ಅಜ್ಞರಾದ ಅಸುರರಿಂದ ವೇದವೆಲ್ಲವೂ ಮುಳುಗಿಸಲ್ಪಟ್ಟಾಗ ವೇದೋದ್ಧರಣಕ್ಕಾಗಿ ಅವತರಿಸಿದ ಮತ್ಸ್ಯವರಾಹದಿಂದ ಎತ್ತಲ್ಪಟ್ಟು,ಜಲರಾಶಿಯ ಮಧ್ಯೇ ವೇದೋದ್ಧಾರಭೂಮಿಯಾಗಿ ಕಾಣಿಸುತ್ತಾ, ಅಪಾರ ಜೀವನ ಭಂಗ (ಅಲೆ) ಗಳಿಂದ ಕೂಡಿ ಪಾರುಗಾಣದೇ ಇರುವ ಜೀವತತ್ತ್ವದ ಗುಟ್ಟನ್ನು ಯಥಾರ್ಥವಾಗಿ ಘೋಷಿಸುವ ಪರಮಶಿಖರವನ್ನು ಹೊಂದಿ, ಜಲರಾಶಿಯಿಂದಲೇ ಮಾರ್ಗವನ್ನು ತೋರಿಸುತ್ತಾ ಚೇತನರಿಗೆಲ್ಲಾ ಗತಿಪ್ರದನಾದ ಕ್ಷೀರಸಾಗರಶಾಯಿಯಾದ ವಿಷ್ಣುವಿನಂತೆ ದಿವಿಯನ್ನು ಪ್ರತಿಬಿಂಬಿಸುವ ರತ್ನಾಕರ ಮಹೋದಧಿಗಳ ಮಧ್ಯೇ ಪವಡಿಸಿ ಬೆಳಗುತ್ತಿರುವ, ಮತ್ತು ಐಹಿಕಾಮುಷ್ಮಿಕಸಿದ್ಧಿಯುಳ್ಳ ಈ ಮಹರ್ಷಿ ಭಾರತಕ್ಕೆ ನಮಸ್ಕಾರವಿರಲಿ.
To know more about Astanga Yoga Vijnana Mandiram (AYVM) please visit our Official Website, Facebook and Twitter pages