Thursday, March 30, 2023

ಶ್ರೀರಂಗ ವಚನಾಮೃತ (Sriranga Vachanamruta)

ಅಂಶವನ್ನು ತೆಗೆದುಕೊಂಡು ಪೂರ್ಣವೆಂದು ಹೇಳಿದರೆ ಅದಕ್ಕೆ ಅರ್ಥವಿರುವುದಿಲ್ಲ. ನನ್ನ ಹತ್ತಿರ ಒಂದು ಲಕ್ಷವಿದೆ ಎಂದರೂ ಅದರ ಮೇಲೆ ಒಂದು ಎಂಬ ಸಂಖ್ಯೆ ಹಾಕಿದರೆ  ಅದರ ಬೆಲೆ ಏನಾಗುತ್ತದೆ? ೧/೧೦೦೦೦೦ ಒಂದಕ್ಕಿಂತಲೂ ಲಕ್ಷ ಪಾಲು ಕಡಿಮೆಯಾಗುತ್ತೆ. ನಾವು ಕೇವಲ ಐಂದ್ರಿಯಿಕವಾದ ಜೀವನ ಮಾಡುತ್ತಾ ಒಂದು ಲಕ್ಷ ಗ್ರಂಥ ಬರೆದೆವು, ಹತ್ತು ಲಕ್ಷ ಗ್ರಂಥ  ಬರೆದೆವು ಎಂದು ಕೊಚ್ಚಿಕೊಂಡರೂ, ಹಾಗೆಯೇ ಎಂತಹ ದೊಡ್ಡ ದೊಡ್ಡ ಪ್ಲಾಟ್ ಫಾರಂ ಮೇಲೆ ನಿಂತು ಉಪನ್ಯಾಸ ಮಾಡಿದರೂ, ಪೂರ್ಣವಾದ ಒಂದನ್ನು ಮೇಲಿಟ್ಟು ನೋಡಿದಾಗ ಎಲ್ಲವೂ ಅಪೂರ್ಣವಾಗುತ್ತದೆ. ಭೌತಿಕವಾದ ಜೀವನವು, ಆಸುರೀಸಂಪತ್ತಿನಿಂದ ಕೂಡಿದ ಜೀವನವು, ಎಷ್ಟೇ ಪರಿಪೂರ್ಣವೆಂದು ಹೇಳಿಕೊಂಡರೂ ಅಲ್ಲಿ ಪೂರ್ಣತೆ ಇಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 28, 2023

ಶ್ರೀರಂಗ ವಚನಾಮೃತ (Sriranga Vachanamruta)

ಬೀಜದಿಂದ ತೆಗೆದುಕೊಂಡು, ಅದು ವಿಕಾಸವಾಗಿ, ಮತ್ತೆ ಬೀಜರೂಪವಾಗಿ ನಿಲ್ಲುವವರೆಗೆ ಅದರ ಚರಿತ್ರೆಯನ್ನು ಹೇಳಿದರೆ ಪೂರ್ಣವಾಗುತ್ತದೆ. ಬೀಜ ಇರಲಯ್ಯ, ಮುಂದಕ್ಕೆ ಹೇಳು ಎಂದರೆ ಬೀಜವನ್ನು ಬಿಟ್ಟರೆ ವೃಕ್ಷಕ್ಕೆ ವಿಷಯವೆಲ್ಲಿ ಬಂತು? ಯಾವುದನ್ನು ಹೇಳಿದರೂ ಆಮೂಲಾಗ್ರವಾಗಿ ಜೀವನದ ಮೇಲೆ ಪೂರ್ಣ ನೋಟವನ್ನು ನೋಡಿದರೆ ತಾನೆ, ಅವನು ಪಂಡಿತನಾಗುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 26, 2023

Sriranga Mahaguru - Nectarine Nuggets

When alone, there can be no noise but noise arises with (as in) Dāmpatya; it can be produced over a quarrel; it can also be for the welfare of mankind.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 25, 2023

Sriranga Mahaguru - Nectarine Nuggets

The Gṛhastha, being an Ārya (cultured), should transform his Patnī to be an Ārya and the Āryata should thus be pursued. It is this way that work must begin; this would produce the joy of fulfillment.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 23, 2023

ಶ್ರೀರಂಗ ವಚನಾಮೃತ (Sriranga Vachanamruta)

ಬಂಡಿ, ಬಸ್ಸು, ವಿಮಾನ, ರಾಕೆಟ್ ಇವುಗಳೆಲ್ಲವೂ ಪ್ರಯಾಣದ ಸಾಧನಗಳು. ಸ್ವಲ್ಪ ದೂರ ಸಾಗಲು ಬಂಡಿ ಸಾಕು. ಅದಕ್ಕೆ ವೆಚ್ಚವೂ ಅಲ್ಪ. ಆದರೆ ಹದಿನೇಳು ಸಾರಿ ಭೂಪ್ರದಕ್ಷಿಣೆ ಮಾಡಬೇಕಾದರೆ ರಾಕೆಟ್ ಬೇಕಾಗುವುದು. ನಾವು ಮಾಡಬೇಕಾದ ಪ್ರಯಾಣಕ್ಕೆ ತಕ್ಕ ಯಾನ ಬೇಕಾಗುವುದು. ಅಂತೆಯೇ ಕೇವಲ ಇಂದ್ರಿಯಜೀವನವನ್ನು ಅಷ್ಟೇ ಮಾಡುವುದಾದರೆ ಅದಕ್ಕೆ ಯಾವ ತಪಸ್ಯೆಯ ಅಗತ್ಯವೂ ಇಲ್ಲ. ಭುವಿ, ದಿವಿಯಲ್ಲಿ ಅಪ್ರತಿಹತವಾದ ನಡೆಯುಳ್ಳವನಾಗ ಬೇಕಾದರೆ, ಪೂರ್ಣಾತ್ಮನಾಗಿ ಬಾಳಬೇಕಾದರೆ, ಅಲ್ಲಿ ತಪಸ್ಯೆ ಬೇಕಾಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 21, 2023

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದಲ್ಲಿ ಇಂದ್ರಿಯಕ್ಕೆ ಬೇಕಾದದ್ದು, ಮನಸ್ಸಿಗೆ ಬೇಕಾದದ್ದು, ಬುದ್ಧಿಗೆ ಬೇಕಾದದ್ದು ಎಲ್ಲಾ ಉಂಟು. ಹಾಗೆಯೇ ಜೀವನಿಗೆ ಬೇಕಾದದ್ದೂ ಉಂಟು. ಹೀಗೇ ಆತ್ಮನಿಗೆ ಬೇಕಾದ್ದನ್ನೂ ಕೊಟ್ಟು ಮಾಡುವ ಜೀವನ ಪೂರ್ಣಜೀವನವಾಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 19, 2023

Sriranga Mahaguru - Nectarine Nuggets

The Gṛha reflects the intent of the Gṛhiṇī. Since the mental framework of the Gṛhiṇī is towards organizing the dwelling and since it reflects her personality, the adage "Gṛhiṇī Gṛham ucyate" is so meaningful.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 18, 2023

Sriranga Mahaguru - Nectarine Nuggets

The home reflects the life of the house-holder.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 16, 2023

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ಪೂರ್ಣನದಿ ತಾನು ಹೊರಟ ಜಾಗದಿಂದ ಹರಿದು ಹರಿದು ಸಮುದ್ರವನ್ನು ಸೇರಿದಾಗಲೇ ಅದು ಪೂರ್ಣವಾಗುತ್ತದೆ. ಅಂತೆಯೇ ಮನುಷ್ಯನೂ ತನ್ನ ನೆಲೆ ಸೇರಿದಾಗಲೇ ಪೂರ್ಣನಾಗುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 14, 2023

ಶ್ರೀರಂಗ ವಚನಾಮೃತ (Sriranga Vachanamruta)

ಬೀಜದಲ್ಲಿರುವ ಆಶಯವೆಲ್ಲವನ್ನೂ ತೆಗೆದುಕೊಂಡ ವೃಕ್ಷವು ತನ್ನೆಲ್ಲಾ ವಿಸ್ತಾರವನ್ನು ಮಾಡಿಕೊಂಡು ಕೊನೆಯಲ್ಲಿ ಬೀಜದಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಅಂತೆಯೇ ಜ್ಯೋತಿರ್ಮಯವಾದ ಎಡೆಯಿಂದ ಹೊರಟ ಎಲ್ಲಾ ವಿಧವಾದ ಕರ್ಮಗಳೂ ಜ್ಯೋತಿರ್ಮಯವಾದ ಜ್ಞಾನದಲ್ಲಿಯೇ ಪರಿಸಮಾಪ್ತವಾಗುತ್ತದೆ. ಇಲ್ಲಿಗೆ ತಾನೇಪ್ಪ, ಜೀವನ ಪೂರ್ಣವಾಯಿತು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 11, 2023

Sriranga Mahaguru - Nectarine Nuggets

If Deha (body) is the dwelling for the Ātman, then Gṛhiṇī (wife) becomes the Gṛha (Home) for the Gṛhastha (house- holder). While the Ātman expresses itself on the Deha, the Ātmavanta manifests himself in his Geha (home); this Geha is of two forms – Gṛhiṇī and Gṛha.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 7, 2023

ಶ್ರೀರಂಗ ವಚನಾಮೃತ (Sriranga Vachanamruta)

ಅಂಶವು ಪೂರ್ಣತೆಯನ್ನು ಹೊಂದಬೇಕಾದರೆ ಅಂಶಿಯಲ್ಲಿ ಸೇರಿಕೊಳ್ಳಲೇ ಬೇಕು. ಇಲ್ಲದಿದ್ದರೆ ಅದಕ್ಕೆ ಅಂಶವೆಂಬ ಪದವೇ ಹೊಂದಿಕೊಳ್ಳಲಾರದು. ಆದುದರಿಂದ ಪರಮಾನಂದರೂಪಿಯಾದ ಪರಮಾತ್ಮನೇ ಎಲ್ಲದರ ಅಂಶಿ.  ಎಲ್ಲದರ ನೆಲೆ. ಅಲ್ಲಿಯೇ ಎಲ್ಲವೂ ಹೋಗಿ ನೆಲೆಸಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 5, 2023

Sriranga Mahaguru - Nectarine Nuggets

While seeking the bride, the boy's father solicits: "Kindly bestow your daughter to us for lighting the lamp of our house". Which is the 'light' implied here? If it is merely the external one, then a maiden is not needed! Even the marriage is not required for that purpose. It would be enough to employ a servant to turn on the switch!! But here the light that is to be lit is the Inner one. Therefore even in Gṛha-Pravesá    (as  a  part  of  a  marriage  celebration),  lamps are illuminated (as a representative of the inner Light) serially from the entrance up to the Prayer room. It is the Adhyātma-Dīpa that should ever be gleaming everywhere; that alone should be shining.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 4, 2023

Sriranga Mahaguru - Nectarine Nuggets

A Sanātana Gṛhiṇī is one who does not use the light to search for mundane things but to illuminate the path to the divine abode and to shine the heavenly skies.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 2, 2023

ಶ್ರೀರಂಗ ವಚನಾಮೃತ (Sriranga Vachanamruta)

ಶಾಂತಿಧಾಮದಿಂದಾರಂಭವಾದ ಜೀವನ ಅಲ್ಲೇ ನಿಲ್ಲಬೇಕು. ಕೇಂದ್ರವೊಂದನ್ನಿಟ್ಟುಕೊಂಡು ಆರಂಭವಾದ ವೃತ್ತವು ಆರಂಭಿಸಿದೆಡೆಯಲ್ಲೇ ಬಂದು ನಿಂತಾಗ ವೃತ್ತವು ಪೂರ್ಣವಾಗುವುದು. ಅಂತೆಯೇ ಶಾಂತಿಧಾಮದಿಂದ ಆರಂಭವಾದ ಜೀವನವೃತ್ತವು ಮತ್ತೆ ಆ ಶಾಂತಿಧಾಮದಲ್ಲಿ ಶಾಂತರಸದಲ್ಲಿ, ಬಂದು ನೆಲೆಯಾಗಿ ನಿಂತಾಗಲೇ ಪೂರ್ಣವಾಗುವುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages