Thursday, July 7, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಬೇಕಾದ ವೃತ್ತಿ ಬೇಕು. ಹೇಗೆ ವರ್ತಿಸಬೇಕು ಎಂದರೆ ಮನೆಯಿಂದ ನದಿಗೆ ಈಜುವುದಕ್ಕೆ ಹೋದರೆ ತಿರುಗಿ ದಡ ಸೇರುವಂತೆ. ಅದು ಬಿಟ್ಟು ಪ್ರವಾಹದಲ್ಲಿ ಬಿದ್ದು ಒದ್ದಾಡುತ್ತಾ ಕೈಕಾಲು ಬಡಿದ, ದುಬು ದುಬು ಎಂದು ನೀರು ಕುಡಿದ, ಆಮೇಲೆ ಬಾಯಿ ಬಡಿದ ಎಂದರೆ ಹಾಗೆ ಹೋಗುವುದೇ ಜೀವನವಾಗುತ್ತೆ. ಪ್ರವಾಹದಲ್ಲಿ ಸಿಕ್ಕಿಬಿದ್ದಾಗ ಅದರಲ್ಲಿ ಕೆಮ್ಮುವವರು ಕೆಲವರು, ಚಿತ್ರವಿಚಿತ್ರವಾಗಿ ಇರುವವರು ಕೆಲವರು, ಹೀಗೆ ಸಹಸ್ರಾರು ವಿಧಗಳನ್ನು ನೋಡಬಹುದು. ಯಾವುದೋ ಪ್ರವಾಹಕ್ಕೆ ಸಿಕ್ಕಿ ಅಲ್ಲಲ್ಲೇ ಕೈಕಾಲು ಆಡಿಸುತ್ತಾ ಇದ್ದರೆ ಜೀವನವಾಗುವುದಿಲ್ಲ. ಹಾಗೆಯೇ ಮಾಯೆಯ ಪ್ರವಾಹದಲ್ಲಿ ಬಿದ್ದು ಅಲ್ಲಲ್ಲೇ ಆಡುತ್ತಿದ್ದಾರೆ. ಅಷ್ಟಷ್ಟರಲ್ಲೇ ನಾ ಮುಂದು, ತಾ ಮುಂದು ಎನ್ನುವ ರೀತಿ ಹೋಗುತ್ತಿದೆ. ಇದರಲ್ಲಿ ಎಲ್ಲರೂ ಪ್ರವಾಹಕ್ಕೆ ಸಿಕ್ಕಿಬಿದ್ದವರೇ. ಇದರಲ್ಲಿ ಹಿಂದೂ ಇಲ್ಲ, ಮುಂದೂ ಇಲ್ಲ. ಇದಾವುದೂ ಆದರ್ಶವಲ್ಲ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, July 5, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದಲ್ಲಿ ಹೇಗೆ ಬಾಳಬೇಕು. ರಷ್ಯನ್ ಟೈಪ್ನಲ್ಲಿ ಜೀವನ ನಡೆಸಬೇಕೇಇಂಗ್ಲಿಷ್ ಟೈಪ್ನಲ್ಲಿ ಜೀವನ ನಡೆಸಬೇಕೇಅಮೆರಿಕನ್ ಟೈಪೇ? ಟೈಪ್ ಗಳಾವುವೂ ಆದರ್ಶವಲ್ಲ. ಅನಾದರ್ಶವಾಗುತ್ತೆ. ನಿಮ್ಮ ಜೀವನದ ಮೂಲಕ್ಕೆ ವಿರೋಧವಿಲ್ಲದೆ ಬಾಳಿದರೆ ಅದೇ ಆದರ್ಶ ಜೀವನ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, July 3, 2022

Sriranga Mahaguru - Nectarine Nuggets

The leaf, flower, fruit etc. should maintain their connection with the root of the tree; only then their Saukumārya (tenderness) and Saugandhya (aroma) would remain with them. On the other hand, suppose they think: "After all, where am I? And where does the root reside? Where is the link between us?" The moment the connection is snapped from the root, whether it is a leaf or a fruit, its form begins to change; it is defaced. In the same way, if the Jīvi is desirous of a Life of Peace, he should retain his link with the Lord. Life would be delightful only when it is 'offered' at the Lotus feet of the Lord - the Source of the Universe.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 30, 2022

ಶ್ರೀರಂಗ ವಚನಾಮೃತ (Sriranga Vachanamruta)

ಭೌತಿಕಕ್ಷೇತ್ರದಲ್ಲಿ ಗಗಾರಿನ್ ಹೋಗಿ ಭೂಗ್ರಹದ ಆಕರ್ಷಣೆಯನ್ನು ಮೀರಿ ಅಂತರಿಕ್ಷಕ್ಕೆ ಹೋದನೆಂದು ಇಷ್ಟು ದೊಡ್ಡ ಖ್ಯಾತಿ. ಇನ್ನು ಭೂರ್ಭುವಸ್ಸುವರ್ಲೋಕಗಳನ್ನೇ ಮೀರಿನಿಂತ ಪರಮತೇಜಸ್ಸು, ಅಲ್ಲಿಗೆ ಹೋಗಿ ತಲುಪಿದ ಸಂತೋಷವನ್ನು ಹೇಳಿಕೊಳ್ಳುವ ಸಂಗತಿಯು ಎಲ್ಲಕ್ಕಿಂತ ಸಂತೋಷಾಪ್ಪಾ. ಮೊದಲನೆಯದು ಇಂದ್ರಿಯಗಳನ್ನು ಕೇಳಿ ಸಂತೋಷ ಪಡುವ ಒಂದು ವಿಷಯ. ಆದರೆ ಮತ್ತೊಂದು ಇಂದ್ರಿಯಾತೀತವಾದ ಜಾಗದಲ್ಲಿರುವ ಶುದ್ಧಾತ್ಮರು ಸಂತೋಷಪಡುವ ವಿಷಯ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 28, 2022

ಶ್ರೀರಂಗ ವಚನಾಮೃತ (Sriranga Vachanamruta)

ಭೂಮಿಗೆ ದಿನಂಪ್ರತಿ ತನ್ನ ಸುತ್ತಲೂ ಒಂದು ಬಾರಿ ಸುತ್ತುವ ಯೋಗ್ಯತೆ ಇರುವಂತೆಯೇ, ವರ್ಷಕ್ಕೊಮ್ಮೆ ಸೂರ್ಯನ ಸುತ್ತಲೂ ಸುತ್ತುವ ಯೋಗ್ಯತೆಯೂ ಇದೆಯಲ್ಲವೇ? ಹಾಗೆಯೇ ಲೋಕಯಾತ್ರೆ (ದಿನಚರಿ)ಯೂ ನಡೆಯಬೇಕು. ಜೊತೆಗೆ ಆತ್ಮಯಾತ್ರೆಯೂ ನಡೆಯಬೇಕು.To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 26, 2022

Sriranga Mahaguru - Nectarine Nuggets

It is true that we have come to the market for purchases. This does not mean that we should show disinterest in our dealings. However, in our over-enthusiasm in trading, we should not forget returning to our homes!

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 23, 2022

ಶ್ರೀರಂಗ ವಚನಾಮೃತ (Sriranga Vachanamruta)

ದಾಮೋದರನೂ ಇರಬೇಕು. ದಾಮೋದರನೇ ಉದರವನ್ನು ಕೊಟ್ಟಿರುವುದರಿಂದ ಉದರಭರಣವೂ ಬೇಕು. ಮಧ್ಯೆ ಬೇರೆ ಕೆಲಸ ನಡೆಯುತ್ತಿದ್ದರೂ ನಮ್ಮ ಧ್ಯೇಯವನ್ನು ಮರೆಯಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 21, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನವು ಬಹು ವ್ಯಾಪಕವಾಗಿದೆ. ಉದರಭರಣಕ್ಕೋಸ್ಕರವಾಗಿ ವಿವಿಧ ವೃತ್ತಿಗಳನ್ನವಲಂಬಿಸಿ ಜೀವನ ನಡೆಸುತ್ತಿದ್ದೇವೆ. ಅಂತೆಯೇ ಆತ್ಮಭರಣ ಕ್ಕೋಸ್ಕರವಾಗಿಯೂ ನಡೆಸಬೇಕಾದ ಜೀವನವೂ ಇದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 19, 2022

Sriranga Mahaguru - Nectarine Nuggets

Village folks carry water pots on their heads from lakes or canals. While carrying them, even though they keep talking to each other, they do not forget the Kumbha (pot) on the head. Their talk or walk is such that their balance is not lost in the least. Likewise, we too should perform our various tasks with the right balance without forgetting the Lord seated in our Kumbha (head).

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 16, 2022

ಶ್ರೀರಂಗ ವಚನಾಮೃತ (Sriranga Vachanamruta)

ಹಸಿವು ಬಾಯಾರಿಕೆಗಳು ಅವು ತೃಪ್ತವಾಗುವವರೆಗೆ ಕಾಡುತ್ತವೆ. ನಿಜ. ಲೌಕಿಕ ಜೀವನ, ಪಾರಮಾರ್ಥಿಕ ಬಾಳಾಟ ಇವೆರಡಕ್ಕೂ ಘರ್ಷಣೆ ಬರುವುದು ಉಂಟು. ವಿವೇಕಿಯಾದವನು ಇಹದ ತಳಹದಿಯ ಮೇಲೆ ಪರದ ಚಿಂತನೆ ಚೆನ್ನಾಗಿ ಮಾಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 14, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ಎನ್ನುವುದು ಜೀವ ಇದ್ದರೆ ತಾನೆ? ಜೀವ ತನಗನುಗುಣವಾಗಿ ಇಂದ್ರಿಯಗಳನ್ನಿಟ್ಟುಕೊಂಡು ನಡೆಸಿದರೆ ಜೀವನ.    ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಜೀವ- ಆಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 12, 2022

Sriranga Mahaguru - Nectarine Nuggets

All materials buried in the soil get rusted or spoilt. But in spite of being present in the mud for thousands of years, gold preserves its originality. Likewise, in this ever-changing world, there exists an unchanging entity and that is Satya.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 9, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಅರ್ಥ ಇದೆಯಪ್ಪಾ. ಅರ್ಥ ಅಷ್ಟೇ ಅಲ್ಲ, ಪರಮಾರ್ಥ ಇದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 7, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ತೆಂಗಿನಕಾಯಿ ಇದ್ದಹಾಗೆ. ಒಂದೊಂದು ಅವಸ್ಥೆ ಒಂದೊಂದು ರೀತಿ. ಎಳೆಯದಾಗಿರುವಾಗ ಚೆನ್ನಾಗಿ ಅಂಟಿರುತ್ತೆ. ಆಮೇಲೆ ಒಳಗೊಳಗಿಂದ ಗೊಟಗೊಟ ಎನ್ನುವುದಕ್ಕೆ ಹೋಗುತ್ತೆ. ಯಾಕೆ ನನ್ನನ್ನು ಹಿಂಸಿಸುತ್ತೀರಿ? ನಾನು ಭೂಮಿಯಲ್ಲಿ ಮತ್ತೆ ಹುಟ್ಟೋಲ್ಲ ಎಂದು ಘೋಷಿಸುತ್ತದೆ. ಆದರೆ ನಾವು ಕಳ್ಳತೆಂಗಿನಕಾಯಿಯಾಗಬಾರದು. ಜೀವನ ಕಳ್ಳಜೀವನವಾಗಿರಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 5, 2022

Sriranga Mahaguru - Nectarine Nuggets

It is true that we must safe-guard our body and organs. However in times of war, a soldier is prepared to sacrifice any part of his body – from head to toe - for the sake of the Nation. In the same way, in the battle for preserving Satya, be prepared to sacrifice anything. But remember Satya must be sustained through sacrifice. At the same time, we must possess the spirit to proclaim: "If Asatya were to remain, then I have no intent to give away anything."To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 29, 2022

Sriranga Mahaguru - Nectarine Nuggets

If we are to live, it should only be with Satya. Death is preferable over a life which compromises with Asatya. After all, some day this mortal coil is going to fall. Even if we were to perish while fighting to protect it, our life would   rest in Satya.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 26, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ವಿಕಾಸ ನಡೆಯುತ್ತಿರುವಾಗ ದೇವನಿಂದ ಶಕ್ತಿ ಸಪ್ಲೈ (Supply) ಆಗುವುದು. ಅದು ನಿಂತರೆ ಯಾವ ಕೆಲಸವೂ ಇಲ್ಲ. ಕರೆಂಟ್ ನಿಂತರೆ ರೇಡಿಯೋ, ಫ್ಯಾನ್ ಎಲ್ಲಾ ನಿಲ್ಲುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 24, 2022

ಶ್ರೀರಂಗ ವಚನಾಮೃತ (Sriranga Vachanamruta)

ಪಕ್ಷಿಗಳು ಗೂಡು ಕಟ್ಟುತ್ತವೆ. ಮಳೆ ಬಂದರೆ ಒಂದು ತೊಟ್ಟು ನೀರೂ ಅದರೊಳಕ್ಕೆ ಬೀಳೋಲ್ಲ. ಆಹಾರ ತಾವೇ ಸಂಪಾದಿಸುತ್ತವೆ. ಕುಟುಂಬ ಯೋಜನೆಗೂ ಒಳಪಡದೇ ಸರಿಯಾಗಿ ನಡೆದುಕೊಂಡು ಹೋಗುತ್ತವೆ. ಪ್ರಾಣಿಗಳಿಗೆ ಇಲ್ಲದೆ ನಮಗೆ ಇರುವಂತಹುದು ಭಗವಂತನ ಹತ್ತಿರ ಹೋಗುವುದು. ನರ ಏನಾದರೂ ಇದನ್ನು ಮರೆತರೆ ವಾ ಸೇರುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 22, 2022

Sriranga Mahaguru - Nectarine Nuggets

Jīva is naturally qualified to realize the Absolute Truth.
However we have lost that power. When health is spoilt, the person suffers from insomnia. In the same way, when his body condition is disturbed, he loses the vision of Satya of the Turīya state. Then he has to approach a suitable "Doctor" for medicines.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 19, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವಕ್ಕೆ ಇಂದ್ರಿಯಗಳ ಮೂಲಕ ಎಷ್ಟೇ ಸೌಖ್ಯವಿದ್ದರೂ, ತನ್ನ ಸೌಖ್ಯಕ್ಕೆ ಬೇಕಾದ ವಿಷಯ ದೊರೆತಾಗಲೇ ಅದಕ್ಕೆ ಪೂರ್ಣ ಸೌಖ್ಯ. ಕಣ್ಣಿಗೆ ಗಾನ ಹೇಳುತ್ತೇನೆ, ಕಿವಿಗೆ ರೂಪ ಕೊಡುತ್ತೇನೆ ಎಂದರೆ ಒಪ್ಪುವುದಿಲ್ಲ. ಆದ್ದರಿಂದ ಅದರದ್ದೇ ಆದ ವಿಷಯ ಕೊಡಬೇಕು. ಹಾಗೆ ಜೀವಕ್ಕೆ ಆದ ವಿಷಯ ದೇವನೇ. ಅವನನ್ನು ಪಡೆದಾಗಲೇ ಜೀವಕ್ಕೆ ನೆಮ್ಮದಿ ಇರುತ್ತದೆ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 17, 2022

ಶ್ರೀರಂಗ ವಚನಾಮೃತ (Sriranga Vachanamruta)

ಹಕ್ಕಿಗಳು ಗೂಡಿನಿಂದ ಆಹಾರಕ್ಕೆ ಹೋಗಿ ಮತ್ತೆ ಹೇಗೆ ಸಕಾಲಕ್ಕೆ ಹಿಂದಿರುಗುತ್ತವೆಯೋ ಹಾಗೆ ದೈವದ ಗೂಡಿನಿಂದ ಹೊರಟ ನಾವು ಅಲ್ಲಿಗೇ ಹಿಂದಿರುಗಬೇಕು.To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 15, 2022

Sriranga Mahaguru - Nectarine Nuggets

All Jīvis, in the form of beads, are strung onto the Lord's string called Satya. As long as the beads remain bound to this strand they form a garland. On the other hand, if they don't conform to the discipline of Satya and remain outside, the result is not a Hāra (garland) but only Samhāra (death).To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 12, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನವನ್ನು ಭಗವಂತನ ಆಶಯಕ್ಕೆ ತಕ್ಕಂತೆ ಬೆಳೆಸಿಕೊಂಡರೆ ಸುಕೃತವಾಗುತ್ತೆ. ಇಲ್ಲದಿದ್ದರೆ ದುಷ್ಕೃತವಾಗುತ್ತೆ. ಅವನ ಆಜ್ಞೆಗೆ ಒಳಪಟ್ಟು, ಅವನ ಸೃಷ್ಟಿಯಲ್ಲಿನ ಬದುಕನ್ನು ಬಳಸಿಕೊಳ್ಳಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 10, 2022

ಶ್ರೀರಂಗ ವಚನಾಮೃತ (Sriranga Vachanamruta)

ನಮ್ಮ ಮನೋರಥಗಳೆಷ್ಟೇ ಇರಲಿ, ಅವುಗಳೆಲ್ಲದರ ಮೇಲೆ ಭಗವಂತನನ್ನು ಕೂಡಿಸಿ ನಮ್ಮ ಜೀವನರಥವನ್ನು ಎಳೆಯುವುದಾದರೆ, ಆತ್ಮ-ಕಲ್ಯಾಣ, ಲೋಕ-ಕಲ್ಯಾಣ ಎರಡೂ ಸಿದ್ಧಿಸುತ್ತವೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 8, 2022

Sriranga Mahaguru - Nectarine Nuggets

Jīvis must be bound to Satya. If glued to Satya fully, there is no doubt that life would be transformed into Satya, Mangala and Sundara.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 5, 2022

ಶ್ರೀರಂಗ ವಚನಾಮೃತ (Sriranga Vachanamruta)

ಪರಮಾತ್ಮನನ್ನು ಎಲ್ಲಾ ಜೀವಗಳೂ ಪತ್ನಿಯು ಪತಿಯನ್ನು ಆಶ್ರಯಿಸುವಂತೆ ಆಶ್ರಯಿಸಬೇಕು. ಶ್ರೀಪತಿಯನ್ನೇ ಅವಲಂಬಿಸಿ ಅವನಿಗೋಸ್ಕರ ಜೀವವನ್ನು ಮುಡುಪಾಗಿಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 3, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ಬಾಳೆಗಿಡಕ್ಕೆ ಬಾಣವನ್ನು ಹೊಡೆದರೆ ಅದು ಆಚೆ ಕಾಣಿಸದಂತೆ ಅದರಲ್ಲೇ ವಿಲೀನವಾಗಿ ಹೋಗುತ್ತೆ. ಅದೇ ರೀತಿ ಜೀವವನ್ನು ಪ್ರಣವವೆಂಬ ಧನುಸ್ಸಿನಿಂದ ಹೊಡೆದಾಗ ಅದು ಭಗವಂತನಲ್ಲಿ ವಿಲೀನವಾಗಿಬಿಡುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 1, 2022

Sriranga Mahaguru - Neactarine Nuggets

Even an infuriated elephant freely running around in a forest may be tamed. But it is extremely difficult to bring the wandering mind under control. However, is it not possible to tame the rogue-elephant with the help of a tamed elephant? Likewise, if you surrender your mind to the Guru who is proficient in merging with Paramātman, the mind in course of time can be restrained.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 28, 2022

ಶ್ರೀರಂಗ ವಚನಾಮೃತ (Sriranga Vachanamruta)

ಸ್ವರೂಪ ನೋಡಿಕೊಂಡು ಮಾತನಾಡಿ ಎನ್ನುವುದುಂಟು. ಸ್ವರೂಪವೆಂದರೇನು? ಸ್ವರೂಪ ಎಂದರೆ ಕೇವಲ ಹೊರಗಿನಿಂದ ಅಳೆದರೆ ತೋರುವ ಬಾಲ್ಯದಲ್ಲಿ ಒಂದು ಸ್ವರೂಪ, ಯೌವನದಲ್ಲಿ ಒಂದು ಸ್ವರೂಪ, ವಾರ್ಧಕ್ಯದಲ್ಲಿ ಮತ್ತೊಂದು, ಹೀಗೆ ಮನುಷ್ಯನ ಸ್ವರೂಪ ಬದಲಾಗುತ್ತಲೇ ಇರುತ್ತದೆಯಲ್ಲಾ- ಅದಲ್ಲ. ಅದಕ್ಕೆ Standard (ಮಾನ) ಇರುವುದಿಲ್ಲ. ಆದ್ದರಿಂದ ವಿಕಾರಕ್ಕೆಡೆಯಾದ ಜಾಗದಿಂದ ಸ್ವರೂಪವನ್ನಳೆಯಲಾಗುವುದಿಲ್ಲ. ವಿಕಾರವಿಲ್ಲದ ಜಾಗದಿಂದ ಅರಿಯಬೇಕಾದ ವಿಷಯವಿದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages