Sunday, July 31, 2022

Sriranga Mahaguru - Nectarine Nuggets

It is a common command: "Speak remembering the Svarūpa". What is this Svarūpa? If it is measured only in terms of external appearance, it will have a particular form in the childhood, a different shape in the youth and another variant in the old age; this way the form of the human being keeps on changing. This is not what is meant here. For, this is not standard. Therefore one cannot measure the Svarūpa from an ever-changing pedestal. It should only be understood from a position which is devoid of distortion.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, July 28, 2022

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತ - ಭಗವತಿಯಿಂದ ಜೀವದ ಕಡೆಗೆ ಏನು ಹರಿದು ಬರುತ್ತದೆಯೋ ಅದನ್ನರಿತು ತರುವವನೇ ತಂದೆ. ತಂದೆ, ಏನು ತಂದೆ? ಎಂದರೆ ಜ್ಞಾನವನ್ನು ತಂದೆ ಎನ್ನುವವನೇ ತಂದೆ. ಅವನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತು ಬೆಳೆಸುವವಳೇ ತಾಯಿ. ಅವರು ಬೆಳೆಸಿಕೊಂಡು ಬಂದದ್ದನ್ನು ಅರಿತು ಅಂತೆಯೇ ಜ್ಞಾನ ರೂಪದಲ್ಲಿಯೇ ನಿಲ್ಲಿಸುವವನೇ ಗುರು. ಜೀವನದ ಒಂದೊಂದು ಘಟ್ಟದಲ್ಲಿ ಒಂದೊಂದು ರೀತಿ ಕೆಲಸ ಸಾಗಬೇಕಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, July 26, 2022

ಶ್ರೀರಂಗ ವಚನಾಮೃತ (Sriranga Vachanamruta)

ಲೋಕದಲ್ಲಿ ಸಂತಾನಪಾಲನೆ ಮಾಡುವುದಕ್ಕೇನು? ಎಲ್ಲ ಪ್ರಾಣಿಗಳಲ್ಲೂ ಉಂಟು. ಆದರೆ ಜ್ಞಾನಿಯಾದವನ ಕುಟುಂಬದಲ್ಲಿ ಸಂತಾನಪಾಲನೆ ಮಾಡುವ ಕ್ರಮ ಏನಪ್ಪಾಂತ ಕೇಳಿದ ಪಕ್ಷದಲ್ಲಿ, ಆತ್ಮವನ್ನು ಅದರ ಬೆಳಕು, ಅದರ ಆನಂದ, ಅದರ ಜ್ಞಾನ, ಅದರ ಸೂಕ್ಷ್ಮತ್ವ, ಅದರ ಪರಿಶುದ್ಧತೆ-ಇವುಗಳು ಕೆಡಬಾರದಂತೆ ಅಂತೆಯೇ ಮುಂದಕ್ಕೆ ತೆಗೆದುಕೊಂಡು ಬಂದು ಕೊಡುವ ಕ್ರಮ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, July 24, 2022

Sriranga Mahaguru - Nectarine Nuggets

When a tree develops systematically according to the plan imprinted in its seed, such that it culminates in the seed itself, then it implies that the tree has grown retaining its Svarūpa. On the other hand, if its development gets truncated at the level of leaf or the unripe-fruit, then the ultimate seed-form is lost. Likewise, if ever, one desires to lead a life retaining the Svarūpa, then one must strive for a life that does not beget the cycle of births and deaths, but should strive to attain bliss and ecstatic joy.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, July 21, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ವೃಕ್ಷವನ್ನು ತೆಗೆದುಕೊಂಡು ನೋಡುವುದಾದರೆ- ಅದರ ಅಂಕುರದಿಂದ ಹಿಡಿದು ಕಾಂಡ, ಪರ್ಣ, ಶಾಖೆ, ಉಪಶಾಖೆ, ತೊಗಟೆ, ಹೂವು, ಮಿಡಿ, ಕಾಯಿ, ಹಣ್ಣು ಇಷ್ಟರಲ್ಲೂ ಹರಿಯುವ ರಸ ಕೊನೆಯಲ್ಲಿ ಬಂದು ನಿಲ್ಲುವ ಬೀಜ ಇವೆಲ್ಲವೂ ಸಹ ಬೇರಿಗೆ ಸುದ್ದಿ ಮುಟ್ಟಿಸಿಯೇ ತನ್ನ ಪ್ರಾರಂಭ, ವಿಕಾಸ, ವಿಲಯ ಗಳನ್ನು ನಡೆಸುತ್ತವೆ. ಅಂತೆಯೇ ಮನುಷ್ಯನ ಒಂದು ಜೀವನ ವೃಕ್ಷದಲ್ಲೂ ಸಹ ಅದರ ಪ್ರಾರಂಭ, ವಿಕಾಸ, ವಿಲಯಗಳೆಂಬ ಅವಸ್ಥಾತ್ರಯದಲ್ಲೂ ಕೂಡ ವೃಕ್ಷಕ್ಕೆ ಬೇರಾಗಿರುವ ಜೀವನದ ಮೂಲಜ್ಯೋತಿಯಿಂದ ಬೇರ್ಪಡದೆ ಎಲ್ಲವನ್ನೂ ಅದಕ್ಕೆ ನಿವೇದಿಸಿಕೊಂಡು ಮುಂದುವರಿಯುವುದು ಸಹಜಸಿದ್ಧವಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, July 19, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಮೂಲರೂಪನಾಗಿ, ಬೇರಾಗಿ, ಜೀವನವನ್ನು ಧರಿಸಿರುವವನು ಭಗವಂತನಪ್ಪಾ. ಅವನನ್ನು ಮರೆಯಬೇಡಿ. ಬೇರನ್ನು ಕಾಪಾಡಿಕೊಳ್ಳಿ. ಬೇರು ಹುಳು ಕಡಿದು, ಮರವು ಬೇರಿನ ಸಂಬಂಧದಿಂದ ಬೇರ್ಪಟ್ಟರೆ ಒಣಮರ ವಾಗುತ್ತೆ. ನೀರಸ ಜೀವನವಾಗುತ್ತೆ. ಆದ್ದರಿಂದ ಅದನ್ನು ಕೆಡಿಸಿಕೊಳ್ಳಬೇಡಿ. ರಸರೂಪಿಯಾದ ಅವನ ಸಂಬಂಧವಿಲ್ಲದಿದ್ದಾಗ ಜೀವನ ನೀರಸವಾಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, July 17, 2022

Sriranga Mahaguru - Nectarine Nuggets

Just because our name does not exist in the census book we don't doubt our own existence! Nature is providing the evidence. Look at that and understand the truth. Don't bother about who accepts or denies it – whether it is today or tomorrow or any other day.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, July 14, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ಒಂದು ಗಂಡ-ಭೇರುಂಡ ಪಕ್ಷಿಯಂತೆ ದ್ವಿಮುಖವಾದದ್ದು. ಒಂದು ಗಂಡ, ಇನ್ನೊಂದು ಭೇರುಂಡ. ಹೀಗೆ ದ್ವಿಮುಖ ಜೀವನದ ಪಕ್ಷಿ ಅಪ್ರತಿಹತವಾದ ನಡೆಯಿಂದ ದಿವಿಯನ್ನೂ ಭುವಿಯನ್ನೂ ಮುಟ್ಟಬಲ್ಲ ಭೂಸುರ ಪಕ್ಷಿಯಾಗಿದೆ. ಹೀಗೆಯೇ ಇಲ್ಲಿಯೂ ಏಕಶರೀರ, ಪ್ರವೃತ್ತಿ-ನಿವೃತ್ತಿ ಮಾರ್ಗಗಳೆಂಬ ದ್ವಿಮುಖ. ಎರಡಕ್ಕೂ ಹೊಂದಿಕೊಳ್ಳುವಂತೆ ಚತುರ್ಭದ್ರವನ್ನು ಸಾಧಿಸುವುದೇ ಧ್ಯೇಯ. ಅದಕ್ಕೋಸ್ಕರವಾಗಿ ಹೋರಾಟ, ಹಾರಾಟ ಎಲ್ಲವೂ ಇದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, July 12, 2022

ಶ್ರೀರಂಗ ವಚನಾಮೃತ (Sriranga Vachanamruta)

ಪ್ರತಿಯೊಂದು ಪ್ರಾಣಿಯೂ ತನ್ನ ಹೊರಜೀವನಕ್ಕೆ ಒಂದೊಂದು ಸಾಧನೆಯನ್ನು ಮಾಡುತ್ತಿರುವುದು ಕಂಡುಬರುತ್ತದೆ. ಹಾಗೆ ಮನುಷ್ಯನೂ ಹೊರಜೀವನಕ್ಕೋಸ್ಕರವಾಗಿ ಮಾಡುವ ವ್ಯವಸಾಯದಂತೆ ಒಳಜೀವನಕ್ಕೂ ಮಾಡಬೇಕಾದ ವ್ಯವಸಾಯವೊಂದಿದೆ. ಇಂದ್ರಿಯಗಳನ್ನು ಅವಲಂಬಿಸಿ ಅದಕ್ಕೆ ಬೇಕಾದ ಹಸಿವುಗಳನ್ನು ಅಡಗಿಸಲು ಆಹಾರ ಕೊಟ್ಟು ಅವುಗಳ ಸಂತೋಷ ದಿಂದಲೇ, ಅಷ್ಟರಲ್ಲೇ ತೃಪ್ತಿಪಟ್ಟು ಜೀವನ ನಡೆಸುವುದು ಹೊರಜೀವನ. ಆದರೆ ಇನ್ನೂ ಮುಂದೆ ಹೋಗಿ ಒಳಹೊಕ್ಕು ಆತ್ಮವನ್ನು ಅವಲಂಬಿಸಿ ಜೀವನ ನಡೆಸುವವರೂ ಉಂಟು. ಇವರದು ಒಳಜೀವನ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, July 10, 2022

Sriranga Mahaguru - Nectarine Nuggets

The Ātman does exist eternally. He assumes different forms in conformity with his past deeds. He might get caught in the mire of the  "Aṣṭa-Pāṣas" (eight bondages). But if he practices the ordained tasks he would certainly get into the virtuous path. If he leads the Ātman in the right direction, keeping the senses under control, he would be divested of the Aṣṭa-Pāṣas and would attain his Original (spiritual) Form. This is the birth-right of all beings.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, July 7, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಬೇಕಾದ ವೃತ್ತಿ ಬೇಕು. ಹೇಗೆ ವರ್ತಿಸಬೇಕು ಎಂದರೆ ಮನೆಯಿಂದ ನದಿಗೆ ಈಜುವುದಕ್ಕೆ ಹೋದರೆ ತಿರುಗಿ ದಡ ಸೇರುವಂತೆ. ಅದು ಬಿಟ್ಟು ಪ್ರವಾಹದಲ್ಲಿ ಬಿದ್ದು ಒದ್ದಾಡುತ್ತಾ ಕೈಕಾಲು ಬಡಿದ, ದುಬು ದುಬು ಎಂದು ನೀರು ಕುಡಿದ, ಆಮೇಲೆ ಬಾಯಿ ಬಡಿದ ಎಂದರೆ ಹಾಗೆ ಹೋಗುವುದೇ ಜೀವನವಾಗುತ್ತೆ. ಪ್ರವಾಹದಲ್ಲಿ ಸಿಕ್ಕಿಬಿದ್ದಾಗ ಅದರಲ್ಲಿ ಕೆಮ್ಮುವವರು ಕೆಲವರು, ಚಿತ್ರವಿಚಿತ್ರವಾಗಿ ಇರುವವರು ಕೆಲವರು, ಹೀಗೆ ಸಹಸ್ರಾರು ವಿಧಗಳನ್ನು ನೋಡಬಹುದು. ಯಾವುದೋ ಪ್ರವಾಹಕ್ಕೆ ಸಿಕ್ಕಿ ಅಲ್ಲಲ್ಲೇ ಕೈಕಾಲು ಆಡಿಸುತ್ತಾ ಇದ್ದರೆ ಜೀವನವಾಗುವುದಿಲ್ಲ. ಹಾಗೆಯೇ ಮಾಯೆಯ ಪ್ರವಾಹದಲ್ಲಿ ಬಿದ್ದು ಅಲ್ಲಲ್ಲೇ ಆಡುತ್ತಿದ್ದಾರೆ. ಅಷ್ಟಷ್ಟರಲ್ಲೇ ನಾ ಮುಂದು, ತಾ ಮುಂದು ಎನ್ನುವ ರೀತಿ ಹೋಗುತ್ತಿದೆ. ಇದರಲ್ಲಿ ಎಲ್ಲರೂ ಪ್ರವಾಹಕ್ಕೆ ಸಿಕ್ಕಿಬಿದ್ದವರೇ. ಇದರಲ್ಲಿ ಹಿಂದೂ ಇಲ್ಲ, ಮುಂದೂ ಇಲ್ಲ. ಇದಾವುದೂ ಆದರ್ಶವಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, July 5, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದಲ್ಲಿ ಹೇಗೆ ಬಾಳಬೇಕು. ರಷ್ಯನ್ ಟೈಪ್ನಲ್ಲಿ ಜೀವನ ನಡೆಸಬೇಕೇಇಂಗ್ಲಿಷ್ ಟೈಪ್ನಲ್ಲಿ ಜೀವನ ನಡೆಸಬೇಕೇಅಮೆರಿಕನ್ ಟೈಪೇ? ಟೈಪ್ ಗಳಾವುವೂ ಆದರ್ಶವಲ್ಲ. ಅನಾದರ್ಶವಾಗುತ್ತೆ. ನಿಮ್ಮ ಜೀವನದ ಮೂಲಕ್ಕೆ ವಿರೋಧವಿಲ್ಲದೆ ಬಾಳಿದರೆ ಅದೇ ಆದರ್ಶ ಜೀವನ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, July 3, 2022

Sriranga Mahaguru - Nectarine Nuggets

The leaf, flower, fruit etc. should maintain their connection with the root of the tree; only then their Saukumārya (tenderness) and Saugandhya (aroma) would remain with them. On the other hand, suppose they think: "After all, where am I? And where does the root reside? Where is the link between us?" The moment the connection is snapped from the root, whether it is a leaf or a fruit, its form begins to change; it is defaced. In the same way, if the Jīvi is desirous of a Life of Peace, he should retain his link with the Lord. Life would be delightful only when it is 'offered' at the Lotus feet of the Lord - the Source of the Universe.

To know more about Astanga Yoga Vijnana Mandiram (AYVM) please visit our Official Website, Facebook and Twitter pages