Thursday, April 30, 2020

Nectarine Nuggets of Mahaaguru - 484

Everyone must necessarily follow the Śāstra which is flowing naturally in the Cosmos. Whoever transgresses it will lose the happiness both in this life and in the life-after. It is like maintaining our own lungs and heart-beats in their normal condition. It becomes fatal, if not maintained well.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 561

ಆತ್ಮವು ಆಡಿದರೆ ಆತ್ಮಭೂಮಿಕೆಯಿಂದ ಹೊರಭೂಮಿಕೆಗೆ (ಇಂದ್ರಿಯ ಭೂಮಿಕೆಗೆ) ಬಂದು ಹೊರಗಿರುವವರನ್ನು ಆತ್ಮಭೂಮಿಕೆಗೆ ಕೊಂಡೊಯ್ಯು ವಂತಿರಬೇಕು. ಹಾಗೆ ಆತ್ಮ ಭೂಮಿಕೆಯಿಂದ ಹೊರಭೂಮಿಕೆಗೂ ಹೊರಭೂಮಿಕೆಯಿಂದ ಆತ್ಮಭೂಮಿಕೆಗೂ ಓಡಾಡಲು ಎಲ್ಲ ಅಂಗಾಂಗಗಳ ಸಹಕಾರವೂ ಬೇಕು. ಮನಸ್ಸಿನಲ್ಲಿರುವ ಸಂತೋಷವು ವ್ಯಕ್ತವಾಗಲು ಹೊರ ಅಂಗಾಂಗಗಳ ಸಹಕಾರವೂ ಬೇಕಲ್ಲವೆ?

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, April 29, 2020

Nectarine Nuggets of Mahaaguru - 483

Only when Śāstra is developed scientifically, methodically and with the principle of causality (cause-effect), it can sustain through future generations.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 560

ಭಗವದ್ರಸವು ರಕ್ತಗತ, ಧಾತುಗತ ಅಂತೆಯೇ ಆತ್ಮಗತವೂ ಆಗಬೇಕು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 28, 2020

Nectarine Nuggets of Mahaaguru - 482

The Life of Maharṣis is filled with bliss; it is wholesome. It is no doubt quite different from many other ways of life; that is why this hilarious remark: That is why it was said "Murāri! Ninnadé mu̅rané dāri (Murāri! Yours is a special third route)". Yes, true; theirs is the third path beyond the two routes of virtue and vice! If this path is adhered to and followed, the Ji̅vana (life) of Maharṣis would be available. I will explain. People need some work to do. So, they spend their money on gambling pursuits like horse racing. Just as detailed advertisements are exhibited encouraging the betting process promoting one horse or the other - "bet on this horse, it will win or bet on that horse, that will win" , we declare that we should work for our winning horse "Satyaméva Jayaté"! Participating in this type of 'gambling' is for the sake of repaying our debts to the Ṛṣi̅s. The advertisers for snuff initially distribute free samples. The very next day people go in search of them! While this is pleasant to the nose, what we offer is the one which gives eternal ecstasy to our lives. Stating this after experiencing the joy is indeed Śāstra. Actually, everyone is carrying all aspects of Śāstra on one's own back.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 559

ನಮ್ಮ ಜೀವನದಲ್ಲಿ ಬೇಕಾದಷ್ಟು ಅಪೇಕ್ಷೆಗಳಿರುತ್ತವೆ. ಅದರ ಜೊತೆಯಲ್ಲಿ ಭಗವತ್ಸೇವೆಯನ್ನು ಸೇರಿಸಿಕೊಂಡರೆ ಅದಾಗಿ ಅದೇ ನಡೆಯುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, April 27, 2020

Nectarine Nuggets of Mahaaguru - 481

The Maharṣis, through their profound penance, brought out the Śāstra-Vidyā hidden deep inside the Nature's womb. This was continued by them through the system of Gurukula (Centre of Learning run by the preceptor).

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 558

ಭಗವಂತನ ಸೇವೆಗಾಗಿ ಅರ್ಥವನ್ನು ಸಂಪಾದಿಸಿ ವಿನಿಯೋಗಮಾಡಬೇಕು. ಹಾಗೆ ವಿನಿಯೋಗಮಾಡುವವನು ವಿವೇಕಿಯಾಗಿರಬೇಕು. ಸೇವೆಗೆ ಅಧಿಕಾರಿ ಯಾಗಿರಬೇಕು. ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್, [ಕ್ಷಣಕ್ಷಣದಲ್ಲಿಯೂ ಮತ್ತು ಕಣಕಣವಾಗಿಯೂ ವಿದ್ಯೆಯನ್ನೂ ಮತ್ತು ಸಂಪತ್ತನ್ನೂ ಸಾಧಿಸಬೇಕು-ಸುಭಾಷಿತ] ಮೊದಲು ವಿದ್ಯೆ. ಆಮೇಲೆ ಅರ್ಥ, ಸಂಪಾದಿಸಿದ್ದನ್ನು ಹೇಗೆ ಸದ್ವಿನಿಯೋಗಿಸ ಬೇಕೆಂಬುದು ವಿದ್ಯಾವಂತನಿಗೆ ತಾನೆ ಗೊತ್ತು. ತಲೆ ಕೆಟ್ಟವನಾದರೆ ನೋಟಿನ ಕಂತೆಯನ್ನು ಬೆಂಕಿಗೆ ಹಾಕಿ ಚಳಿ ಕಾಯಿಸಿಕೊಳ್ಳುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 26, 2020

Nectarine Nuggets of Mahaaguru - 480

An authority on Śāstra̅s is also known as "Antarvāṇi" (inner voice). Being an Antarvāṇi, he who utilizes this voice to pour out that divine sentiment is indeed an ideal Antarvāṇi.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 557

ಜಗತ್ತಿನಲ್ಲಿ ಹುಟ್ಟಿದ್ದೆಲ್ಲಾ ಭಗವಂತನ ಪೂಜೆಗೆ ಒದಗಿ ಬರಬೇಕೆಂಬ ನಿಯಮವಿಲ್ಲ. ಆ ಪುಣ್ಯ ಎಲ್ಲ ಪದಾರ್ಥಗಳಿಗೂ ಇರುವುದಿಲ್ಲ. ದೈವದ ಅನುಗ್ರಹದಿಂದ ಅದಕ್ಕಾಗಿ ಹುಟ್ಟಿಬಂದ ದ್ರವ್ಯಗಳಿಗೆ ಮಾತ್ರವೇ ಆ ಯೋಗ ಒದಗಿ ಬರುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 25, 2020

Nectarine Nuggets of Mahaaguru - 479

Every individual possesses lungs, heart, intestines etc.; it is not necessary to attach them (to the body) drawing, pulling their drawing out from books. The actual organ is seen in the body and is recorded in the book as such. For example, the heart is here in the body; its description is given in the book. To check whether the description is right, one must turn to the physical heart alone; if it agrees with the actual functioning, 'the book is right, otherwise it is wrong' - this is the final decision. Likewise, the scriptures may contain lines (text) but their veracity should be tested by exploring in the physical or in the spiritual domain as the case may be. The searching should never be confined to the books alone. Search in the area where the coveted matter exists. Never deviate from the royal path and the moral code.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 556

ಸಮುದ್ರ ತೀರದಲ್ಲಿರುವ ಬದುಕೆಲ್ಲಾ (ಬದುಕು-ಪದಾರ್ಥ) ಭಗವತ್ಸೇವೆಗೆ ಒದಗಿಬರುವುದಿಲ್ಲ. ಮುತ್ತು, ಶಂಖ, ಮುಂತಾದುವು ತಾನೇ ಒದಗಿ ಬರುತ್ತವೆ. ಮಂಗಳದ್ರವ್ಯಕ್ಕೆ ಶಂಖಧ್ವನಿಗೆ, ಅಭಿಷೇಕಕ್ಕೆ ಶಂಖ ಉಪಯೋಗಕ್ಕೆ ಬರುತ್ತದೆ. ಭಗವಂತನ ಹಾರ ಮುಂತಾದ ಆಭರಣಗಳಿಗೆ ಮುತ್ತು. ಸೇವೆ, ಸಮರ್ಪಣೆಗಳ ವಿಷಯದಲ್ಲಿ ಅವಿವೇಕದ ಉತ್ಸಾಹಕೂಡದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, April 24, 2020

Nectarine Nuggets of Mahaaguru - 478

The intrinsic regulations (Tattvamaya Śāsana) are streaming along with your Ji̅vana. If Tatva has secrets, search for these wherever you find Tatva̅s.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 555

ಈ ಜೀವನದಲ್ಲಿ ದೇವನನ್ನು ಕೂಡಿಸಿಕೊಂಡು ಎಳೆಯುವಾಗ ಭಗವಂತನ ಸೇವೆಗೆ ಎಂದು ಗೊದಮವನ್ನು ಕೊಟ್ಟರೂ ಅದು ಉಪಯೋಗವಾಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 23, 2020

Nectarine Nuggets of Mahaaguru - 477

The universe has evolved from Praṇava; the evolution of Ji̅va is also from Praṇava. Therefore learn the Śāstra based on the Ji̅va. Leaving aside this Śāstra engulfing the Ji̅va, if it is simply explored outside, the true Śāstra will not be found. A life led forsaking this Śāsana is horrendous.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 554

ಭಗವಂತನ ಮನೋರಥವನ್ನು ಎಳೆಯಬೇಕಾದರೆ ಅವನನ್ನು ಅರಿತು ಕೊಂಡು ಎಳೆಯಬೇಕು, ಉದಾಹರಣೆಗೆ-ರಥೋತ್ಸವ. ಯಾವ ನೆಲೆಯಿಂದ ಮೊದಲು ಮಾಡಿದೆವೋ ಅಲ್ಲಿಯವರೆವಿಗೂ ಎಳೆದು ನಿಲ್ಲಿಸುವ ತನಕ ಉತ್ಸವವನ್ನು ಮಾಡಬೇಕಾಗುತ್ತದೆ. ಈ ದೇಹದ ರಥವನ್ನು ಒಬ್ಬರು ಈ ಕಡೆ, ಇನ್ನೊಬ್ಬರು ಆಕಡೆ ಹೀಗೆ ಹತ್ತು ಜನ ಎಳೆಯುತ್ತಿದ್ದಾರೆ. ಸ್ವಾಮಿ, ದೇವರೇ ಬಂದಿಲ್ಲ, ಎಳೆಯುತ್ತಿದ್ದೀರಲ್ಲಾ, ಎಂದು ಯಾರಾದರೂ ಎಚ್ಚರಿಸಿದಾಗ, 'ಓ ಹೌದಾ, ಕೂಡಿಸಿ, ಎಳೆಯೋಣ ಎನ್ನುವವರೂ ಒಂಟು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, April 22, 2020

Nectarine Nuggets of Mahaaguru - 476

When the Śāstra related to Ji̅vana exists in the very Ji̅vana ordained by the Lord, where is the need to search for it outside?

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 553

ಜ್ಞಾನವೃದ್ಧ, ವಯೋವೃದ್ಧ ಎರಡೂ ಆಗಿರುವ ವ್ಯಕ್ತಿಯ ಸೇವೆ ಮಾಡುವುದು ಒಳ್ಳೆಯದು. ಜ್ಞಾನವೃದ್ಧತೆ ವಯೋವೃದ್ಧತೆ ಎರಡೂ ಒಂದೇ ಜಾಗದಲ್ಲಿದ್ದರೆ ವಿಶೇಷ ಲಾಭ. ವಯೋವೃದ್ಧನ ಸೇವೆ ಮಾಡುವುದು ಒಳ್ಳೆಯದು. ಏಕೆಂದರೆ ಬಾಲ್ಯ, ಯೌವನ, ವಾರ್ಧಕ್ಯ ಮೂರು ಅವಸ್ಥೆಗಳಲ್ಲಿರುವ ಸುಖ, ದುಃಖ, ಚಿಂತೆ, ಮೋಹ, ಸಂತೋಷಗಳ್ಳೆಲ್ಲದರ ಅನುಭವವಿರುವುದರಿಂದ, ಅವನ ಉಪದೇಶ ಕಾರ್ಯಶಾಲಿಯೂ, ಸಾಧನಾಪರನೂ ಆದವನಿಗೆ ಉಪಯುಕ್ತ ವಾಗುತ್ತದೆ. ಆದರೆ ಜ್ಞಾನಕ್ಕೇ ಬೆಲೆ ಹೆಚ್ಚು. ವಯಸ್ಸು ಕಡಿಮೆ ಇದ್ದರೂ ಜ್ಞಾನವಿದ್ದರೆ ಬೆಲೆ ಹೆಚ್ಚು. ಚಿತ್ರಂ ವಟತರೋರ್ಮೂಲೇ ಶಿಷ್ಯಾ ವೃದ್ಧಾ ಗುರುರ್ಯುವಾ | ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಚ್ಛಿನ್ನಸಂಶಯಾಃ||[ಆಲದ ಮರದ ಬುಡದಲ್ಲಿ ಒಂದು ಅದ್ಭುತ ದೃಶ್ಯ ಕಂಡುಬರುತ್ತದೆ. ಗುರು-ಶಿಷ್ಯರು ಒಟ್ಟಿಗೆ ಇದ್ದಾರೆ. ಆದರೆ ಅವರಲ್ಲಿ ಶಿಷ್ಯರು ಮುದುಕರು, ಗುರುವು ತರುಣ. ಮೌನವೇ ಗುರುವಿನ ಪಾಠ. ಆದರೆ ಶಿಷ್ಯರ ಸಂಶಯವೆಲ್ಲ ಪರಿಹಾರವಾಗಿಬಿಟ್ಟಿದೆ ಎಂದು ಈ ಶ್ಲೋಕದ ಅಭಿಪ್ರಾಯ.ಮೇಲಿನ ಶ್ಲೋಕವು ಶ್ರೀ ಶಂಕರಾಚಾರ್ಯರಿಂದ ರಚಿತವೆಂದು ಪ್ರಸಿದ್ಧವಾದ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಪಠಿತವಾಗುತ್ತದೆ. ಆದರೆ ಶ್ಲೋಕದ ಅಭಿಪ್ರಾಯವನ್ನು ಗಮನಿಸಿದರೆ ಅದು ದಕ್ಷಿಣಾಮೂರ್ತಿ, ಶುಕಮಹರ್ಷಿ, ಶ್ರೀ ಶಂಕರಾಚಾರ್ಯರು ಮೂವರಿಗೂ ಅನ್ವಯಿಸುತ್ತದೆ.]

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 21, 2020

Nectarine Nuggets of Mahaaguru - 475

The endless deluge of the reminiscences of immortality flows eternally through the veins of Maharṣis; it criss-crosses through all the Śāstras related to their mundane and spiritual lives.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 552

ಶಿಲ್ಪವೊಂದು ಸಿದ್ಧವಾಗಿ ಮುಂದೆ ನಿಂತರೆ, ಪ್ರತಿಷ್ಠೆ ಆದಮೇಲೆ ಮಂಗಳಾರತಿ ನೋಡಿ ಆನಂದಿಸುವುದರಲ್ಲಿ ಎಲ್ಲರಿಗೂ ಸಮಾನಾವಕಾಶ. ಆದರೆ ಶಿಲ್ಪ ಕೆತ್ತಲು ಎಲ್ಲರೂ ಬೇಕಾಗಿಲ್ಲ; ಸಾಧ್ಯವೂ ಇಲ್ಲ. ಹಲವೇ ಮಂದಿಯಾದರೂ ಶಿಲ್ಪಿಗಳ ಕೆಲಸ ಮಾತ್ರ ಅಲ್ಲಿ ಸಾಕು. ದೇವರ ಸೇವೆಯ ವಿಷಯದಲ್ಲೂ ಹೀಗೆಯೇ, ಸೇವೆ ಮಾಡಿದ ಆನಂದ ಎಲ್ಲರಿಗೂ ಒಂದೇ, ಆದರೆ ಸೇವೆ ಮಾಡುವ ವಿಧಾನ ಬೇರೆಯಾಗಿರಬಹುದು. ಪ್ರತಿಯೊಬ್ಬರೂ ತಮತಮಗೆ ಉಚಿತವಾದ ಕೆಲಸವನ್ನೇ ಮಾಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, April 20, 2020

Nectarine Nuggets of Mahaaguru - 474

Subject, experiment and experience – these alone constitute my Śāstra.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 551

ಬಹುಶ್ರುತನಾಗಬೇಕು. ಹಾಗಾದರೆ ತಾನೇ ಬಹುವಿಧದಲ್ಲಿ ಲೋಕ ಸೇವೆಯನ್ನು ಮಾಡಬಹುದು. ಎಲ್ಲಾ ಭಾಷೆ, ಎಲ್ಲಾ ವಿದ್ಯೆ, ಎಲ್ಲಾ ಕಲೆ ಒಟ್ಟಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲ ವಿಷಯಗಳನ್ನು ಸಂಗ್ರಹ ಮಾಡಬೇಕು. ಬುದ್ಧಿಯಲ್ಲಿ ಪ್ರತಿಯೊಂದು ವಿಷಯದ ಕೇಂದ್ರವೂ ತೆರೆಯಲ್ಪಟ್ಟಿರಬೇಕು. ಹೀಗೆ ಬಹುವಿಷಯಗಳನ್ನು ತಿಳಿದಿದ್ದರೇ ಅವುಗಳಲ್ಲಿ ಯಾವುದು ಉಪಾದೇಯ (ಸ್ವೀಕರಿಸಲು ಯೋಗ್ಯವಾದುದು)? ಯಾವುದು ಹೇಯ (ತ್ಯಜಿಸಲು ಯೋಗ್ಯವಾದುದು)? ಎಂದು ಆಯ್ಕೆ ಮಾಡಿ ಕಾರ್ಯ ಸಾಧಿಸಲು ಸಾಧ್ಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 19, 2020

Nectarine Nuggets of Mahaaguru - 473

Śāstra does not mean a bunch of manuscripts; the fundamental science present in the universe is the original science. One may understand it and record it in a treatise. A photograph is not the person; it is only a pointer to the person. In the same way, even the books on Śāstra must guide us towards the real Śāstra.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 550

ಸೀನು ಬರುವ ಸಮಯದಲ್ಲಿ ಬಾಯಿ ಮುಚ್ಚಿಕೊಂಡರೆ ಹೇಗೆ ಸೀನಲು ಸಾಧ್ಯ? ಹಾಗೆಯೇ ಭಗವಂತನು ಆಡಿದರೂ ಆತನ ಹೆಜ್ಜೆಗೆ ಗೆಜ್ಜೆಯಾಗಿ ಅಡಿಗೆ ಮುಡಿಕೊಟ್ಟು ಸರಿಯಾಗಿ ನಡೆಯಬೇಕಾದ ಜವಾಬ್ದಾರಿ ಇದೆ. ಅದೇ ಪುರುಷ ಪ್ರಯತ್ನ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 18, 2020

Nectarine Nuggets of Mahaaguru - 472

That which has developed in accordance with the cosmic Law of Nature is Śāstra; the book of this Śāstra is the universe itself. Śāstra is not available in any other book. Śāstra (science) of anatomy must be sought after in the human body rather than in a book.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 549

ನಾವು ಭಗವಂತನ ಹೆಜ್ಜೆಯ ಗೆಜ್ಜೆಯಾಗಬೇಕು. ಹೆಜ್ಜೆಯ ಸದ್ದು ಗೆಜ್ಜೆಯಲ್ಲಿ ಬರುತ್ತದೆಯಪ್ಪಾ. ಗೆಜ್ಜೆ ಸುಮ್ಮನೆ ಸದ್ದು ಮಾಡುವುದಿಲ್ಲ. ಅದು ಜಡವಸ್ತು. ಅಂತೆಯೇ ಚೈತನ್ಯ ಸ್ವರೂಪಿಯಾದ ಭಗವಂತನ ಗತಿಗೆ ಅನುಗುಣವಾಗಿರ ಬೇಕು ನಮ್ಮ ಸೇವೆ. ಹೆಜ್ಜೆಗೆ ಗೆಜ್ಜೆ ಇದ್ದರೆ ಹೆಜ್ಜೆಯ ಸದ್ದನ್ನು ಗೆಜ್ಜೆ ಮಾಡುತ್ತದೆ. ಗೆಜ್ಜೆಯ ಧ್ವನಿ ಹೆಜ್ಜೆಯ ಧ್ವನಿಯೊಡನೆ ಸೇರಿಕೊಳ್ಳುತ್ತದೆ. ಹಾಗೆಯೇ ನಮ್ಮ ಸೇವೆ ಭಗವಂತನ ಆಶಯದೊಡನೆ ಒಂದಾಗಿ ಸೇರಿಕೊಳ್ಳಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, April 17, 2020

Nectarine Nuggets of Mahaaguru - 471

Śāstra does not imply a bundle of books. The chain of rules hidden in Nature is itself Śāstra. The heart has its own law that it should beat with the sound: "lab-dab"; however, when it starts beating in an arrhythmic way (like "la......b - da......b") we may have to run to a doctor!

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 548

ಮನುಷ್ಯನಲ್ಲಿ ಬೇರೆ ಬೇರೆ ಭಾವಗಳು ಕಾದುಕೊಂಡಿದ್ದು ಸಮಯ ಸಿಕ್ಕಿದಾಗ ನುಗ್ಗಿ ತಮ್ಮನ್ನು ಪ್ರಕಟಪಡಿಸಿಕೊಳ್ಳುವುವೋ ಅಂತೆಯೇ ಆತ್ಮನೂ ಸಹ ಅವಕಾಶ ಸಿಕ್ಕಿದಾಗ ನುಗ್ಗಿ ತನ್ನನ್ನು ಪ್ರಕಟಮಾಡಿಕೊಳ್ಳುತ್ತಾನೆ. ನೀವು ಭಗವದ್ಭಾವವನ್ನು ಪ್ರಕಟಿಸುವ ಈ ಸೇವಾ ಕಾರ್ಯವನ್ನು ಮಾಡಿ ಅಥವಾ ಬಿಡಿ, ಭಗವಂತನ ಸಂಕಲ್ಪವೊಂದು ಹೊರಟಮೇಲೆ ಅದು ಯಾರ ಮೂಲಕ ವಾದರೂ ತನ್ನ ಪ್ರಕಟಣೆಯನ್ನು ಮಾಡಿಸಿಕೊಳ್ಳುತ್ತೆ. ನೀವೇ ಮಾಡಿದರೆ ಅದು ನಿಮ್ಮ ಸುಕೃತ. ಭಗವಂತನ ಕಾರ್ಯಕ್ಕೆ ಸಾಧನವಾದ ಪುಣ್ಯ ನಿಮ್ಮದಾಗುತ್ತದೆ. ಅಹಂಕಾರ, ಆಲಸ್ಯಗಳಿಂದ ಅದಕ್ಕೆ ನಿಮ್ಮನ್ನು ಒಪ್ಪಿಸಿಕೊಳ್ಳದಿದ್ದರೆ ಬೇರೆ ಯಾವುದೋ ದ್ವಾರದಿಂದ ಅದು ಪ್ರಕಟವಾಗಿಯೇ ಆಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 16, 2020

Nectarine Nuggets of Mahaaguru - 470

The original and the prime state of Ji̅va is actually the Jnana. It is beyond Space and Time. However, when the same Ji̅va evolves within the framework of Space and Time, Vijnana, a systematic development takes place. The set of rules of this developmental frame-work is known as Śāstra.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 547

(ಮುಂದೆ ಹೋಗುತ್ತಿರುವ ಹುಳು ಒಂದರ ಮಾರ್ಗದಲ್ಲಿ ಒಂದು ಕಡ್ಡಿಹಾಕಿ), ಈ ಹುಳುವಿಗೆ ಮಧ್ಯೆ ಪ್ರತಿಬಂಧಕವಾಗಿ ಕಡ್ಡಿ ಬಂತು. ಆಗ ಅದು ಲಾಗ ಹಾಕಿ ಮುಂದಕ್ಕೆ ಹೊರಟೇ ಹೋಯಿತು. ಇದನ್ನು ಗಮನಿಸಿದಿರಾ? ಹಾಗೆಯೇ ಭಗವಂತನ ಒಂದು ಸೇವೆಯಲ್ಲಿ ಮಧ್ಯೆ ಮಧ್ಯೆ ತೊಡಕುಗಳು ಬಂದರೂ ಹೇಗೋ ಬಚಾಯಿಸಿ, ಉತ್ಸಾಹದಿಂದ ಮುಂದುವರೆಯಬೇಕು. ಹುಳುವು ತನ್ನ ಆಹಾರಕ್ಕೋ, ವಿಶ್ರಾಂತಿಗೋ, ಯಾವುದಕ್ಕೋ ಹೋಗುತ್ತಿದೆ. ಮಧ್ಯೆ ಬರುವ ಪ್ರತಿಬಂಧಕಗಳಿಂದ ಬಚಾಯಿಸಿಕೊಂಡು ಹೇಗೋ ಗುರಿಯನ್ನು ಸಾಧಿಸಿಬಿಡುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, April 15, 2020

Nectarine Nuggets of Mahaaguru - 469

If the evolution that has begun from the seed culminates in the seed once again, then its development is complete. In the same way, if the effulgent Jnana evolves, the evolution must get back to the same radiance finally.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 546

ಭಗವಂತನ ಸೇವೆ ಮಾಡುವವರು ಶಿಕ್ಷೆ-ರಕ್ಷೆ ಎರಡಕ್ಕೂ ಅವನನ್ನೇ ಮೇಟಿ ಕಂಬವನ್ನಾಗಿ ಇಟ್ಟುಕೊಳ್ಳಬೇಕು. ಹೀಗಿಟ್ಟುಕೊಂಡರೆ ತಿದ್ದುವುದಕ್ಕೆ ಹೆಜ್ಜೆ ಹೆಜ್ಜೆಗೂ ಅವನು ಬೇಕಾಗುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 14, 2020

Nectarine Nuggets of Mahaaguru - 468

Items with different tastes -salt, sour, sweet etc., are all served on the plantain leaf; but the leaf does not relish anything! Similarly, rote-memory of Śāstra̅s is of no use; its essence must be grasped.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 545

ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೆ ಅವನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹವನ್ನು ತೇಯ್ದು ಬಿಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, April 13, 2020

Nectarine Nuggets of Mahaaguru - 467

Is it not a fact that all the flavours are present on the leaf? In the same way, mere textual knowledge of the Śāstra̅s (scriptures) is of no avail. Its essence should be grasped.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 544

ಸೇವೆ ಭಗವಂತನ ಭಾವಕ್ಕೆ ಧಕ್ಕೆ ತಗುಲದಂತೆ ಮಾಡುವ ವ್ಯಾಪಾರ. ಅವನ ಪರವಾಗಿರುವ, ಅವನಿಗೆ ವಿರೋಧವಿಲ್ಲದ, ಅವನನ್ನು ಹೊಂದಿಸುವ ಕಾರ್ಯವ್ಯಾಪಾರಗಳೆಲ್ಲವೂ ಸೇವೆಯೇ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 12, 2020

Nectarine Nuggets of Mahaaguru - 466

After serving all the food items on the plantain leaf if you ask the leaf about the taste of each of them, what answer you can expect from it? In the same way, any number of Mantras like "Agnimiḷe""Iṣotvorjétvā" etc. when simply swept on the leaf called the tongue, there is no delight in it.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 543

ಸೇವೆ ಭಗವಂತನ ಭಾವಕ್ಕೆ ಧಕ್ಕೆ ತಗುಲದಂತೆ ಮಾಡುವ ವ್ಯಾಪಾರ. ಅವನ ಪರವಾಗಿರುವ, ಅವನಿಗೆ ವಿರೋಧವಿಲ್ಲದ, ಅವನನ್ನು ಹೊಂದಿಸುವ ಕಾರ್ಯವ್ಯಾಪಾರಗಳೆಲ್ಲವೂ ಸೇವೆಯೇ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 11, 2020

Nectarine Nuggets of Mahaaguru - 465

Veterans had once said: "Don't mix lemon juice to milk". The milk got spoiled as it was kept unused for several days. Now, when asked to mix some lemon to that milk, for a medicinal preparation, he refuses and quotes the old saying! Similarly, the general rule of elders is: "Don't take the photograph of the idol in the temple; it leads to 'Kalākarshana'(loss of deity's divinity). When the purpose is to spread its greatness to all, if asked to take a photo of the idol, you quote the old saying and escape giving a lame excuse! Is it right?

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 542

ಪರಮಾತ್ಮನ ಆಜ್ಞೆಯನ್ನನುಸರಿಸಿ ಅವನಿಗೆ ಅನುಕೂಲವಾಗಿ ನಡೆದು ಕೊಂಡರೆ ಅಥವಾ ಪರಮಾತ್ಮನ ತತ್ತ್ವವನ್ನರಿತವರ ಆಜ್ಞಾನುಸಾರ ನಡೆದು ಕೊಂಡರೆ ಅದು ಸೇವೆಯೇ ವಿನಹಾ ಅನ್ಯಥಾ ಸೇವೆಯಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, April 10, 2020

Nectarine Nuggets of Mahaaguru - 464

The Maharṣis, no doubt, sowed the seeds of Jnana. But when it is growing, the process of cultivation was lost on the way. The treasure handed over by them has disappeared. The dishonesty and lack of knowledge (ignorance) of the intermediaries are the prime reasons for this.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 541

ನೀವೆಲ್ಲರೂ ಏಕೆ ಒಂದೆಡೆ ಸೇರಬೇಕು ಎಂದರೆ ಭಗವಂತನ ಸೇವೆಗೋಸ್ಕರ. ಸೇವೆ ಎಂದರೆ ಪುರುಷನನ್ನು ಸ್ವಸ್ಥತೆಯಲ್ಲಿಟ್ಟು ರಕ್ಷಿಸುವ ಕೆಲಸ; ಬ್ರಹ್ಮನ ಸೃಷ್ಟಿಯಂತೆ ಪುರುಷನನ್ನು ಇಡುವ ಕೆಲಸ. ಬ್ರಹ್ಮನ ಸೃಷ್ಟಿಯು ಯಾವ ರೀತಿಯಾಯಿತೋ ಅದು ವಿಷಮರೀತಿಯನ್ನು ತಾಳದೇ ಇದ್ದರೆ ಅದೇ ಸ್ವಸ್ಥತೆ. 'ಸ್ವ ಎಂದರೆ ಆತ್ಮ. ಅದು ಸತ್ಯ-ಶಿವ-ಸುಂದರವಾದುದು. ಅದರ ನೆಲೆಯಲ್ಲಿ ನಿಲ್ಲಿಸುವುದು ಸ್ವಸ್ಥತೆ, ಅದು ಆತ್ಮನ ಪೂರ್ವರೂಪ. ಅದರ ರಕ್ಷಣೆಗಾಗಿಯೇ ನಿಮ್ಮ ಈ ಸಮೂಹದ ಓಡಾಟ. ಅದೇ ಸೇವೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 9, 2020

Nectarine Nuggets of Mahaaguru - 463

To live as a Jnana-Vijnana Trptātma (spiritually contented with the Divine Light and its evolution) is the ideal of Life.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 540

ಭಗವಂತನ ಮಹತ್ಪಾದವು ಬೆಳೆದು ಅದರ ಆಶಯವು ಬೆಳೆಯುವುದಕ್ಕನುಗುಣವಾಗಿ ನಡೆಯುವುದೇ ಸೇವೆ. ಹಾಗೆ ನಡೆದರೆ ಪೂರ್ವೋತ್ತರಗಳಿಗೆ ಅವಿರೊಧವಾಗಿ ಕ್ರಿಯೆ ಇರುತ್ತದೆ. ಬೀಜದ ಆಶಯದಂತೆ ಬೆಳೆದು ಬೀಜದಲ್ಲೇ ನಿಂತರೆ, ಮತ್ತೆ ಬೀಜವನ್ನು ನೆಟ್ಟರೆ ಧಾತಾ ಯಥಾ ಪೂರ್ವ ಮಕಲ್ಪಯತ್ ಎಂಬಂತೆ ಪುನಃ ಅದೇ ಸರಣಿಯೇ. [(ಪೂರ್ವೋತ್ತರ-ಹಿಂದಿನದು ಮತ್ತು ಮುಂದಿನದು) ಅಂದರೆ ಮೂಲಕ್ಕೆ ವಿರುದ್ಧವಾಗಿ, ಅನಂತರ ಕೃತಕವಾಗಿ ಬಂದು ಸೇರಿಕೊಂಡ ವಿಷಯಕ್ಕೆ ತಕ್ಕಂತೆ ಬೆಳೆಯಬಾರದು.] [ಮಹಾ ನಾರಾಯಣೀಯ ಸೃಷ್ಟಿ ಕರ್ತನಾದ ಭಗವಂತನು ಹಿಂದೆ ಹೇಗಿತ್ತೋ ಅದರಂತೆಯೇ ಸೃಷ್ಟಿಯನ್ನು ರಚಿಸಿದನು. ಎಂಬುದು ಈ ಶ್ರುತಿವಾಕ್ಯದ ಅರ್ಥ.]

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, April 8, 2020

Nectarine Nuggets of Mahaaguru - 462

Who is an Apta (well-wisher)? He is not the one 'who does not eat till I eat; nor the one who doesn't eat anything without giving me'. He is indeed the one who has seen Atman face-to-face and is qualified for the term 'Jnana-Vijnana Tṛptatma'.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 539

ಬಗೆಬಗೆಯ ವಾದ್ಯಗಳಿದ್ದರೂ ಅವುಗಳು ದಿವ್ಯಗಾಯಕನ ಶ್ರುತಿಯನ್ನು ಅನುಸರಿಸಿ ಒಂದಾಗಿರುವಂತೆ, ಪ್ರಕೃತಿ ಭಿನ್ನಭಿನ್ನವಾದರೂ ಪರಮಾತ್ಮ ನೊಬ್ಬನನ್ನು ಮುಂದಿಟ್ಟು ಏಕಮುಖವಾಗಿ ಕೆಲಸ ಮಾಡಿದಾಗ ಅವನಲ್ಲಿ ಒಂದಾಗಿ ಸೇರಬಹುದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, April 7, 2020

Nectarine Nuggets of Mahaaguru - 461

The statement "fire burns" need not be accepted merely on referring to a book. People may call something as "this is fire". Then, such should be your firm stand that "I will touch it; if it burns my fingers I will accept it as fire. If it does not, then I will say 'it is not fire'". However, the word 'fire' by itself cannot burn anything. Therefore, only when all the four -the word, the object referred to, the experiment and its experience-are taken in totality, does science truly evolve.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 538

ಭಗವಂತನ ಪರಿವಾರವಾಗಿ ಕರಡಿಯೇ ಬರಲಿ, ಕಪಿಯೇ ಆಗಲಿ, ಶಿಂಗಳೀಕವೇ ಆಗಲಿ, ಅವಕ್ಕೆಲ್ಲಾ ಭಗವತ್ಕಾರ್ಯದಲ್ಲಿ ಪಾತ್ರ ಉಂಟು. ಭಗವಂತನವರಾಗಿ ಬಂದಾಗ, ಅವರ ಕಪಿತ್ವ, ಕರಡಿತನ ಎಲ್ಲಾ ಮರೆಯಾಗಿಬಿಡುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, April 6, 2020

Nectarine Nuggets of Mahaaguru - 460

Nothing needs to be accepted simply on faith. Adopt only when there is Vijnana in it and if it can be put to practice. For, there is no end to mere imagination (guess work). Half-baked ideas are good neither for the preacher nor for the seeker. The country should never be caught in this web.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 537

ಒಳಗಿರುವ ರಾಗವನ್ನು ಹೊರಗೆ ತರಲು ಕಣ್ಣು, ನಾಲಿಗೆ, ಮುಖನ್ಯಾಸ ಎಲ್ಲವೂ ಅನುಗುಣವಾಗಿರಬೇಕು. ಹಾಗೆ ವಹನಶೀಲವಾಗಿದ್ದರೆ ರಾಗ ಮುಂದೆ ಹರಿಯುತ್ತದೆ. ರಾಗಪ್ರವಾಹ ಮುಂದೆ ಬೆಳೆಯುತ್ತದೆ. ಅಂತೆಯೇ ಭಗವಂತನ ಆಶಯವು ಮುಂದೆ ಬೆಳೆಯಬೇಕಾದರೂ, ಅದನ್ನು ಬೆಳೆಸುವುದಕ್ಕೆ ತಕ್ಕ ವಾತಾವರಣ ಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, April 5, 2020

Nectarine Nuggets of Mahaaguru - 459

Don't accept anything simply because it is ordained by elders. Accept only if it is in accordance with the dictums of Jnana and Vijnana.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 536

ಕಳೆಯನ್ನು ಕಿತ್ತು ಬಿಸಾಡುವ ಬದಲು ಅದನ್ನೇ ಗೊಬ್ಬರವನ್ನಾಗಿ ಉಪಯೋಗಿಸಿಕೊಂಡು ಗಿಡ ಬೆಳೆಯಿಸುವವನು ಕುಶಲನಾದ ವ್ಯವಸಾಯಗಾರ. ಅಂತೆಯೇ ಕಾಮ, ಲೋಭಾದಿಗಳನ್ನು ಬಿಡಲಾಗದಿದ್ದರೇ ಭಗವತ್ಕಾಮ, ಭಗವಲ್ಲೋಭ ಆಗುವಂತೆ ಮಾಡಿಕೊಳ್ಳುವುದು ಜಾಣತನದ ಕೆಲಸ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, April 4, 2020

Nectarine Nuggets of Mahaaguru - 458

Any Visaya (subject) may be accepted without hesitation, as long as it is in consonance with the stand-points of Jnana, Vijnana and Prakṛti, and is conducive to leading a life that nourishes both Iha (mundane) and Para (spiritual). If not, it may be rejected.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 535

ನೀವು ಹೇಗೆ ಇದ್ದೀರೋ ಹಾಗೆಯೇ ಭಗವಂತನಿಗೆ ಒಪ್ಪಿಸಿಕೊಳ್ಳಿ. ಅವನು ನಿಮ್ಮನ್ನು ಬಳಸಿಕೊಳ್ಳುತ್ತಾನೆ, ಹಂಸವಾಗಿ ಬಂದರೆ ಹಂಸವಾಹನನಾಗಿ ನಿಲ್ಲುತ್ತಾನೆ. ಹಾವಾಗಿ ಬರುತ್ತೇನೆಂದರೆ ಶೇಷಶಾಯಿಯಾಗುತ್ತಾನೆ. ಗರುಡನಾಗಿ ಬರುತ್ತೇನೆಂದರೆ ಗರುಡೋತ್ಸವವೇ ಆಗಲಿ- ಎನ್ನುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, April 3, 2020

Nectarine Nuggets of Mahaaguru - 457

Vijnanis are those who have understood through direct experience, The Source, which has expanded into this vast and diverse universe and controls its movement too.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 534

ಒಳ್ಳೆಯ ವಿಷಯವನ್ನು ಆಪ್ತರೂ ಅಧಿಕಾರಿಗಳೂ ಆದವರಲ್ಲಿಡಿ. ಕಪಟ ಸ್ನೇಹಿತರಲ್ಲಿಡಬೇಡಿ. ಆದರೆ ಕಪಟ ಸ್ನೇಹಿತರಲ್ಲಿ ದಯೆ ತೋರಿಸಬೇಡವೇ? ಎಂದರೆ ಅವಶ್ಯವಾಗಿಯೂ ತೋರಿಸಬೇಕು. ಆಪ್ತರಲ್ಲಿಡುವುದಕ್ಕಿಂತಲೂ ಕಪಟಿಗಳಲ್ಲೇ ಹೆಚ್ಚು ದಯೆ ಇಡಬೇಕು. ಆದರೆ ಆ ದಯೆಯ ದುರುಪಯೋಗ ವಾಗಬಾರದು. ಕಪಟವೃತ್ತಿಯನ್ನೇ ಮಾಡಿ ಈ ಚೇತನವು ಅನ್ಯಾಯವಾಗಿ ಹಾಳಾಗುವುದಲ್ಲಾ! ಎಂದು, ದಯೆಯಿಂದ. ಆ ಕಪಟವನ್ನು ಹೋಗಲಾಡಿಸುವ ಬೇರೆ ಉಪಾಯಗಳನ್ನು ಹುಡುಕಿ ಹೇಗಾದರೂ ಅದನ್ನು ಹೋಗಲಾಡಿಸಿ ಆತನ ಕಪಟವನ್ನು ಕಳೆದು ಶುದ್ಧನಾದ ಅಧಿಕಾರಿ, ಪಾತ್ರ ಆದ ಮೇಲೆ ಅವನಲ್ಲಿ ವಿಷಯವನ್ನಿಡಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, April 2, 2020

Nectarine Nuggets of Mahaaguru - 456

Be it air or water, when filled in a container, it continuously looks for a hole to manifest itself externally through it. In the same way, the Jnana-Jala too, even though there may be many obstructions within us keeps trying to find an orifice in ourselves to project itself out. Bearing over head, the Divine Will of the Jnana-Pita and Jnana-Vijnana Tṛptatma, a suitable Indriya-Pranalika (external sensory channel) is needed to project the cascade of His Jnana-Vijnana.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 533

ತೇರು ಮುಂದಕ್ಕೆ ಹೋಗಬೇಕಾಗಿರುವಾಗ ಅಮಾರ್ಗದಲ್ಲಿ ಹೋಗದಿರ ಬೇಕಾದರೆ ಗೊದಮ (ಚಲಿಸುತ್ತಿರುವ ರಥದ ವೇಗವನ್ನು ನಿಲ್ಲಿಸಿ ನಿಯಂತ್ರಿಸಲು ಬಳಸುವ ಮರದ ತುಂಡು ಮುಂತಾದ ಸಾಧನ) ಕೊಡಬೇಕು. ಆದರೆ ಆ ಗೊದಮದ ಜಾಗದಲ್ಲಿ ಬಾಳೆದಿಂಡನ್ನು ಹಾಕಬೇಡಿರಿ. ಹಾಗೆಯೇ ಮಿತಿಮೀರಿದ ಉತ್ಸಾಹದಲ್ಲಿ ಕೆಲಸ ಮರ್ಯಾದೆ ಮೀರಲು ಹೋದಾಗ, ಅದನ್ನು ತಡೆಯುವ ವಿವೇಕಿಗಳು ಬೇಕು, ಆ ತಡೆಯುವ ಕೆಲಸವನ್ನು ಅನಧಿಕಾರಿಗಳು ಮಾಡಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, April 1, 2020

Nectarine Nuggets of Mahaaguru - 455

We are delighted to see our own photographs even though we are aware of our appearance. Looking at the mirror we establish ourselves in it. Likewise, the Lord-the personification of Jnana, too takes delight in viewing His own instruments namely the intellect, senses etc., in the reflector 'namely' the Suddha Prakrti. We have to make our Prakrtis favourable to the flow of His Jnana- Vijnana, by cleansing our senses by placing them at the lotus feet of the Father of Jnana, and purifying them with His holy contact.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 532

ಒಳ್ಳೆಯ ಹಸನಾದ ದಾರಿಯೇ ಆದರೂ ಓಡಾಡದೆ ಬಿಟ್ಟರೆ ಕಂಟಿಗಳು ಬೆಳೆದು ಕೊಳ್ಳುತ್ತವೆ. ಆದ್ದರಿಂದ ಸರಿಯಾದ ಮಾರ್ಗವನ್ನು ರೂಢಿಸಿಕೊಳ್ಳಬೇಕು. ಧರ್ಮಾಚರಣೆ ಮಾಡುವವರು ತಕ್ಕ ಮಾರ್ಗವನ್ನು ನಿಶ್ಚಯಿಸಿಕೊಳ್ಳುವುದು ಮಾತ್ರವಲ್ಲದೆ ಅದರಲ್ಲಿ ಸಂಚರಿಸುತ್ತಲೂ ಇರಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages