ಮಾನವನು ತನ್ನ ಜೀವನಸಾಗರದ ಪಾರವನ್ನು ಕಂಡು ದಾಟಬೇಕಾದರೆ ವಿಧಾನಯುಕ್ತವಾದ ಜೀವನದ ಹರಿಗೋಲಿನಿಂದ ಅದನ್ನು ಸುಗಮವಾಗಿ ದಾಟಬೇಕು. ಹರಿಗೋಲು ಅಪಾಯಗಳಿಗೆ ಸಿಲುಕದಂತೆ ಇರಬೇಕು. ತಮ್ಮ ಜೀವನಸಾಗರ ಪರಿಮಿತಿಗೆ ತಕ್ಕಂತೆ ಬಗೆಬಗೆಯ ಹರಿಗೋಲುಗಳುಂಟು. ಭಾರತದಲ್ಲಾದರೋ ಜೀವನದಪಾರವೆರಡನ್ನೂ(ಇಹ-ಪರ)ಅರಿತು ಅದನ್ನು ದಾಟಲನುಗುಣವಾದ ನಾವೆಯನ್ನು ರಚಿಸಿ ಜೀವನ ಸಾಗರವನ್ನು ದಾಟುತ್ತಾರೆ. ಅದು ಜೀವನದ ಮಹಾಧ್ಯೇಯವಾದ ಪುರುಷಾರ್ಥಗಳಿಂದ ಮಾಡಲ್ಪಟ್ಟದ್ದಾಗಿದೆ. ಇಂದ್ರಿಯ ಮತ್ತು ಅತೀಂದ್ರಿಯ ಜ್ಞಾನಗಳ ಬೆಳಕಿನಲ್ಲಿ ಸಹಜವಾಗಿ ನಿರ್ಮಿಸಲ್ಪಟ್ಟದ್ದು. ಆದ್ದರಿಂದಲೇ ಇತಿಹಾಸದಲ್ಲಿ ಎಲ್ಲ ದೇಶಗಳ ಜೀವನಾವೆಗಳೂ ಬದಲಾಗುತ್ತಿದ್ದರೂ ಭಾರತದಲ್ಲಿ ಈವರೆವಿಗೂ ಅನೇಕ ಧಾಳಿಗಳು ನಡೆದಿದ್ದರೂ ಒಂದೇ ರೀತಿಯಾದ ನಾವೆಯಲ್ಲಿ ಭಾರತವು ಪ್ರಯಾಣ ಮಾಡುತ್ತಿದೆ. ಈತರಹದ ಜೀವನದ ಧ್ಯೇಯನಿಷ್ಕರ್ಷೆ ಮತ್ತು ಅದರ ಸಾಧನವಿಧಾನ ಇವುಗಳನ್ನು ಮತ್ತಾವ ದೇಶದ ಇತಿಹಾಸದಲ್ಲೂ ನಾವು ಕಾಣಲಾಗುವುದಿಲ್ಲ.
To know more about Astanga Yoga Vijnana Mandiram (AYVM) please visit our Official Website, Facebook and Twitter pages