Friday, May 29, 2020

ಶ್ರೀರಂಗ ವಚನಾಮೃತ (Sriranga Vachanamruta) - 590

ಒಂದೇ ದ್ರವ್ಯವನ್ನೇ ಅನೇಕ ವಿಧವಾಗಿ ಉಪಯೋಗಿಸಬಹುದು. ಆದರೆ ಅದು ಭಗವದರ್ಪಣವಾಯಿತೇ ಎನ್ನುವುದು ಮುಖ್ಯ. ಉದಾಹರಣೆಗೆ ಕೆರೆ ಇದೆ. ಅದರಲ್ಲಿ ಎಮ್ಮೆ ತೊಳೆಯುವುದು, ಬಟ್ಟೆ ಒಗೆಯುವುದೂ ಉಂಟು. ಇದರ ಮಧ್ಯೆ ಸ್ನಾನ ಮಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡುವವರೂ ಇರುತ್ತಾರೆ. ಆ ನೀರನ್ನು ಕೊಡದಿದ್ದರೂ, ಅಷ್ಟು ನೀರನ್ನು ಶೋಷಿಸಿ ತೆಗೆದುಕೊಳ್ಳುವ ಶಕ್ತಿ ಸೂರ್ಯನಿಗಿದೆ, ಆದರೆ ಕೆಳಗಿರುವವರು ಕೊಡುತ್ತಾರೆಯೇ? ಇಲ್ಲವೇ? ಎಂದು ಭಗವಂತನು ನೋಡುತ್ತಾನೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages