Tuesday, August 30, 2022

ಶ್ರೀರಂಗ ವಚನಾಮೃತ (Sriranga Vachanamruta)

ಗೃಹಸ್ಥನಾಗಿಬಿಟ್ಟರೆ ಮೋಕ್ಷವಿಲ್ಲವೆಂದೇನೂ ಇಲ್ಲ. ಗೃಹಸ್ಥ ಧರ್ಮದ ಬಾಳಾಟದಲ್ಲೇ ಬಂದರೆ ಮೋಕ್ಷವಿದೆ. ಗೃಹಸ್ಥಾಶ್ರಮವು ಇತರ ಎಲ್ಲ ಆಶ್ರಮಗಳಿಗೂ ಆಧಾರವಾಗಿದೆ. ಒಂದು ವೃಕ್ಷವನ್ನಾಶ್ರಯಿಸಿ ಅನೇಕ ಪಕ್ಷಿಗಳು ತಮ್ಮ ವಿಶ್ರಾಂತಿಧಾಮವನ್ನಾಗಿ ಮಾಡಿಕೊಂಡು ಬಾಳುವಂತೆ ಗೃಹಸ್ಥಾಶ್ರಮವನ್ನು ಎಲ್ಲರೂ ಆಶ್ರಯಿಸಿ ಬಾಳುತ್ತಾರೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, August 28, 2022

Sriranga Mahaguru - Nectarine Nuggets

Although the Jīva derives many pleasures through the senses, it gets its fulfillment only when it acquires the joy specific to it. For, neither the eye accepts music nor the ear a picture. Therefore each one must be presented with only specific items designed for it. In this spirit Deva (Supreme Lord) is the object ear-marked for Jīva. It is only when Jīva gains Deva, it attains ever-lasting Peace.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, August 25, 2022

ಶ್ರೀರಂಗ ವಚನಾಮೃತ (Sriranga Vachanamruta)

ಮಾತೃಸ್ಥಾನದಲ್ಲಿರುವ ಪೃಥ್ವೀಕ್ಷೇತ್ರವು, ದಿವಿಸ್ಥಾನದಲ್ಲಿರುವ ತೇಜೋಬೀಜದ ಆಶಯವನ್ನು ಅಥವಾ ಸತ್ಯಸಂಕಲ್ಪವನ್ನು ಹೊರತರಲು ಒಂದು ದ್ವಾರವಾಗಿದೆ. ಭಗವಂತನ ರಾಜ್ಯದಲ್ಲಿ ನಾವು ಅಂದರೆ ಸ್ತ್ರೀಪುರುಷರಾದ ನಾವುಗಳು ಪ್ರಜೆಗಳಾಗಿ ಉಳಿದುಕೊಂಡು ಯಥಾ ರಾಜಾ ತಥಾ ಪ್ರಜಾಃ ಎಂಬುದಾಗಿ ಹೇಳಿಕೊಳ್ಳಬೇಕಾದರೆ ದೈವೀ ಸಂಪತ್ತು ನಮ್ಮಲ್ಲಿ ತುಂಬಿಕೊಂಡಾಗ ತಾನೇ ಇದು ಸಾಧ್ಯವಾಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, August 23, 2022

ಶ್ರೀರಂಗ ವಚನಾಮೃತ (Sriranga Vachanamruta)

ದಾಂಪತ್ಯ ಸೇರಿದಾಗ ಸದ್ದು. ಒಂಟಿಯಾಗಿದ್ದಾಗ ಯಾವ ಸದ್ದೂ ಇರಲಿಲ್ಲ. ಜಗಳಕ್ಕೂ ಸದ್ದು ಮಾಡಬಹುದು,    ಜಗತ್ಕಲ್ಯಾಣಕ್ಕಾಗಿಯೂ ಸದ್ದು ಮಾಡಬಹುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, August 21, 2022

Sriranga Mahaguru - Nectarine Nuggets

Just as the birds, after leaving their nests in search of food, return to their recluses, we too, having emerged from the God's nest, should return to our original abode.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, August 18, 2022

ಶ್ರೀರಂಗ ವಚನಾಮೃತ (Sriranga Vachanamruta)

ಆರ್ಯನಾದವನು ತನ್ನ ಮಡದಿಯನ್ನು ಆರ್ಯಳನ್ನಾಗಿ ಮಾಡಿಕೊಂಡು ತನ್ನ ಆರ್ಯತೆಯನ್ನು ಮುಂದುವರಿಸಬೇಕು. ಹೀಗೆಯೇ ಕೆಲಸವು ಆರಂಭವಾಗ ಬೇಕು. ಅದಕ್ಕೆ ಸಫಲತೆಯ ಸಂತೋಷವುಂಟು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, August 16, 2022

ಶ್ರೀರಂಗ ವಚನಾಮೃತ (Sriranga Vachanamruta)

ಗೃಹವು ಗೃಹಿಣಿಯ ಆಶಯವನ್ನನುಸರಿಸುತ್ತದೆ. ಗೃಹಿಣಿಯ ಮನೋಧರ್ಮ ಹೆಚ್ಚಾಗಿ ಗೃಹದ ವ್ಯವಸ್ಥೆಯಲ್ಲಿ ಹರಿಯುವುದರಿಂದ ಅವಳ ಪ್ರತಿಬಿಂಬವೇ ಅದಾಗಿರುವುದರಿಂದ, ಗೃಹಿಣೀ ಗೃಹಮುಚ್ಯತೇ ಎಂಬ ಹೇಳಿಕೆ ಅರ್ಥವತ್ತಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, August 14, 2022

Sriranga Mahaguru - Nectarine Nuggets

All the Jīvas should take refuge in the Lord as an ideal Patni (wife) does with her Pati (husband). With Śrīpati(Lord) as your Life-support, dedicate your life to the Lord.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, August 11, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ಆತ್ಮಕ್ಕೆ ಶರೀರವೆಂಬ ಪ್ರಕೃತಿಯು ಗೃಹವಾದರೆ ಗೃಹಸ್ಥನಿಗೆ, ಆತ್ಮವಂತನಿಗೆ, ಗೃಹಿಣಿಯೂ ಸಹ ಒಂದು ಗೃಹವಾಗುತ್ತಾಳೆ. ಆತ್ಮವು ತನ್ನನ್ನು ದೇಹದ ಮೇಲೆ ಹೇಗೆ ಪ್ರಕಾಶಿಸಿಕೊಳ್ಳುತ್ತೋ ಹಾಗೆಯೇ ಆತ್ಮವಂತನೂ ತನ್ನ ಗೇಹದಲ್ಲಿಯೂ ತನ್ನನ್ನು ಪ್ರಕಟಿಸಿಕೊಳ್ಳುತ್ತಾನೆ. ಗೇಹವು ಗೃಹಿಣೀ ಮತ್ತು ಗೃಹವೆಂಬುದಾಗಿ ಎರಡು ರೂಪದಲ್ಲಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, August 9, 2022

ಶ್ರೀರಂಗ ವಚನಾಮೃತ (Sriranga Vachanamruta)

ಕನ್ಯಾರ್ಥಿಯಾಗಿ ಕೇಳುವಾಗ ಮನೆಯಲ್ಲಿ ದೀಪ ಹಚ್ಚಿಸಲು ತಮ್ಮ ಮನೆಯ ಹೆಣ್ಣನ್ನು ಕೊಡಿ- ಎಂದು ಕೇಳುವುದುಂಟು. ಬೆಳಕನ್ನು ಹಚ್ಚಿಸುವುದು ಎಂದರೆ ಯಾವ ಬೆಳಕು- ಹೊರ ಬೆಳಕೇ ಆದರೆ ಹೆಂಗಸೇ ಆಗಬೇಕಾಗಿಲ್ಲ. ಅದಕ್ಕೋಸ್ಕರ ಮದುವೆಯೂ ಬೇಕಾಗಿಲ್ಲ. Sತಿiಣಛಿh (ಸ್ವಿಚ್) ಹಾಕಲು ಒಬ್ಬ ಜವಾನನನ್ನಿಟ್ಟರೆ ಸಾಕು. ಆದರೆ ಅಲ್ಲಿ ಹೊತ್ತಿಸಬೇಕಾದುದು ಒಳದೀಪ. ಆದ್ದರಿಂದಲೇ ಗೃಹ ಪ್ರವೇಶದಲ್ಲೂ ಹೊಸಲಿನಿಂದ ದೇವರ ಮನೆಯವರೆಗೆ ದೀಪ ಹತ್ತಿಸಿಟ್ಟಿರುತ್ತಾರೆ. ಅಧ್ಯಾತ್ಮದೀಪವೊಂದೇ ಬೆಳಗುತ್ತಿರಬೇಕು. ಅದನ್ನೇ ಬೆಳಗಿಸಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, August 7, 2022

Sriranga Mahaguru - Nectarine Nuggets

An arrow shot at the trunk of a plantain tree gets embedded in it. In the same way, if the Jīva is shot using the bow called the Praṇava, it gets merged in the Lord.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, August 4, 2022

ಶ್ರೀರಂಗ ವಚನಾಮೃತ (Sriranga Vachanamruta)

ಮಗುವನ್ನು ಕತ್ತಲೆಯಲ್ಲಿ ಹೆದರಿಸಿ ಗುಮ್ಮನನ್ನು ತೋರಿಸುತ್ತೇನೆ ಎನ್ನುವುದುಂಟು. ಹಾಗೇ ಗುಮ್ಮನನ್ನಾದರೂ ತೋರಿಸಬಹುದು. ಅಥವಾ ಒಳದೀಪದ ಪ್ರತಿನಿಧಿಯಾಗಿ ದೀಪ ಹಚ್ಚಿ ಘಂಟಾನಾದ ಮಾಡಿ ಬ್ರಹ್ಮನನ್ನಾದರೂ ತೋರಿಸಬಹುದು. ಆಧ್ಯಾತ್ಮ ದೀಪನಾದ ಭಗವಂತನನ್ನಾದರೂ ತೋರಿಸಬಹುದು. ಹೇಗೆ ಬೆಳೆಸಬೇಕು? ಎಂಬುದು ತಾಯಿ ತಂದೆಗಳ ವಿವೇಕದ ಮೇಲೆ ನಿಂತಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, August 2, 2022

ಶ್ರೀರಂಗ ವಚನಾಮೃತ (Sriranga Vachanamruta)

ತಾಯಂದಿರ ಜವಾಬ್ದಾರಿ ಎಲ್ಲಿಯವರೆಗೆ ಇದೆ-ಎಂಬುದನ್ನು ತಿಳಿಯಬೇಕು. ಮಗುವಿನ ದೇಹವನ್ನು ಬೆಳೆಯಿಸಿಬಿಟ್ಟರೆ ಸಾಲದು. ಮಗುವು ದೀಪವನ್ನು ನೋಡಿ ನಲಿಯುತ್ತದೆ. ತಾಯಿಯು ಅದರ ಮುಂದೆ ಅದು ಹಿಂದೆ ಕಂಡಿದ್ದ ಬೆಳಕನ್ನು ಮರೆಯದಂತೆ ಒಂದು ದೀಪವನ್ನು ಹಚ್ಚಿ ಬೆಳಕಿನೊಡನೆ ಬೆಳೆಯಿಸಿ ತಂದೆಯ ವಶಕ್ಕೆ ಕೊಟ್ಟು ಅವನು ಮತ್ತೊಂದು ಜವಾಬ್ದಾರಿಯಿಂದ ಬೆಳಕು ಆರದಂತೆ ಆಚಾರ್ಯನ ಸನ್ನಿಧಿಗೆ ಕರೆದುಕೊಂಡು ಹೋಗಿಬಿಟ್ಟು ಅಲ್ಲಿಂದ ಮುಂದೆ ಆಚಾರ್ಯನೂ ಬೆಳಕಿನ ಪ್ರಕಾಶದಲ್ಲಿ ಅದು ಎಲ್ಲವನ್ನೂ ಕಂಡು ಬಾಳುವಂತೆ ಒಂದು ದೃಷ್ಟಿಯನ್ನು ಕೊಟ್ಟು ಪರಮಪುರುಷನ ಮಡಿಲಿನಲ್ಲಿ ಬಿಡುವಂತಾಗಬೇಕು. ಅಲ್ಲಿಯವರೆಗೂ ಅನುಸ್ಯೂತವಾಗಿ ಮುಂದುವರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ತಾಯಂದಿರದಾಗಿದೆ. ಆದ್ದರಿಂದಲೇ ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯ ದೇವೋ ಭವ ಎಂದು ಕ್ರಮವನ್ನು ವೇದವಾಣಿಯೇ ತಿಳಿಸುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages