ಭಗವಂತನು ಶರೀರವನ್ನು ಸೃಷ್ಟಿಮಾಡಿ ಹೊರಗಿನಿಂದ ಗಂಧವನ್ನು ತೆಗೆದು ಕೊಳ್ಳಲು ಮೂಗು, ಶಬ್ದವನ್ನು ತೆಗೆದುಕೊಳ್ಳಲು ಕಿವಿ, ರಸವನ್ನು ತೆಗೆದು ಕೊಳ್ಳಲು ಜಿಹ್ವೆ, ಅಂತೆಯೇ ಸ್ಪರ್ಶವನ್ನು ತೆಗೆದುಕೊಳ್ಳಲು ಚರ್ಮ, ವಸ್ತುವನ್ನು ತೆಗೆದುಕೊಳ್ಳಲು ಮತ್ತು ಶಾಸನ ಮಾಡಲು ಕೈ, ನಡೆಯುವುದಕ್ಕೆ ಕಾಲು ಇವುಗಳನ್ನು ಕೊಟ್ಟಿದ್ದಾನೆ. ಅಂತೆಯೇ ಅದೇ ಕಣ್ಣು ಒಳಗಿನಿಂದ ಭಗವಂತನ ಒಂದು ರೂಪವನ್ನು ತೆಗೆದುಕೊಳ್ಳುವುದಕ್ಕೂ, ಕಿವಿಯು ಭಗವಂತನ ನಾದವನ್ನು ಕೇಳುವುದಕ್ಕೂ, ಘ್ರಾಣೇಂದ್ರಿಯವು ಭಗವಂತನ ವಕ್ಷಸ್ಥಲದಲ್ಲಿ ಘಮಘಮಿಸುವ ತುಳಸಿಯ ವಾಸನೆಯನ್ನು ತೆಗೆದುಕೊಳ್ಳುವುದಕ್ಕೂ ಉಪಯೋಗಪಡಬಹುದು.
To know more about Astanga Yoga Vijnana Mandiram (AYVM) please visit our Official Website, Facebook and Twitter pages