ಕೊಡುವುದನ್ನು ಪರಿಷ್ಕಾರಮಾಡಿ ಕೊಡಬೇಕು, ಕಣ್ಣಿಗೆ ಅಳಲೆಕಾಯಿಯನ್ನೇ ಹಾಕಲು ಹೋದರೆ ಅದು ತೆಗೆದುಕೊಳ್ಳುವುದಿಲ್ಲ. ಅದನ್ನು ಹಾಲಿನಲ್ಲಿ ತೇಯ್ದು ಕಣ್ಣಿಗೆ ಲೇಪಿಸಬೇಕು. ಕೊಡುವಾಗ ಪರಿಷ್ಕೃತವಾಗಿದ್ದರೆ ಆಗಲೇ ಅದು ದ್ರವ್ಯವಾಗುತ್ತದೆ, ವಿಲೀನವಾಗುತ್ತದೆ. ಈ ವಿಲೀನತೆಯಲ್ಲೂ ಬೇರೆಬೇರೆ ಮಟ್ಟಗಳುಂಟು. ಹಾಲು-ಸಕ್ಕರೆ ಸೇರಿದರೆ ಸಕ್ಕರೆ ಪೂರ್ತಿ ಲೀನವಾಗುತ್ತದೆ. ಹಾಲು-ಕಲ್ಲುಸಕ್ಕರೆ ಸೆರಿದರೆ ವಿಲೀನವಾಗಲು ವಿಳಂಬವಾಗುತ್ತದೆ. ಹಾಲು-ಕಲ್ಲು ವಿಲೀನವೇ ಆಗುವುದಿಲ್ಲ. ನಾವು ಸಮರ್ಪಿಸುವ ದ್ರವ್ಯವೂ ಹಾಲು-ಸಕ್ಕರೆಯಂತೆ ಕರಗಿ ಭಗವಂತನಲ್ಲಿ ಸೇರಿಹೋಗುವಂತಿರಬೇಕು.
To know more about Astanga Yoga Vijnana Mandiram (AYVM) please visit our Official Website, Facebook and Twitter pages