Saturday, December 31, 2022

ಶ್ರೀರಂಗ ವಚನಾಮೃತ (Sriranga Vachanamruta)

ಲೋಕವು ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಕೇಳುತ್ತೆ. ಆದರೆ ಅವುಗಳನ್ನು ಕೊಟ್ಟು ಜೊತೆಗೆ ಆತ್ಮವನ್ನೂ ಕೊಟ್ಟಿದ್ದಾರೆ. ಸಗುಣ ಪ್ರಪಂಚದಲ್ಲಿರುವವರಿಗೆ ಮೊದಲು ಅದನ್ನೇ ಕೊಟ್ಟು ಆಮೇಲೆ ಉಪಾಯವಾಗಿ, ಅದರ ಮೂಲಕವೇ ಅವರನ್ನು ಸತ್ಯಕ್ಕೆ ಕರೆದುಕೊಂಡು ಹೋಗಬೇಕು. ತೆಂಗಿನಕಾಯಿ ತೆಗೆದು ಕೊಂಡು ಬಾ ಎಂದರೆ ಕರಟ, ಚಗರೆ, ಮಟ್ಟೆ ಎಲ್ಲದರ ಜೊತೆಯಲ್ಲಿಯೇ ತರಬೇಕು. ಅವುಗಳ ಜೊತೆಯಲ್ಲಿ ಅಂಟಿಕೊಂಡೇ ಜೀವನದಲ್ಲಿ ಅದು ಇರುತ್ತೆ. ಆದರೆ ಪರಿಪಕ್ವವಾದಾಗ ಅದೆಲ್ಲಾ ಬಿಟ್ಟುಹೋಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, December 27, 2022

ಶ್ರೀರಂಗ ವಚನಾಮೃತ (Sriranga Vachanamruta)

``ಮೇಲೆ ನೋಡಯ್ಯಾ, ಅಮೃತಫಲ ಕೊಡುತ್ತೇನೆ ಎಂದರೆ ಮೇಲೆ ನೋಡಲೂ ಇಷ್ಟಪಡುವುದಿಲ್ಲ. ಕೆಳಗೇ ನೋಡುತ್ತಾನೆ. ಹಾಗೆ  ಇಂದ್ರಿಯ ಪ್ರಪಂಚದಲ್ಲೇ, ಅವುಗಳ ಅವಲಂಬನದ ಮೇಲೆಯೇ ಜೀವನ ಮಾಡುವಾಗ ಜೀವನದ ಮೂಲದ ಕಡೆ ಮನಸ್ಸು  ಹರಿಸಲೂ ಇಷ್ಟಪಡುವುದಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, December 24, 2022

ಶ್ರೀರಂಗ ವಚನಾಮೃತ (Sriranga Vachanamruta)

ಮರಹತ್ತಿರುವವನು ಎಷ್ಟೇ ಭರವಸೆಕೊಟ್ಟರೂ ಕೈ ಬಿಟ್ಟು ನಮಸ್ಕಾರ ಮಾಡಯ್ಯಾ ಎಂದರೆ ಭಯಪಡುತ್ತಾನೆ. ಅಂತೆಯೇ ಜೀವನವೃಕ್ಷದ ಶಾಖೆಗಳಾದ ಇಂದ್ರಿಯಗಳ ಕೈಗೆ ಸಿಕ್ಕಿ ಒದ್ದಾಡುತ್ತಿರುವ ಜೀವವು ಭಗವಂತನು ನನ್ನನ್ನು ಆಶ್ರಯಿಸು ಎಂದು ಕರೆದರೂ ಅವುಗಳ ಕೈ ಬಿಡುವುದಕ್ಕೆ ಇಷ್ಟಪಡುವುದಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta)

ಜೀವನವು ಜ್ಞಾನ-ಕರ್ಮ ಎರಡರ ಸಮ್ಮೇಳನದಿಂದ ಕೂಡಿದೆ. ಇವುಗಳಲ್ಲಿ ಜ್ಞಾನವು ಮುಖ್ಯಜ್ಞಾನಕ್ಕನುಗುಣವಾದ ಕರ್ಮವಿರಬೇಕು. ವ್ಯತ್ಯಾಸವಾದರೆ ಜೀವನ ಕೆಡುತ್ತೆ. ಎಲ್ಲವೂ ತಮಗನುಗುಣವಾದ ಕ್ರಿಯೆಯನ್ನು ಮಾತ್ರ  ಒಪ್ಪಿಕೊಳ್ಳುತ್ತವೆ. ಇಲ್ಲವಾದರೆ ಅದನ್ನು ಪ್ರತಿಭಟಿಸುತ್ತವೆ. ಕಣ್ಣು ಮೆಣಸಿನ ಪುಡಿಯನ್ನು ಹಾಕಿದರೆ ಇಷ್ಟಪಡುತ್ತದೆಯೇ? ಕಿವಿ ನಸ್ಯ ಹಾಕಿಕೊಳ್ಳಲು ಇಷ್ಟಪಡುತ್ತದೆಯೇ? ಜ್ಞಾನಸ್ವರೂಪಿಯಾದ ಆತ್ಮನೂ ತನಗೆ ವಿರುದ್ಧವಾದುದನ್ನು ಬಯಸುವುದಿಲ್ಲ. ಸ್ವರೂಪದ  ಜ್ಞಾನ ಮತ್ತು ಅದಕ್ಕನುಗುಣವಾದ  ಕರ್ಮ, ಹೀಗೆ  ಜ್ಞಾನ-ಕರ್ಮ  ಎರಡರ ಸಮ್ಮೇಳನದಿಂದ ಜೀವನ ನಡೆದ ಪಕ್ಷದಲ್ಲಿ ಜೀವನ ಸುವ್ಯವಸ್ಥಿತವಾಗಿರುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, December 11, 2022

Sriranga Mahaguru - Nectarine Nuggets

He alone is the father who discerns and brings forth what flows from the Cosmic Parents towards the Jīva. He indeed is the father who answers the question: "Father! What have you brought here?" with these words: "I have brought forth Jñāna". When that Jñāna on its own accord wishes to permeate, the one who harbours and nourishes it is the mother. And the one who places this nourished child in the state of Jñāna is called the Guru (Preceptor). Varied jobs have to be performed at various stages of one's Life.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, December 10, 2022

Sriranga Mahaguru - Nectarine Nuggets

While beseeching the hand of a girl for a bride it is customary to say: "Please suffuse our house with your daughter;" it does not imply a very fat lady to be brought as a bride! It should be construed as a request for "infusing the house with the inner Light of the Ātman as a grand matriarch".

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, December 8, 2022

ಶ್ರೀರಂಗ ವಚನಾಮೃತ (Sriranga Vachanamruta)

ಮನುಷ್ಯನಿಗೆ ಏನು ಬೇಕು? ಅಂಗೋಪಾಂಗಗಳೆಲ್ಲಾ ಬೇಕು. ಎಲ್ಲಕ್ಕೂ ಪ್ರಧಾನವಾಗಿ ಜೀವ ಬೇಕು. ಜೀವವನ್ನು ಬೇರೆಡೆ ಇಟ್ಟು ಬಾ ಎಂದರೆ ಹಾಗೆ ಬರಲಾಗುವುದಿಲ್ಲ. ಜೀವದ ಒಂದು ವ್ಯವಹಾರಕ್ಕಾಗಿ ಅಂಗಾಂಗಗಳು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, December 6, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನವು ಈಶ್ವರಾಧಿಷ್ಠಿತವಾದದ್ದು. ಇಲ್ಲಿ ಈಶ್ವರ ಉಂಟು. ಜೀವ ಉಂಟು. ಅವೆರಡೂ ಬೇರೆಯಾಗದಂತೆ ಭರಿಸುವ ಧರ್ಮವುಂಟು. ಅಂತೆಯೇ ಧರ್ಮಕ್ಕೆ ಲೋಪಬಾರದಂತೆ ಶಾಸನ ಮಾಡುವ ದಂಡವುಂಟು. ಅದನ್ನು ಅಪಹರಿಸದ ವ್ಯವಹಾರವೂ ಉಂಟು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, December 4, 2022

Sriranga Mahaguru - Nectarine Nuggets

A mother brings up her child which, coming of age, in turn rears its own child. If the creation is carried forward this way and the creeper of progeny pervades without contradicting the Will of the Lord, then all the Ṛṣis and Gods would be delighted. The woman who nourishes her off-springs in this manner is indeed worthy of worship.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, December 3, 2022

Sriranga Mahaguru - Nectarine Nuggets

If it is merely a question of nurturing a child, it is common in all the animals too. However, the method of child- upbringing in the family of a Jñāni involves bringing forward the Ātman, keeping its Effulgence, Ānanda, Jñāna and Purity intact.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, December 1, 2022

ಶ್ರೀರಂಗ ವಚನಾಮೃತ (Sriranga Vachanamruta)

ನಮ್ಮ ಒಂದು ಶರೀರಕ್ಕೆ ಏನು ಬೆಲೆ ಎಂದು ಕೇಳಿದರೆ ಸ್ವಾಮಿ, ಇದರಲ್ಲೇನಿದೆ? ಇಷ್ಟು ಕ್ಯಾಲ್ಷಿಯಂ, ಸ್ವಲ್ಪ ಐರನ್ ಎಂದು, ಒಟ್ಟು ಇವತ್ತಿನ ಬೆಲೆಯಲ್ಲಿ ಒಂದು ಹನ್ನೆರಡಾಣೆ ಸಾಮಾನು ಆಗಬಹುದು ಎನ್ನುತ್ತಾನೆ. ಅದರ ಭೌತಿಕ ಉಪಯೋಗಗಳನ್ನು ಹೇಳಬಹುದು. ಆದರೆ ಅದೇ ಮಹರ್ಷಿಗಳನ್ನು ಶರೀರದ ಬೆಲೆಯೇನು? ಎಂದು ಕೇಳಿದರೆ ಅದು ಅನರ್ಘ್ಯವಾದುದು, ಇಡೀ ಜಗತ್ತಿನಲ್ಲಿ ಇನ್ನು ಯಾವುದೂ ತರಹ ಬೆಲೆ ಬಾಳುವ ವಸ್ತುವಿಲ್ಲ ಎನ್ನುತ್ತಾರೆ.
 
To know more about Astanga Yoga Vijnana Mandiram (AYVM) please visit our Official Website, Facebook and Twitter pages