ಕೇವಲ ಭೌತಿಜಕವಾದ ವಿಷಯಲಗಳ ಮೇಲೆ ನಮ್ಮ ದೇಶವನ್ನು ತಂದಿಲ್ಲ. ಗಂಗೆ, ಅಯೋಧ್ಯೆ ಮೊದಲಾದ ಹೆಸರುಗಳು ಯಾವ ವ್ಯಕ್ತಿಯದೂ ಅಲ್ಲ. ಹೊರದೇಶದವರಾದರೆ ವೆಲ್ಲಿಂಗ್ಟನ್ ಪಾಂಡ್ ವಾಶಿಂಗ್ಟನ್ ಸಿಟಿಎಂದು ತಮ್ಮ ಹೆಸರನ್ನು ಸರಸ್ಸು ನಗರ ಮುಂತಾದವುಗಳಿಗಿಟ್ಟುಬಿಡುತ್ತಾರೆ. ಇತ್ತೀಚೆಗೆ ನಮ್ಮ ದೇಶದವರೂ ಅದನ್ನು ಅನುಕರಿಸಿ ಅಂತಹುದೇ ಹೆಸರುಗಳನ್ನು ಹೆಚ್ಚಾಗಿ ರೂಢಿಗೆ ತಂದಿರಬಹುದು. ಆದರೆ ಹಿಂದೆ ಇತಿಹಾಸ ಪುರಾಣಗಳಲ್ಲಿರುವ ದಾಖಲೆ ತೆಗೆದು ನೋಡಿ. ಉದ್ದಕ್ಕೂ ನಮ್ಮ ದೇಶದ ಹೆಸರನ್ನಾಗಲೀ, ಒಂದು ನದಿ, ಪರ್ವತದ ಹೆಸರನ್ನಾಗಲೀ ಹೇಗೆ ತಂದಿದ್ದಾರೆ? ಕಾಶೀ, ಗಯಾ, ಪ್ರಯಾಗ, ಯಮುನೆ, ಬ್ರಹ್ಮಪುತ್ರ, ಗಂಗಾ ಹೇಗೆ ಪ್ರತಿಯೊಂದನ್ನೂ ದೈವೀಸಂಪತ್ತಿಗೆ ಉತ್ತೇಜಕವಾಗಿಟ್ಟುಕೊಂಡು ಬಂದಿದ್ದಾರೆ.
To know more about Astanga Yoga Vijnana Mandiram (AYVM) please visit our Official Website, Facebook and Twitter pages