Sunday, June 7, 2020

ಶ್ರೀರಂಗ ವಚನಾಮೃತ (Sriranga Vachanamruta) - 599

ಯಾವ ಭಾರತದ ಧರ್ಮಕುರುಕ್ಷೇತ್ರದಲ್ಲಿ ಯೋಗೇಶ್ವರನಾದ ಶ್ರೀಕೃಷ್ಣನು ಅರ್ಜುನನೊಂದಿಗೆ ರಥದಲ್ಲಿ ಕುಳಿತು, ಒಂದು ಕೈಯಲ್ಲಿ ಜ್ಞಾನಮುದ್ರೆಯನ್ನೂ, ಮತ್ತೊಂದು ಕೈಯಲ್ಲಿ ಕರ್ಮವನ್ನು ಸೂಚಿಸುವ ವೇತ್ರದಂಡವನ್ನೂ ಹಿಡಿದು, ಕರ್ಮಜ್ಞಾನಭೂಮಿಗಳಲ್ಲಿ ಸಂಚರಿಸುತ್ತಾ, ತನ್ನ ಮತ್ತು ಅರ್ಜುನನ ಮನೋರಥಗಳನ್ನೂ ನಡೆಸುತ್ತಾ, ಇಂದ್ರಿಯಾತ್ಮಗಳ ಕಲ್ಯಾಣವನ್ನು ಸಾರಿದನೋ, ಯಾವ ಭಾರತವು ಬ್ರಹ್ಮಾವರ್ತ, ಆರ್ಯಾವರ್ತ, ಮಧ್ಯದೇಶಗಳನ್ನೂ, ಕರ್ಮಭೂಮಿಯನ್ನೂ ಒಳಗೊಂಡು, ಅನೇಕ ರಾಜರ್ಷಿಗಳ ದಂಡನೀತಿಗಳಿಂದಲೂ, ಆತ್ಮಸಿದ್ಧಿಗನುಕೂಲವಾದ ದಶವಿಧವಾತಾವರಣಗಳಿಂದಲೂ ಕೂಡಿ ತ್ರಿಲೋಕವ್ಯಾಪ್ತವಾದ ವೈಭವದಿಂದ ಮೆರೆದು ಇಂದು ಕಣ್ಮರೆಯಾಗಿಬಿಟ್ಟಿದೆಯೋ ಅಂತಹ ಮಹರ್ಷಿಭಾರತವು ನಮ್ಮ ಮನಸ್ಸಿಗೆ ವಿಷಯವಾಗಿ ಉಳಿಯಲಿ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages