ಲಿ ತೆಗೆದುಕೊಂಡರೆ ಕುಡುಕನದೇ ಒಂದು ಕೈ ಮೇಲು ಎಂದು ಹೇಳಬೇಕು. ಆದರೆ ಬುದ್ಧಿ ಚೆನ್ನಾಗಿದ್ದಾಗ  ಗುರಿ  ಅಥವಾ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುತ್ತಾನೆ. ಹಾಗೆ ಅಜ್ಞಾನಕ್ಕೆ ಸಿಕ್ಕಿದ ಬುದ್ಧಿ, ಕುಡುಕ ಬುದ್ಧಿಯಂತಾಗುತ್ತೆ. ಕೆಲಸವೇನೋ ಹಗಲು ರಾತ್ರೆ ನಡೆಯುತ್ತಿದ್ದರೂ ಗೊತ್ತುಗುರಿ ಇರುವುದಿಲ್ಲ. ಆದರೆ ವಿವೇಕಿಗಳ ಜೀವನ ಒಂದು ಧ್ಯೇಯದೊಡನೆ ಕೂಡಿರುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 15, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಡೀ ಜೀವನವನ್ನು ಆಮೂಲಾಗ್ರವಾಗಿ ನೋಡಿ, ಜೀವನದ ಗುಟ್ಟೇನೆಂಬುದನ್ನು ಅರಿತು ಅದಕ್ಕನುಗುಣವಾಗಿ ಜೀವನವನ್ನು ಅಳವಡಿಸಿಕೊಳ್ಳುವುದೇ ಜೀವನದ ಮಹಾಧ್ಯೇಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 13, 2023

ಶ್ರೀರಂಗ ವಚನಾಮೃತ (Sriranga Vachanamruta)

ಆತ್ಮಸಾಕ್ಷಾತ್ಕಾರವು ಮಹಾಧ್ಯೇಯ. ಅದಕ್ಕಾಗಿ ಶರೀರ ರಕ್ಷಣೆ ಮಾಡಿಕೊಳ್ಳುವುದು ಅವಾಂತರಧ್ಯೇಯ. ಈ ಅವಾಂತರಧ್ಯೇಯಕ್ಕೆ ಎಲ್ಲ ಗಮನವನ್ನೂ ಕೊಟ್ಟು  ಧ್ಯೇಯವನ್ನು ಮರೆಯಬೇಡಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 8, 2023

ಶ್ರೀರಂಗ ವಚನಾಮೃತ (Sriranga Vachanamruta)

ಮಹಾಧ್ಯೇಯದ ಸಾಧನೆಗಾಗಿ ಅವಾಂತರಧ್ಯೇಯಗಳನ್ನು ಇಟ್ಟುಕೊಳ್ಳ ಬೇಕಾಗುವುದು. ಆದರೆ ಅವಾಂತರಧ್ಯೇಯಗಳ ಗೊಂದಲದಲ್ಲಿ ಮಹಾಧ್ಯೇಯವನ್ನು ಮರೆತುಬಿಡಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 6, 2023

ಶ್ರೀರಂಗ ವಚನಾಮೃತ (Sriranga Vachanamruta)

ಮನುಷ್ಯನು ನಡೆಯಲಾರದಾದಾಗ ದೊಣ್ಣೆಯನ್ನು ಊರಿಕೊಂಡು ನಡೆಯುವುದುಂಟು. ಊರಿಕೊಂಡು ನಡೆಯದಿದ್ದರೆ ಶರೀರಕ್ಕೆ ಅಪಾಯ. ಆದ್ದರಿಂದ ಊರಿಕೊಂಡೇ ನಡೆಯಬೇಕು. ಹಾಗೆ ಹೆಜ್ಜೆ ಹೆಜ್ಜೆಗೂ ಆ ದೊಣ್ಣೆಯ ಅವಲಂಬನ ಬೇಕಾದಂತೆ, ಜೀವಕ್ಕೆ ಅವಲಂಬನವಾದ ಭಗವಂತನನ್ನೂ ಹೆಜ್ಜೆಹೆಜ್ಜೆಗೂ ನೆನೆಸಿಕೊಳ್ಳುತ್ತಾ  ನಡೆಯಬೇಕಾದದ್ದೇ ಮಾನವನ ಧ್ಯೇಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 1, 2023

ಶ್ರೀರಂಗ ವಚನಾಮೃತ (Sriranga Vachanamruta)

ಮಹಾಧ್ಯೇಯಬದ್ಧವಾದ ಜೀವನ ಮಾಡಲು ಜೀವಕ್ಕೆ ಸ್ವಾತಂತ್ರ್ಯ ಬೇಕು. ಸತ್ಯವನ್ನುಳಿಸಿಕೊಂಡು, ಸತ್ಯದೊಡಗೂಡಿ ಬಾಳಾಟ ಮಾಡಲನುಗುಣವಾದ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 13, 2023

Sriranga Mahaguru - Nectarine Nuggets

Develop a Culture that is in tune with the Nature's flow of Life. The tree grows with the sap flowing to every nook and corner of the tree from the root. It emanates from the root alone. Like-wise, our life also should evolve with the connection to the Lord at the Root. If that Rasa (nectar) flows in all spheres of our activity, the development in the terrestrial, celestial and spiritual planes will be exquisite. First we should come to the Tīramāna - conclusion that our life consists of the three spheres to be filled with that Rasa; having reached that conclusion, we must develop our culture in consonance with it.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 9, 2023

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದ ಎಲ್ಲ ಬಗೆಯ ವಿಧಾನಗಳೂ ವಿಶ್ವವನ್ನು ನಡೆಸುವವನ ಹತ್ತಿರಕ್ಕೆ ಹೋಗಿ ಸೇರುವಂತೆ ಋಷಿಗಳು  ಜೀವನವನ್ನು ಅಣಿಮಾಡಿಕೊಂಡರು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 7, 2023

Sriranga Mahaguru - Nectarine Nuggets

Looking at a person in Śīrṣāsana (upside-down posture) we should not conclude that the head is ever on the ground and the legs are up always! In the same way, viewing a distorted life one should not jump to the conclusion that it is the norm. We would be erring then.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 6, 2023

Sriranga Mahaguru - Nectarine Nuggets

Truly there exists a shore for this ocean of life. Inadvertently, we have slipped into the abysmal ocean - Sāgara mixed with poison (gara). We must escape from this poison and lead a life of Amṛta (nectar) and Amara (immortality).

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 4, 2023

ಶ್ರೀರಂಗ ವಚನಾಮೃತ (Sriranga Vachanamruta)

ಆತ್ಮ, ಅದರ ಮೂಲರೂಪ, ನಂತರ ಅದರ ವಿಕಾಸದಲ್ಲಿ ಕಾಣುವ ರೂಪ, ಇವುಗಳನ್ನು ಭೌತಿಕವಾಗಿಯೂ, ದೈವಿಕವಾಗಿಯೂ, ಅಂತರ್ಬಾಹ್ಯ ದೃಷ್ಟಿಗಳಿಂದ ಗಮನಿಸಿ ನಮ್ಮ ಅಂತರ್ಬಾಹ್ಯ ಜೀವನಕ್ಕೆ ಪರಸ್ಪರ ಸಾಮರಸ್ಯವನ್ನು ತಂದುಕೊಡುವ ವಿಧಾನದೊಡನೆ ಜೀವನ ಮಾಡುವುದೇ ನಮ್ಮ ಮಹರ್ಷಿಗಳ ಗುರಿಯಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 2, 2023

ಶ್ರೀರಂಗ ವಚನಾಮೃತ (Sriranga Vachanamruta)

ಭಾರತರು ಎಂದರೆ ಇಂಡಿಯಾ ದೇಶದವರು ಎಂದಲ್ಲ. ಪ್ರಕಾಶ ಸ್ವರೂಪವಾದ ವಸ್ತುವಿನಲ್ಲಿ ನಿರತರಾದವರು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 30, 2023

Sriranga Mahaguru - Nectarine Nuggets

The Iha-Jīvana (mundane life) implies the three cardinal values of life namely Dharma, Artha and Kāma while Para- Jīvana refers to Mokṣa (liberation). The Maharṣis, through their intense Tapas (penance) and piercing inquisitive intellect have arrived at a conclusion about life "Idamittham – this is what and how it is". Based on this, they have designed a structure of life with the four paramount values.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 29, 2023

Sriranga Mahaguru - Nectarine Nuggets

One is ordained to take up Brahmacarya Āśrama (celibacy) to understand this Tīramāna (decision about goal) of Life through Vidyābhyāsa (Learning). Then to continue the Dhārmic progeny Gṛhasthāśrama (House-holder's stage) is advocated. Later in Life, to realize completely the Paramārtha (ultimate meaning) of Life through meditation, a serene environment is needed and that is when Vānaprastha Āśrama (Hermit-life) is advocated. And finally Sanyāsa-Āśrama (ascetic life) is recommended to take refuge in the ultimate and the Supreme Being and to shed this life.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 27, 2023

ಶ್ರೀರಂಗ ವಚನಾಮೃತ (Sriranga Vachanamruta)

ಈ ವಿಶ್ವವೆಂಬ ಗೋಳದ ಅಕ್ಷಾಂಶ ರೇಖಾಂಶಗಳಲ್ಲಿ ಅಗಣಿತವಾದ ಜೀವ ಕೋಟಿಗಳು ವಾಸಮಾಡಿ ತಾನಿರುವ ವಾತಾವರಣಕ್ಕೆ ತಕ್ಕಂತೆ ಒಂದೊಂದು ಬಗೆಯಾಗಿ ಜೀವನ ಮಾಡುವಂತೆ, ವಿಶ್ವಗೋಳಕ್ಕೆ ಮಧ್ಯನಾಳದಲ್ಲೂ ಕೆಲ ಚೇತನರಿದ್ದು ಅವರೂ ಸಹ ಒಂದು ವಿಲಕ್ಷಣವಾದ ಜೀವನವನ್ನು ಮಾಡಿದ್ದಾರೆ. ಅವರಾರೆಂದರೆ ಮಹಾಯೋಗಿಗಳಾದ ಭಾರತಮಹರ್ಷಿಗಳು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 25, 2023

ಶ್ರೀರಂಗ ವಚನಾಮೃತ (Sriranga Vachanamruta)

ನಾವು ಮಾಡುವ ಕೆಲಸವೆಲ್ಲವೂ ಇಂದ್ರಿಯಗಳಿಗೆ ಸಂಬಂಧಿಸಿದುದು. ಆದರೆ ಮಹರ್ಷಿಗಳ ಜೀವನ ಆತ್ಮಾವಲಂಬೀ ಜೀವನ. ನಾವು ಇಂದ್ರಿಯಗಳಿಂದ ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಹೇಗೆ ಗ್ರಹಿಸುತ್ತೇವೆಯೋ ಹಾಗೆ ಅವರು ಆತ್ಮನ ಮೂಲಕ ಜೀವನಕ್ಕೆ ಬೇಕಾದ ಎಲ್ಲ ವಿಷಯಗಳನ್ನೂ ಅರಿಯುತ್ತಾರೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 23, 2023

Sriranga Mahaguru - Nectarine Nuggets

Having been born here, try to follow the Daivī Mārga (spiritual path) instead of leading a capricious life.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 22, 2023

Sriranga Mahaguru - Nectarine Nuggets

Notice the development of the mango starting from its half- ripe stage to the stage of complete fruition. Initially it is bitter, then astringent, sour and saline – this way the flavours gradually change in order to settle finally in sweetness. Thus from unripe stage to the fully-ripe stage all the six flavours play their part. In the same manner, even in the evolution of Life, there exists a role for the six Rasas. Just as the ṣadrasas culminate in Madhura Rasa, Life also must culminate in sweetness. This verily is the essence of Life. This is what is preordained in Nature. This indeed is Sṛṣṭi-Sahaja, Satyasiddha and Ātmasiddha too (natural, true and established in Ātman).

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 20, 2023

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ಸ್ಥಿತಿ ಏನು? ಎನ್ನುವುದನ್ನರಿತು ನೆಲೆಮುಟ್ಟಿ ನಡೆಸುವ ಜೀವನವೇ ಮಹರ್ಷಿ ಜೀವನ. ಅಲ್ಲಿ ಪೂರ್ಣ ಶಾಂತಿಯನ್ನು ಕಾಣಬಹುದು. ಅಂತಹ ಜೀವನ, ಬಂಧನ ರಹಿತವಾದ ಜೀವನ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 18, 2023

ಶ್ರೀರಂಗ ವಚನಾಮೃತ (Sriranga Vachanamruta)

ಮೂಲದವರೆಗೂ ಹೋಗಿ ಅದನ್ನು ಆಸ್ವಾದಿಸಬೇಕು. ಅಂತೆಯೇ ಮಹರ್ಷಿಗಳು ಕಂದಮೂಲದ ಆಸ್ವಾದನೆ ಮಾಡುವವರು. ಮೂಲವನ್ನು ತಿನ್ನುವುದೇ ಅವರ ಕೆಲಸ, ಊರ್ಧ್ವಮೂಲವಾಗಿರುವ ಜೀವನವೃಕ್ಷದ ಮೂಲವನ್ನೇರಿ ಅದನ್ನು ಆಸ್ವಾದಿಸುವವರು ಮಹರ್ಷಿಗಳು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 16, 2023

Sriranga Mahaguru - Nectarine Nuggets

All rivers and rivulets ultimately reach the sea and end their journey. In the same way, all the Indriyas-Śrotas (senses and their streams) must necessarily merge somewhere; and that place is verily the state of Paramātman.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 15, 2023

Sriranga Mahaguru - Nectarine Nuggets

The Jīva that has emerged from Dev́  a should not drift away; this is possible only with the harmony of Tattvas (out of which the body is built). When seen from this poised perspective and with the compatibility among Tattvas that the Tīramāna (the decision about Life) is achieved. It is realized only when life is seen from the position of Deva.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 13, 2023

ಶ್ರೀರಂಗ ವಚನಾಮೃತ (Sriranga Vachanamruta)

ವಿಜ್ಞಾನಿಯು ಒಂದು ಆಟಂ ಅನ್ನು ಹೊಕ್ಕು ನೋಡುವಾಗ ಇದು ಎಲೆಕ್ಟ್ರಾನ್, ಇದು ಪ್ರೋಟಾನ್ ಎಂದು ಆಶ್ಚರ್ಯಚಕಿತನಾಗಿ ನೋಡುವಂತೆ, ಜ್ಞಾನವಿಜ್ಞಾನ ತೃಪ್ತಾತ್ಮರಾದ ಮಹರ್ಷಿಗಳು ತತ್ತ್ವಭೂಮಿಕೆಯಲ್ಲಿ ಮುಳುಗಿ ನೋಡಿ, ಆ ವಿಶ್ವರೂಪವಾಗಿ ಇರುವ ತತ್ತ್ವಕ್ಕೆ ನಮಸ್ಕಾರ ಮಾಡಿದರು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 11, 2023

ಶ್ರೀರಂಗ ವಚನಾಮೃತ (Sriranga Vachanamruta)

ಎಲ್ಲ ಕಾಲದಲ್ಲಿಯೂ ಜೀವನಾಂಧಕಾರಕ್ಕೆ ಪ್ರಭಾಕರನಾದ ಯಾವ ಸ್ವಾಮಿಯುಂಟೋ ಅವನ ಪಾದವನ್ನು ಬೆಳೆಸುವ ವಾಹನವಾಗುವ ಪಕ್ಷದಲ್ಲಿ ತಾನೇ ಬದುಕು ಸಾರ್ಥಕವಾದೀತು. ಪೂರ್ಣನಾದ ಪರಮಾತ್ಮನನ್ನು ಕಂಡು ಅವನ ಕರಣಕಳೇಬರವಾಗಿ ಮಾಡುವ ಜೀವನವೇ ಪೂರ್ಣಜೀವನ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 9, 2023

Sriranga Mahaguru - Nectarine Nuggets

A house is called "Vīḍu" (in Tamil). 'Vīḍu' also means 'Mokṣa'. Though a house appears like a bandhana (bondage), if viewed in the above spirit there is really no bandhana; in fact, it is Mokṣa (deliverance) itself. Again, the term "Vāsá  l" (in Tamil) means door. This is the door for Mokṣa too. It is also the door which opens for both Pravṛtti and Nivṛtti. If taken in this spirit it is good.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 8, 2023

Sriranga Mahaguru - Nectarine Nuggets

There is a method of viewing the Ātman himself in an infant. (Notice that) the Pati places his (Tapomaya) penance-filled seed in her; he thus conducts a Jñāna-Yajña and a Reto-Yajña with his Patni and therefore performs an act of bringing that which shines in the most subtle form to the gross form. Even as it manifests in the gross form, there is a method of perceiving the Ātma Bhāva in the baby, through the saying 'Ātmā vai putra nāmāsi' (Ātman  has manifested as a child), without in the least diminishing the Para Bhāva.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 6, 2023

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತನ ದಿವ್ಯಾಮೃತವರ್ಷವಾಗಿ, ಅವನ ಆನಂದಮಹೋದಧಿಯಲ್ಲಿ ಮುಳುಗಿ ಗುಣಗಾನ ಮಾಡಲು, ಅವನ ಸೇವೆಗೆ ಉಳಿಯುವಂತಿದ್ದರೆ, ಅದೊಂದು ಕಲ್ಪವಾಗಲೀ, ಯುಗವಾಗಲೀ, ವರ್ಷವಾಗಲೀ, ತ್ರುಟಿಯಾಗಲೀ , ಎಷ್ಟುಕಾಲ ಬದುಕಿದರೂ ಸಾರ್ಥಕ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 4, 2023

ಶ್ರೀರಂಗ ವಚನಾಮೃತ (Sriranga Vachanamruta)

ಪೂರ್ಣಾಯುಸ್ಸು ಎಂದರೆ ನೂರಾರು ವರ್ಷ ಪೂರ್ತಿ ಬದುಕುವುದೆಂದಲ್ಲ. ಈಶ್ವರದತ್ತ ಸೌಖ್ಯವಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಅನುಭವಿಸಿದ ಪೂರ್ಣ ಸುಖದ ಜೀವನ ನಾಲ್ಕು ದಿವಸವಿದ್ದರೂ ಅವನದು ಪೂರ್ಣಾಯುಷ್ಯವೇ. ಅದಿಲ್ಲದ ಜೀವನ ಕುಂದಿನ ಜೀವನ. ಅಪೂರ್ಣ ಜೀವನ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 2, 2023

Sriranga Mahaguru - Nectarine Nuggets

It is not true that a Gṛhastha (house-holder) is not entitled for Mokṣa (liberation). Mokṣa is certainly possible if one adheres to the code prescribed for a Gṛhastha. This Gṛhastha-Āśrama supports all the other Āśramas (stages of life-Brahmacarya, Vānaprastha and Sanyāsa). Just as varieties of birds live by taking refuge on a tree, so also people of all Āśramas seek the support in Gṛhastha- Āśrama.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 1, 2023

Sriranga Mahaguru - Nectarine Nuggets

This Pṛthvi Kṣetra in the form of mother-hood becomes a 'gateway' for the manifestation of the Will of the Lord's seed called Satya. Should we (the couples) wish to be called as citizens in this domain of the Supreme Lord and if we wish to live according to the dictum: "Yathā rājā tathā prajāḥ" then we should infuse ourselves with the divine treasure of the Lord.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 30, 2023

ಶ್ರೀರಂಗ ವಚನಾಮೃತ (Sriranga Vachanamruta)

ಅಂಶವನ್ನು ತೆಗೆದುಕೊಂಡು ಪೂರ್ಣವೆಂದು ಹೇಳಿದರೆ ಅದಕ್ಕೆ ಅರ್ಥವಿರುವುದಿಲ್ಲ. ನನ್ನ ಹತ್ತಿರ ಒಂದು ಲಕ್ಷವಿದೆ ಎಂದರೂ ಅದರ ಮೇಲೆ ಒಂದು ಎಂಬ ಸಂಖ್ಯೆ ಹಾಕಿದರೆ  ಅದರ ಬೆಲೆ ಏನಾಗುತ್ತದೆ? ೧/೧೦೦೦೦೦ ಒಂದಕ್ಕಿಂತಲೂ ಲಕ್ಷ ಪಾಲು ಕಡಿಮೆಯಾಗುತ್ತೆ. ನಾವು ಕೇವಲ ಐಂದ್ರಿಯಿಕವಾದ ಜೀವನ ಮಾಡುತ್ತಾ ಒಂದು ಲಕ್ಷ ಗ್ರಂಥ ಬರೆದೆವು, ಹತ್ತು ಲಕ್ಷ ಗ್ರಂಥ  ಬರೆದೆವು ಎಂದು ಕೊಚ್ಚಿಕೊಂಡರೂ, ಹಾಗೆಯೇ ಎಂತಹ ದೊಡ್ಡ ದೊಡ್ಡ ಪ್ಲಾಟ್ ಫಾರಂ ಮೇಲೆ ನಿಂತು ಉಪನ್ಯಾಸ ಮಾಡಿದರೂ, ಪೂರ್ಣವಾದ ಒಂದನ್ನು ಮೇಲಿಟ್ಟು ನೋಡಿದಾಗ ಎಲ್ಲವೂ ಅಪೂರ್ಣವಾಗುತ್ತದೆ. ಭೌತಿಕವಾದ ಜೀವನವು, ಆಸುರೀಸಂಪತ್ತಿನಿಂದ ಕೂಡಿದ ಜೀವನವು, ಎಷ್ಟೇ ಪರಿಪೂರ್ಣವೆಂದು ಹೇಳಿಕೊಂಡರೂ ಅಲ್ಲಿ ಪೂರ್ಣತೆ ಇಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 28, 2023

ಶ್ರೀರಂಗ ವಚನಾಮೃತ (Sriranga Vachanamruta)

ಬೀಜದಿಂದ ತೆಗೆದುಕೊಂಡು, ಅದು ವಿಕಾಸವಾಗಿ, ಮತ್ತೆ ಬೀಜರೂಪವಾಗಿ ನಿಲ್ಲುವವರೆಗೆ ಅದರ ಚರಿತ್ರೆಯನ್ನು ಹೇಳಿದರೆ ಪೂರ್ಣವಾಗುತ್ತದೆ. ಬೀಜ ಇರಲಯ್ಯ, ಮುಂದಕ್ಕೆ ಹೇಳು ಎಂದರೆ ಬೀಜವನ್ನು ಬಿಟ್ಟರೆ ವೃಕ್ಷಕ್ಕೆ ವಿಷಯವೆಲ್ಲಿ ಬಂತು? ಯಾವುದನ್ನು ಹೇಳಿದರೂ ಆಮೂಲಾಗ್ರವಾಗಿ ಜೀವನದ ಮೇಲೆ ಪೂರ್ಣ ನೋಟವನ್ನು ನೋಡಿದರೆ ತಾನೆ, ಅವನು ಪಂಡಿತನಾಗುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 26, 2023

Sriranga Mahaguru - Nectarine Nuggets

When alone, there can be no noise but noise arises with (as in) Dāmpatya; it can be produced over a quarrel; it can also be for the welfare of mankind.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 25, 2023

Sriranga Mahaguru - Nectarine Nuggets

The Gṛhastha, being an Ārya (cultured), should transform his Patnī to be an Ārya and the Āryata should thus be pursued. It is this way that work must begin; this would produce the joy of fulfillment.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 23, 2023

ಶ್ರೀರಂಗ ವಚನಾಮೃತ (Sriranga Vachanamruta)

ಬಂಡಿ, ಬಸ್ಸು, ವಿಮಾನ, ರಾಕೆಟ್ ಇವುಗಳೆಲ್ಲವೂ ಪ್ರಯಾಣದ ಸಾಧನಗಳು. ಸ್ವಲ್ಪ ದೂರ ಸಾಗಲು ಬಂಡಿ ಸಾಕು. ಅದಕ್ಕೆ ವೆಚ್ಚವೂ ಅಲ್ಪ. ಆದರೆ ಹದಿನೇಳು ಸಾರಿ ಭೂಪ್ರದಕ್ಷಿಣೆ ಮಾಡಬೇಕಾದರೆ ರಾಕೆಟ್ ಬೇಕಾಗುವುದು. ನಾವು ಮಾಡಬೇಕಾದ ಪ್ರಯಾಣಕ್ಕೆ ತಕ್ಕ ಯಾನ ಬೇಕಾಗುವುದು. ಅಂತೆಯೇ ಕೇವಲ ಇಂದ್ರಿಯಜೀವನವನ್ನು ಅಷ್ಟೇ ಮಾಡುವುದಾದರೆ ಅದಕ್ಕೆ ಯಾವ ತಪಸ್ಯೆಯ ಅಗತ್ಯವೂ ಇಲ್ಲ. ಭುವಿ, ದಿವಿಯಲ್ಲಿ ಅಪ್ರತಿಹತವಾದ ನಡೆಯುಳ್ಳವನಾಗ ಬೇಕಾದರೆ, ಪೂರ್ಣಾತ್ಮನಾಗಿ ಬಾಳಬೇಕಾದರೆ, ಅಲ್ಲಿ ತಪಸ್ಯೆ ಬೇಕಾಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 21, 2023

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದಲ್ಲಿ ಇಂದ್ರಿಯಕ್ಕೆ ಬೇಕಾದದ್ದು, ಮನಸ್ಸಿಗೆ ಬೇಕಾದದ್ದು, ಬುದ್ಧಿಗೆ ಬೇಕಾದದ್ದು ಎಲ್ಲಾ ಉಂಟು. ಹಾಗೆಯೇ ಜೀವನಿಗೆ ಬೇಕಾದದ್ದೂ ಉಂಟು. ಹೀಗೇ ಆತ್ಮನಿಗೆ ಬೇಕಾದ್ದನ್ನೂ ಕೊಟ್ಟು ಮಾಡುವ ಜೀವನ ಪೂರ್ಣಜೀವನವಾಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 19, 2023

Sriranga Mahaguru - Nectarine Nuggets

The Gṛha reflects the intent of the Gṛhiṇī. Since the mental framework of the Gṛhiṇī is towards organizing the dwelling and since it reflects her personality, the adage "Gṛhiṇī Gṛham ucyate" is so meaningful.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 18, 2023

Sriranga Mahaguru - Nectarine Nuggets

The home reflects the life of the house-holder.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 16, 2023

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ಪೂರ್ಣನದಿ ತಾನು ಹೊರಟ ಜಾಗದಿಂದ ಹರಿದು ಹರಿದು ಸಮುದ್ರವನ್ನು ಸೇರಿದಾಗಲೇ ಅದು ಪೂರ್ಣವಾಗುತ್ತದೆ. ಅಂತೆಯೇ ಮನುಷ್ಯನೂ ತನ್ನ ನೆಲೆ ಸೇರಿದಾಗಲೇ ಪೂರ್ಣನಾಗುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 14, 2023

ಶ್ರೀರಂಗ ವಚನಾಮೃತ (Sriranga Vachanamruta)

ಬೀಜದಲ್ಲಿರುವ ಆಶಯವೆಲ್ಲವನ್ನೂ ತೆಗೆದುಕೊಂಡ ವೃಕ್ಷವು ತನ್ನೆಲ್ಲಾ ವಿಸ್ತಾರವನ್ನು ಮಾಡಿಕೊಂಡು ಕೊನೆಯಲ್ಲಿ ಬೀಜದಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಅಂತೆಯೇ ಜ್ಯೋತಿರ್ಮಯವಾದ ಎಡೆಯಿಂದ ಹೊರಟ ಎಲ್ಲಾ ವಿಧವಾದ ಕರ್ಮಗಳೂ ಜ್ಯೋತಿರ್ಮಯವಾದ ಜ್ಞಾನದಲ್ಲಿಯೇ ಪರಿಸಮಾಪ್ತವಾಗುತ್ತದೆ. ಇಲ್ಲಿಗೆ ತಾನೇಪ್ಪ, ಜೀವನ ಪೂರ್ಣವಾಯಿತು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 11, 2023

Sriranga Mahaguru - Nectarine Nuggets

If Deha (body) is the dwelling for the Ātman, then Gṛhiṇī (wife) becomes the Gṛha (Home) for the Gṛhastha (house- holder). While the Ātman expresses itself on the Deha, the Ātmavanta manifests himself in his Geha (home); this Geha is of two forms – Gṛhiṇī and Gṛha.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 7, 2023

ಶ್ರೀರಂಗ ವಚನಾಮೃತ (Sriranga Vachanamruta)

ಅಂಶವು ಪೂರ್ಣತೆಯನ್ನು ಹೊಂದಬೇಕಾದರೆ ಅಂಶಿಯಲ್ಲಿ ಸೇರಿಕೊಳ್ಳಲೇ ಬೇಕು. ಇಲ್ಲದಿದ್ದರೆ ಅದಕ್ಕೆ ಅಂಶವೆಂಬ ಪದವೇ ಹೊಂದಿಕೊಳ್ಳಲಾರದು. ಆದುದರಿಂದ ಪರಮಾನಂದರೂಪಿಯಾದ ಪರಮಾತ್ಮನೇ ಎಲ್ಲದರ ಅಂಶಿ.  ಎಲ್ಲದರ ನೆಲೆ. ಅಲ್ಲಿಯೇ ಎಲ್ಲವೂ ಹೋಗಿ ನೆಲೆಸಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 5, 2023

Sriranga Mahaguru - Nectarine Nuggets

While seeking the bride, the boy's father solicits: "Kindly bestow your daughter to us for lighting the lamp of our house". Which is the 'light' implied here? If it is merely the external one, then a maiden is not needed! Even the marriage is not required for that purpose. It would be enough to employ a servant to turn on the switch!! But here the light that is to be lit is the Inner one. Therefore even in Gṛha-Pravesá    (as  a  part  of  a  marriage  celebration),  lamps are illuminated (as a representative of the inner Light) serially from the entrance up to the Prayer room. It is the Adhyātma-Dīpa that should ever be gleaming everywhere; that alone should be shining.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 4, 2023

Sriranga Mahaguru - Nectarine Nuggets

A Sanātana Gṛhiṇī is one who does not use the light to search for mundane things but to illuminate the path to the divine abode and to shine the heavenly skies.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 2, 2023

ಶ್ರೀರಂಗ ವಚನಾಮೃತ (Sriranga Vachanamruta)

ಶಾಂತಿಧಾಮದಿಂದಾರಂಭವಾದ ಜೀವನ ಅಲ್ಲೇ ನಿಲ್ಲಬೇಕು. ಕೇಂದ್ರವೊಂದನ್ನಿಟ್ಟುಕೊಂಡು ಆರಂಭವಾದ ವೃತ್ತವು ಆರಂಭಿಸಿದೆಡೆಯಲ್ಲೇ ಬಂದು ನಿಂತಾಗ ವೃತ್ತವು ಪೂರ್ಣವಾಗುವುದು. ಅಂತೆಯೇ ಶಾಂತಿಧಾಮದಿಂದ ಆರಂಭವಾದ ಜೀವನವೃತ್ತವು ಮತ್ತೆ ಆ ಶಾಂತಿಧಾಮದಲ್ಲಿ ಶಾಂತರಸದಲ್ಲಿ, ಬಂದು ನೆಲೆಯಾಗಿ ನಿಂತಾಗಲೇ ಪೂರ್ಣವಾಗುವುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, February 28, 2023

ಶ್ರೀರಂಗ ವಚನಾಮೃತ (Sriranga Vachanamruta)

ಪ್ರವೃತ್ತಿಯ ಮಾರ್ಗವೇ ಆಗಲೀ, ನಿವೃತ್ತಿಯ ಮಾರ್ಗವೇ ಆಗಲೀ, ಮತ್ತೆ ಉಭಯವೇ ಆಗಲೀ, ಎಲ್ಲವೂ ಕೂಡ ಸೃಷ್ಟಿಗೆ ಮೂಲವಾದ ಜ್ಯೋತಿರ್ಧಾಮದಲ್ಲೇ ನೆಲೆಗೊಳ್ಳಬೇಕು. ಆಗ ತಾನೇ ಅದು ಪರಿಸಮಾಪ್ತಿಯನ್ನು ಹೊಂದುತ್ತದೆ. ಪೂರ್ಣವೆನಿಸಿಕೊಳ್ಳಬೇಕಾದರೆ ಹೊರಟ ಜಾಗಕ್ಕೆ ತಲುಪಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, February 26, 2023

Sriranga Mahaguru - Nectarine Nuggets

Gṛhiṇī means one who accepts him as her Pati (husband) who represents the Lord, and with a firm mind recognizes him to be the 'Paradaiva (Supreme Lord). "Ardhāmgi" signifies that she represents half of his body and in every aspect of life travels along with him in both Yoga and Bhoga; she leads a life for attaining the four cardinal principles of life, directing her senses not according to her own will but supporting His will and working for the delight of the Lord.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, February 25, 2023

Sriranga Mahaguru - Nectarine Nuggets

It is a practice to say "Na mama (not mine)" while donating an object. However, it is not applicable in 'Kanyā-Dāna'. For, even after sending the daughter along with son-in-law, the relationship ("My daughter") is retained. Only her Gotra changes to that of her husband. In addition, regard and esteem also exist for the son-in-law: "Jāmātā viṣṇuvat pūjyaḥ (son-in-law is to be worshipped like Lord Vishnu)".

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, February 23, 2023

ಶ್ರೀರಂಗ ವಚನಾಮೃತ (Sriranga Vachanamruta)

ಬಾಳೆಯಹಣ್ಣು ಇನ್ನೂ ಕಾಯಿಯಾಗಿರುವಾಗ ಹುಳಿಯೋ ಕಹಿಯೋ ಒಗರೋ ಆಗಿರಬಹುದು. ಮಾಗಿ ಹಣ್ಣಾದಾಗ ಕಹಿಯೂ ಇಲ್ಲ, ಒಗರೂ ಇಲ್ಲ, ಹುಳಿಯೂ ಇಲ್ಲ. ಪರಿಪಕ್ವವಾದ ಮಧುರ ರಸ ಹುಟ್ಟುತ್ತದೆ. ಹಾಗೆಯೇ ಬಾಳೂ ಪರಿಪಕ್ವವಾದಾಗ ಒಂದು ಮಧುರ ರಸ ಉಂಟಾಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, February 21, 2023

ಶ್ರೀರಂಗ ವಚನಾಮೃತ (Sriranga Vachanamruta)

ಆತ್ಮಾರಾಮವಾಗಿ ಆತ್ಮದಾಳದಲ್ಲಿರುವ ಭಗವಂತನು ರಸರೂಪನಾಗಿದ್ದಾನೆ. ರಸರೂಪನಾದ ಆತ್ಮನನ್ನರಿತು ಅವನ ವಿಶ್ವರೂಪವಾದ ಬೆಳವಣಿಗೆಯನ್ನು ಅರಿತು ಬಾಳಿದಾಗಲೇ ರಸಮಯವಾದ ಬಾಳಾಟವನ್ನು ಪಡೆಯಬಹುದು. ಅಂತಹ ರಸಮಯವಾದ ಬಾಳಾಟವನ್ನು ಮಾಡುವವನೇ ರಸಿಕ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, February 19, 2023

Sriranga Mahaguru - Nectarine Nuggets

Ladies also need to be given education. If the left and the right–side of the body function in harmony, life is peaceful (Together) only when the Bhāva of the Jagad-dampaties    (Divine couple) flows we become eligible to nurture His offspring.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, February 18, 2023

Sriranga Mahaguru - Nectarine Nuggets

A Brahmacāri (celibate) having been trained by a Jñāni, having acquired Jñāna after staying in Gurukula and having understood that Jñāna alone is the most important aspect in Life, undertakes Kāśī -Yātra (a pilgrimage to the holy centre Kāśī). Learning this, the father of the maiden who personifies Goddess Lakshmi, offered her to him in marriage to advance the progeny of Jñāna.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, February 16, 2023

ಶ್ರೀರಂಗ ವಚನಾಮೃತ (Sriranga Vachanamruta)

ಜೀವನವು ಷಡ್ರಸಾತ್ಮಕವೂ ಹೌದು ನವರಸಾತ್ಮಕವೂ ಹೌದು. ನಿಸ್ಸತ್ವನಾದ ಮನುಷ್ಯನಿಗೆ ಸತ್ವವನ್ನುಂಟುಮಾಡುವ ರಸಪುಷ್ಟಿಯನ್ನು ಕೊಟ್ಟರೆ ಚೈತನ್ಯ ಹೊಂದುತ್ತಾನೆ. ಅಂತೆಯೇ ಸಪ್ಪೆಯಾಗಿದ್ದವನಿಗೂ ಸನ್ನಿವೇಶಾನುಗುಣವಾಗಿ ನವರಸಗಳನ್ನು ಕೊಟ್ಟರೆ ಉತ್ಸಾಹಗೊಳ್ಳುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, February 14, 2023

ಶ್ರೀರಂಗ ವಚನಾಮೃತ (Sriranga Vachanamruta)

ರಸವು ಷಡ್ರಸಾತ್ಮಕವಾಗಿ ಬೆಳೆದರೆ ಸೌಹಿತ್ಯ; ಸರಿಯಾದ ಯೋಗದಿಂದ ಷಡ್ರಸಗಳು ಧಾತುಗಳಲ್ಲಿ ಪರಸ್ಪರ ಸಾಮ್ಯವುಂಟುಮಾಡುವಂತೆ ನವರಸಗಳೂ ಧಾತುಸಾಮ್ಯವುಂಟುಮಾಡುತ್ತವೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, February 12, 2023

Sriranga Mahaguru - Nectarine Nuggets

Strī is in fact a pure and blissful play-field for the Lord's evolution and is His Dharma's Love-nest. She manifests Satya-Śiva-Saundarya internally and externally. She is the one who brings out the purest Puruṣa through her impure body part

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, February 11, 2023

Sriranga Mahaguru - Nectarine Nuggets

If women are Jñānis, with the realization of the Sadvastu, then they are indeed considered to be Puruṣas by the realized souls. Again, though possessing the external characteristics of the male (Puruṣa), those materialists, not knowing the Puruṣa-Svarūpa, are simply deemed to be Strīs (females).

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, February 9, 2023

ಶ್ರೀರಂಗ ವಚನಾಮೃತ (Sriranga Vachanamruta)

ಯೋಗಭೋಗಮಯವಾದ ಜೀವನಮಾಡಲು ಒಳ್ಳೆಯ ಸಾಹಿತ್ಯವೂ ಬೇಕು. ಒಳ್ಳೆಯ ಸೌಹಿತ್ಯವೂ ಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, February 7, 2023

ಶ್ರೀರಂಗ ವಚನಾಮೃತ (Sriranga Vachanamruta)

ರಸಭರಿತವಾದ ಕಾವ್ಯ ಓದಿ. ರಸಭರಿತವಾಗಿ ಊಟ ಮಾಡಿ. ಜೀವನಕ್ಕೆ ಒಳ್ಳೆಯ ಟೆಕ್ಸ್ಟ್ (Text) ಇರಲಿ. ಹಾಗೆಯೇ ಒಳ್ಳೆಯ ಟೇಸ್ಟ್ (Taste) ಇರಲಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 26, 2023

ಶ್ರೀರಂಗ ವಚನಾಮೃತ (Sriranga Vachanamruta)

ದೈವಾನುಗ್ರಹ ಹಾಗೂ ಪುರುಷಪ್ರಯತ್ನ, ರಥದ ಎರಡೂ ಚಕ್ರಗಳಿದ್ದ ಹಾಗಪ್ಪಾ. ಒಂದು ಚಕ್ರವೇ ಇಲ್ಲದಿದ್ದರೆ ರಥ ಹೇಗಪ್ಪಾ ಮುಂದೋಡುತ್ತೆ?

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 24, 2023

ಶ್ರೀರಂಗ ವಚನಾಮೃತ (Sriranga Vachanamruta)

ಕೇವಲ ಇಂದ್ರಿಯಗಳ ಒತ್ತಾಯಕ್ಕನುಗುಣವಾಗಿ ಆಹಾರ ಸೇವಿಸುತ್ತಿದ್ದೀರಿಆದರೆ ಯಾವ ಚೈತನ್ಯ  ಲೈಫ್ (Life) ಇಲ್ಲದಿದ್ದರೆ ಇಂದ್ರಿಯಗಳ ವ್ಯಾಪಾರ ನಡೆಯುವುದಿಲ್ಲವೋ ಅದಕ್ಕೂ ಹಿತವಾಗುವಂತೆ ಆಹಾರ ತೆಗೆದುಕೊಳ್ಳೀಪ್ಪಾ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 19, 2023

ಶ್ರೀರಂಗ ವಚನಾಮೃತ (Sriranga Vachanamruta)

ಲೋಕಕ್ಕೆ ಬಂದಮೇಲೆ ಭೋಗಕ್ಕೆ ದೂರವಾಗಬೇಡಿ. ಯಾವುದು ತಾನೇ ಶಾಶ್ವತ ಎಂಬ ಒಣ ಮಾತಿನಿಂದ ಎಲ್ಲಾ ವಿಷಯಗಳನ್ನು ತಳ್ಳಬೇಡಿ. ಹಾಗೆ ಆಗುವುದಾದರೆ ಈಶ್ವರ ಸೃಷ್ಟಿಯಲ್ಲಿ ಕಣ್ಣು, ಕಿವಿ, ನಾಲಿಗೆ ಮೊದಲಾದ ಇಂದ್ರಿಯಗಳನ್ನೂ ಕೊಟ್ಟು, ಅವುಗಳ ವಿಷಯವನ್ನೂ ಏಕೆ ಕೊಟ್ಟಿದ್ದಾನೆ? ಆದ್ದರಿಂದ ಇಂದ್ರಿಯಕ್ಕೆ ವಿಷಯ ಬೇಡ ಎಂದುಕೊಳ್ಳಬೇಡಿ. ನಾನ್ಸೆನ್ಸ್ (Nonsense) ಆದ ವರ್ತನೆ ಬೇಡ. ಆತ್ಮಹಾನಿಯಾಗದ ರೀತಿಯಲ್ಲಿ ವಿಷಯವನ್ನು ಕೊಡಿ.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 17, 2023

ಶ್ರೀರಂಗ ವಚನಾಮೃತ (Sriranga Vachanamruta)

ಆರ್ಯಭಾರತ ಮಹರ್ಷಿಗಳು ಇಂದ್ರಿಯಗಳನ್ನು ಹಳಿಯಲಿಲ್ಲ. ಅವುಗಳ  ಸೆರೆಗೆ ಸಿಕ್ಕಿಕೊಳ್ಳಲೂ ಇಲ್ಲ. ಅಷ್ಟೇ ಅಲ್ಲದೆ ಇಂದ್ರಿಯಗಳೆಲ್ಲವೂ ಭಗವಂತನು ದಯಪಾಲಿಸಿದ ಒಂದು ಐಶ್ವರ್ಯವೆಂದೇ ಭಾವಿಸುತ್ತಿದ್ದರು. ಐಶ್ವರ್ಯವನ್ನು ಹೊತ್ತುಕೊಂಡು ನಾವು ಅವನಿಂದ ಬಹಳ ದೂರ ಬಂದಿದ್ದೇವೆ. ಪುನಃ ಐಶ್ವರ್ಯವನ್ನು ಬಳಸಿಕೊಂಡೇ ಅವನ ಬಳಿಗೆ ಹೋಗಬೇಕು - ಎಂಬ ನ್ಯಾಯವನ್ನು ಕಂಡುಕೊಂಡರು. ಇದನ್ನೇ ತಮ್ಮ  ಜನಾಂಗವು ಅರಿಯಲೆಂದು ಇಡೀ ನಾಡನ್ನೇ, ತಮ್ಮ ಮನೋಧರ್ಮವನ್ನು ಇಡಲು ಒಂದು ದೊಡ್ಡ ಸಾಧನವನ್ನಾಗಿ ಮಾಡಿಕೊಂಡರು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 12, 2023

ಶ್ರೀರಂಗ ವಚನಾಮೃತ (Sriranga Vachanamruta)

ಮೂಗು ತಬ್ಬಲಿ, ಆಗಾಗ್ಗೆ ನೆಗಡಿ ಬರುತ್ತೆ. ಅದಕ್ಕೋಸ್ಕರ ನೋಡಿ, ನಾನು ಅದನ್ನು ಹೊಲಿಸಿಬಿಟ್ಟಿದ್ದೇನೆ ಎಂದರೆ ಉಸಿರಾಟಕ್ಕೆ  ಧಕ್ಕೆ. ಆದ್ದರಿಂದ ನೆಗಡಿ ಬಂದರೆ ಅದರ ನಿವಾರಣೆಗಾಗಿ ಯತ್ನಿಸಿ. ಭಗವಂತನು ಕರಣಕಳೇ ಬರಗಳನ್ನೇಕೆ ಕೊಟ್ಟಿದ್ದಾನೆ ಎಂಬುದನ್ನರಿತು, ಆತನು ಕೊಟ್ಟ ಐಶ್ವರ್ಯವನ್ನು ಅವನ ಅಭಿಪ್ರಾಯಾನುಗುಣವಾಗಿ ಉಪಯೋಗಿಸಿಕೊಂಡು ಸುಖಪಡಿ. ನಿಸ್ಸುಖೀ ಸ್ಯಾತ್.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 10, 2023

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತನು ಶರೀರವನ್ನು ಸೃಷ್ಟಿಮಾಡಿ ಹೊರಗಿನಿಂದ ಗಂಧವನ್ನು ತೆಗೆದು ಕೊಳ್ಳಲು ಮೂಗು, ಶಬ್ದವನ್ನು ತೆಗೆದುಕೊಳ್ಳಲು ಕಿವಿ, ರಸವನ್ನು ತೆಗೆದು ಕೊಳ್ಳಲು ಜಿಹ್ವೆ, ಅಂತೆಯೇ ಸ್ಪರ್ಶವನ್ನು ತೆಗೆದುಕೊಳ್ಳಲು ಚರ್ಮ, ವಸ್ತುವನ್ನು ತೆಗೆದುಕೊಳ್ಳಲು ಮತ್ತು ಶಾಸನ ಮಾಡಲು ಕೈ, ನಡೆಯುವುದಕ್ಕೆ ಕಾಲು ಇವುಗಳನ್ನು ಕೊಟ್ಟಿದ್ದಾನೆ. ಅಂತೆಯೇ ಅದೇ ಕಣ್ಣು ಒಳಗಿನಿಂದ ಭಗವಂತನ ಒಂದು ರೂಪವನ್ನು ತೆಗೆದುಕೊಳ್ಳುವುದಕ್ಕೂ, ಕಿವಿಯು ಭಗವಂತನ ನಾದವನ್ನು ಕೇಳುವುದಕ್ಕೂ, ಘ್ರಾಣೇಂದ್ರಿಯವು ಭಗವಂತನ ವಕ್ಷಸ್ಥಲದಲ್ಲಿ ಘಮಘಮಿಸುವ ತುಳಸಿಯ ವಾಸನೆಯನ್ನು ತೆಗೆದುಕೊಳ್ಳುವುದಕ್ಕೂ ಉಪಯೋಗಪಡಬಹುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 5, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಂದ್ರಿಯಗಳು ತಮಗೆ ಬೇಕಾದ ವಿಷಯವನ್ನು ಮಾತ್ರ ಅಪೇಕ್ಷಿಸುತ್ತವೆಅದಲ್ಲದೆ ಬೇರೆ ವಿಷಯ ಬಂದರೆ ತಳ್ಳಿಬಿಡುತ್ತವೆ. ಅದು ಅವುಗಳಿಗೆ ಹೊರೆಯಾಗುತ್ತೆ. ಹೀಗೆ ಇಂದ್ರಿಯಗಳ ಸ್ಚಭಾವವನ್ನರಿತ ಜ್ಞಾನಿಗಳು ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಆತ್ಮಧರ್ಮಕ್ಕೆ ಅವಿರೋಧವಾಗಿ ಕೊಡುವುದಕ್ಕೋಸ್ಕರ ಅನೇಕ ಉಪಾಯಗಳನ್ನು ಬಳಸಿದ್ದಾರೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 3, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಂದ್ರಿಯಗಳಿಗೆ ವಿಷಯವನ್ನು ಕೊಡುವಾಗಲೂ ದೇವನವರೆಗೂ  ತಟ್ಟುವಂತೆಯೇ ಕೊಟ್ಟರೆ, ಜೀವನವು ಅಂತರ್ಮುಖವಾಗಿ ಹರಿದು ಹೋದರೆ ಸೌಖ್ಯವಿರುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages