Wednesday, September 30, 2020

ಶ್ರೀರಂಗ ವಚನಾಮೃತ (Sriranga Vachanamruta) - 714

ಜ್ಞಾನಿಗಳು ತಾವು ಕಾಲಿಟ್ಟೆಡೆಗಳನ್ನೆಲ್ಲಾ ತೀರ್ಥರೂಪವಾಗಿ ಮಾಡುವರು. 'ತೀರ್ಥೀ ಕುರ್ವಂತಿ ತೀರ್ಥಾನಿ ತೀರ್ಥಭೂತಾ ಹಿ ಸಾಧವಃ.' ತೀರ್ಥರೂಪರಾದ ಮಹಾತ್ಮರು ಪಾದವಿನ್ಯಾಸ ಮಾಡಿದೆಡೆಯೆಲ್ಲಾ ಅದು ಕಾಡಾಗಲೀ ಮೇಡಾಗಲೀ ತೀರ್ಥವೇ ಆಗುತ್ತದೆ. ಪರಮಗುರು ಮೆಟ್ಟಿದ ಜಾಗ ತೀರ್ಥವಾಗುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 29, 2020

ಶ್ರೀರಂಗ ವಚನಾಮೃತ (Sriranga Vachanamruta) - 713

ಆತ್ಮವನ್ನು ಕಂಡವರು ಇರುವ ಎಡೆಯೇ ತೀರ್ಥ! ಅವರ ಮಾತೇ ತೀರ್ಥ! ಅವರ ಸ್ಪರ್ಶ, ಅವರ ದರ್ಶನ ಎಲ್ಲವೂ ತೀರ್ಥವೇ! ಕಾರಣ- ಅವರ ಚೇತನದಲ್ಲಿ ಆತ್ಮದರ್ಶನದಿಂದ ಲಭಿಸಿದ ಮನೋಧರ್ಮ ವ್ಯಕ್ತವಾಗುತ್ತದೆ. ಅಂತಹವರ ಮಹಿಮೆಯಿಂದಲೇ ತೀರ್ಥಗಳಿಗೆ ನಿಜವಾದ ತೀರ್ಥತ್ವ ಬರುತ್ತದೆ. 'ತೀರ್ಥೀ ಕುರ್ವಂತಿ ತೀರ್ಥಾನಿ.'  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, September 28, 2020

ಶ್ರೀರಂಗ ವಚನಾಮೃತ (Sriranga Vachanamruta) - 712

ಯಾವುದನ್ನು 'ಸಬ್ರಹ್ಮಾ ಸಶಿವಃ ಸೇಂದ್ರಸ್ಸೋsಕ್ಷರಃ ಸ್ವರಾಟ್' ಎಂದು ಹೇಳಿದ್ದಾರೋ ಅದು ಅಂತರ್ದೃಷ್ಟಿಗೆ ವಿಷಯ; ಭೌತಿಕವಾದ ಇಂದ್ರಿಯಗಳಿಗಲ್ಲ. ಅದರ ಪರಿಮಳವನ್ನು ಹೊರಗೆ ಹಚ್ಚಿ ಕಲ್ಲು, ಮರ, ಮಣ್ಣು ಇವುಗಳೊಡನೆ ಭಗವಂತನನ್ನು ಬೆರಸಿ, ಭಗವಂತನ ಭಾವವನ್ನು ಅದರಲ್ಲಿ ತುಂಬಿ, ಜನರ ಮನಸ್ಸನ್ನು ತಮ್ಮ ಭಾವಕ್ಕೆ ಎಳೆಯುವ ಮನವನ್ನು ಅಲ್ಲಲ್ಲೇ ದಿವ್ಯಕ್ಷೇತ್ರಗಳಲ್ಲೂ, ತೀರ್ಥಕ್ಷೇತ್ರಗಳಲ್ಲೂ ಮಾಡಿರುವ ಸಂಪ್ರದಾಯವು ನಮ್ಮ ದೇಶದಲ್ಲಿ ಅಲ್ಲಲ್ಲೇ ಉಳಿದುಕೊಂಡಿದೆ. 'ಕಸ್ತೂರಿಡಬ್ಬಿ' ಎಂಬ ಪದವನ್ನುಪಯೋಗಿಸಿದಾಗ ಕೇವಲ ಡಬ್ಬಿಗೆ ಯಾವ ಪರಿಮಳವೂ ಇಲ್ಲ. ಕಸ್ತೂರಿ ತುಂಬಿಟ್ಟಿರುವುದರಿಂದ ಆ ವಾಸನೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 27, 2020

Sri Sri Shankaracharya's Stotra Sahithya: Ekashloki | ಏಕಶ್ಲೋಕೀ

Sri Sri Shankaracharya's Stotra: Ekashloki Discourse: Sri Subramanya Somayaji Speaker Profile : https://articles.ayvm.in/2019/02/mr-bu-subramanya-somayaji.html ಶ್ರೀ ಶ್ರೀ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯ: ಏಕಶ್ಲೋಕೀ ಪ್ರವಚನ : ಶ್ರೀ ಸುಬ್ರಹ್ಮಣ್ಯ ಸೋಮಯಾಜಿ ಏಕಶ್ಲೋಕೀ: ಕಿಂ ಜ್ಯೋತಿಸ್ತವಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ | ಚಕ್ಷುಸ್ತಸ್ಯ ನಿಮೀಲನಾದಿಸಮಯೇ ಕಿಂ ಧೀರ್ಧಿಯೋ ದರ್ಶನೇ ಕಿಂ ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ||

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 711

(ಕ್ಷೇತ್ರಗಳಲ್ಲಿ ಯಾವುದುದೊಡ್ಡದು? ಎಂಬ ವಿಷಯವಾಗಿ ಹೇಳುತ್ತಾ) ಲೋಕಗುರುವೇ ಈ ಕ್ಷೇತ್ರವನ್ನು (ದೇಹವನ್ನು) ಮಾಡಿದ್ದಾನಪ್ಪಾ. ಯಾವ ಕ್ಷೇತ್ರದೊಡ್ಡದು? ಕ್ಷೇತ್ರದಲ್ಲಿರುವ ಕ್ಷೇತ್ರಜ್ಞನೇ ದೊಡ್ಡವನು. ಯಾವ ಪರಮಾತ್ಮನು ಕ್ಷೇತ್ರಕ್ಷೇತ್ರಜ್ಞರನ್ನು ತುಂಬಿಕೊಂಡಿದ್ದಾನೆಯೋ ಅವನ ಭಾವವು ಪ್ರತಿಷ್ಠಿತವಾಗಿರುವ ಕ್ಷೇತ್ರವೆಲ್ಲಾ ದೊಡ್ಡದೇ. ಆದ್ದರಿಂದ ಈ ಕ್ಷೇತ್ರವನ್ನು ಹೊಗಳಿ ಮತ್ತೋಂದನ್ನು ತೆಗಳಬೇಕಾಗಿಲ್ಲ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 26, 2020

ಶ್ರೀರಂಗ ವಚನಾಮೃತ (Sriranga Vachanamruta) - 710

ಒಬ್ಬ ವ್ಯಕ್ತಿಯನ್ನು ಅವನಿಗೆ ತಿಳಿಯದ, ಅವನು ಕಾಣದ ಕ್ಷೇತ್ರಕ್ಕೆ ಕೊಂಡೊಯ್ಯಬೇಕಾದರೆ ಅವನಿಗೆ ಈಗಾಗಲೇ ತಿಳಿದ ಕ್ಷೇತ್ರದಿಂದಲೇ ಪ್ರಯಾಣ ಆರಂಭವಾಗಬೇಕು. ಅವನು ಒಂಟಿಯಾಗಿ ಪ್ರಯಾಣ ಮಾಡಬೇಕಾಗಿದ್ದರೆ, ಅವನು ಈಗ ಇರುವ ಸ್ಥಳದಿಂದ ಅಥವಾ ಅವನು ತಲಪಬೇಕಾಗಿರು ಸ್ಥಳಕ್ಕೆ ಅತಿಹತ್ತಿರವಾಗಿದ್ದು, ಅವನಿಗೂ ತಿಳಿದಿರುವ ಸ್ಥಳದಿಂದ ಒಂದು ನಕಾಶೆಯನ್ನು ಬರೆದು, ಅದರ ವಿವರಣೆ ಸಹಿತ ಕೊಡಬೇಕು. ಇಂದ್ರಿಯಪ್ರಪಂಚವನ್ನು ಎಂದೂ ದಾಟಿಹೊಗದೇ ಇರುವ ವ್ಯಕ್ತಿಗಳಿಗೆ ಕೇವಲ ದಹರಾಕಾಶದಲ್ಲಿ ದರ್ಶನೀಯವಾದ ಪರಮಾತ್ಮನ ಬಳಿಗೆ ಸಾರಲು, ಮಾರ್ಗದರ್ಶನ ಮಾಡಲು, ಅವರು ಇರುವ ಇಂದ್ರಿಯ ಪ್ರಪಂಚದಿಂದಲೇ ಆರಂಭಿಸಬೇಕಾಗುತ್ತದೆ. ಈ ಉಪಕಾರ ಬುದ್ಧಿಯಿಂದಲೇ ಮಹರ್ಷಿಗಳು ತೀರ್ಥಕ್ಷೇತ್ರಗಳನ್ನು ಸೃಷ್ಟಿಸಿದರು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, September 25, 2020

ಶ್ರೀರಂಗ ವಚನಾಮೃತ (Sriranga Vachanamruta) - 709

ನಾವು ಈಗ ಒಂದು ಕ್ಷೇತ್ರಕ್ಕೆ ಬಂದಿರುವುದಾಗಿದೆ. ಈ ಕ್ಷೇತ್ರಕ್ಕೆ ಬರುವಾಗಲೇ ಜೊತೆಯಲ್ಲಿ ಇನ್ನೊಂದು ಕ್ಷೇತ್ರವನ್ನು ತಂದಿದ್ದೇವೆ. ಈ ಶರೀರವೇ ಒಂದು ಕ್ಷೇತ್ರವಾಗಿದೆ. ಈ ಕ್ಷೇತ್ರ (ಶರೀರ) ಬರದೆ ನಾವು ಈ ಕ್ಷೇತ್ರಕ್ಕೆ ಬರುವಂತೆಯೇ ಇಲ್ಲ. 'ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ' ಎಂಬುದಾಗಿ ಈ ಶರೀರಕ್ಕೆ ಕ್ಷೇತ್ರವೆಂದು ಹೆಸರುಂಟು. ಇದರಲ್ಲೂ ಕ್ಷೇತ್ರಜ್ಞನು ಇದ್ದಾನೆ. ಕ್ಷೇತ್ರಜ್ಞನೊಡನೆ ಪರಮಾತ್ಮನಿದ್ದಾನೆ. ಪರಮಾತ್ಮ, ಕ್ಷೇತ್ರಜ್ಞ, ಕ್ಷೇತ್ರ ಇವುಗಳನ್ನು ನಮ್ಮ ಜೊತೆಗೆ ತಂದು, ಅವುಗಳನ್ನು ಪ್ರತಿನಿಧಿಸಲು ಹೊರಗಡೆ ಇನ್ನೊಂದು ಕ್ಷೇತ್ರವೆಂದು ಹೇಳುತ್ತೇವೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 24, 2020

ಶ್ರೀರಂಗ ವಚನಾಮೃತ (Sriranga Vachanamruta) - 708

ಮಹಾತ್ಮರು ತಮ್ಮ ಶರೀರವನ್ನೇ ಕ್ಷೇತ್ರವನ್ನಾಗಿ ಮಾಡಿಕೊಂಡು, ಅಲ್ಲಿ ಉತ್ತಮ ಪುರುಷನನ್ನು ಕಂಡು 'ಕಾಶೀಕ್ಷೇತ್ರಂ ಶರೀರಂ' ಎಂದು ತಮ್ಮ ಶರೀರದಲ್ಲಿದ್ದದ್ದನ್ನು ಹೊರಗೆ ತೀರ್ಥಕ್ಷೇತ್ರವಾಗಿ ತಂದರು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, September 23, 2020

ಶ್ರೀರಂಗ ವಚನಾಮೃತ (Sriranga Vachanamruta) - 707

ಮಹರ್ಷಿಗಳು ಸತ್ಯವೂ, ಸುಂದರವೂ ಮಂಗಳಮಯವೂ ಆದ ಜೀವನಕ್ಕೆ ಅವನ ದಯೆಹರಿಯಲು ತೀರ್ಥಕ್ಷೇತ್ರಗಳನ್ನು ತಂದುಕೊಟ್ಟರು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 22, 2020

ಶ್ರೀರಂಗ ವಚನಾಮೃತ (Sriranga Vachanamruta) - 706

ತಿರುಳಿನೊಡನೆ ಗಮನಿಸಿದಾಗ, ಸನಾತನಾರ್ಯ ಮಹರ್ಷಿಗಳಿಂದ ಬಂದ ದೇವಾಲಯಗಳ ಶಿಲ್ಪದ ಹಿನ್ನಲೆಯಲ್ಲಿರುವ ಪ್ಲಾನ್ (Plan) ಇಡೀ ವಿಶ್ವದಲ್ಲೇ ಎಲ್ಲೂ ಇಲ್ಲವೆಂದು ಛಾಲೆಂಜ್ (Challenge) ಮಾಡಬಹುದು. ಕೇವಲ ಅಭಿಮಾನಕ್ಕಾಗಿ ಹೇಳುವ ಮಾತಲ್ಲ. ವಿಷಯ ಆರೀತಿ ಬೆಳೆದಿದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, September 21, 2020

ಶ್ರೀರಂಗ ವಚನಾಮೃತ (Sriranga Vachanamruta) - 705

ದೇವಾಲಯ ರಚನೆಯಲ್ಲಿ ಎಲ್ಲದರಲ್ಲಿಯೂ ಹೀಗೆಯೇ ಇರಬೇಕೆಂಬ ನಿಯಮವುಂಟು. ಕೆಲವು ದೇವಾಲಯಗಳಲ್ಲಿ ಪ್ರಧಾನ ದೇವತೆಯ ವಿಗ್ರಹ ಮಾತ್ರವಿರುತ್ತೆ. ಇನ್ನು ಕೆಲವುಕಡೆ ಎಲ್ಲವನ್ನೂ ಅಳವಡಿಸಿ ಚತುರ್ಭದ್ರವಾಗಿ ರಚನೆ ಮಾಡಿರುವುದು ಉಂಟು. ಶರೀರದಲ್ಲಿ ತಲೆ, ಕರುಳು, ಉದರ ಇವೆಲ್ಲಕ್ಕೂ ಒಂದೊಂದು ಪ್ರಮಾಣ ಮತ್ತು ದೇಶಗಳುಂಟು. ಅಂತೆಯೇ ಒಂದೊಂದು ದೇವಾಲಯದಲ್ಲಿಯೂ ಆಶಯವು ಈರೀತಿಯಾಗಿರಬೇಕು, ಇಂತಹ ದಿಕ್ಕಿನಲ್ಲಿ ಈ ದೇವತೆಗಳು ಇರಬೇಕು ಎಂಬ ನಿಯಮ ಉಂಟು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 20, 2020

Sri Sri Shankaracharya's Stotra Sahithya: Shivananda Lahari - 1 | ಶಿವಾನಂದ ಲಹರಿ - 1

Astanga Yoga Vijnana Mandiram (AYVM), Bangalore. Sri Sri Shankaracharya's Stotra Sahithya: Shivananda Lahari - 1 Discourse: Dr. K. S. Kannan Music: Dr. Meera Kannan Speaker Profile: https://articles.ayvm.in/2019/02/dr-k-s-kannan-profile.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಶ್ರೀ ಶ್ರೀ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯ: ಶಿವಾನಂದ ಲಹರಿ - 1 ಪ್ರವಚನ: ಡಾ. ಕೆ. ಎಸ್. ಕಣ್ಣನ್ ಮಂಗಳ ಸ್ತೋತ್ರ: ಡಾ. ಮೀರಾ ಕಣ್ಣನ್ ಶಿವಾನಂದ ಲಹರಿ ============== ಮಾ ಗಚ್ಛ ತ್ವಮ್ ಇತಸ್ ತತೋ ಗಿರಿಶ! ಭೋ! ಮಯ್ಯೇವ ವಾಸಂ ಕುರು ಸ್ವಾಮಿನ್ನ್-ಆದಿಕಿರಾತ! ಮಾಮಕ-ಮನಃ-ಕಾಂತಾರ-ಸೀಮಾಂತರೇ | ವರ್ತಂತೇ ಬಹುಶೋ ಮೃಗಾ ಮದ-ಜುಷೋ ಮಾತ್ಸರ್ಯ-ಮೋಹಾದಯಸ್ ತಾನ್ ಹತ್ವಾ ಮೃಗಯಾ-ವಿನೋದ-ರುಚಿತಾ-ಲಾಭಂ ಚ ಸಂಪ್ರಾಪ್ಸ್ಯಸಿ || 43 || मा गच्छ त्वम् इतस् ततो गिरिश! भो! मय्येव वासं कुरु स्वामिन्न्-आदिकिरात! मामक-मनः-कान्तार-सीमान्तरे । वर्तन्ते बहुशो मृगा मद-जुषो मात्सर्य-मोहादयस् तान् हत्वा मृगया-विनोद-रुचिता-लाभं च सम्प्राप्स्यसि ॥ 43 ||

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 704

ಭಗವತಿಯ ದೇಹಕ್ಕೆ ತಗುಲಿಸಿದ ಕುಂಕುಮ, ಕುಸುಮ ಪ್ರಸಾದಗಳನ್ನು ಹಣೆಗೂ ಮತ್ತು ಶಿರಸ್ಸಿಗೂ (ಯೋಚನೆಮಾಡುವಸ್ಥಾನ) ಇಟ್ಟುಕೊಳ್ಳುತ್ತಾರೆ. ಆ ಭಗವತಿಯ ದೇಹಕ್ಕೆ ತಗುಲಿದ ಪ್ರಸಾದದ ಕಣಗಳು ತಗುಲಿದರೆ ಅಲ್ಲಿಂದ ಬರುವ ಯೋಚನೆಗಳೆಲ್ಲಾ ಶುಭಸಂಕಲ್ಪಗಳೇ ಆಗುತ್ತವೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 19, 2020

ಶ್ರೀರಂಗ ವಚನಾಮೃತ (Sriranga Vachanamruta) - 703

ನಿದ್ರೆ ಬರುವಾಗ, ತನ್ನ ಗುರುತನ್ನು ಬಿಟ್ಟುಕೊಂಡೇ ಬರುತ್ತೆ. ಅದರ ಸಂಕಲ್ಪಕ್ಕೆ ತಕ್ಕಂತೆ ನಿದ್ರಾಗಮವಾಗುವಾಗ ಅದಕ್ಕೆ ಲೋಪವಾಗದಂತೆ ನಡೆದು ಕೊಳ್ಳಬೇಕು. ಭಗವಂತನ ಆಗಮನಕ್ಕೆ ತಕ್ಕಂತೆ ಇರಬೇಕಾದ ದೇವಾಲಯಗಳಲ್ಲಿ ಭಗವದಾಗಮಕ್ಕೆ ಲೋಪವಾಗದಂತೆ ಎಚ್ಚರ ಬೇಕು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, September 18, 2020

ಶ್ರೀರಂಗ ವಚನಾಮೃತ (Sriranga Vachanamruta) - 702

ಭೌತಿಕವಾದ ಸಂಪತ್ತನ್ನು ಹುಡುಕಿಕೊಂಡು ಅದಕ್ಕಾಗಿ ದೇವಾಲಯಗಳಮೇಲೆ ದಂಡಯಾತ್ರೆ ಮಾಡಿರುವವರುಂಟು. ಆದರೆ ಪ್ರಕೃತಿಯಮೇಲೆ ಒಳಮಾರ್ಗದಲ್ಲಿ ನಡೆದು ದಂಡಯಾತ್ರೆ ಮಾಡಿ ಜ್ಯೋತಿರ್ಲಿಂಗದವರೆಗೂ ಯಾತ್ರೆ ಮಾಡಿದರೆ ಅದು ತಾನೇ ಚಿರಸ್ಥಾಯಿಯಾದ ಯಾತ್ರೆಯಾಗುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 17, 2020

ಶ್ರೀರಂಗ ವಚನಾಮೃತ (Sriranga Vachanamruta) - 701

ದೇವಾಲಯಗಳಲ್ಲಿ ಜ್ಞಾನಿಗಳ ಕಡೆಯಿಂದ, ಅವರ ಅಂತರಂಗದಿಂದ, ಆತ್ಮದಾಳದಿಂದ, ಬಂದ ವಿಷಯವನ್ನು ಬುದ್ಧಿಗೆ ತೆಗೆದುಕೊಂಡು ಕರಚರಣಾದಿಗಳ ದ್ವಾರಾ ಚಿತ್ರಿಸಿರುವ ವಿಷಯವುಂಟು. ಆತ್ಮಲೋಕದ ವಿಷಯವೇ ಹಾಗೆ. ಲೋಕದಲ್ಲಿ ಕಲೆಯಾಗಿ ಬಂದಾಗ ಅದಕ್ಕೆ ಬೆಲೆಯನ್ನು ಕೊಡುವಾಗ ಅದರ ಕೊಲೆ ಮಾಡದೆ, ನೆಲೆಯರಿತು ಬೆಲೆಯನ್ನು ಕೊಡಬೇಕಾಗಿದೆಯಪ್ಪಾ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, September 16, 2020

ಶ್ರೀರಂಗ ವಚನಾಮೃತ (Sriranga Vachanamruta) - 700

ಭಗವಂತನು ಒಮ್ಮೆ ಮೌನವಾಗಿಯೂ ಇರುತ್ತಾನೆ. ನಿಮಗೋಸ್ಕರವಾಗಿ ಮಾತನ್ನೂ ಆಡುತ್ತಾನೆ. ಒಮ್ಮೆ ಕಲ್ಲಾಗಿಯೂ ಇರುತ್ತಾನೆ. ಒಮ್ಮೆ ಸಪ್ತಧಾತುಗಳಿಂದ ಕೂಡಿದ ಪಾರ್ಥಿವವಾದ ಶರೀರದಲ್ಲಿಯೂ ಇರುತ್ತಾನೆ. ಅವನನ್ನು ಅಪಾರ್ಥವಿಲ್ಲದೇ ತೆಗೆದುಕೊಂಡವರು, ಪರಮಾರ್ಥದಲ್ಲಿ ನಿಲ್ಲುತ್ತಾರಪ್ಪಾ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 15, 2020

ಶ್ರೀರಂಗ ವಚನಾಮೃತ (Sriranga Vachanamruta) - 699

ಸಜೀವವಾದ ಬ್ರೈನಿ(Brain)ನ ಅಭ್ಯಾಸ ಮಾಡುವುದಕ್ಕಾಗಿ ಹೊರಗಡೆ ಅದರ ಮಾಡಲ್ (ಮಾದರಿ) ಅನ್ನು ಮಾಡಿಡುವುದುಂಟು. ಮಾಡಲ್ ಸಜೀವವಾದ ಬ್ರೈನೇ ಅಲ್ಲದಿದ್ದರೂ ಅದರ ಕಡೆಗೆ ಲೀಡ್ ಮಾಡುತ್ತದೆ. ಅಂತೆಯೇ ಒಳಗಿರುವ ದೈವದ ಪರಿಚಯ ಮಾಡಿಸುವುದಕ್ಕಾಗಿ ಶಿಲೆಯಮೇಲೆ ಕಲೆಯಿಂದ ದೈವದಗುರುತನ್ನು ಮೂಡಿಸಿರುವುದುಂಟು. ಶಿಲೆಯೇ ದೈವವಲ್ಲದಿದ್ದರೂ, ದೈವಿಭಾವದತ್ತ ಸೆಳೆದೊಯ್ಯುವ ಮಾಡಲ್ ಆಗಿದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, September 14, 2020

Nectarine Nuggets of Mahaaguru - 621

While in the lower rungs of a Chariot, cartoon-like pictures are painted, the procedure is to sketch the paintings of Saints, Rishis, Gods etc in the higher rungs. If we limit ourselves to our own (lowest) level, what we obtain would be the satirical pictures alone. On the other hand, if we raise our sight a little bit, we would see the Lord. This scheme of setting comic strips in the lower strata, mirrors the way we lead our lives - though the Lord is present in our lives, we forget Him (and go in our own way). After seeing these pictures, if we raise our vision well above and view with that elevated vision, the following saying would be meaningful: Rathastham Keshavam drshtvaa punarjanma na vidyate - (There is no re-birth once Keshava seated in the Chariot is realized).  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 698

ದೇವಾಲಯವನ್ನು ಕಟ್ಟಿರುವುದು ಕಲ್ಲಿನಲ್ಲೇ ಆಗಿರಬಹುದು. ಅಲ್ಲಿ ಹೊರಗೆ ಕಾಣುವುದೂ ಕಲ್ಲೇ ಆಗಿರಬಹುದು. ಆದರೆ ಅದರ ಹಿನ್ನಲೆಯಲ್ಲಿ ಹರಿಯುತ್ತಿರುವ ದೇವತ್ವವನ್ನು ನೋಡಿ ಅದಕ್ಕೆ ಬೆಲೆ ಕೊಡಬೇಕು ಅದಕ್ಕೋಸ್ಕರ ಅದರಲ್ಲಿ ಪ್ರೀತಿ ಇಡಬೇಕು. ಅದರ ಹಿಂದಿರುವ ಚೈತನ್ಯವನ್ನು ಅರಿತು ಅದನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯನೂ ಮಾಡಬೇಕಾದ ಪ್ರಪ್ರಥಮ ಕರ್ತವ್ಯವಿದು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 13, 2020

Nectarine Nuggets of Mahaaguru - 620

All that we see in the temporal Universe are painted, stage by stage, in the lower rungs of the Chariot. Then the Lord of the Universe-Jagannaatha-is placed above them.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sri Sri Shankaracharyara Stotra Sahithya - Kashika Panchaka Stotram

Astanga Yoga Vijnana Mandiram (AYVM) - Pravachana ಶ್ರೀ ಶ್ರೀ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯ: ಕಾಶೀಕಾಪಂಚಕಸ್ತೋತ್ರಮ್ ವೇದ ಮಂತ್ರ: ಡಾ. ಸುರೇಶ್ ನಂಜನಗೂಡು (~3 mins) 00:00:23 ಮಂಗಳ ಸ್ತೋತ್ರ: ಡಾ. ಮೀರಾ ಕಣ್ಣನ್ (~4.5 mins) 00:03:14 ಪರಿಚಯ: ಸುಬ್ರಹ್ಮಣ್ಯ ಸೋಮಯಾಜಿ (~2.5 mins) 00:17:52 ಪ್ರವಚನ : ವಿದ್ವಾನ್ ನರಸಿಂಹ ಭಟ್ (~50 mins) 00:10:46 ಅವಧಿ: 60 mins Sri Sri Shankaracharyara Stotra Sahahithya - Kashika panchaka stotram Veda Mantra: Dr. Suresh Nanjangud (~3 mins) 00:00:23 Music: Dr. Meera Kannan (~4.5 mins) 00:03:14 Introduction: Subrahmanya Somayaji (~2.5 mins) 00:17:52 Discourse: Vidwan Narasimha Bhat (~50 mins) 00:10:46 Total Duration: 60 mins

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 697

ಎಂಟು ಲಕ್ಷ ರೂಪಾಯಿಗೆ ಬರೆದಿದ್ದ ಚೆಕ್ ಕಳೆದು ಹೋದರೆ ಅದಕ್ಕೆ ಎಷ್ಟು ಸಂತಾಪ ಪಡುತ್ತೀರಿ. ಅಷ್ಟು ಕಾಗದ ಹೋದರೆ ಅಷ್ಟು ಅಳಬೇಕೇ? ಅಲ್ಲಿ ಕಾಗದಕ್ಕಾಗಿ ಅಳುವಲ್ಲ, ಧನಕ್ಕಾಗಿ. ದೇವಾಲಯದಲ್ಲಿಯೂ ಅಷ್ಟೇ! ಬರೀ ಕಲ್ಲಿಗಾಗಿ ಬೆಲೆಯಲ್ಲ! ಆ ಕಲ್ಲಿನ ಬಗ್ಗೆ ನಮ್ಮ ಸಂತಾಪವೂ ಇಲ್ಲ; ಆ ಕಲ್ಲಿನ ಹಿನ್ನಲೆಯಲ್ಲಿರುವ ಜ್ಞಾನಧನಕಾಗಿ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 12, 2020

Nectarine Nuggets of Mahaaguru - 619

The utsava for the leaf, flower, fruit etc (of a tree) is when they retain their connection with the root. If any of them wishes to disassociate from the root then there is nirutsava (no utsava). It dries up soon. This is equally true in the case of the Life's-tree too.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 696

'ಕಲ್ಲಿನ ಮುಂದೆ ಕಾಯೊಡೆಯುತ್ತಾರೆ; ಕಲ್ಲು ತಿನ್ನುತ್ತದೆಯೇ? ಶುದ್ಧ ಮೂರ್ಖರು' -ಎನ್ನುವವರುಂಟು. ಆದರೆ ಒಡೆಯುತ್ತಿರುವುದು ಕಲ್ಲಿನ ಎದುರಿಗಾದರೂ ಕಲ್ಲಿಗಲ್ಲ. ಅದು ಯಾವ ಹೃನ್ಮೂಲಶಕ್ತಿಯಿಂದ ಹೊರಬಂದಿತೋ ಆ ಮೂಲಕ್ಕೆ ತಲುಪಿಸುವುದಕ್ಕಾಗಿ. ಬಟ್ಟೆಗೆ ಕೈಮುಗಿದರೂ ಅದು ಬಟ್ಟೆಗಲ್ಲ; ಅದರಲ್ಲಿರುವ ರಾಷ್ಟ್ರದ ಗುರುತಿಗಾಗಿ ಗೌರವ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, September 11, 2020

Nectarine Nuggets of Mahaaguru - 618

If a tree bears a festive look with all its branches, flowers and fruits in their natural gleam, is it not because of the root of the tree? In the same way, the utsava for the jeeva is nothing but the utsava of its source namely Deva. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 695

ರಾಷ್ಟ್ರಧ್ವಜ ಒಂದು ಕಾಗದದ ರೂಪದಲ್ಲಿರಬಹುದು; ಬಟ್ಟೆಯ ರೂಪದಲ್ಲಿರಬಹುದು. ಅದನ್ನು ಹರಿದರೆ ರಾಷ್ಟ್ರದ್ರೋಹಿಗಳೆನ್ನುತ್ತಾರೆ. 'ಬರೀ ಬಟ್ಟೆ ಅಥವಾ ಕಾಗದ ಹರಿದರೆ ಅಷ್ಟೇಕೆ ಕೋಪ?' ಎಂದರೆ, ಅಲ್ಲಿ ಕೋಪ ಬಟ್ಟೆ ಅಥವಾ ಕಾಗದ ಹರಿದುದರ ಮೇಲಲ್ಲ, ಅದರ ಮೇಲಿರುವ ರಾಷ್ಟ್ರದ ಗುರುತಿನ ಭಾವಕ್ಕಾಗಿ, ಎನ್ನುವುದಿಲ್ಲವೇ? ಹಾಗೆಯೇ ಕಲ್ಲಿನ ಮೇಲೆ ಮಹರ್ಷಿಗಳ ಮನೋರಂಗದ ಗುರುತನ್ನು ಮೂಡಿಸಿದಾಗ ಅದು ಬರೀ ಕಲ್ಲಲ್ಲ. ಮಹರ್ಷಿಗಳ ಮನೋರಂಗದಲ್ಲಿ ಮೂಡಿದ ಚಿನ್ಮಯಮೂರ್ತಿಯ ಮುದ್ರೆ ಅದರ ಮೇಲೆ ಬಿದ್ದಿದೆ, ಅದಕ್ಕೇ ಅಲ್ಲಿ ಪೂಜೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 10, 2020

Nectarine Nuggets of Mahaaguru - 617

When a child catches hold of a piece of an earthen vessel it begins to play with it as if it is a real baby and celebrates a baby utsava; it induces a spirit of life into it and fondles it as if it is an infant . Thus the piece gets filled with Life. If someone wantonly throws it away, it wails that its little-one is lost. Why? The child's feelings should be understood; it is not merely a piece of tile for the child. It has projected its mental child in that piece. It is because of this that it loves or weeps for that piece of tile. In the same way, if we can place the Lord in the cradle of our Life and lead our lives with Him, then and only then it becomes an Utsava. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 694

ದೇವಾಲಯಗಳಲ್ಲಿ ಋಷಿಗಳು ಇಟ್ಟ ದಿವ್ಯವಸ್ತುವನ್ನು ನೋಡುವಂತಾಗಬೇಕು. ಅವರು ತಮಗೆ ಗೋಚರವಾದ ದಿವ್ಯವಸ್ತುವನ್ನು ಭೌತಿಕವಾಗಿಟ್ಟಾಗ, ಈ ಶಿಲೆಯು ಅದರ ಅಭಿಪ್ರಾಯಕ್ಕೆ ಒಂದು ವಾಹನವಾಗಬೇಕು. ಗಾಯಕನು ತನ್ನ ಮನೋಧರ್ಮವನ್ನೂ, ಅಭಿಪ್ರಾಯವನ್ನೂ, ರಾಗವನ್ನೂ, ಗಾನವನ್ನೂ, ವೀಣೆಯಮೇಲಿಟ್ಟು ಹೇಗೆ ತರುತ್ತಾನೋ ಹಾಗೆ ಋಷಿಗಳು ತಮ್ಮ ಅಭಿಪ್ರಾಯವನ್ನು ಈ ಶಿಲೆಯಲ್ಲಿ ಹರಿಸಿದ್ದಾರೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, September 9, 2020

Nectarine Nuggets of Mahaaguru - 616

The Mula vigraha (Chief Idol in the altar) is never taken in a procession. It remains in the Sanctum Sanctorum only. The festive procession is only for the Utsava-murty which bears and represents the innate nature of the Mula-murty. The Utsavamurty may go round the entire town in procession but ultimately it does get back to its starting point namely the Sanctum. In the same way, our conduct which represents the state of mind filled with the sentiments of the Lord alone is utsava. It is again the jingling, celebrating and mixing all our activities in Life with His supreme thoughts is Utsava.  
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 693

ಕಾಲಿಂಗ್ಬೆಲ್ ಶಬ್ದವು ಎತ್ತಕಡೆಯಿಂದ ಬರುತ್ತಿದೆಯೋ ಅತ್ತ ಹೋಗಬೇಕು. ದೇವಾಲಯದಲ್ಲಿ ಪ್ರಣವನಾದಮಯವಾದ ಘಂಟೆ ಮೊಳಗಿದರೆ, "ತದ್ವಿಷ್ಣೋಃ ಪರಮಂ ಪದಂ" ಎಂಬುದಾಗಿ ನಮ್ಮ ಮನಸ್ಸು ಅತ್ತ ಹೋಗಬೇಕು. ಮಹರ್ಷಿಗಳು ತಂದಿರುವ ಈ ರೀತಿಯ ಸಂಸ್ಕೃತಿ ಇಡೀಜಗತ್ತಿನಲ್ಲಿ ಬೇರೆಲ್ಲೂ ಸಿಕ್ಕುವುದಿಲ್ಲ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 8, 2020

Nectarine Nuggets of Mahaaguru -- 615

Utsava is indeed meant to bring out to the outside world that which resides inside. It is like the security guard who shows to the visitor through his gestures that the Emperor is resting inside.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 692

ದೇವಾಲಯದಲ್ಲಿ ನಾದ, ಬಿಂದು, ಕಲೆಗಳಿಂದ ಕೂಡಿದವನೂ ಅದಕ್ಕೆ ಅತೀತನೂ ಆದ ಯಾವ ಈಶ್ವರನುಂಟೋ, ಯಾರನ್ನು ಜ್ಞಾನಿಗಳು ಓಂಕಾರದಿಂದ ಕೂಗಿದರೋ ಅವನನ್ನು ಅದರಿಂದ ಅಂತೆಯೇ ಕೂಗಿದರೆ ಅವನು ಮಾತನಾಡುತ್ತಾನೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, September 7, 2020

Nectarine Nuggets of Mahaaguru - 614

Utsava is derived from ut+savana where savana is yajna (sacrifice); thus Utsava is that savana which provides an upward (spiritual) progression in Life. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 691

ದೇವಾಲಯದಲ್ಲಿ ದೇವತಾವಿಗ್ರಹ, ದೇವರ ಮುಂದಿರುವ ದೀಪ, ಘಂಟಾನಾದ, ವೇದಘೋಷ, ಭಗವತ್ಕಥಾ ಪ್ರವಚನ, ವೀಣಾ-ವೇಣು-ಮೃದಂಗಾದಿ ವಾದ್ಯಗಳು-ಇವುಗಳಲ್ಲಿ ಒಂದೊಂದೂ ಮನುಷ್ಯನಿಗೆ ಮುಕ್ತಿಯನ್ನು ಕೊಡಲು ಸಮರ್ಥವಾಗಿವೆ. ಆದರೆ ದೇವಾಲಯಕ್ಕೆ ಬರುವವರ ಪ್ರಕೃತಿ ನೂರಾರು ವಿಧವಾಗಿರುತ್ತದೆ. ಆದ್ದರಿಂದ ಇಷ್ಟು ಬಗೆಯ ಸಾಧನಗಳನ್ನೂ ಇಲ್ಲಿ ಅಳವಡಿಸಿದ್ದಾರೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 6, 2020

Nectarine Nuggets of Mahaaguru - 613

Shrutis and smrutis may declare that the Lord projected his divine Feet to occupy and measure all the three worlds: Tredhaa nidadhe padam. This can be understood only through a direct experience. On the other hand, if one tries to comprehend it through external form alone, it becomes ridiculous; for, we may be wondering: "how can the idol inside an enclosure which we are seeing before our own eyes occupy the three worlds?"!  
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 690

ದೇವಾಲಯದಲ್ಲಿ ಎಲ್ಲ ಮಟ್ಟದ ಜೀವನದ ಚಿತ್ರಣವೂ ಉಂಟು. ವಿವಿಧವಾದ ಚಿತ್ರಗಳಿರಬಹುದು. ಅಲ್ಲಿ ಲೋಕಜೀವನವನ್ನು ಚಿತ್ರಿಸದಿದ್ದರೆ ಲೋಕವು ಇದು ತನ್ನದಲ್ಲವೆಂದು ಬಿಟ್ಟುಬಿಡುತ್ತದೆ. ಆದ್ದರಿಂದ ಲೋಕದಲ್ಲಿರುವುದನ್ನು ಚಿತ್ರಿಸಿ ಲೋಕಾತೀತವಾಗಿರುವುದನ್ನೂ ಚಿತ್ರಿಸಬೇಕು. ಅಂತೆಯೇ ಅದನ್ನು ನೋಡುವಾಗಲೂ ನಮ್ಮಂತಿರುವುದನ್ನೂ ನೋಡಿ, ನಮಗಿಂತ ವಿಲಕ್ಷಣವಾಗಿರುವುದೇನೆಂಬುದನ್ನೂ ನೋಡಬೇಕು. ಹಾಗಿಲ್ಲದಿದ್ದರೆ ಎಲ್ಲವೂ ವ್ಯಂಗ್ಯವಾಗಿ ಕಾಣುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 5, 2020

Nectarine Nuggets of Mahaaguru - 612

Nowadays man has learnt to travel at high speeds not only on the ground but in the sky too with aero-planes. He is enthusiastic about reaching the moon too. Thus moves the mind of the moderners. But during the Maharshi-period, people were excited about visiting the temples and reaching the Atmaloka, the universe of the self, and to know the states and conditions there. The pilgrim centers and the temples are indeed the divine centers of Maharshis. They are the maps and means of transport readied by them to reach the Atmaloka. Only those who have understood the mind of the maharshis can recognize the method of using them and derive the benefits. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 689

ಉತ್ತರ ಧ್ರುವದ ಕರಡಿಯನ್ನು ನಮ್ಮ ಖಾಸಬಂಗಲೆಯಲ್ಲಿ ಇಡಬೇಕಾದರೆ ಹೇಗಿಡಬೇಕು? "ಊಟ ಹಾಕಬೇಕು, ಪಾಯಸ ಹಾಕಬೇಕು" ಎಂದು ಹೇಳಿ ಹಾಗೆ ಇಟ್ಟರೆ ಬದುಕುವುದಿಲ್ಲ. ಉತ್ತರ ಧ್ರುವವು ಬರೀ ಮಂಜಿನಿಂದ ಕೂಡಿದ ಜಾಗ. ಅಲ್ಲಿಂದ ಕರಡಿಯನ್ನು ತಂದರೆ ಆ ವಾತಾವರಣವನ್ನೇ ಅದಕ್ಕೆ ಇಲ್ಲೂ ಒದಗಿಸಬೇಕು. ಹಾಗೆಯೇ ಮೀನನ್ನು ತಂದರೂ ಸರ್ವದಾ ನೀರಿನಲ್ಲೇ ಬಿಟ್ಟಿರಬೇಕು. ಅಂತೆಯೇ ನಮ್ಮ ಭಗವಂತನನ್ನು ಇಟ್ಟುಕೊಳ್ಳಬೇಕಾದರೂ ಅವನಿಗೆ ತಕ್ಕ ವಾತಾವರಣವೇ ಬೇಕು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, September 4, 2020

Nectarine Nuggets of Mahaaguru - 611

The Jnaanis, filled with immense compassion, placed on the idol, their (result of) Tapas which got them the ultimate joy; it was also imprinted in their literature; their sculptures too took their share; their state of mind (mano-dharma) took a seat even on the musical instruments like Veena. But alas! Someone somewhere in between has altered the tuning of the Veena; because of this mistuning, the divine sound is not coming forth now. Hence its value is lost. Likewise, if the description of an entity is not in accordance with the Atma-dharma imprinted on it by Jnaanis, then it loses its worth. I, the description of the personality of the One, imprinted on nature by Jnaanis, is not as per his originality then it is worthless. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 688

ಅಭಿಜ್ಞಾನವಾದ ಉಂಗುರವಿಲ್ಲದ್ದರಿಂದ ದುಷ್ಯಂತನಿಗೆ ರಸನಿಮಿಷ ವಿಷನಿಮಿಷವಾಯಿತು. ಮತ್ತೆ ಅಭಿಜ್ಞಾನ ದೊರೆತು ವಿಷನಿಮಿಷದಿಂದ ರಸನಿಮಿಷಕ್ಕೆ ತಿರುಗಿತು. ಹಾಗೆಯೇ ಭೂಮಿಯಲ್ಲಿದ್ದವರನ್ನು ವೈಕುಂಠಕ್ಕೆ, ಕೈಲಾಸಕ್ಕೆ, ಕೊಂಡೊಯ್ಯುವ ಅಭಿಜ್ಞಾನ ದೇವಾಲಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 3, 2020

Nectarine Nuggets of Mahaaguru - 610

Though the person asleep is silently sleeping, the silence of his sleep itself is a commentary on its peace and happiness. The person standing besides understands that he is happily dozing. In the same way, if rshi-hrdaya is installed in the idol, the silence of the stone itself proclaims its commentary. The expert on seeing it discovers the rshi-hrdaya and their yoganidra. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 687

ಉಂಗುರವು ದುಷ್ಯಂತನಿಗೆ ತಾನು ಮರೆತ ಶಕುಂತಲೆಯನ್ನು ಜ್ಞಾಪಿಸಿಕೊಡಲು ಅಭಿಜ್ಞಾನವಾದಂತೆ ಈ ಗುಡಿ-ಗೋಪುರಗಳೆಲ್ಲವೂ ದೇವನನ್ನು ಮರೆತ ಜೀವಿಗಳಿಗೆ ಅವನ ಅಭಿಜ್ಞಾನವಾಗಿವೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, September 2, 2020

Nectarine Nuggets of Mahaaguru - 609

The Truth that has been experienced by the Maharshis in their Atma-yoga (Samaadhi) is transmitted in the shilaa-yoga. The idol is touched in this yogic state. This is termed as Pratishthaa. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 686

ಇಂದ್ರಿಯಗಳನ್ನು ದಾಟಿ ತಮ್ಮದೇ ಆದ ಪ್ರಪಂಚದಲ್ಲಿ ಜೀವನಮಾಡಿದ ಮಹರ್ಷಿಗಳು ಆ ಜೀವನಕ್ಕೆ ಅಭಿಜ್ಞಾನವಾಗಿ ಗುಡಿಗೋಪುರಗಳನ್ನು ಕಟ್ಟಿದರು. ಮಹರ್ಷಿಗಳ ಕಾಲ ದೇವಯುಗ. ಭಾರತವೇ ಆಯುಗದಲ್ಲಿನ ದೇಗುಲ. ಆಸೇತು-ಶೀತಾಚಲ ಎಲ್ಲಿನೋಡಿದರೂ ದೇವಮಂದಿರಗಳನ್ನು ಕಟ್ಟಿದರು. ಆ ಜೀವನದ ಅಪ್ರತಿಹತಸಂಚಾರಕ್ಕೆ ದಾರಿ ಮಾಡಿಕೊಟ್ಟರು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 1, 2020

Nectarine Nuggets of Mahaaguru - 608

Agama implies that which entered (Agatam) the minds of Rshis for the first time (meaning that which has been experienced by the Rshis in their deep meditation). Secondly, that which has gone out (Gatam) from their minds meaning their experience manifested in the outside world. Thirdly, it is that which has become their Matam (opinion). Thus Agama stands for Agatam-Gatam-Matam. Agama can't be understood without a proper knowledge of these three aspects.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 685

ನಾವು ಹುಟ್ಟಿರುವುದು ಮರೆವು ಇರುವ ಟೈಮ್-ಸ್ಪೇಸಿನಲ್ಲಿ(ಕಾಲದೇಶಗಳಲ್ಲಿ). ಆ ಮರೆವೆಂಬ ಜಾಗದಲ್ಲಿರುವವರಿಗೆ ಮಧ್ಯೆಮಧ್ಯೆ ಸತ್ಯವನ್ನು ಜ್ಞಾಪಿಸಲು ಅಭಿಜ್ಞಾನ ಇರಬೇಕು. ಅದೇ ದೇವಾಲಯಗಳು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages