ಯಾವ ದೇಶವು ಪರಮಪ್ರಕಾಶದಲ್ಲಿ ಆಸಕ್ತವಾಗಿ ತನ್ನ ಜೀವನದ ಮಬ್ಬನ್ನು ಹರಿಸಿಕೊಂಡಿತೋ, ಯಾವ ದೇಶವು ತನ್ನ ಉತ್ತರಾಯಣದಲ್ಲಿ ಉಚ್ಚಕುಲಾಚಲವನ್ನಿಟ್ಟುಕೊಂಡು ತನ್ನ ಉತ್ತುಂಗ ಶಿಖರಕ್ಕೆ ಏರಿಬರುವ ಸಾಂಖ್ಯಯೋಗಿಗಳ ಪ್ರಾಣಮನೋವೃತ್ತಿಗಳನ್ನು ತಡೆದು ನಿಲ್ಲಿಸಿ, ಅಪ್ರಾಕೃತವಾದ ದಿವ್ಯದೃಷ್ಟಿಯನ್ನಿತ್ತು
" ಅವ್ಯಕ್ತೋsಯಂ ಅಚಿನ್ತ್ಯೋsಯಂ ಅವಿಕಾರ್ಯೋsಯಮುಚ್ಯತೇ "
" ಅಚ್ಛೇದ್ಯೋsಯಮದಾಹ್ಯೋsಯಂ ಅಕ್ಲೇದ್ಯೋsಶೋಷ್ಯ ಏವ ಚ |""
" ನಿತ್ಯಂ ಸರ್ವಗತಃ ಸ್ಥಾಣುಃ ಅಚಲೋsಯಂ ಸನಾತನಃ "
" ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ವದತಿ ತಥೈವ ಚಾನ್ಯಃ |
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ ||"
ಎಂಬ ಗೀತೆಗಳನ್ನು ಗಾನಮಾಡಿಸುತ್ತಾ ಪ್ರಕೃತಿಪುರುಷರನ್ನು ಒಂದಾಗಿಸಿ ಶಿಖಾಸ್ಥಾನದಲ್ಲಿರುವಂತೆ ಮಾಡಿ, ಅಚಲರನ್ನಾಗಿ ಮಾಡಿಸಿ, ದಿವಿಯನ್ನು ಚುಬಿಸುವ ಗೌರೀಶಂಕರವನ್ನು ಹೊಂದಿ, ಆ ಉನ್ನತಸ್ಥಾನದ ಮೂಲಕ "ಸ್ವದೇಶೋ ಭುವನತ್ರಯಂ" ಎಂದು ಸಾರುತ್ತಾ, ತನ್ನ ಮೇರೆಯಲ್ಲಿ ಸುತ್ತಲೂ ಸಮುದ್ರರಾಜನು ಘೋಷಿಸುವಂತೆ ಮಾಡುತ್ತಿದೆಯೋ, ಅಂತಹ ಭಾರತ ಮಾತೃಭೂಮಿಗೆ ಪ್ರಣಾಮಗಳು.
To know more about Astanga Yoga Vijnana Mandiram (AYVM) please visit our Official Website, Facebook and Twitter pages