Tuesday, June 9, 2020

ಶ್ರೀರಂಗ ವಚನಾಮೃತ (Sriranga Vachanamruta) - 601

ಯಾವ ಮಹರ್ಷಿಗಳು ತಮ್ಮ ಮನೀಷೆಯಿಂದ ಜ್ಞಾನವಿಜ್ಞಾನತೃಪ್ತಾತ್ಮರಾಗಿ ಸತ್ಯಮೂಲವಾದ ಜೀವನದ ಆರಂಭ, ಅದರ ವಿಕಾಸ ಮತ್ತು ಅದರ ವಿಲಯಗಳ ವಿಷಯವಾಗಿ ಅನ್ವೇಷಣೆ, ಅಧ್ಯಯನಗಳನ್ನು ನಡೆಸಿ, ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕಗಳಲ್ಲಿರುವ ಸ್ಥೂಲ, ಸೂಕ್ಷ್ಮ, ಪರಭೇದಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಅಳೆದು, ಜೀವನದ ಹುಟ್ಟು, ಸ್ಥಿತಿ, ಬೆಳವಣಿಗೆ, ವಿಕಾರ, ಕ್ಷಯ, ನಾಶಗಳೆಂಬ ಆರು ಬಗೆಯ ಸ್ಥಿತಿಭೇದಗಳನ್ನು ಅರಿತು ತಮ್ಮ ಇಂದ್ರಿಯಾತ್ಮಗಳ ಕಲ್ಯಾಣವನ್ನು ಮಾಡಿಕೊಂಡು, ಪ್ರಜೆಗಳೆಲ್ಲರನ್ನೂ ಪರಮವ್ಯೋಮದಲ್ಲಿಡುವ ಸಾಹಿತ್ಯವನ್ನು ಲೋಕಕ್ಕೆ ಕೊಟ್ಟು, ಸತ್ಯಾತ್ಮಪ್ರಾಣಾರಾಮರಾಗಿ ಜೀವನದ ಬೆಳಕನ್ನು ಕಂಡು, ಅಜರಾಮರರಾಗಿ ಪ್ರಕಾಶದಲ್ಲಿ ಆಸಕ್ತರಾಗಿದ್ದರೋ, ಅಂತಹ ಸನಾತನ ಆರ್ಯಮಹರ್ಷಿಗಳ ಭಾರತವಿದಾಗಿರುವುದು. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages