Saturday, May 16, 2020

ಶ್ರೀರಂಗ ವಚನಾಮೃತ (Sriranga Vachanamruta) - 577

ಬಾಹ್ಯಾಂತರಿಕ್ಷಕ್ಕೆ ಹೋದಾಗ ಚಿನ್ನದ ಗಟ್ಟಿ ಮತ್ತು ಹತ್ತಿಯ ಪಂಜಿ ಒಂದೇ ರೀತಿಯಾಗಿ ಬಿಡುತ್ತದೆ ಎರಡೂ ಭಾರ ಕಳೆದುಕೊಂಡು ಒಂದೇ ರೀತಿಯಾಗಿ ಬಿಡುತ್ತದೆ: ಎರಡಕ್ಕೂ ಭಾರದ ಅಭಾವ (weightlessness) ಉಂಟಾಗುತ್ತದೆ. ಹಾಗೆಯೇ ಭಗವಂತನಿಗೆ ಶುದ್ಧಭಾವದಿಂದ ಅರ್ಪಣೆಯಾದ ನಯಾ ಪೈಸಾ ಮತ್ತು ಸ್ವರ್ಣರಾಶಿ ಎರಡಕ್ಕೂ ಒಂದೇ ರೂಪ. ಎರಡೂ ತಮ್ಮ ಮೌಲ್ಯವನ್ನು ಕಳೆದುಕೊಂಡು ಬ್ರಹ್ಮರೂಪವನ್ನು ಹೊಂದಿಬಿಡುತ್ತವೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages