Thursday, January 26, 2023

ಶ್ರೀರಂಗ ವಚನಾಮೃತ (Sriranga Vachanamruta)

ದೈವಾನುಗ್ರಹ ಹಾಗೂ ಪುರುಷಪ್ರಯತ್ನ, ರಥದ ಎರಡೂ ಚಕ್ರಗಳಿದ್ದ ಹಾಗಪ್ಪಾ. ಒಂದು ಚಕ್ರವೇ ಇಲ್ಲದಿದ್ದರೆ ರಥ ಹೇಗಪ್ಪಾ ಮುಂದೋಡುತ್ತೆ?

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 24, 2023

ಶ್ರೀರಂಗ ವಚನಾಮೃತ (Sriranga Vachanamruta)

ಕೇವಲ ಇಂದ್ರಿಯಗಳ ಒತ್ತಾಯಕ್ಕನುಗುಣವಾಗಿ ಆಹಾರ ಸೇವಿಸುತ್ತಿದ್ದೀರಿಆದರೆ ಯಾವ ಚೈತನ್ಯ  ಲೈಫ್ (Life) ಇಲ್ಲದಿದ್ದರೆ ಇಂದ್ರಿಯಗಳ ವ್ಯಾಪಾರ ನಡೆಯುವುದಿಲ್ಲವೋ ಅದಕ್ಕೂ ಹಿತವಾಗುವಂತೆ ಆಹಾರ ತೆಗೆದುಕೊಳ್ಳೀಪ್ಪಾ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 19, 2023

ಶ್ರೀರಂಗ ವಚನಾಮೃತ (Sriranga Vachanamruta)

ಲೋಕಕ್ಕೆ ಬಂದಮೇಲೆ ಭೋಗಕ್ಕೆ ದೂರವಾಗಬೇಡಿ. ಯಾವುದು ತಾನೇ ಶಾಶ್ವತ ಎಂಬ ಒಣ ಮಾತಿನಿಂದ ಎಲ್ಲಾ ವಿಷಯಗಳನ್ನು ತಳ್ಳಬೇಡಿ. ಹಾಗೆ ಆಗುವುದಾದರೆ ಈಶ್ವರ ಸೃಷ್ಟಿಯಲ್ಲಿ ಕಣ್ಣು, ಕಿವಿ, ನಾಲಿಗೆ ಮೊದಲಾದ ಇಂದ್ರಿಯಗಳನ್ನೂ ಕೊಟ್ಟು, ಅವುಗಳ ವಿಷಯವನ್ನೂ ಏಕೆ ಕೊಟ್ಟಿದ್ದಾನೆ? ಆದ್ದರಿಂದ ಇಂದ್ರಿಯಕ್ಕೆ ವಿಷಯ ಬೇಡ ಎಂದುಕೊಳ್ಳಬೇಡಿ. ನಾನ್ಸೆನ್ಸ್ (Nonsense) ಆದ ವರ್ತನೆ ಬೇಡ. ಆತ್ಮಹಾನಿಯಾಗದ ರೀತಿಯಲ್ಲಿ ವಿಷಯವನ್ನು ಕೊಡಿ.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 17, 2023

ಶ್ರೀರಂಗ ವಚನಾಮೃತ (Sriranga Vachanamruta)

ಆರ್ಯಭಾರತ ಮಹರ್ಷಿಗಳು ಇಂದ್ರಿಯಗಳನ್ನು ಹಳಿಯಲಿಲ್ಲ. ಅವುಗಳ  ಸೆರೆಗೆ ಸಿಕ್ಕಿಕೊಳ್ಳಲೂ ಇಲ್ಲ. ಅಷ್ಟೇ ಅಲ್ಲದೆ ಇಂದ್ರಿಯಗಳೆಲ್ಲವೂ ಭಗವಂತನು ದಯಪಾಲಿಸಿದ ಒಂದು ಐಶ್ವರ್ಯವೆಂದೇ ಭಾವಿಸುತ್ತಿದ್ದರು. ಐಶ್ವರ್ಯವನ್ನು ಹೊತ್ತುಕೊಂಡು ನಾವು ಅವನಿಂದ ಬಹಳ ದೂರ ಬಂದಿದ್ದೇವೆ. ಪುನಃ ಐಶ್ವರ್ಯವನ್ನು ಬಳಸಿಕೊಂಡೇ ಅವನ ಬಳಿಗೆ ಹೋಗಬೇಕು - ಎಂಬ ನ್ಯಾಯವನ್ನು ಕಂಡುಕೊಂಡರು. ಇದನ್ನೇ ತಮ್ಮ  ಜನಾಂಗವು ಅರಿಯಲೆಂದು ಇಡೀ ನಾಡನ್ನೇ, ತಮ್ಮ ಮನೋಧರ್ಮವನ್ನು ಇಡಲು ಒಂದು ದೊಡ್ಡ ಸಾಧನವನ್ನಾಗಿ ಮಾಡಿಕೊಂಡರು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 12, 2023

ಶ್ರೀರಂಗ ವಚನಾಮೃತ (Sriranga Vachanamruta)

ಮೂಗು ತಬ್ಬಲಿ, ಆಗಾಗ್ಗೆ ನೆಗಡಿ ಬರುತ್ತೆ. ಅದಕ್ಕೋಸ್ಕರ ನೋಡಿ, ನಾನು ಅದನ್ನು ಹೊಲಿಸಿಬಿಟ್ಟಿದ್ದೇನೆ ಎಂದರೆ ಉಸಿರಾಟಕ್ಕೆ  ಧಕ್ಕೆ. ಆದ್ದರಿಂದ ನೆಗಡಿ ಬಂದರೆ ಅದರ ನಿವಾರಣೆಗಾಗಿ ಯತ್ನಿಸಿ. ಭಗವಂತನು ಕರಣಕಳೇ ಬರಗಳನ್ನೇಕೆ ಕೊಟ್ಟಿದ್ದಾನೆ ಎಂಬುದನ್ನರಿತು, ಆತನು ಕೊಟ್ಟ ಐಶ್ವರ್ಯವನ್ನು ಅವನ ಅಭಿಪ್ರಾಯಾನುಗುಣವಾಗಿ ಉಪಯೋಗಿಸಿಕೊಂಡು ಸುಖಪಡಿ. ನಿಸ್ಸುಖೀ ಸ್ಯಾತ್.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 10, 2023

ಶ್ರೀರಂಗ ವಚನಾಮೃತ (Sriranga Vachanamruta)

ಭಗವಂತನು ಶರೀರವನ್ನು ಸೃಷ್ಟಿಮಾಡಿ ಹೊರಗಿನಿಂದ ಗಂಧವನ್ನು ತೆಗೆದು ಕೊಳ್ಳಲು ಮೂಗು, ಶಬ್ದವನ್ನು ತೆಗೆದುಕೊಳ್ಳಲು ಕಿವಿ, ರಸವನ್ನು ತೆಗೆದು ಕೊಳ್ಳಲು ಜಿಹ್ವೆ, ಅಂತೆಯೇ ಸ್ಪರ್ಶವನ್ನು ತೆಗೆದುಕೊಳ್ಳಲು ಚರ್ಮ, ವಸ್ತುವನ್ನು ತೆಗೆದುಕೊಳ್ಳಲು ಮತ್ತು ಶಾಸನ ಮಾಡಲು ಕೈ, ನಡೆಯುವುದಕ್ಕೆ ಕಾಲು ಇವುಗಳನ್ನು ಕೊಟ್ಟಿದ್ದಾನೆ. ಅಂತೆಯೇ ಅದೇ ಕಣ್ಣು ಒಳಗಿನಿಂದ ಭಗವಂತನ ಒಂದು ರೂಪವನ್ನು ತೆಗೆದುಕೊಳ್ಳುವುದಕ್ಕೂ, ಕಿವಿಯು ಭಗವಂತನ ನಾದವನ್ನು ಕೇಳುವುದಕ್ಕೂ, ಘ್ರಾಣೇಂದ್ರಿಯವು ಭಗವಂತನ ವಕ್ಷಸ್ಥಲದಲ್ಲಿ ಘಮಘಮಿಸುವ ತುಳಸಿಯ ವಾಸನೆಯನ್ನು ತೆಗೆದುಕೊಳ್ಳುವುದಕ್ಕೂ ಉಪಯೋಗಪಡಬಹುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, January 5, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಂದ್ರಿಯಗಳು ತಮಗೆ ಬೇಕಾದ ವಿಷಯವನ್ನು ಮಾತ್ರ ಅಪೇಕ್ಷಿಸುತ್ತವೆಅದಲ್ಲದೆ ಬೇರೆ ವಿಷಯ ಬಂದರೆ ತಳ್ಳಿಬಿಡುತ್ತವೆ. ಅದು ಅವುಗಳಿಗೆ ಹೊರೆಯಾಗುತ್ತೆ. ಹೀಗೆ ಇಂದ್ರಿಯಗಳ ಸ್ಚಭಾವವನ್ನರಿತ ಜ್ಞಾನಿಗಳು ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಆತ್ಮಧರ್ಮಕ್ಕೆ ಅವಿರೋಧವಾಗಿ ಕೊಡುವುದಕ್ಕೋಸ್ಕರ ಅನೇಕ ಉಪಾಯಗಳನ್ನು ಬಳಸಿದ್ದಾರೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, January 3, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಂದ್ರಿಯಗಳಿಗೆ ವಿಷಯವನ್ನು ಕೊಡುವಾಗಲೂ ದೇವನವರೆಗೂ  ತಟ್ಟುವಂತೆಯೇ ಕೊಟ್ಟರೆ, ಜೀವನವು ಅಂತರ್ಮುಖವಾಗಿ ಹರಿದು ಹೋದರೆ ಸೌಖ್ಯವಿರುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages