Monday, November 30, 2020

ಶ್ರೀರಂಗ ವಚನಾಮೃತ (Sriranga Vachanamruta) - 775

ಮಹರ್ಷಿಗಳು ಆತ್ಮಯೋಗದಲ್ಲಿ ಕಂಡ ಸತ್ಯವನ್ನು ಶಿಲಾಯೋಗದಲ್ಲಿ ಸೇರಿಸಿದ್ದಾರೆ. ಅದಕ್ಕೆ ಸ್ಪರ್ಶ ಮಾಡಿ(ತಗುಲಿ)ಸಿದ್ದಾರೆ. ಅದೇ ಪ್ರತಿಷ್ಠೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, November 29, 2020

ದೇವಾಲಯಗಳು | Devaalayagalu

ದೇವಾಲಯಗಳು | Devaalayagalu Astanga Yoga Vijnana Mandiram (AYVM), Bangalore. Bharatheeya Samskruthi Karyagara - 36 (Part - 3) - Devaalayagalu Discourse: Dr. C. R. Ramaswamy Speaker Profile: https://articles.ayvm.in/2019/02/dr-cr-ramaswamy.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 3) - ದೇವಾಲಯಗಳು ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ || ಶ್ರೀಃ || ದೇವಾಲಯ * ದೇವಾಲಯ - ಕಲೆಯ ನೆಲೆ, ಸೌಂದರ್ಯದ ಬೀಡು, ಭಕ್ತರ ಆಸರೆ, ಯಾತ್ರಿಕರ ಆಕರ್ಷಣೆ.... ಶೈವ-ವೈಷ್ಣವ ಆಗಮಗಳು - ಆಲಯ ನಿರ್ಮಾಣದ ವಿವರಗಳು, ಅಲ್ಲಿ ನಡೆಯಬೇಕಾದ ಅರ್ಚನೆಗಳು, ಉತ್ಸವಗಳು, ಮೂರ್ತಿ ನಿರ್ಮಾಣದ ವಿವಿಧ ವಿನ್ಯಾಸಗಳು, ಅವುಗಳ ಭಾವ-ಭಂಗಿ-ಆಕೃತಿ-ವಿನ್ಯಾಸ..... ಜನಮನೋಧರ್ಮದ ವ್ಯತ್ಯಾಸ - ಪ್ರಶ್ನೆಗಳು-ಟೀಕೆಗಳು - ಕಲ್ಲಿಗೇಕೆ ಕೈಮುಗಿಯುವುದು ? * ಸ್ಫೂರ್ತಿ ಎಲ್ಲಿಂದ ಬಂತು? ದೇವಾಲಯ, ದೇವಸ್ಥಾನ = ದೇವನ ಮನೆ, ದೇವನ ಎಡೆ; ದಿವ್ ಕಾಂತೌ ಪ್ರಕಾಶ ದೇಹೋ ದೇವಾಲಯಃ ಪ್ರೋಕ್ತಃ ದೇಹೀ ದೇವೋ ನಿರಂಜನಃ * ಶರೀರದ Model– ಗರ್ಭಗೃಹ, ಅಂತರಾಳ-ಶುಕನಾಸೀ (ಕಂಠ), ಮಂಟಪ (ಹೃದಯ), ಪ್ರಾಕಾರ-ಅಮ್ಮನವರ ಸನ್ನಿಧಿ –Permission – screen / ಪರದೆ – ತ್ರಿಗುನಾತ್ಮಕ - ಸರಿಸುವುದು ಅರ್ಚಕ – ಮಾರ್ಗದರ್ಶಕ – ಮಂಗಳಾರತಿ, ಘಂಟಾನಾದ, ತೀರ್ಥ-ಪ್ರಸಾದ à ಮೋಕ್ಷಕ್ಕೆ ಸಹಾಯವಾಗುವ ಯೋಜನೆ ಪ್ರಾಕಾರ ಮತ್ತು ಮಂಟಪದ ಶಿಲ್ಪಗಳು – ವಿಮಾನ ಕೇವಲ ಕಲ್ಲಲ್ಲ – ಶಿಲೆಯ ಮೇಲೆ ಕಲೆ – ಪ್ರಾಣ ಪ್ರತಿಷ್ಠೆ – Flag ಬಟ್ಟೆಯಲ್ಲ ಪೂಜೆ ಕಲ್ಲಿಗಲ್ಲ – ಶಿಲೆಯನ್ನು ಮಾಧ್ಯಮವಾಗಿಟ್ಟು ಒಳಗಿರುವ ಶಕ್ತಿಗೇ ಪೂಜೆ – ಆದ್ದರಿಂದ ಪುಜೆ ವಿಗ್ರಹದಲ್ಲೇ ನಿಲ್ಲುವುದಿಲ್ಲ.

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 774

ಆಗಮ ಎಂದರೆ ಮೊಟ್ಟಮೊದಲು ಋಷಿಗಳ ಮನಸ್ಸಿಗೆ ಆಗತವಾದದ್ದು. (ಅಂದರೆ ಅವರ ಮನಸ್ಸಿಗೆ ಬಂದದ್ದು-ಧ್ಯಾನದಲ್ಲಿ, ತಪಸ್ಸಿನಿಂದ ಅವರು ಕಂಡು ಕೊಂಡದ್ದು) ಮತ್ತು ಋಷಿಗಳ ಮನಸ್ಸಿನಿಂದ ಮುಂದಕ್ಕೆ ಗತವಾದದ್ದು ಎಂದರೆ ಅವರ ಮನೋಧರ್ಮ ಹೊರಗೆ ವ್ಯಕ್ತರೂಪದಲ್ಲಿ ಬಂದಿದ್ದು ಮತ್ತು ಅವರ ಮತ ಅರ್ಥಾತ್ ಅಭಿಪ್ರಾಯ ಈ ಮೂರು ಸೇರಿವೆ. ಈ ಮೂರು ಅಂಶಗಳು ಅರ್ಥವಾಗದೆ ಆಗಮದ ವಿಷಯ ಅರ್ಥವಾಗದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, November 28, 2020

ಶ್ರೀರಂಗ ವಚನಾಮೃತ (Sriranga Vachanamruta) - 773

ವಿಷಯವೂ ಹೇಗೆ ಬಂತೋ ಹಾಗೆಯೇ ಇರಬೇಕು. ಮತವನ್ನು ಹಾಗೆಯೇ ಕೊಡಬೇಕು. ಹಾಗಾದರೆ ಆಗಮ ಸನ್ನಿಧಿ(ಸಂಧಿ). ಇಲ್ಲದಿದ್ದರೆ ಲೋಪಸನ್ನಿಧಿ(ಸಂಧಿ) ಪಕ್ಕದಲ್ಲೇ ಇದೆ. (ಭಗವದ್ಧರ್ಮಕ್ಕೆ ಲೋಪ ಎಂದು ಅರ್ಥ). 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, November 27, 2020

ಶ್ರೀರಂಗ ವಚನಾಮೃತ (Sriranga Vachanamruta) - 772

ಲಾಲಿಸಿದರೆ ಮಕ್ಕಳು, ಪೂಜಿಸಿದರೆ ದೇವರು. ವೈರಪಡುವವರಲ್ಲಿ ಮಕ್ಕಳನ್ನು ಕೊಟ್ಟರೆ ಪ್ರಯೋಜನವಿಲ್ಲ, ಏಕೆಂದರೆ ಅಲ್ಲಿ ಪ್ರೀತಿಯಿಲ್ಲ. ತಾಯಿತನ, ತಂದೆತನ ಇಲ್ಲ. ದೇವರನ್ನು ಪೂಜಿಸಲು ದೇವತ್ವವಿಲ್ಲ. 'ದೇವೋಭೂತ್ವಾ ದೇವಮರ್ಚಯೇತ್'. ದೇವತ್ವವಿಲ್ಲದವನ ಕೈಯಲ್ಲಿ ವಿಗ್ರಹವನ್ನು ಕೊಟ್ಟರೆ ಅನುಗ್ರಹ ಸಂಪಾದನೆ ಮಾಡುವ ಬದಲು ಇವನೇ ನಿಗ್ರಹಿಸಲ್ಪಡುತ್ತಾನೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, November 26, 2020

ಶ್ರೀರಂಗ ವಚನಾಮೃತ (Sriranga Vachanamruta) - 771

ಒಳ್ಳೆಯ ವಿಷಯಗಳನ್ನು ಮುದ್ರಿಸಿರುವ ಪುಸ್ತಕದಲ್ಲಿನ ಕ್ರಿಮಿಗಳಾಗಲೀ ನಟರಾಜನ ವಿಗ್ರಹದ ಮೇಲೆ ಓಡಾಡುವ ಜಿರಲೆ ಹುಳುಗಳಾಗಲೀ, ನಟರಾಜನ ನಾಟ್ಯಭಂಗಿಯ ಹಿಂಬದಿಯಲ್ಲಿರುವ ಸೃಷ್ಟಿಮೂಲ ರಹಸ್ಯವಾದ ಮತ್ತು ಸನಕಾದಿಗಳನ್ನು ಉದ್ಧಾರ ಮಾಡಬಲ್ಲ ದೈವೀಭಾವವನ್ನು ಅನುಭವಿಸಬಲ್ಲವೆ? ಕೇವಲ ದೇವತಾವಿಗ್ರಹದ ಪಕ್ಕದಲ್ಲಿರುವುದರಿಂದ ಏನೂ ದೊರೆಯುವುದಿಲ್ಲ. ಜಿರಲೆಗಳು ಓಡಾಡುವುದು ಭಕ್ತಿಯಿಂದಲ್ಲ. ಅಲ್ಲಿರುವ ಕೊಳೆಯನ್ನು ತಿಂದು ಹೊಟ್ಟೆಹೊರೆಯಲು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, November 25, 2020

ಶ್ರೀರಂಗ ವಚನಾಮೃತ (Sriranga Vachanamruta) - 770

ಕಲ್ಲನ್ನೇ(ಸಾಲಿಗ್ರಾಮ) ಕೊಟ್ಟಿದ್ದರೂ ಮರ್ಮದೊಡನೆ ತೆಗೆದುಕೊಂಡಾಗ ಆಸ್ವಾದಿಸಲು ವಿಷಯವಿದೆ. ಲಾಲಿಸಲು ಪ್ರೀತಿ ಹುಟ್ಟಬೇಕು. ಹಾಗೆಯೇ ಪೂಜಿಸಲು ಪರಾಭಕ್ತಿ ಬೇಕು; ಉಕ್ತಿ ಬೇಕು; ಅನುರಕ್ತಿ ಬೇಕು; ಶಕ್ತಿ ಬೇಕು, ವ್ಯಕ್ತಿ ಬೇಕು. ಹಾಗಿದ್ದಾಗ ಭಗವಂತನು ಆ ವ್ಯಕ್ತಿಗೆ ಮುಕ್ತಿ ಕೊಡುತ್ತಾನೆ, ಇಲ್ಲದಿದ್ದರೆ ಜನರಲ್ಲಿ ಭಗವತ್ಪೂಜೆಯಲ್ಲೂ ವಿರಕ್ತಿ ಹುಟ್ಟುತ್ತದೆ. ನಂತರ ಮುಕ್ತಿಯ ಮಾತೇ ದೂರ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, November 24, 2020

ಶ್ರೀರಂಗ ವಚನಾಮೃತ (Sriranga Vachanamruta) - 769

ಪ್ರಸಾದ ಕೊಡುವಾಗ ವಿಷಾದ ಮುದ್ರೆಯ ಪ್ರದರ್ಶನ ಬೇಡ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, November 23, 2020

ಶ್ರೀರಂಗ ವಚನಾಮೃತ (Sriranga Vachanamruta) - 768

ತ್ರಿಗುಣಗಳ ತೆರೆಯನ್ನು ತೆರೆದಾಗ ತಾನೇ ಭಗವಂತನ ದರ್ಶನವಾಗುತ್ತದೆ. ಅದಕ್ಕಾಗಿಯೇ ದೇವಾಲಯದಲ್ಲಿ ಭಗವಂತನ ಪ್ರತಿನಿಧಿಯಾದ ಅರ್ಚಕನು ದೇವರ ಮುಂದೆ ಹಾಕಿರುವ ಮೂರು ಬಣ್ಣದ ತೆರೆಯನ್ನು ತೆರೆದು ದೇವತಾಮೂರ್ತಿಯ ದರ್ಶನವನ್ನು ಮಾಡಿಸುವ ಸಂಪ್ರದಾಯವು ಬಂದಿದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, November 22, 2020

ಪದಾರ್ಥ ಪರಿಣಾಮ - ಮಹರ್ಷಿಗಳ ದೃಷ್ಟಿಯಲ್ಲಿ | Padaartha parinama - Maharshigala drustiyalli

Astanga Yoga Vijnana Mandiram (AYVM), Bangalore. Bharatheeya Samskruthi Karyagara - 36 (Part - 2) - Padaartha parinama - Maharshigala drustiyalli Discourse: Dr. C. R. Ramaswamy Speaker Profile: https://articles.ayvm.in/2019/02/dr-cr-ramaswamy.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 2) - ಪದಾರ್ಥ ಪರಿಣಾಮ - ಮಹರ್ಷಿಗಳ ದೃಷ್ಟಿಯಲ್ಲಿ ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ || ಶ್ರೀಃ || ಪದಾರ್ಥ ಪರಿಣಾಮ – ಮಹರ್ಷಿಗಳ ದೃಷ್ಟಿಯಲ್ಲಿ * ಭಾರತೀಯ-ಸಂಸ್ಕೃತಿ-ವ್ಯಾಪ್ತಿ – ಜೀವನದ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದೆ. * ಇದರಿಂದ ಆಗುವ ಪ್ರಯೋಜನ – ಯೋಗದ ಉನ್ನತ ಸ್ಥಿತಿ – ವಾಹನ- ಶರೀರವೇ * ಸಾಧನೆ + ಗುರುವಿನ ಮಾರ್ಗ ದರ್ಶನ + ಭಗವಂತನ ಕೃಪೆ * ಶರೀರ – ಯೋಗಾಯತನ + ಭೋಗಾಯತನ – ಪುರುಷಾರ್ಥಮಯ ಜೀವನ - ಇದಕ್ಕೆ ಅನುಕೂಲವಾದ ಪದರ್ಥಗಳ ಅನ್ವೇಷಣೆ * ಯೋಗಕ್ಕೇ ಅನುಕೂಲವಾದ ದ್ರವ್ಯಗಳು * ಯೋಗ-ಭೋಗಕ್ಕೆ ಅನುಕೂಲವಾದವು – ಮಂಗಳ ದ್ರವ್ಯಗಳು * ಪ್ರಾಣಿಗಳಿಂದಲೂ ಉಪಯೋಗ ಪಡೆಯುವ ವಿಧಾನ * ಶ್ರೀರಂಗ ಮಹಾಗುರುವಿನ ಪ್ರಯೋಗವಿಜ್ಞಾನ

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 767

"ಅರ್ಚಕಸ್ಸ ಹರಿಸ್ಸಾಕ್ಷಾತ್" ಎಂಬಂತೆ ಹರಿಯ ಮರ್ಮವನ್ನು ಹರಿಗಡುಹಿಲ್ಲದೆ ಅರಿತವನು ಹರಿಯೇಸರಿ. ಎಂಜಿನ್(Engine) ಬೇರೆಅಲ್ಲ. ಎಂಜಿನ್(Engine)ಗೆ ಕಣ್ಣು, ಕೈ, ಕಾಲು ಇಲ್ಲದಿರಬಹುದು. ಆದರೂ ಎಂಜಿನೀರ್(Engineer)ನ ರೂಪಾಂತರವೇ ಅದಾಗಿದೆ. ಇವನ ಮನಸ್ಸಿನ ಇಚ್ಛೆಯು ಯಾವ ಆಕಾರ ತಾಳಿತೋ, ಆ ಡಿಸೈನ್(Design) ಎಂಜಿನ್ ಆಗಿ ಹೊರಬಂದಿದೆ. ಅವನು ತನ್ನ ಮನೋರೂಪವನ್ನು ಹೊರಗೆ ಇಟ್ಟಿದ್ದಾನೆ. ಅದರ ಬಗ್ಗೆ ಅವನ ಕಡೆಯಿಂದ ಒರಿಜನಲ್(Original) ಆದ ಇನ್ಫರ್ಮೇಷನ್(Information) ತೆಗೆದುಕೊಳ್ಳಬೇಕು. ಅಂತೆಯೇ ತೀರ್ಥಕ್ಷೇತ್ರಗಳ ಬಗ್ಗೆ ಫಸ್ಟ್ಹ್ಯಾಂಡ್ ಇನ್ಫರ್ಮೇಷನ್(First Hand Information) ತೆಗೆದುಕೊಳ್ಳಬೇಕು. ಅದಕ್ಕೆ ಇಂಜಿನೀರನ(Engineer) ಸ್ಥಾನದಲ್ಲಿರುವ ಅರ್ಚಕ ಪರಮಸಹಾಯಕ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, November 21, 2020

ಶ್ರೀರಂಗ ವಚನಾಮೃತ (Sriranga Vachanamruta) - 766

ಪೂಜೆಗೆ ಅರ್ಚಕರೇ ಆಗಬೇಕೆಂದಿಲ್ಲ. ಸಾರ್ವತ್ರಿಕವಾಗಿ ಯಾರು ಬೇಕಾದರೂ ಮಾಡಬಹುದು? ಎನ್ನಬೇಡಿ. ಮೆದುಳಿನ ಪೂಜೆಯನ್ನು ಕರುಳು ಮಾಡುತ್ತೇನೆಂದರೆ ಸರಿಯಾಗುತ್ತದೆಯೇ? ಅದರಲ್ಲೂ ದೊಡ್ಡಕರುಳು! ತಿರುಳು ತಿಳಿಯದೆ ಪೂಜೆ ಮಾಡಹೊರಟಾಗ ಅನರ್ಥ. ಪೂಜೆ ಮಾಡುವವನು "ಅರ್ಚಕಃ ಹರಿಃ ಸಾಕ್ಷಾತ್" ಹರಿಗೆ ಹರಿಗಡುಹಿಲ್ಲದೆ ಹರಿಪೂಜೆ ಮಾಡುವವನಾಗಿರಬೇಕು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, November 20, 2020

ಶ್ರೀರಂಗ ವಚನಾಮೃತ (Sriranga Vachanamruta) - 765

ಡ್ರೈವರ್(Driver) ಇಲ್ಲದೆ ಎಂಜಿನ್(Engine) ಬರುವುದಿಲ್ಲ. ಅರ್ಚಕನಿಲ್ಲದಿದ್ದರೆ ದೇವರ ದರ್ಶನ ಆಗುವುದಿಲ್ಲ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, November 19, 2020

ಶ್ರೀರಂಗ ವಚನಾಮೃತ (Sriranga Vachanamruta) - 764

ಭಕ್ತರಿಗಾಗಿ, ಪಾಮರರಿಗಾಗಿ, ಪಾಮರರನ್ನು ಪರಮಾರ್ಥಕ್ಕೆಳೆಯಲು, ಶಿಲೆಯಲ್ಲಿ ದಿವ್ಯಭಾವವನ್ನು ನೆಲೆಗೊಳಿಸಿದ್ದಾರೆ. ಇದನ್ನರಿಯದ ಕೇವಲ ಪಾಮರರಿಗೆ ಅದನ್ನು ಅರ್ಥಗೊಳಿಸುವಂತೆ ಮಾಡುವ ಅರ್ಚಕನಿದ್ದರೆ ಕಲ್ಲು ಕಾಣುವುದಿಲ್ಲ. ಕಲ್ಲಿನ ಹಿಂದಿರುವುದು ಕಾಣುತ್ತೇಪ್ಪಾ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, November 18, 2020

ಶ್ರೀರಂಗ ವಚನಾಮೃತ (Sriranga Vachanamruta) - 763

ಅರ್ಚಕ ದೇವರನ್ನು ನೋಡಲು ಮಾರ್ಗದರ್ಶನ ಮಾಡಬೇಕು. ಬರುವವರ ದೃಷ್ಟಿ ಕಲ್ಲಿನಲ್ಲಿ ನಿಲ್ಲದೆ ದೇವರಕಡೆಗೆ ಹೊರಳುವಂತೆ ಮಾಡಬೇಕು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, November 17, 2020

ಶ್ರೀರಂಗ ವಚನಾಮೃತ (Sriranga Vachanamruta) - 762

ಯಾವ ಜ್ಞಾನವನ್ನು, ಇಚ್ಛೆಯನ್ನು ಜ್ಞಾನಿಗಳು ಕ್ರಿಯಾಕಾಂಡದಲ್ಲಿ ತಂದು ಜ್ಞಾನಕಾಂಡ, ಕ್ರಿಯಾಕಾಂಡಗಳಿಗೆ ಸಂಬಂಧ ತಪ್ಪಿಸದೆ ನಮ್ಮವರೆಗೆ ಶರೀರವೆಂಬ ಗಾಡಿಯಲ್ಲಿ ಸಾಗಿಸಿ ತಂದುಕೊಟ್ಟರೋ, ಯಾವುದು ಹಾಗೆ ನಮ್ಮವರೆಗೆ ಬಂದಿದೆಯೋ, ಆ ತೀರ್ಥಕ್ಷೇತ್ರಗಳಿಗೂ ಒಬ್ಬ ಮಾರ್ಗದರ್ಶಕಬೇಕು. ಅವನೇ ಅರ್ಚಕ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, November 16, 2020

ಶ್ರೀರಂಗ ವಚನಾಮೃತ (Sriranga Vachanamruta) - 761

ಆಕಾಶಕ್ಕೆ ಹಾರಲು ಒಂದು ಏರೋಪ್ಲೇನ್(Aeroplane)ನ್ನು ತಯಾರಿಸಿ ಕೊಟ್ಟರು ಎಂದು ಇಟ್ಟುಕೊಳ್ಳೋಣ, ಆ ಯಂತ್ರದ ಮೆಕ್ಯಾನಿಸಂ ನಮಗೆ ಗೊತ್ತಿಲ್ಲದೇ ಇದ್ದರೆ, ಅದಕ್ಕೆ ಸರಿಯಾದ ಸಾರಥಿ ಇಲ್ಲದಿದ್ದರೆ, ಆ ಯಂತ್ರವು ನಮ್ಮಲ್ಲೇ ಇದ್ದರೂ ನಮಗೆ ಅದರಿಂದ ಸರಿಯಾದ ಉಪಯೋಗವಿಲ್ಲ. ಹೀಗಾಗಿದೆ, ಇಂದಿನ ವಿಗ್ರಹಪೂಜೆ. ಅದರ ಒಳಗುಟ್ಟನ್ನರಿತರೆ ಅಷ್ಟೇ ಸಾರ್ಥಕವುಂಟು. ಆ ವಿಷಯದಲ್ಲಿ ವಿಚಾರ ಸಂಶೋಧನೆ, ಪುನರ್ದರ್ಶನಗಳು ಆವಶ್ಯವಾಗಿ ಆಗಬೇಕಾಗಿವೆ. ಇಲ್ಲದಿದ್ದರೆ ಪವಿತ್ರವಾದ ಭಾರತದಲ್ಲಿ ದೇಹವನ್ನು ಹೊತ್ತಿದ್ದಕ್ಕೆ, ದೇಶವನ್ನು ಮೆಟ್ಟಿದ್ದಕ್ಕೆ, ಸಾರ್ಥಕವಿಲ್ಲದೇ ಹೋಗುತ್ತೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, November 15, 2020

Bharatheeya Samskruthi mattu adara vyapthi | ಭಾರತೀಯ ಸಂಸ್ಕೃತಿ ಮತ್ತು ಅದರ ವ್ಯಾಪ್ತಿ

Astanga Yoga Vijnana Mandiram (AYVM), Bangalore. Bharatheeya Samskruthi Karyagara - 36 (Part - 1) - Bharatheeya Samskruthi mattu adara vyapthi Discourse: Dr. C. R. Ramaswamy Speaker Profile: https://articles.ayvm.in/2019/02/dr-cr-ramaswamy.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 1) - ಭಾರತೀಯ ಸಂಸ್ಕೃತಿ ಮತ್ತು ಅದರ ವ್ಯಾಪ್ತಿ ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ || ಶ್ರೀಃ || * ಭಾರತೀಯರು ಯಾರು? 'ಸಂಸ್ಕೃತಿ' ಪದದ ಅರ್ಥವೇನು? * ವ್ಯಾಪ್ತಿ - ಆಳವಾದ ಅಧ್ಯಯನ, ಅಧ್ಯಾಪನ, ವೃತ್ತಿ-ಜೀವನಕ್ಕೆ ಅನುಗುಣವಾದವು: ವಿದ್ಯೆಗಳು, ಕಲೆಗಳು, ಶಾಸ್ತ್ರಗಳು - ವಿಸ್ತಾರವಾದ ಪಟ್ಟಿ * ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಲ್ಲಿ ಸಂಸ್ಕೃತಿಯ ವಿಶೇಷ ಗುರುತುಗಳು: ಉತ್ಥಾನ, ಸ್ನಾನ, ವಸ್ತ್ರ-ವಿನ್ಯಾಸ, ಪುಂಡ್ರಧಾರಣೆ, ಪೂಜೆಯಲ್ಲಿ ಉಪಚಾರಗಳ ವೈವಿಧ್ಯ, ಪೂಜಾ ಮಾಧ್ಯಮಗಳು, ಉಪಕರಣಗಳು, ಪೂಜಾ ಪರಿಕರಗಳು, ಆಹಾರ - ತಯಾರಿಕೆ, ಸೇವನೆಯ ಜವಾಬ್ದಾರಿ ಮತ್ತು ಧ್ಯೇಯ, ಆಹಾರ-ಆರೋಗ್ಯ-ಅಧ್ಯಾತ್ಮ - ಮಹರ್ಷಿ ದೃಷ್ಟಿ * ಜೀವನ ವಿಧಾನ - ಪುರುಷಾರ್ಥಮಯ ಜೀವನ * ವಾರ್ಷಿಕ ಚಟುವಟಿಕೆಗಳು: ಹಬ್ಬ-ಹರಿದಿನಗಳ ಆಚರಣೆಗಳು ಷೋಡಶ ಸಂಸ್ಕಾರಗಳು - ಜಾತಕರ್ಮ, ನಾಮಕರಣ, ......ವಿವಾಹ ಪಿತೃ ಕರ್ಮಗಳು ದೇವಾಲಯ, ತೀರ್ಥ-ಕ್ಷೇತ್ರಗಳು - ತೀರ್ಥ ಯಾತ್ರೆ * ಸಮಾಜ - ರಾಷ್ಟ್ರ - ಹೊಣೆಗಾರಿಕೆ - ರಾಜ ದಂಡ * ಸಂಸ್ಕೃತಿಯ ಸ್ವರೂಪ - ವಿರೂಪ - ಕಾರಣಗಳು: ವಿರೂಪದಿಂದ ಸ್ವರೂಪಕ್ಕೆ - ಮಾರ್ಗದರ್ಶಕರು

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 760

ಕೃಷ್ಣನ ಕೈಗೆ ಕೊಳಲು ಸಿಕ್ಕಿದಾಗ ಅವನು ಅದರಲ್ಲಿ ತನ್ನ ಉಸಿರಾಡಿಸಿದ. ಅವನದೇ ಆದ ಜ್ಞಾನ ಅವನ ಇಚ್ಛೆಯಂತೆ ಅದರಲ್ಲಿ ಹೊರಹೊಮ್ಮುವುದು. ಆದರೆ ಅದೇ ಕೊಳಲು ಬೇರೆಯವರಿಗೆ ಸಿಕ್ಕಿದಾಗ, ಕೃಷ್ಣನ ಜ್ಞಾನವಿಲ್ಲದಿದ್ದಾಗ, ಉಸಿರಾಡುವ ಕ್ರಿಯೆ ನಡೆದರೂ ಹೊರಹೊಮ್ಮುವ ವಿಷಯಬೇರೆ. ನಾದಮೂಲನಾದ ಕೃಷ್ಣನ ಕೊಳಲಿನಲ್ಲಿ ಪೂರ್ಣನಾದವು ಹೊರಹೊಮ್ಮಿದರೆ, ನಾದಮರ್ಮವರಿಯದ ಇತರರ ಕೈಯ್ಯಲ್ಲಿ ಅದು ಹೊರಹೊಮ್ಮಲಾರದು. ಹೊರಗಿನ ಕ್ರಿಯೆಗಳು ಒಂದೇ ರೀತಿ ತೋರಿದರೂ ಅದು ಅನುಕರಣವಾಗದೇ ಅಪಕರಣವಾಗಿ ಬೇರೆ ವಿಷಯ ತುಂಬಿಕೊಳ್ಳುತ್ತೆ. ಹೀಗೆ ಜ್ಞಾನಿಗಳು ತಂದ ದೇವಾಲಯಗಳಲ್ಲಿ ಅವರ ಜ್ಞಾನ ಸಿಗದೇ ಬೇರೆ ವಿಷಯ ಆಕ್ರಮಿಸಿಕೊಂಡಿದೆ. ಅರಿಷಡ್ವರ್ಗಗಳು ಆಕ್ರಮಿಸಿಕೊಂಡಿವೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, November 14, 2020

ಶ್ರೀರಂಗ ವಚನಾಮೃತ (Sriranga Vachanamruta) - 759

ಸಾಮಾನ್ಯ ಜನರು ರಾಕೆಟ್(Rocket)ನ್ನು ಬಿಟ್ಟರೆ ಚಂದ್ರಲೋಕವನ್ನು ತಲುಪಿತು ಎಂದು ಆಶ್ಚರ್ಯಪಡುತ್ತಾರೆಯೇ ಹೊರತು ಅದರಲ್ಲಿ ಏನೇನು ಇಟ್ಟಿದ್ದಾರೆ ಎಂದು ನೋಡುವುದಿಲ್ಲ. ಬುದ್ಧಿಗೆ ಒಂದು ವಿಷಯವಿಲ್ಲ. ಮೇಲುಗಡೆ ನೋಟದಿಂದ ಮಾತ್ರ ರಾಕೆಟ್ನೋಡಿದೆ ಎನ್ನುತ್ತಾರೆಯೇ ಹೊರತು ಅದರ ಬಗ್ಗೆ ಪರಿಚಯವಿಲ್ಲ. ಅದೇ ಸೈಂಟಿಸ್ಟ್(Scientist) ಅದನ್ನು ನೋಡಿದರೆ, ಅವನು ನೋಡುವ ವಿಧಾನವೇ ಬೇರೆ. ಅದರ ಮೆಕ್ಯಾನಿಸಂ ಏನು? ಅದರ ಗುಟ್ಟೇನು? ರಚನಾ ವಿಧಾನವೇನು? ಎಂದು ಎಲ್ಲವನ್ನೂ ನೋಡುತ್ತಾನೆ. ಆದರೆ ಆ ದೃಷ್ಟಿ ಇಲ್ಲದಿದ್ದರೆ ಹೊರನೋಟ ಮಾತ್ರ. ಅಂತೆಯೇ ಒಂದು ದೇವಾಲಯವನ್ನು ನೋಡುವಾಗಲೂ ಒಂದು ದೃಷ್ಟಿಕೋಣಬೇಕು. ಅಲ್ಲಿ ಹೊರಗಣ್ಣಿಗೆ ಮಾತ್ರ ವಿಷಯವಿಲ್ಲ. ಮನಸ್ಸಿಗೂ, ಬುದ್ಧಿಗೂ, ಆತ್ಮಕ್ಕೂ ಅಲ್ಲಿ ವಿಷಯವಿದೆ. ದೃಷ್ಟಿಯನ್ನು ವಿಶಾಲಗೊಳಿಸಿ ನೋಡಿದರೆ ಅದನ್ನು ನೋಡುವುದಕ್ಕೆ ಸಹಾಯವಾಗುತ್ತದೆ. ದೃಷ್ಟಿ ವಿಶಾಲವಾಗುವುದು ಎಂದರೆ ಹೊರಗಣ್ಣು ಆಗಲವಾಗುವುದು ಎಂದಲ್ಲ. ಹಿಂದೆ ಕಣ್ಣು ನೋಡಿದಾಗ ಎಷ್ಟು ವಿಷಯ ಗ್ರಹಿಸುತ್ತಿತ್ತೋ ಅದಕ್ಕಿಂತಲೂ ಹೆಚ್ಚಿನ ಅಂಶ ತಿಳಿದು ಬರುವುದು ಎಂದು ಅರ್ಥ. ಅದು ಒಳಜೀವನಕ್ಕೂ ಹೊರಜೀವನಕ್ಕೂ ಒಂದು ಅಪ್ರತಿಹತವಾದ ದೃಷ್ಟಿಯನ್ನು ಕೊಡುತ್ತದೆ. ಸತ್ಯವೂ, ಶಿವವೂ, ಸುಂದರವೂ ಆದ ಜೀವನದ ಬಗ್ಗೆ ಒಂದು ನೋಟವನ್ನು ಕೊಡುತ್ತದೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, November 13, 2020

ಶ್ರೀರಂಗ ವಚನಾಮೃತ (Sriranga Vachanamruta) - 758

ಜ್ಞಾನಿಗಳು ದೈವೀಸಂಪತ್ತನ್ನು ಕಷ್ಟಪಟ್ಟು ಸಂಪಾದಿಸಿದರು. ಆದರೆ ಮುಂದಿನವರು ಅದರಿಂದ ತಾವೂ ಲಾಭಪಡೆಯಲಿಲ್ಲ, ತಮ್ಮ ಮಕ್ಕಳಿಗೂ ಕೊಡಲಿಲ್ಲ, ಹಾಗಾಯಿತು. ಇವರಿವರ ಕಚ್ಚಾಟಕ್ಕೆ ಎಡೆಯಾಯಿತು. ನಿರ್ವೇದಕ್ಕೆ ಜಾಗವಾಯಿತು. ಆದ್ದರಿಂದ ಇನ್ನಾದರೂ ಎಚ್ಚರಗೊಳ್ಳಬೇಕು. ಸರಿಯಾದ ವಿಷಯ ನೋಡಿ ಸಕಾಲದಲ್ಲಿ ಬೆಳೆಸಬೇಕು. ಗುಡಿಗೋಪುರಗಳಲ್ಲಿರುವ ಜೀವವನ್ನರಿತು, ನಮ್ಮ ಜೀವನದಲ್ಲಿ ಶಾಂತಿಧಾಮವನ್ನು ಕಾಣುವಂತಾಗಬೇಕು. ಶಿವ-ಮಂಗಳವಾದ ಬಾಳಾಟವನ್ನು ಪಡೆದರೆ ಇವೆಲ್ಲಾ ಸಾರ್ಥಕ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 757

ಸೌಂದರ್ಯಪೂರ್ಣವಾದ ಯಾವ ನಡೆಯುಂಟೋ ಅದು ಮೌನವಾಗಿ ತನ್ನ ವಿವರಣೆ ಕೊಡುತ್ತೆ. ನೇರವಾದ ಕಣ್ಣಿಗೆ ಸೂರ್ಯನಲ್ಲಿರುವ ವಿಷಯ ತಿಳಿಯದಿದ್ದರೂ, ವೈಜ್ಞಾನಿಕ ಸಾಧನಗಳ ಸಹಾಯದಿಂದ ಪ್ರೋಟಾನ್(Proton) ಇದೆ, ಹೀಲಿಯಂ(Helium) ಇದೆ ಎಂದು ಪತ್ತೆ ಹಚ್ಚುವುದುಂಟು. ತನ್ನ ಕಣ್ಣಿನ ಜೊತೆಗೆ ಪವರ್ಫುಲ್ ಲೆನ್ಸ್(Powerful Lens) ಹಾಕಿಕೊಂಡು ನೋಡುವಂತೆ, ಅದಕ್ಕೂ ಒಳಹೊಕ್ಕು 'ಅರ್ಕಮಂಡಲ ಮಧ್ಯಸ್ಥಂ ಸೂರ್ಯಕೋಟಿ ಸಮಪ್ರಭಂ| ಬ್ರಹ್ಮಾದಿ ಸೇವ್ಯಪಾದಾಬ್ಜಂ ನೌಮಿ ಬ್ರಹ್ಮ ರಮಾಸಖಂ||' ಎಂಬುದನ್ನು ನೋಡುವ ನೋಟವು ಬೇಕು. ಸೂರ್ಯಮಂಡಲಾಂತರ್ವರ್ತಿ ಸೂರ್ಯನಾರಾಯಣನನ್ನು ನೋಡುವ ಕಣ್ಣು ಬೇಕು.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 756

ಶಿಲ್ಪನೋಡಲು ತರಬೇತಿ ಬೇಕು. 'ಏರೋಪ್ಲೇನ್(Aeroplane) ನೋಡಿದ್ದೀಯೋ?' ಎಂದರೆ 'ನೋಡಿದೆ' ಎನ್ನಬಹುದು. ಆದರೆ ಅದನ್ನು ಅರ್ಥಮಾಡಿಕೊಂಡು ಮೆಕ್ಯಾನಿಸಂ(Mechanism) ಅರಿಯುವ ವಿಶೇಷ ತರಬೇತಿ ಬೇಕು. ಅಂತೆಯೇ ದೇಹವನ್ನಾಗಲೀ ದೇವಾಲಯವನ್ನಾಗಲೀ ನೋಡಲು ಆಳವಾದ ದೃಷ್ಟಿಬೇಕು. ಕಣ್ಣಿಗೆ ಬೇಕಾದ ವಿಷಯವೂ ಇದೆ. ಮೂಗಿಗೆ ಬೇಕಾದ ಒಂದು ಸುವಾಸನಾ ದ್ರವ್ಯವಾಗಿ ಭಗವದಲಂಕಾರವಾದ ಪುಷ್ಪವೂ ಇದೆ. ಭಗವಂತನ ಪ್ರಸಾದ ನಾಲಿಗೆಗೆ ಇದೆ. ಈ ಕರ್ಮಜ್ಞಾನೇಂದ್ರಿಯಗಳಿಗೆ ಬೇಕಾದ ವಿಷಯವೂ ಇದೆ. ಇದರ ಜೊತೆಗೆ ದೈವಿಕವಾದ, ಆಧ್ಯಾತ್ಮಿಕವಾದ ವಿಷಯಗಳೂ ಇವೆ. ಒಂದಕ್ಕೊಂದು ಕನ್ನೆಕ್ಷ(Connection)ನ್ನೊಡನೆ ನೋಡಿದರೆ ಪೂರ್ತಿನೋಟ. ಎಲ್ಲವನ್ನೂ ಬಿಡಿಸಿ ಬಿಡಿಸಿ ನೋಡಬೇಕು. 'ಸ್ಥಾಲೀಪುಲಾಕ ನ್ಯಾಯದಂತೆ' ನೋಡಿಬಿಟ್ಟರೆ ಆಗೋಲ್ಲ.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 755

ಅಂತರಂಗದಲ್ಲಿರುವ ತಮ್ಮ ದೇವಾಲಯದ ಮೆಟ್ಟಿಲಿನಿಂದ ಹಿಡಿದು ದ್ವಾರ, ಮಹಾದ್ವಾರ, ಶುಕನಾಸಿ, ನವರಂಗಮಂಟಪಗಳನ್ನು ಕ್ರಮವಾಗಿ ಇಟ್ಟು, ಅಲ್ಲಿಂದ ಗರ್ಭಗೃಹ, ಅದರಲ್ಲಡಗಿರುವ ಸೃಷ್ಟಿಗರ್ಭದ ಹಿನ್ನಲೆಯಲ್ಲಿರುವ ಋಷಿಹೃದಯದಲ್ಲಡಗಿರುವ ಆತ್ಮಗೃಹ, ಅಂತೆಯೇ ಆ ಋಷಿಗಳ ಅಂತರಂಗಕ್ಕೆ ಕೊಂಡೊಯ್ಯುವ 'ತದ್ವಿಷ್ಣೋಃ ಪರಮಂಪದಂ' ಎಂಬ ಸಾಹಿತ್ಯ, ಇವುಗಳೊಡನೆ ಅವರ ಮತಿ, ದರ್ಶನಗಳನ್ನು ಹೊತ್ತಿರುವ ವಿಷಯವೇನುಂಟೋ ಅದನ್ನು ನೋಡಬೇಕು.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 754

ಬಾಹ್ಯಾಂತರೀಕ್ಷಕ್ಕೆ ರಾಕೆಟ್ಟ(Rocket)ನ್ನು ಹಾರಿಸಿ ಚಂದ್ರಲೋಕದ ಸಮಾಚಾರವನ್ನು ಅರಿಯುವಂತೆ, ದಹರಾಕಾಶಕ್ಕೆ ಹಾರಿ ಅಲ್ಲಿಂದ ತನ್ನ ನಿಜವೈಕುಂಠವನ್ನು ನೋಡುವ ಉದ್ದೇಶದಿಂದ ಭಗವಂತನನ್ನು ಅರ್ಚಾವತಾರ ಮಾಡಿಸಿರುವುದನ್ನು ನೋಡಬೇಕು.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 753

ಒಂದು ಗೂಬೆಯ ಚಿತ್ರ ನೋಡಿದರೂ ಮನಸ್ಸು ಕೇವಲ ಚಿತ್ರದ ಮೇಲೆ ನಿಲ್ಲದೆ ನೀವು ನೋಡಿರುವ ಗೂಬೆಯ ಕಡೆಗೆ ಹರಿಯುತ್ತದೆ. ಆದರೆ ದೇವಾಲಯದಲ್ಲಿ ಶಿಲೆಯ ಮೇಲೆ ಭಗವಂತನನ್ನಿಟ್ಟಿದ್ದರೂ, ಕಲೆಯ ಮೂಲಕ ಭಗವಂತನ ನೆಲೆಯನ್ನು ಮನಸ್ಸು ಮುಟ್ಟುವುದಿಲ್ಲವೇಕೆ?
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 752

ಅಧ್ಯಾತ್ಮಯೋಗದಲ್ಲಿರುವ ಒಂದು ವಿಷಯವು ಆ ಸಂಸ್ಕಾರವಿದ್ದವನಿಗೆ ತನ್ನ ವ್ಯಾಖ್ಯಾನವನ್ನು ಕೊಟ್ಟು ಕೊಳ್ಳುತ್ತದೆ. ಮೌನವಾಗಿಯೇ ಇದ್ದರೂ ಹೃದಯದಲ್ಲಿ ಏನೋ ಬಂದು ತಟ್ಟುತ್ತೆ. ಅವನ ಪ್ರಸನ್ನತೆಯೇ, ಉನ್ನತಸ್ಥಿತಿಯೇ, ಒಂದು ಪ್ರತಿಕ್ರಿಯೆ ಮಾಡುತ್ತದೆ. ಅಂತೆಯೇ ಆ ಬಗ್ಗೆ ಮಾತಾಡದಿದ್ದರೂ ತಟ್ಟುತ್ತದೆ. ಅಂತೆಯೇ ಕಲ್ಲಿಗೆ ಋಷಿ ಹೃದಯ ಕೊಟ್ಟರೆ ಅಲ್ಲಿ ಏನನ್ನು ಹೇಗೆ ನೋಡಬಹುದು? ಅಭಿಜ್ಞಾನನಾದವನು ನೋಡಿದರೆ ಆ ಶಿಲೆಯ ಮೌನವೇ ಆ ಶಿಲೆಯ ವ್ಯಾಖ್ಯಾನವನ್ನು ಕೋಡುತ್ತದೆ. ಆ ಅಭಿಜ್ಞಾನ ರೂಪವಾದ ಕಲ್ಲಿನ ಮೇಲೆ ಲೈಫ್ (Life) ಹರಿಸಿದೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 751

'ಎಳನೀರು ತೆಗೆದುಕೋಳ್ಳಿ' ಎಂದು ಮಟ್ಟೆಯೊಡನೆ ಕೊಟ್ಟರೆ, ಅದರ ಮಟ್ಟೆ ನಾರುಗಳನ್ನು ಕಚ್ಚಿ 'ಇಲ್ಲೆಲ್ಲಿದೆ ಎಳನೀರು?' ಎಂದು ದೂರುವಂತಾಗ ಬಾರದು. ಎಳನೀರು ಎಂದರೆ ಎಳನೀರನ್ನೇ ನೇರವಾಗಿ ಕೊಡಲಾಗುವುದಿಲ್ಲ. ಅದನ್ನು ಧರಿಸಲು ಪಾತ್ರೆಬೇಕು. ಆ ಪಾತ್ರೆಯೊಡನೆ ಕೊಟ್ಟಾಗ, ಪಾತ್ರೆ ಅಗಿದರೆ ಅವಿವೇಕ ಅಷ್ಟೆ. ಅದನ್ನು ಮಾನವ ನಿರ್ಮಿತವಾದ ಪಾತ್ರೆಯಲ್ಲಿಯೂ ಕೊಡಬಹುದು. ಆದರೆ ಆ ನೀರನ್ನಿಡಲು ಭಗವಂತ ಅದರ ಜೊತೆಗೆ ಪಾತ್ರೆಯನ್ನು ನಿರ್ಮಿಸಿ ಕೊಟ್ಟಿದ್ದಾನೆ. ತೀರ್ಥಕ್ಷೇತ್ರಗಳೇ ಆ ಪಾತ್ರೆ. ಪಾತ್ರೆ ಕಚ್ಚಿ ಅಲ್ಲೇನಿದೆ ಎಂದು ಟೀಕಾಟೋಕೆ ಮಾಡಬಾರದು. ಅದರೋಳಗಿನ ಸಾರವನ್ನು ನೋಡದೆ, ನಮ್ಮ ಜೀವನದ ತಾಪವಡಗಿಸುವ ಅಮೃತವನ್ನೇನು ತುಂಬಿಕೋಟ್ಟಿದ್ದಾರೆ ಎಂಬುದನ್ನು ಗಮನಿಸದೇ ಇದ್ದಾಗ, ಅದನ್ನು ನೋಡಿ ಟೀಕಾ-ಟೋಕೆ ಮಾಡುವವರೂ ಉಂಟು.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 750

ಜೀವವಿಲ್ಲದಿದ್ದರೆ ಕಣ್ಣು, ಕೈ ಕಾಲುಗಳು ಕೆಲಸಕ್ಕೆ ಬರುವುದಿಲ್ಲ. ಅಂತೆಯೇ ತೀರ್ಥಕ್ಷೇತ್ರಗಳಲ್ಲಿಯೂ ಜೀವಭೂತವಾದ ವಸ್ತುವನ್ನು ನೋಡಿಬರಬೇಕು. ಅದನ್ನು ಬಿಟ್ಟರೆ ವೃಥಾಶ್ರಮ  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 749

ತೀರ್ಥಕ್ಷೇತ್ರದಲ್ಲಿ ಕಲ್ಲಿರಬಹುದು, ಹುಲ್ಲಿರಬಹುದು. ಆ ಕಲ್ಲು ಹುಲ್ಲುಗಳನ್ನಾಗಲೀ, ತೀರ್ಥಕ್ಷೇತ್ರಗಳನ್ನು ತಂದವರು ದಾಢೀ ಬಿಟ್ಟಿರುವುದನ್ನಾಗಲೀ ನೋಡಲು ಅಲ್ಲಿಗೆ ಹೋಗುವುದು ಬೇಡ. ಅದರ ಹಿಂದೆ ಪರಮಾರ್ಥವೇನುಂಟೋ ಅದನ್ನು ನೋಡಿದರೆ, ಯಥಾರ್ಥಗ್ರಹಣ. ಇಲ್ಲದಿದ್ದರೆ ಅನರ್ಥಗ್ರಹಣ.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 748

ನಮ್ಮ ದೇವಾಲಯಕ್ಕೆ ಬಂದು, ಹೊರ ಕಟ್ಟಡವನ್ನು ನೋಡಿ, ಒಳಗುಟ್ಟು ತಿಳಿಯದೇ ಇದರ ಡೈಮೆನ್ಷನ್ (Dimension) ಹೀಗಿದೆ, ಹಾಗಿದೆ ಎಂದು ಅದನ್ನು ಮಾತ್ರ ಮೆನ್ಷನ್(Mention) ಮಾಡುತ್ತಾರೆ. 'ಸತ್ಯ-ಸೌಂದರ್ಯ-ಮಾಂಗಲ್ಯವೇನು?' ಎಂದು ಅಲ್ಲಿ ನೋಡಬೇಕು. ಅದಕ್ಕೆ ಹಿನ್ನೋಟಬೇಕು.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 747

ನಾವು ಹೋಗುವ ಜಾಗದಲ್ಲಿ ಕಣ್ಣು, ಮೂಗು ಮೊದಲಾದ ಕರ್ಮಜ್ಞಾನೇಂದ್ರಿಯಗಳಿಗೆ ಮಾತ್ರ ವಿಷಯವೇ? ಅಥವಾ ಆತ್ಮಕ್ಕೂ ವಿಷಯಉಂಟೇ? ಎರಡಕ್ಕೂ ಉಂಟೇ? ಎಂಬುದನ್ನು ವಿಚಾರ ಮಾಡಬೇಕು. ಇಂದ್ರಿಯಕಲ್ಯಾಣಕ್ಕೆ ಮತ್ತು ಆತ್ಮಕಲ್ಯಾಣಕ್ಕೆ ಸತ್ಯ-ಶಿವ-ಸುಂದರವಾದ ವಿಷಯವಿದ್ದರೆ ಅದನ್ನು ನೋಡಲು ದೃಷ್ಟಿಕೋಣ ಬೇಕು.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 746

ಕನ್ನಡಕ ಹಾಕಿಕೊಳ್ಳುವುದು ಮುಂದಿನ ವಸ್ತು ತಿಳಿಯಲು. ಅದು ಬಿಟ್ಟು ಲೆನ್ಸ್(Lens)ನ ಜಾಗದಲ್ಲಿ ರಟ್ಟನ್ನು ಇಟ್ಟುಕೊಂಡರೆ ಮುಗ್ಗರಿಸಿ ಬೀಳಲು ಅದು ಕಾರಣವಾಗುತ್ತೆ. ಅಂತೆಯೇ ವಿಷಯವೇನೆಂದು ತಿಳಿಯದೆ ಅಪಾರ್ಥದ ಮೂಲಕ ನೋಡಿದರೆ ಬುದ್ಧಿ ಮುಗ್ಗರಿಸಿ ಬೀಳುವುದು. ಆದ್ದರಿಂದ ದೇವಾಲಯವು ಲೆನ್ಸ್ ಆಗಿ ತೋರುವಂತೆ ನಮಗೆ ದೃಷ್ಟಿಕೋಣ ಬೇಕು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 745

ವೈಣಿಕನು ವೀಣೆಯಲ್ಲಿ ತನ್ನ ಮನೋಧರ್ಮವನ್ನು ಹರಿಸುವಂತೆ, ಶಿಲ್ಪಿಯು ತನ್ನ ಕೈಗೆ ಸಿಕ್ಕಿದ ಶಿಲೆಯಲ್ಲಿ ತನ್ನ ಜೀವನದ ಗುಟ್ಟನ್ನು, ಭೌತಿಕ, ದೈವಿಕ, ಆಧ್ಯಾತ್ಮಿಕವಾಗಿ ಚಿತ್ರಿಸಿರುತ್ತಾನೆ. ಶಿಲ್ಪದಲ್ಲಿ ಅದನ್ನು ನೋಡಬೇಕು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 744

ಪೂರ್ಣದೇಶದಿಂದ ಬಂದ ಗುಡಿಗೋಪುರಗಳಿಗೆ, ಶಿಲ್ಪಗಳಿಗೆ, ಏಕದೇಶವನ್ನು ಮಾತ್ರ ನೋಡಿ, ತಿಳಿಯದೇ ವ್ಯಾಖ್ಯಾನಮಾಡಲು ಹೊರಟು, ತಪ್ಪುದಾರಿಗೆಳೆದಿದ್ದಾರೆ. ಅದರ ಮರ್ಮವನ್ನು ತಿಳಿದವರಕಡೆಯಿಂದ ಮಾರ್ಗದರ್ಶನವನ್ನು ಪಡೆಯಬೇಕು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Fwd: ಶ್ರೀರಂಗ ವಚನಾಮೃತ (Sriranga Vachanamruta) - 743

ದೇವತಾವಿಗ್ರಹಗಳು ಸಿಂಬಲ್(Symbol)ಗಳೂ ಆಗಿವೆ, ಅನ್ತರ್ದೃಷ್ಟಿಗೆ ವಿಷಯವೂ ಆಗಿದೆ. ದಿವ್ಯರಾಜ್ಯದ ಅಥವಾ ಅದರಮಾರ್ಗದ ಪ್ಲಾನ್(Plan) ಆಗಿವೆ ತೀರ್ಥಕ್ಷೇತ್ರಗಳು. ಆ ಪ್ಲಾನನ್ನು ಅರ್ಥ ಮಾಡಿಕೊಳ್ಳುವ ಶಕ್ತಿಬೇಕು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, November 8, 2020

Sri Sri Shankaracharya's Stotra Sahithya: Gurvastakam | ಗುರ್ವಷ್ಟಕಂ

Astanga Yoga Vijnana Mandiram (AYVM), Bangalore Bharathiya Samskruthi Karyagara - 35 (Part 4) Sri Sri Shankaracharya's Stotra Sahithya: Gurvasthakam Discourse: Sri Rajagopalan. K. S Speaker Profile: https://articles.ayvm.in/2019/02/mr-ks-rajagopalan.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ, ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 35 (ಭಾಗ - 4) ಶ್ರೀ ಶ್ರೀ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯ : ಗುರ್ವಷ್ಟಕಂ ಪ್ರವಚನ : ಶ್ರೀ ರಾಜಗೋಪಾಲನ್. ಕೆ. ಎಸ್ ಗುರ್ವಷ್ಟಕಂ: ಶರೀರಂ ಸುರೂಪಂ ತಥಾ ವಾ ಕಳತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (1) ಕಳತ್ರಂ ಧನಂ ಪುತ್ರಪೌತ್ರಾದಿ ಸರ್ವಂ ಗೃಹಂ ಬಾಂಧವಾಃ ಸರ್ವಮೇತದ್ಧಿಜಾತಂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (2) ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (3) ವಿದೇಶೇಷು ಮಾನ್ಯಸ್ಸ್ವದೇಶೇಷು ಧನ್ಯಃ ಸದಾಚಾರ ವೃತ್ತೇಷು ಮತ್ತೋ ನ ಚಾನ್ಯಃ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (4) #AyvmVani #ಎವೈವಿಎಂ_ವಾಣಿ ಕ್ಷಮಾಮಂಡಲೇ ಭೂಪಭೂಪಾಲಬೃಂದೈಃ ಸದಾಸೇವಿತಂ ಯಸ್ಯ ಪಾದಾರವಿಂದಮ್ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (5) ಯಶೋ ಮೇ ಗತಂ ದಿಕ್ಷು ದಾನಪ್ರತಾಪಾ- ಜ್ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (6) ನ ಭೋಗೇ ನ ಯೋಗೇ ನ ವಾ ವಾಜಿರಾಜೌ ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (7) ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (8) ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್? (9)

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, November 1, 2020

Sri Sri Shankarabhagavatpadara Stotra Sahithya: Manishapancakam Stotrarachaneya hinnele | ಮನೀಷಾಪಂಚಕಂ

Astanga Yoga Vijnana Mandiram (AYVM) Sri Sri Shankarabhagavatpadara Stotra Sahithya: Manishapancakam Stotrarachaneya hinnele Discourse: Sri Subramanya Somayaji Speaker Profile : https://articles.ayvm.in/2019/02/mr-bu-subramanya-somayaji.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಶಾಖೆ: ಬೆಂಗಳೂರು ಶ್ರೀ ಶ್ರೀ ಶಂಕರಭಗವತ್ಪಾದರ ಸ್ತೋತ್ರ ಸಾಹಿತ್ಯ: ಮನೀಷಾಪಂಚಕಂ ಸ್ತೋತ್ರರಚನೆಯ ಹಿನ್ನೆಲೆ ಪ್ರವಚನ : ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages