Friday, May 1, 2020

ಶ್ರೀರಂಗ ವಚನಾಮೃತ (Sriranga Vachanamruta) - 562

ಯಾವ ಕೆಲಸಕ್ಕಾದರೂ ಪರಸ್ಪರ ಸಾಮರಸ್ಯ ಬೇಕು. ನೆಲದ ಮೇಲಿರುವ ಕನ್ನಡಕವನ್ನು ತೆಗೆದುಕೊಳ್ಳಬೇಕೆಂದು ಮನಸ್ಸು ಇಚ್ಚಿಸಿದರೆ ಅದಕ್ಕೆ ತಕ್ಕಂತೆ ಕೈ ಆಡಬೇಕು. ಅದರ ಜೊತೆಗೆ ಬೆರಳೂ ಆಡಬೇಕು. ನೀವು ತಾನೇ ಇಚ್ಛೆ ಪಟ್ಟವರು, ನೀವೇ ತೆಗೆದುಕೊಳ್ಳಿ ಎಂದರೆ ಮನಸ್ಸೇ ನೇರವಾಗಿ ಕನ್ನಡಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಇತರ ಅಂಗಗಳ ಸಹಕಾರವೂ ಅದಕ್ಕೆ ಬೇಕು. ಅಂತೆಯೇ ದೇಶದಲ್ಲಿ ಜ್ಞಾನವೃದ್ಧರೂ, ವಯೋವೃದ್ಧರೂ ಆದ ಜನಗಳು ಬೇಕಪ್ಪಾ. ಅಂತಹವರ ನೇತೃತ್ವದಲ್ಲಿ ಸಂವಿಧಾನದೊಡಗೂಡಿ ಪರಸ್ಪರ ಸಹಕಾರದೊಡನೆ ಕೆಲಸ ನಡೆಯಬೇಕಾಗಿದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages