Wednesday, October 28, 2020

ಶ್ರೀರಂಗ ವಚನಾಮೃತ (Sriranga Vachanamruta) - 742

ಮಹಾತ್ಮರ ಅಂತರಂಗವನ್ನು ಶಿಲೆಯಮೇಲೆ ಕೂರಿಸಿದಾಗ, ಆ ಶಿಲೆಯಿಂದ ಅವರ ಅಂತರಂಗದ ಕಡೆಗೆ ಹೋಗುವಂತಾದರೆ, ವೃತ್ತವು ಸೇರಿಕೊಂಡು ಪೂರ್ಣವಾಗುತ್ತದೆ.  
To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 27, 2020

ಶ್ರೀರಂಗ ವಚನಾಮೃತ (Sriranga Vachanamruta) - 741

ಕಲ್ಲುಸಕ್ಕರೆ, ಬೆಣಚುಕಲ್ಲು ಎರಡೂ ಒಂದೇರೀತಿ ಕಾಣಬಹುದು. ಆದರೆ ಸವಿಯರಿತ ನೊಣ ಬೆಣಚುಕಲ್ಲಿನ ಮೇಲೆ ಕೂಡುವುದಿಲ್ಲ. ಸಕ್ಕರೆಯ ಮೇಲೆ ಕುಳಿತು ಸವಿಯನ್ನು ಆಸ್ವಾದಿಸುತ್ತದೆ. ಅಂತೆಯೇ ತತ್ತ್ವಜ್ಞರು ಶಿಲಾಮೂರ್ತಿಯಲ್ಲಿ ಕೇವಲ ಕಲ್ಲನ್ನು ಕಾಣುವುದಿಲ್ಲ. ಅದರಲ್ಲಿ ಮೂಡಿರುವ ದೇವನನ್ನು ನೋಡುತ್ತಾರೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, October 26, 2020

ಶ್ರೀರಂಗ ವಚನಾಮೃತ (Sriranga Vachanamruta) - 740

ಶಾಂತಿಧಾಮಕ್ಕೆ ಹೋಗಿ ಶಾಂತಿಯನ್ನು ತುಂಬಿಕೊಂಡು ಅದನ್ನು ಇಲ್ಲೂ ನಡೆಸುವಂತೆ ಆಗಬೇಕು. ಅಲ್ಲಿಗೆ ಹೋಗುವುದಾದರೂ ಏತಕ್ಕೆ? ಇಂದ್ರಿಯಗಳ ದ್ವಾರಾ ಅತೀಂದ್ರಿಯ ಜೀವನಕ್ಕೆ ಬೇಕಾದುದನ್ನು ಸಂಪಾದಿಸಲೋಸುಗ. ಹಾಗೆ ಹೋದಾಗ ಅಲ್ಲಿಯೂ ಇಂದ್ರಿಯಕ್ಕೆ ಬೇಕಾದ ವಿಷಯಗಳನ್ನು ಮಾತ್ರ ತೆಗೆದುಕೊಂಡು ಬರುವುದಾದರೆ ಏನು ಪ್ರಯೋಜನ? ತಿರಿಪ್ಪಲ್ಲಾಣಿಗೆ ಹೋಗಿದ್ದೆ. ತಿರುಪ್ಪಲ್ಲಾಣಿಯ ಪಾಯಸ ಬಲುಸೊಗಸು. ಹಾಗೆಯೇ ೪೦ ದೊನ್ನೆ ಬಗ್ಗಿಸಿ ಕೊಂಡುಬಿಟ್ಟೆ" ಎಂದು ಕೊಂಡಾಡುವುದು! "ಇಷ್ಟು ಖರ್ಚುಮಾಡಿ ಪಾಯಸಕುಡಿಯಲು ತಿರುಪ್ಪಲ್ಲಾಣಿಗೆ ಹೋಗಬೇಕಿತ್ತೇ? ಮನೆಯಲ್ಲಿ ಅಂತಹ ಪಾಯಸ ಮಾಡುತ್ತಿದ್ದೆವಲ್ಲಾ" ಎಂದು ಗೃಹಿಣಿ ಹೇಳಿದರೆ "ಏನೇ ಆಗಲಿ, ಇಷ್ಟು ಖರ್ಚುಮಾಡಿ ಪಾಯಸ ತಿಂದಂತೆ ಆಗುತ್ತಿತ್ತೇ?" ಎನ್ನ ಬಹುದು. ಒಟ್ಟಿನಲ್ಲಿ ಆದದ್ದೇನು ಅಂದರೆ ೪೦ ರೂಪಾಯಿ ಖರ್ಚುಮಾಡಿ ೪ ರೂಪಾಯಿ ಪಾಯಸ ತಿಂದದ್ದು, ೩೬ ರೂ. ನಷ್ಟ! ಇಷ್ಟುತಾನೆ, ಅದರಿಂದ ಆದ ಫಲಿತಾಂಶ? ಸರಿಯಾದ ದೃಷ್ಟಿಕೋಣವಿಲ್ಲದಿದ್ದರೆ ಅಷ್ಟರಲ್ಲೇ ಆಗುತ್ತೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, October 25, 2020

ಶ್ರೀರಂಗ ವಚನಾಮೃತ (Sriranga Vachanamruta) - 739

ವೈಕುಂಠಹಸ್ತ, ವಜ್ರದ ಅಂಗಿಗಳಿಗಾಗಿ ಶ್ರೀನಿವಾಸರ ದರ್ಶನ. ಹೀಗೆ ನಮ್ಮ ಪದಾರ್ಥಗಳನ್ನೇ ದೇವರಮೇಲೆ ಹಾಕಿ ಸಂತೋಷಪಡುತ್ತೇವೆ. ದೇವರ ಆತ್ಮಭಾವಗಳನ್ನು ನಮ್ಮದು ಮಾಡಿಕೊಳ್ಳುವುದಿಲ್ಲ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, October 24, 2020

ಶ್ರೀರಂಗ ವಚನಾಮೃತ (Sriranga Vachanamruta) - 738

ಮೂಳೆ ಕಡಿಯುತ್ತಿದ್ದ ನರಿಗೆ ಬಾಯಲ್ಲಿ ರಕ್ತ ಬಂದು, ಆ ಮೂರ್ಖಪಶು ತನ್ನ ರಕ್ತವನ್ನೇ 'ಆಹಾ! ಎಷ್ಟು ಚೆನ್ನಾಗಿದೆ!' ಎಂದು ಆಸ್ವಾದಿಸುವಂತೆ ಮೂರ್ಖರು ತಮ್ಮ ಆಸ್ತಿ, ಆಭರಣಗಳನು ದೇವರ ಮೇಲೆ ಇಟ್ಟು ಆನಂದಪಡುತ್ತಾರೆ. ದೇವರದೇ ಆದ ಜ್ಞಾನ, ಆನಂದ ಮುಂತಾದ ಆಭರಣಗಳನ್ನು ತಾವು ಧರಿಸುವುದಿಲ್ಲ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, October 23, 2020

ಶ್ರೀರಂಗ ವಚನಾಮೃತ (Sriranga Vachanamruta) - 737

ಈಗ ನಮ್ಮ ಮನೆಯ ಕಂಬಳಿಯನ್ನು ದೇವಾಲಯದಲ್ಲಿ ಹಾಕಿ, ಅದರ ವರ್ಣನೆಯಿದಯೇ ಹೊರತು, ಅಲ್ಲಿರುವ ಭಗವಂತನ ಪೀತಾಂಬರದ ವರ್ಣನೆಯಿಲ್ಲ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 22, 2020

ಶ್ರೀರಂಗ ವಚನಾಮೃತ (Sriranga Vachanamruta) - 736

ಸಪ್ತರ್ಷಿಗಳು ಶ್ರೀನಿವಾಸನ ದರ್ಶನ ಮಾಡುವ ವಿಷಯ ವಾಸ್ತವ. ಆದರೆ ಶ್ರೀನಿವಾಸನ ಮೂರ್ತಿಯ ಪಕ್ಕದಗೋಡೆಯಲ್ಲಿ ಕಟ್ಟಿರುವ ಕಣಜದಹುಳುಗಳ ಗೂಡನ್ನೇ ಆ ಋಷಿಗಳು ದೇವರ ದರ್ಶನಕ್ಕೆ ಬರುವ ಮಾರ್ಗವೆಂದೂ, ಆ ಕಣಜಗಳಿಂದ ಕಡಿಸಿಕೊಂಡೇ ಅವರು ಬರುವರೆಂದೂ ಮಹಾತ್ಮ್ಯ ಹೇಳುವ ಮೂಢರು ಒಂದು ಕ್ಷೇತ್ರದಲ್ಲಿ ಸಿಕ್ಕಿದರು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, October 21, 2020

ಶ್ರೀರಂಗ ವಚನಾಮೃತ (Sriranga Vachanamruta) - 735

ಶಾಂತಿಧಾಮಕ್ಕೆ ಹೋಗಿ ಅಲ್ಲಿನ ಶಾಂತಿಯನ್ನು ನಮ್ಮ ಧಾಮಕ್ಕೂ ತಂದುಕೊಂಡು ಅದನ್ನು ವರ್ಣಿಸಿದರೆ ಅದರಲ್ಲಿ ಸೌಖ್ಯವಿರುತ್ತೆ. ಅದುಬಿಟ್ಟು ಆಶಾಂತಿಧಾಮದಲ್ಲಿಯೂ ನಮ್ಮ ಮನೆಯ ಅಶಾಂತಿಯನ್ನು ತುಂಬಿ ಅದನ್ನೇ ಬಣ್ಣಿಸುವುದಾದರೆ ಅಲ್ಲಿಗೇಕೆ ಹೋಗಬೇಕು? 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 20, 2020

ಶ್ರೀರಂಗ ವಚನಾಮೃತ (Sriranga Vachanamruta) - 734

ಒಂದು ದೊಡ್ಡ ದೇವಾಲಯದ ಮುಂದೆಹೋಗಿ 'ದೇವರುಂಟು' ಎಂದರೆ, ಪ್ರತಿಧ್ವನಿ ಹಾಗೆಯೇ ಬರುತ್ತದೆ. "ದೇವರಿಲ್ಲ" ಎಂದರೆ ಹಾಗೆಯೇ ಪ್ರತಿಧ್ವನಿಸುತ್ತದೆ. 'ದೇವರು ಪ್ರಕಾಶ-ಆನಂದಗಳಿಂದಕೂಡಿದ್ದಾನೆ' ಎಂದರೆ ಹಾಗೆಯೇ ಪ್ರತಿಧ್ವನಿಸುತ್ತದೆ. ಹೀಗೆ ಗುಡಿಯಮುಂದೆ ಬೊಬ್ಬೆ ಹಾಕಿದರೆ ಪ್ರತಿಧ್ವನಿಯೂ ಬೊಬ್ಬೆಯೇ ಆಗಿದೆ. ಗುಡಿಗಳಿಗೆ ಹೋಗಿ ಬೊಬ್ಬೆಹಾಕಿ, ನಿಮ್ಮ ಬೊಬ್ಬೆಯನ್ನೇ ಮತ್ತೆ ಕೇಳಿ ಬರುತ್ತಿದ್ದೀರಿ. ಈ ಬೊಬ್ಬೆಯಲ್ಲಿ ಗುಡಿಯಕಡೆಯಿಂದ ಬರುವ ನಾದ ಮರೆತು ಹೋಗಿದೆ. ಗುಡಿಯದೇ ಆದ ನಾದವೇನು? ಅದನ್ನು ಕೇಳಿ. ನಿಮ್ಮ ಕೂಗನ್ನು ಕೇಳಲು ಅಲ್ಲಿ ಹೋಗಬೇಡಿ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, October 19, 2020

ಶ್ರೀರಂಗ ವಚನಾಮೃತ (Sriranga Vachanamruta) - 733

ತಲೆಯಲ್ಲಿ ಪ್ರವಾಸದಭೂತ ಸೇರಿಸಿಕೊಂಡು, ಏನೋಮಾಡಿ ಆಭೂತ ಓಡಿಸಿದರೆ ನೆಮ್ಮದಿ ಎನ್ನುವುದುಬೇಡಿ. ಇವನೇ ಬೀದಿಯಲ್ಲಿ ಹೋಗಿ ಕಾಲಿಗೆ ಮುಳ್ಳುಚುಚ್ಚಿಕೊಂಡು ಬಂದು, ಆ ಮುಳ್ಳು ತೆಗೆದು, ಈಗ ಬಹಳನೆಮ್ಮದಿಯಾಗಿದೆ ಎನ್ನುವಂತಾಗಬಾರದು. ನೋಡಬೇಕು ಎಂಬ ಚಪಲತೀರಿಸಿಕೊಳ್ಳುವುದಕ್ಕಾಗಿ ಯಾತ್ರಾವ್ಯಾಜದಿಂದ ಭ್ರಮಣ ಮಾಡಬೇಡಿ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, October 18, 2020

ಶ್ರೀರಂಗ ವಚನಾಮೃತ (Sriranga Vachanamruta) - 732

ಅಂತರ್ದೃಷ್ಟಿ, ಯೋಗದೃಷ್ಟಿ ಇಲ್ಲದಬಳಿಕ, ನಮ್ಮ ಭೋಗವಿಲಾಸವನ್ನೇ ನೋಡಿಬರಲು ದೇವಾಲಯ ತೀರ್ಥಕ್ಷೇತ್ರಗಳಿಗೆ ಹೋಗಿಬರುವುದಾಗಿದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, October 17, 2020

ಶ್ರೀರಂಗ ವಚನಾಮೃತ (Sriranga Vachanamruta) - 731

ಕಲೆಗಳೆಲ್ಲವೂ ಭಗವನ್ಮೂಲವಾಗಿಯೇ ಬಂದಿರುವುದರಿಂದ ಅವುಗಳ ಮೂಲದಲ್ಲಿ ಭಗವಂತನೇ ಇದ್ದಾನೆ. ಯಾತ್ರಾ-ಸ್ಥಳಗಳಲ್ಲಿ ಕಲ್ಲು, ಮರ ಮುಂತಾದ್ದನ್ನು ದರ್ಶನಮಾಡುವುದರ ಆಶಯವೇನು ಎಂದರೆ ಅವುಗಳ ಹಿಂದಿರುವ ಸದಾಶಯದ ಪ್ರತಿಬಿಂಬವಾಗಿ ಅವು ಇರುವುದರಿಂದ, ಆ ಬಿಂಬವನ್ನರಿಯುವುದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, October 16, 2020

ಶ್ರೀರಂಗ ವಚನಾಮೃತ (Sriranga Vachanamruta) - 730

ತೀರ್ಥಕ್ಷೇತ್ರಗಳ ಪ್ರವಾಸ ಕೇವಲ ಪ್ರಯಾಸವಾಗೇ ಉಳಿಯದೆ ಇರುವಂತೆ ಇನ್ನಾವುದಾದರೂ ಗುಟುಕನ್ನು ಅಲ್ಲಿಂದ ತೆಗೆದುಕೊಂಡು ಬರುವಂತಾಗಬೇಕು. ಹಾಗೆ ಅನುಕೂಲವಾಗಲು ಮರ್ಮವರಿತವರ ಶಿಕ್ಷಣ ಅಗತ್ಯ. ಅಂತಹವರ ಮಾತುಗಳು ಒಂದು ಛತ್ರಿಯಂತೆ ಸಹಾಯಕವಾಗಬಹುದು. ಬಿಸಿಲು ಇರುವಾಗ ತಂಪಿಗಾಗಿ ಅದುಬೇಕು. ಕೈಗೆ ಹೊರುವ ಶ್ರಮವಿದೆ. ಆದರೂ ಅದು ಬಿಸಿಲಿನಲ್ಲಿ ತಂಪುಕೊಡೂತ್ತಿದ್ದು ಸುಖಕ್ಕೆ ಕಾರಣವಾಗುತ್ತದೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 15, 2020

ಶ್ರೀರಂಗ ವಚನಾಮೃತ (Sriranga Vachanamruta) - 729

ವಿಕಾರವಾದ ಕಲ್ಲು, ಇಟ್ಟಿಗೆ, ಮೊದಲಾದ ವಸ್ತುಗಳಿಂದ ದೇವಾಲಯವನ್ನು ಕಟ್ಟಿದರೂ 'ಅಲ್ಲಿ ನಿರ್ವಿಕಾರವಾದ ವಸ್ತುವಿದೆ' ಎಂದು ಅದನ್ನು ನೋಡಲು ಹೋಗಬೇಕು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, October 14, 2020

ಶ್ರೀರಂಗ ವಚನಾಮೃತ (Sriranga Vachanamruta) - 728

ಮನಷ್ಯನ ಕಾಮಕ್ರೋಧಾದಿಗಳಿಗೆ ಲೌಕಿಕಜೀವನದಲ್ಲಿ ಬೇಕಾದಷ್ಟು ಅವಕಾಶದೊರೆಯುತ್ತದೆ. ಆದರೆ ಶಾಂತಿ, ಸಂಯಮ, ಭಕ್ತಿ ಇವುಗಳಿಗೆ ಅವಕಾಶವೆಲ್ಲಿ? ಅವುಗಳಿಗೂ ಅವಕಾಶ ದೊರೆಯುವಸಲುವಾಗಿ ಒಂದು ದೇವಮಂದಿರ-ಒಬ್ಬ ದೇವರು ಬೇಕು. ಶಾಂತಿ, ಸಂಯಮ, ಭಕ್ತಿ ಇವುಗಳಿಗೆ ಚೆನ್ನಾಗಿ ಅವಕಾಶಕೊಟ್ಟು ಬೆಳೆಸಿಕೊಂಡರೆ ಅದರಫಲವಾಗಿಯೇ ಭಗವಂತನು ಲಭಿಸುತ್ತಾನೆ. ಆ ಫಲದಬಗ್ಗೆ ನಮಗೆ ಆಸೆಯಾಗಲೀ, ಕಲ್ಪನೆಯಾಗಲಿ, ಸ್ವಾಭಾವಿಕವಾಗಿ ಮೊದಲು ಉಂಟಾಗದೇಹೋದರೂ ಅದನ್ನು ನಮಗೆ ಉಂಟುಮಾಡುವಸಲುವಾಗಿಯೇ ಮಹರ್ಷಿಗಳು ನಮ್ಮ ಸಂಪ್ರದಾಯದಲ್ಲಿ ದೇವಸ್ಥಾನಕ್ಕೆ ಹೋಗಿ ದೇವರದರ್ಶನವನ್ನು ಮಾಡಿ ಬರುವುದು, ತೀರ್ಥಕ್ಷೇತ್ರಗಳಿಗೆ ಯಾತ್ರೆಮಾಡುವುದು, ಎಂಬುದನ್ನು ಬೆಳೆಸಿದ್ದಾರೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 13, 2020

ಶ್ರೀರಂಗ ವಚನಾಮೃತ (Sriranga Vachanamruta) - 727

ಜೀವಮಣಿಯೆಂಬ ಪದ್ಮದ ಒಂದು ಭಾಗವಾಗಿರುವ ಮಣಿಕರ್ಣಿಕೆ ಇದು. ಇದು ಸೃಷ್ಟಿಗೆ ಆದಿಯಾದ ತೀರಸ್ಥಾನದಲ್ಲಿರುವುದರಿಂದ ಈಮಣಿಕರ್ಣಿಕೆಯಲ್ಲಿ ಸ್ನಾನಮಾಡಿದವರಿಗೆ ಮುಕ್ತಿಸಿದ್ಧಿ. ಭೌತಿಕ ಮಣಿಕರ್ಣಿಕೆ ಇದರ ಪ್ರತೀಕವಷ್ಟೇ? ಒಳ ಭಾವವರಿತು ಸ್ನಾನಮಾಡಿದಾಗ ಮಾತ್ರ ಹರಿಹರ ಸಾಯುಜ್ಯ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, October 12, 2020

ಶ್ರೀರಂಗ ವಚನಾಮೃತ (Sriranga Vachanamruta) - 726

ಯಾವ ಚಿದಂಬರದ ಕಡೆಯಿಂದ ವಿಷಯ ಬಂದಿದೆಯೋ, ತಿರುಗಿ ಯಾವುದನ್ನಿಟ್ಟಾಗ ಚಿದಂಬರದಲ್ಲಿಯೇ ನಿಲ್ಲಬೇಕೋ, ಅದಕ್ಕನುಗುಣವಾಗಿ ಯಾತ್ರೆ ನಡೆಯಬೇಕು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, October 11, 2020

ಶ್ರೀರಂಗ ವಚನಾಮೃತ (Sriranga Vachanamruta) - 725

ತ್ರಿಮೂರ್ತಿಗಳು ಸೇರಿರುವ ಜಾಗವೇ ಚಿದಂಬರ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, October 10, 2020

ಶ್ರೀರಂಗ ವಚನಾಮೃತ (Sriranga Vachanamruta) - 724

(ತೀರ್ಥಕ್ಷೇತ ಒಂದರಲ್ಲಿದ್ದ ಅಶ್ವತ್ಥವೃಕ್ಷ ವೇದಾಂತ ದೇಶಿಕರ ಕಾಲದ್ದು ಎಂಬ ಐತಿಹ್ಯದ ಆಧಾರದ ಮೇಲೆ ಆಡಿದ ಮಾತು) ಊರ್ಧ್ವಮೂಲವೂ, ಅಧಶ್ಶಾಖವೂ ಆದ ಸನಾತನ ಅಶ್ವತ್ಥವುಂಟು. ಅದನ್ನು ಸೂಚಿಸುವ ಹೊರಗಿನ ಅರಳಿಯಮರದ ಬುಡದಲ್ಲಿ ಜ್ಞಾನಿಯೊಬ್ಬನು ತಪಸ್ಸುಮಾಡಿ ಪಾವನವಾದ ಅಶ್ವತ್ಥವೂ ಇರಬಹುದು. ಆದರೆ ಸಾವಿರಾರು ವರ್ಷಕಾಲವಾದಮೇಲೂ ಅದೇ ಮರ ಹಾಗೆಯೇ ಇರುವುದೇ? 'ದೇಶಿಕರಕಾಲದಿಂದಲೂ ಹಾಗೆಯೇ ಇರುವ ಅಶ್ವತ್ಥ ಇದು'-ಎಂದರೆ ಮೂಢನಂಬಿಕೆ. ದೇವಾಲಯದವರು ಈಗ ತೋರಿಸುವ ಮರಕ್ಕೆ ೩೦ ವರ್ಷಗಳಾಗಿರಬಹುದು ಅಷ್ಟೇ. ಆದರೆ ಈ ಮರವು ಯಾವುದರ ಪ್ರತೀಕವಾಗಿದೆಯೋ ಆ ಅಶ್ವತ್ಥವು ಸನಾತನ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, October 9, 2020

ಶ್ರೀರಂಗ ವಚನಾಮೃತ (Sriranga Vachanamruta) - 723

ಅಕ್ಕಸಾಲೆಯು ಮೊದಲು ಒಂದು ಮೇಣದ ಬೊಂಬೆಯನ್ನು ಮಾಡಿಕೊಳ್ಳುತ್ತಾನೆ. ಆಮೇಲೆ ಅದರಂತೆ ಒಂದು ಚಿನ್ನದ ಬೊಂಬೆಯನ್ನು ಮಾಡುತ್ತಾನೆ. ಇಲ್ಲಿ ಮೊದಲು ಮೇಣದ ಬೊಂಬೆಯಾಗಿದ್ದರೂ ಒಂದು ಚಿನ್ನದ ಬೊಂಬೆಗೆ ಹಾದಿಯಾಯಿತು. ಹಾಗೆಯೇ ಜನಗಳನ್ನು ಹತ್ತಿರಕ್ಕೆ ಎಳೆದುಕೊಳ್ಳಲು ಕ್ಷೇತ್ರಗಳಲ್ಲಿ ವಿಧವಿಧವಾಗಿ ಐತಿಹ್ಯಗಳನ್ನು ಹೇಳುತ್ತಾರೆ. ಆದರೆ ಈ ಐತಿಹ್ಯಗಳಲ್ಲೇ ನಿಂತುಬಿಡಬಾರದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 8, 2020

ಶ್ರೀರಂಗ ವಚನಾಮೃತ (Sriranga Vachanamruta) - 722

ಬಹಳ ಗಲಾಟೆಮಾಡುವ ಮಕ್ಕಳನ್ನು ಕರೆಯಬೇಕಾದಾಗ ಸುಮ್ಮನೆ ಕೂಗಿದರೆ ಬರುವುದಿಲ್ಲ. ಬಾಯಲ್ಲಿ ಏನೋಹಾಕಿ ತಿನ್ನುತ್ತಿರುವ ಮುಖಮುದ್ರೆ ನಟಿಸಿದರೆ ಅವು ಬರುತ್ತವೆ. ಆಗ ಅವುಗಳನ್ನು ಹಿಡಿದುಕೊಳ್ಳಬಹುದು. ಹಾಗೆಯೇ ಜ್ಞಾನಿಗಳೂ ಪ್ರಕೃತಿಯೊಳಗೆ ಬಿದ್ದು ಚಂಡಿಮಾಡುತ್ತಿರುವವರನ್ನು ಶಾಂತಿಗೆ ತರಲು, ತಮ್ಮ ಬಳಿಗೆ ಆಕರ್ಷಿಸಿಕೊಳ್ಳಲು ಅನುಗುಣವಾದ ಕೆಲವು ಯುಕ್ತಿಗಳನ್ನು ಮಾಡುತ್ತಾರೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, October 7, 2020

ಶ್ರೀರಂಗ ವಚನಾಮೃತ (Sriranga Vachanamruta) - 721

ಸೃಷ್ಟಿಯಲ್ಲಿ ಶಿಲ್ಪವಿದೆ. ನೈಸರ್ಗಿಕವಾದ ಶಿಲ್ಪಗಳು ಬೇಕಾದಷ್ಟಿವೆ. ಅಂತೆಯೇ ಅದನ್ನು ಬೆಳೆಸಿಕೊಂಡು ರಚಿಸಿರುವ ಶಿಲ್ಪಗಳೂ ಇವೆ. ಈ ತೀರ್ಥಕ್ಷೇತ್ರಗಳಲ್ಲಿ ಮನುಷ್ಯತ್ವದಿಂದ ದೇವತ್ವಕ್ಕೆ ಕೊಂಡೊಯ್ಯುವ ಯುಕ್ತಿಕಲ್ಪಿತ ಪ್ರಯೋಗಗಳೂ ಬೇಕಾದಷ್ಟಿರುತ್ತವೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 6, 2020

ಶ್ರೀರಂಗ ವಚನಾಮೃತ (Sriranga Vachanamruta) - 720

ಪಾಮರನನ್ನು ಅಮರನನ್ನಾಗಿ ಮಾಡಲು ಮಹರ್ಷಿಗಳು ಇಪ್ಪತ್ತನಾಲ್ಕು ಮೆಟ್ಟಿಲಿನ ಒಂದು ಸೋಪಾನವನ್ನು ಕಟ್ಟಿದರು. ಆ ಸೋಪಾನದ ಮೇಲೆ ಭಗವಂತನನ್ನು ಇಳಿಸಿದರು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, October 5, 2020

ಶ್ರೀರಂಗ ವಚನಾಮೃತ (Sriranga Vachanamruta) - 719

ಸೂರ್ಯನ ಧರ್ಮವು ಕಾವು ಮತ್ತು ಪ್ರಕಾಶ ಎಂದು ಇಟ್ಟುಕೊಂಡರೆ ಅದು ವ್ಯಕ್ತಗೊಳ್ಳಲು ಸಾಧನವಾಗಿ ಒಂದು ನೆಲವೋ, ಗೊಡೆಯೋ, ಬಾಗಿಲೋ, ಆಗುತ್ತದೆ. ಆದರೆ ಸೂರ್ಯನೇ ಇಲ್ಲದಿದ್ದರೆ ಆ ಸಾಧನಗಳಲ್ಲಿ ಪ್ರಕಾಶವಾಗಲೀ, ಕಾವಾಗಲೀ ಕಾಣುವುದಿಲ್ಲ. ಹಾಗೆಯೇ ಬ್ರಹ್ಮಭಾವವು ಇಲ್ಲದಿದ್ದರೆ ಈ ತೀರ್ಥಕ್ಷೇತ್ರಗಳಿಂದ ಯಾವ ಪ್ರಯೋಜನವೂ ಇರಲಾರದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, October 4, 2020

ಶ್ರೀರಂಗ ವಚನಾಮೃತ (Sriranga Vachanamruta) - 718

ಯಾವ ಸಾಧನವೇ ಆಗಲಿ ಅದು ನಮ್ಮನ್ನು ಸಾಧ್ಯದೆಡೆಗೆ ಕರೆದೊಯ್ಯಬೇಕು. ಅಂತೆಯೇ ತೀರ್ಥಕ್ಷೇತ್ರಗಳೂ ನಮ್ಮನ್ನು ಮಹರ್ಷಿಗಳ ಮನೊಧರ್ಮದೆಡೆಗೆ ಕೊಂಡೊಯ್ಯುವ ನಕ್ಷೆಗಳಾಗಬೇಕು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, October 3, 2020

ಶ್ರೀರಂಗ ವಚನಾಮೃತ (Sriranga Vachanamruta) - 717

ತೀರ್ಥಗಳಲ್ಲೇನಿದೆ? ಬರೀ ವಾಟರ್ (Water) ತಾನೇ? ಎಂದರೆ ಅದು ಒಂದು ವಾಟರ್ ಆದರೂ ವಾಟರ್ನ ಹಿಂದೆ ಎನರ್ಜಿ (Energy) (ಶಕ್ತಿ) ಇದೆಯಲ್ಲಾ ಅದರ ಮೇಲೆ ನಿಗಾ ಇಟ್ಟು ಮಾತಾಡಬೇಕು. ಕೇವಲ ವಾಟರ್ ನೋಡಿದರೆ, ಮ್ಯಾಟರ್ (Matter) ಸಿಗುವುದಿಲ್ಲ. ಅದರ ಮೇಲೆ ಒಳ್ಳೆ ಸಾಹಿತ್ಯವಿರಬೇಕು. ಒಳ್ಳೆಯ ಭಾವದಿಂದ ತೀರ್ಥವಾಗಿ ಮಾಡಬೇಕು. ಅಂತಸ್ತೀರ್ಥಭಾವವನ್ನು ಹರಿಸಿ ಅದರ ಸಹಿತವಾದ ಸಾಹಿತ್ಯದಿಂದ ತೆಗೆದುಕೊಂಡು ನೋಡಿ ವಾಟರ್ ಅನ್ನು ತೀರ್ಥವಾಗಿ ಮಾಡಲು ಕ್ರಿಯೆಗಳು ನಡೆಯಬೇಕಾಗಿದೆ. ವಾಟರ್ನಲ್ಲಿಯೇ ಎಲೆಕ್ಟ್ರಿಸಿಟಿ (Electricity) ಇದ್ದರೂ, ಅದನ್ನು ತೆಗೆಯಲು ಕೆಲವುಕ್ರಿಯೆಗಳ ನಡೆಯಬೇಕಲ್ಲವೇ? ಹಾಗೆಯೇ ಅದನ್ನು ತೀರ್ಥವಾಗಿ ಮಾಡಲು ಹಲವು ಕ್ರಿಯೆಗಳು ನಡೆಯಬೇಕು.To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, October 2, 2020

ಶ್ರೀರಂಗ ವಚನಾಮೃತ (Sriranga Vachanamruta) - 716

ಗಂಗೆಯೇ ಮೊದಲಾದ ತೀರ್ಥಗಳಲ್ಲಿ ಬರೀಸ್ನಾನ ಮಾಡುವುದರಿಂದೇನು? ಆತ್ಮತೀರ್ಥವನ್ನು ತಿಳಿಯದೇ ಇದ್ದರೆ ಅದರಿಂದ ಯಾವ ಉಪಯೋಗವೂ ಇಲ್ಲ. ಮೀನು, ಕಪ್ಪೆ ಮೊದಲಾದವುಗಳು ಸದಾ ನೀರಿನಲ್ಲೇ ಇರುತ್ತವೆ. ಅನ್ತಃ ತೀರ್ಥವನ್ನು ಬೆಳಗಿಸಿ, ಆತ್ಮತೀರ್ಥವನ್ನು ಬೆಳಗಿಸಿ, ಅದರೊಡನೆ ಅದರ ಮಾಧುರ್ಯವನ್ನು ಬೆರೆಸಿನೋಡಿದಾಗ, ಅದರ ಸಿಹಿಯು ಆಸ್ವಾದನೆಗೆ ತಿಳಿಯುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 1, 2020

ಶ್ರೀರಂಗ ವಚನಾಮೃತ (Sriranga Vachanamruta) - 715

ಮಹಾತ್ಮರ ಮನಸ್ಸು ತೀರ್ಥದಲ್ಲೇ ಹರಿದಾಗ ಅದಕ್ಕೆತೀರ್ಥತ್ವ ಬರುತ್ತದೆ. ಅಂತಹ ರಮಣೀಯವಾದ ತೀರ್ಥದಲ್ಲಿ ಪ್ರಸನ್ನಮನಸ್ಕರಾಗಿ ಜನಗಳು ಆ ಭಾವನೆಯೊಡನೆ ಇದ್ದರೆ ಸ್ನಾನವಾಗುತ್ತದೆ. ಇಲ್ಲದಿದ್ದರೆ ಅದು ಮರಣೀಯವಾಗುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages