Thursday, March 31, 2022

ಶ್ರೀರಂಗ ವಚನಾಮೃತ (Sriranga Vachanamruta)

ಹೊಳೆ, ಕೆರೆಗಳಿಂದ ನೀರನ್ನು ಹೊತ್ತು ತರುವ ಹೆಂಗಸರು ತಲೆಯ ಮೇಲೆ ನೀರಿನ ಪಾತ್ರೆ ಹೊತ್ತು ಜೊತೆಗೆ ಬೇರೆಯ ಮಾತನ್ನೂ ಆಡುತ್ತಿರುತ್ತಾರೆ. ಆದರೆ ಮೇಲಿನ ಪೂರ್ಣಕುಂಭವನ್ನು ಮರೆಯುವುದಿಲ್ಲ. ಅದಕ್ಕೆ ವಿರೋಧವಿಲ್ಲದಂತೆ ಮಾತು, ಅಭಿನಯ ಎಲ್ಲಾ ಮಾಡುತ್ತಾರೆ. ಹಾಗೆಯೇ ನಮ್ಮ ತಲೆಯ ಮೇಲಿರುವ ಪೂರ್ಣನಾದ ಭಗವಂತನನ್ನು ಮರೆಯದೇ, ಅದಕ್ಕೆ ವಿರೋಧವಿಲ್ಲದ ರೀತಿ ಬೇರೆ ಬೇರೆ ಕೆಲಸವನ್ನು ಮಾಡಿಕೊಳ್ಳಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 29, 2022

ಶ್ರೀರಂಗ ವಚನಾಮೃತ (Sriranga Vachanamruta)

ಭೂಮಿಯಲ್ಲಿ ಬಿದ್ದ ಎಲ್ಲ ಪದಾರ್ಥಗಳೂ ತುಕ್ಕು ಹಿಡಿಯಬಹುದು, ಮಣ್ಣು ಹಿಡಿಯಬಹುದು. ಆದರೆ ಸಾವಿರಾರು ವರ್ಷಗಳ ಕಾಲ ಮಣ್ಣಿನಲ್ಲಿದ್ದರೂ ಚಿನ್ನ ತನ್ನ ಸ್ವರೂಪವನ್ನು ತಾನೇ ಕಾಪಾಡಿಕೊಳ್ಳುತ್ತದೆ. ಜಗತ್ತಿನಲ್ಲಿ ಎಲ್ಲವೂ ಬದಲಾವಣೆ ಹೊಂದಿದರೂ ಬದಲಾಯಿಸಿಕೊಳ್ಳದೇ ಇರುವ ಬದುಕೂ (ವಸ್ತುವೂ) ಉಂಟು, ಎನ್ನುವುದನ್ನು ಗಮನಿಸೀಪ್ಪ! ಸತ್ಯವೇ ಬದುಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 24, 2022

ಶ್ರೀರಂಗ ವಚನಾಮೃತ (Sriranga Vachanamruta)

ಅಂಗಾಂಗಗಳನ್ನು ರಕ್ಷಿಸಬೇಕು ನಿಜ. ಅದೇ ಯುದ್ಧ ಬಂದರೆ, ಯೋಧನಾದ ಬಳಿಕ, ಅಡಿಯಿಂದ ಮುಡಿಯವರೆಗೆ ಏನನ್ನು ಬೇಕಾದರೂ ಕೊಡುತ್ತೇನೆ. ಸತ್ಯಸಂಗರಕ್ಕಾಗಿ ಏನನ್ನು ಬೇಕಾದರೂ ತ್ಯಾಗಮಾಡಬಹುದು. ತ್ಯಾಗದಿಂದ ಸತ್ಯ ಉಳಿಯಬೇಕು. ಅದು ಹೋಗಿ ಅಸತ್ಯ ಉಳಿಯುವ ಪಕ್ಷೇ ಏನನ್ನೂ ಕೊಡಲು ಇಷ್ಟವಿಲ್ಲ.- ಎಂದು ಸಾರುವ ಕೆಚ್ಚೂ ನಮಗಿರಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 22, 2022

ಶ್ರೀರಂಗ ವಚನಾಮೃತ (Sriranga Vachanamruta)

ಬಾಳಿದರೆ ಸತ್ಯದೊಡನೆ ಬಾಳಬೇಕು. ಅಸತ್ಯದೊಡಗೂಡಿದ ಬಾಳಿಗಿಂತ ಮರಣವೇ ಲೇಸು. ಬಿದ್ದುಹೋಗುವ ಶರೀರ ಎಂದಿದ್ದರೂ ಬೀಳುವುದೇ. ಸತ್ಯಕ್ಕಾಗಿ ಹೋರಾಡಿ ಅದನ್ನುಳಿಸಲು ಮಡಿದರೂ ಜೀವನ ಸತ್ಯದಲ್ಲೇ ನಿಲ್ಲುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 17, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಿಗೆ ಸತ್ಯವನ್ನು ನೋಡುವ ಯೋಗ್ಯತೆಯಿದೆ. ಅದನ್ನು ನಾವು ಕಳೆದು ಕೊಂಡಿದ್ದೇವೆ. ಪ್ರಕೃತಿ ಕೆಟ್ಟಾಗ ಮನುಷ್ಯನು ಸಹಜವಾದ ನಿದ್ರೆಯನ್ನೇ ಕಳೆದು ಕೊಳ್ಳುತ್ತಾನೆ. ಅಂತೆಯೇ ತುರೀಯದಶೆಯಲ್ಲಿರುವ ಸತ್ಯವನ್ನು, ಪ್ರಕೃತಿಯ condition ಕೆಟ್ಟಾಗ ಕಳೆದುಕೊಳ್ಳುತ್ತಾನೆ. ಅದಕ್ಕೆ ತಕ್ಕ ಡಾಕ್ಟರಿಂದ ಔಷಧಿ ತೆಗೆದುಕೊಳ್ಳಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 15, 2022

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತನ ಸತ್ಯಸೂತ್ರದಲ್ಲಿ ಎಲ್ಲ ಜೀವಮಣಿಗಳೂ ಪೋಣಿಸಲ್ಪಟ್ಟಿವೆ. ಮಣಿಗಳು ಸತ್ಯಸೂತ್ರದ ನಿಬಂಧನಕ್ಕೊಳಪಟ್ಟು ನಡೆದರೆ ಹಾರ. ಹಾಗೆ ಒಳಪಡದೆ, ಸೂತ್ರದಿಂದ ಬೇರೆ ಬೇರೆಯಾಗಿ ನಿಂತರೆ, ಅಲ್ಲಿ ಹಾರಕ್ಕೆ ವಿಷಯವಿಲ್ಲ. ಹಾರ ಹೋಗಿ ಸಂಹಾರ ಉಳಿಯುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 10, 2022

ಶ್ರೀರಂಗ ವಚನಾಮೃತ, Sriranga Vachanamrutha

ಜೀವಿಗಳು ಸತ್ಯದ ಕೈಗೆ ತಮ್ಮನ್ನು ಕೊಟ್ಟುಕೊಳ್ಳಬೇಕು. ಸತ್ಯದ ಜೊತೆಗೆ ಅಂಟಿಕೊಂಡರೆ ಸತ್ಯಂ ಶಿವಂ ಸುಂದರಂ ಎಂಬಂತೆ ಜೀವನವು ಸತ್ಯವೂ ಮಂಗಳವೂ ಸುಂದರವೂ ಆಗುವುದರಲ್ಲಿ ಸಂಶಯವಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 8, 2022

ಶ್ರೀರಂಗ ವಚನಾಮೃತ (Sriranga Vachanamrutha)

ಕಾಡಿನಲ್ಲಿ ಯಥೇಚ್ಛವಾಗಿ ಓಡಾಡುತ್ತಿರುವ ಮದಿಸಿದ ಆನೆಯನ್ನಾದರೂ ಕಟ್ಟಬಹುದುಆದರೆ ಮನಸ್ಸನ್ನು ಕಟ್ಟಿಹಾಕುವುದು ಕಷ್ಟಆದರೆ ಕುಮಕಿ ಆನೆಯ (ಪಳಗಿದ ಆನೆಯಸಹಾಯವಿದ್ದರೆ  ಮದಿಸಿದ ಆನೆಯನ್ನು ಪಳಗಿಸಬಹುದಲ್ಲವೇಹಾಗೆಯೇ ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ

    To know more about Astanga Yoga Vijnana Mandiram (AYVM) please visit our Official Website, Facebook and Twitter pages

    Thursday, March 3, 2022

    ಶ್ರೀರಂಗ ವಚನಾಮೃತ (Sriranga Vachanamruta)

    ಗುರು ಜ್ಞಾನಸ್ವರೂಪಿಯೇ ಆಗಿದ್ದರೂ ಹಾಗೆ ಎಲ್ಲರಿಗೂ ತಿಳಿಯಬೇಕೆಂಬ ನಿಯಮವಿಲ್ಲರಂಜಕದ ಕಡ್ಡಿಯಲ್ಲಿ ಬೆಂಕಿಯಿದ್ದರೂ ತಿಳಿಯುವುದಿಲ್ಲಆದರೆ ಮದ್ದಿನ ಕಾಗದದ ಯೋಗ ಬಂದರೆ ಬೆಂಕಿ ಹೊರಗೆ ತಿಳಿಯುತ್ತೆಅಂತೆಯೇ ಹರಿಹರಗುರುಯೋಗವಾದರೆ ಜ್ಞಾನಾಗ್ನಿ ಪ್ರಕಾಶಕ್ಕೆ ಬರುತ್ತದೆ.

    To know more about Astanga Yoga Vijnana Mandiram (AYVM) please visit our Official Website, Facebook and Twitter pages

    ಶ್ರೀರಂಗ ವಚನಾಮೃತ (Sriranga Vachanamruta)

    ಗುರುವೂ ಒಬ್ಬ ಮನುಷ್ಯ. ಅವನಿಗೇನು ಕೊಂಬಿದೆಯೇ ಎಂದು ಹಾಸ್ಯ ಮಾಡಬೇಡಿ. ಅವನು ಏಕಶೃಂಗನಾದ ವರಾಹ; ಚತುಶ್ಶೃಂಗವಾದ ಪ್ರಣವ ಸ್ವರೂಪಿ. ಗುರು ಎಂಬ ಶಬ್ದಕ್ಕೂ ಬರೆದಾಗ ಎರಡು ಕೊಂಬುಗಳಿವೆ. ಆ ಕೊಂಬುಗಳನ್ನು ತೆಗೆದುಹಾಕಿಬಿಟ್ಟರೆ ಅದು `ಗರ(ವಿಷ)'ವಾಗಿ ಬಿಡುತ್ತೆ.

    To know more about Astanga Yoga Vijnana Mandiram (AYVM) please visit our Official Website, Facebook and Twitter pages