Saturday, December 5, 2020

ಶ್ರೀರಂಗ ವಚನಾಮೃತ (Sriranga Vachanamruta) - 780

ದೇವರ ದರ್ಶನವಾದ ಮೇಲೆ ದೇವಾಲಯದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಕಾರಣ, ಭಗವಂತನ ದರ್ಶನ ಮಾಡಿಯಾದನಂತರ ಅದನ್ನು ಸ್ವಲ್ಪ ಹೊತ್ತು ಹಾಯಾಗಿ ಕುಳಿತು ಮನಸ್ಸಿಗೆ ತಂದುಕೊಳ್ಳಲು; ದರ್ಶನದಿಂದ ಕಣ್ಣಿಗೆ ಕಟ್ಟಿದಂತಿರುವ ಚಿತ್ರವನ್ನು ಹೃದಯಕ್ಕೆ ಕಟ್ಟುವಂತೆ ಮಾಡಿಕೊಳ್ಳಲು. ಹೊರಗಡೆ ಹೋದರೆ ತಾಪ, ಮುಳ್ಳು, ಕಲ್ಲು, ಮುಂತಾದದ್ದಿರುವುದರಿಂದ, ಅದನ್ನು ಪ್ರವೇಶಿಸುವುದಕ್ಕೆ ಮೊದಲು, ದೇವಾಲಯದ ವಾತಾವರಣದಲ್ಲಿರುವಾಗಲೇ ಅದನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, December 4, 2020

ಶ್ರೀರಂಗ ವಚನಾಮೃತ (Sriranga Vachanamruta) - 779

ಭಗವಂತನು ಭೂರ್ಭುವಸ್ಸುವರ್ಲೋಕಗಳನ್ನು ಅಳೆದು 'ತ್ರೇಧಾ ನಿದಧೇಪದಂ' ಎಂಬಂತೆ ತನ್ನ ಪಾದವಿನ್ಯಾಸ ಮಾಡಿದನೆಂದು ಶ್ರುತಿಯಲ್ಲೋ, ಸ್ಮೃತಿಯಲ್ಲೋ ಹಾಡಿದಪಕ್ಷದಲ್ಲಿ, ಅವನ ತಾದಾತ್ಮ್ಯ ಅನುಭವಿಸಬೇಕಾದರೆ ಅದಕ್ಕೆ ದರ್ಶನವೇ ಬೇಕು. ಇಲ್ಲದೆ ಕೇವಲ ಹೊರನೋಟದಲ್ಲಿ ಶಿಲೆಯನ್ನು ಹೇಳುವುದಾದರೆ, ನಮ್ಮ ಕಣ್ಣೆದುರಿಗೆ ಕಾಣುವಷ್ಟು ಎತ್ತರದಲ್ಲಿರುವ ಶಿಲೆ ಮೂರು ಲೋಕಗಳನ್ನೂ ವ್ಯಾಪಿಸಿನಿಂತಿದೆ ಎಂದರೆ ಹಾಸ್ಯಾಸ್ಪದವಾಗುತ್ತೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, December 3, 2020

ಶ್ರೀರಂಗ ವಚನಾಮೃತ (Sriranga Vachanamruta) - 778

ಈಗಿನ ಕಾಲದಲ್ಲಿ ಮನುಷ್ಯನು ಭೂಮಿಯ ಮೇಲೆ ವೇಗವಾಗಿ ಸಂಚರಿಸುತ್ತಾನೆ. ಆಕಾಶದಲ್ಲಿ ವಿಮಾನಗಳಿಂದ ಸಂಚಾರ ಮಾಡುತ್ತಿದ್ದಾನೆ. ಚಂದ್ರಲೋಕಕ್ಕೆ ಕೂಡಾ ಹೋಗುವ ಉತ್ಸಾಹ ತೋರಿಸುತ್ತಿದ್ದಾನೆ. ಈಗಿನ ಜನಗಳ ಮನಸ್ಸು ಹೀಗೆ ಓಡುತ್ತಿದೆ. ಹಿಂದೆ ಮಹರ್ಷಿಗಳ ಕಾಲದಲ್ಲಿ ದೇವಾಲಯಕ್ಕೂ, ಆತ್ಮಲೋಕಕ್ಕೂ ಹೋಗಿ ಅಲ್ಲಿನ ಸ್ಥಿತಿಗತಿಗಳನ್ನು ತಿಳಿದುಕೊಂಡು ಬರಬೇಕೆಂಬ ಆಸೆಯುಳ್ಳ ಜನರಿದ್ದರು. ತೀರ್ಥಕ್ಷೇತ್ರಗಳು ಮತ್ತು ದೇವಾಲಯಗಳೇ ಮಹರ್ಷಿಗಳು ದೇವಲೋಕ, ಆತ್ಮಲೋಕಗಳಿಗೆ ಹೋಗಲು ಇಚ್ಛೆಯುಳ್ಳವರಾಗಿ ತಯಾರು ಮಾಡಿಟ್ಟ ಯಾನಗಳೂ ನಕಾಶೆಗಳೂ ಆಗಿವೆ. ಅವರ ಮನಸ್ಸನ್ನು ಅರಿತವರು ಇದ್ದರೆ ತಾನೇ, ಅವುಗಳನ್ನು ಹೇಗೆ ಬಳಸಿಕೊಂಡು ಪ್ರಯೋಜನ ಪಡೆಯಬಹುದು ಎಂದು ಗೊತ್ತಾಗುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, December 2, 2020

ಶ್ರೀರಂಗ ವಚನಾಮೃತ (Sriranga Vachanamruta) - 777

ಜ್ಞಾನಿಗಳು ಬಹಳ ಕರುಣೆಯಿಂದ ತುಂಬಿದವರಾಗಿ ತಮ್ಮ ಸುಖಕ್ಕೆ ಕಾರಣವಾದ ತಪಸ್ಯೆಯನ್ನು ಕಲ್ಲಿನ ಮೇಲಿಟ್ಟರು. ಸಾಹಿತ್ಯದ ಮೇಲೂ ಇಟ್ಟರು. ತಮ್ಮ ಮನೋಧರ್ಮವನ್ನು ವೀಣೆಯೇ ಮುಂತಾದ ವಾದ್ಯಗಳ ಮೇಲೂ ಇಟ್ಟರು. ಶಿಲ್ಪದ ಮೇಲೂ ಇಟ್ಟರು. ಅವರು ವೀಣೆಯಲ್ಲಿ ಶ್ರುತಿ ಮಾಡಿಟ್ಟಿದ್ದರು. ಯಾರೋ ಮಧ್ಯೆ ಶ್ರುತಿ ತಿರುಗುಸಿಬಿಟ್ಟಿದ್ದಾರೆ. ಆ ದಿವ್ಯವಾದ ಸದ್ದುಬರುತ್ತಿಲ್ಲ. ಯಾವನ ಒಂದು ಆತ್ಮಧರ್ಮವನ್ನು ಯಾವ ಪ್ರಕೃತಿಯ ಮೇಲೆ ಜ್ಞಾನಿಗಳು ಪ್ರತಿಷ್ಠೆಮಾಡಿದರೋ, ಅದರ ವ್ಯಾಖ್ಯಾನ ಅದಕ್ಕನುಗುಣವಾಗಿಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, December 1, 2020

ಶ್ರೀರಂಗ ವಚನಾಮೃತ (Sriranga Vachanamruta) - 776

ನಿದ್ರೆ ಮಾಡುತ್ತಿರುವವನು ಮೌನವಾಗಿ ನಿದ್ರೆ ಮಾಡುತ್ತಿದ್ದರೂ, ಆ ನಿದ್ರೆಯ ಮೌನವೇ ಅದರ ಸುಖವನ್ನು ವ್ಯಾಖ್ಯಾನ ಮಾಡುತ್ತೆ. ಪಕ್ಕದಲ್ಲಿದ್ದವನು 'ಸುಖವಾಗಿ ನಿದ್ರೆಮಾಡುತ್ತಿದ್ದಾನೆ' ಎಂದು ಕೊಳ್ಳುತ್ತಾನೆ. ಅಂತೆಯೇ ಕಲ್ಲಿಗೆ ಋಷಿಹೃದಯವನ್ನು ಕೊಟ್ಟಾಗ ಆ ಶಿಲೆಯ ಮೌನವೇ ಅದರ ವ್ಯಾಖ್ಯಾನವನ್ನು ಕೊಡುತ್ತದೆ. ಅಭಿಜ್ಞವಾದವನು ಅದನ್ನು ನೋಡಿದರೆ ಋಷಿಹೃದಯವನ್ನು, ಅದರ ಯೋಗನಿದ್ರೆಯನ್ನು, ಗುರುತಿಸುತ್ತಾನೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, November 30, 2020

ಶ್ರೀರಂಗ ವಚನಾಮೃತ (Sriranga Vachanamruta) - 775

ಮಹರ್ಷಿಗಳು ಆತ್ಮಯೋಗದಲ್ಲಿ ಕಂಡ ಸತ್ಯವನ್ನು ಶಿಲಾಯೋಗದಲ್ಲಿ ಸೇರಿಸಿದ್ದಾರೆ. ಅದಕ್ಕೆ ಸ್ಪರ್ಶ ಮಾಡಿ(ತಗುಲಿ)ಸಿದ್ದಾರೆ. ಅದೇ ಪ್ರತಿಷ್ಠೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, November 29, 2020

ಶ್ರೀರಂಗ ವಚನಾಮೃತ (Sriranga Vachanamruta) - 774

ಆಗಮ ಎಂದರೆ ಮೊಟ್ಟಮೊದಲು ಋಷಿಗಳ ಮನಸ್ಸಿಗೆ ಆಗತವಾದದ್ದು. (ಅಂದರೆ ಅವರ ಮನಸ್ಸಿಗೆ ಬಂದದ್ದು-ಧ್ಯಾನದಲ್ಲಿ, ತಪಸ್ಸಿನಿಂದ ಅವರು ಕಂಡು ಕೊಂಡದ್ದು) ಮತ್ತು ಋಷಿಗಳ ಮನಸ್ಸಿನಿಂದ ಮುಂದಕ್ಕೆ ಗತವಾದದ್ದು ಎಂದರೆ ಅವರ ಮನೋಧರ್ಮ ಹೊರಗೆ ವ್ಯಕ್ತರೂಪದಲ್ಲಿ ಬಂದಿದ್ದು ಮತ್ತು ಅವರ ಮತ ಅರ್ಥಾತ್ ಅಭಿಪ್ರಾಯ ಈ ಮೂರು ಸೇರಿವೆ. ಈ ಮೂರು ಅಂಶಗಳು ಅರ್ಥವಾಗದೆ ಆಗಮದ ವಿಷಯ ಅರ್ಥವಾಗದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages