Sunday, May 31, 2020

Nectarine Nuggets of Mahaaguru - 515

Devaalaya is a vessel of ambrosia. However the vessel itself is not nectar. It gains its worth because of the nectar kept in it. Persons who can offer interpretations in harmony with its contents are needed.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 592

ತಂದೆ ತಾಯಿಗಳು ಮಗುವಿನ ಕೈಗೆ ತಿಂಡಿಕೊಟ್ಟು ನನಗೊಂದು ಸ್ವಲ್ಪ ಕೊಡಮ್ಮ ಎಂದು ಕೇಳುತ್ತಾರೆ. ಇದು ಕಿತ್ತುಕೊಳ್ಳುವುದಕ್ಕಲ್ಲ. ಆ ಮಗುವು ದೊಡ್ಡದಾದ ಮೇಲೆ ತನ್ನ ಮಗುವಿಗೆ ಇತರರಿಗೆ ಕೊಡುವ ಧರ್ಮವಿದೆಯೇ ಎಂದು ಪರೀಕ್ಷಿಸುವುದಕ್ಕೆ ಹಾಗೆ ಕೇಳುತ್ತಾರೆ. ಭಗವಂತನು ನಮ್ಮಿಂದ ಪತ್ರಂ, ಪುಷ್ಪಂ. ಫಲಂ ತೋಯಂಗಳನ್ನು ಯಾಚಿಸಬೇಕಿಲ್ಲ. ಅವನು ತಾನು ಸೃಷ್ಟಿಮಾಡಿದ ಸಾವಿರಾರು ಗಿಡಗಳ ತುಳಸಿಯನ್ನು ರಾಶಿ ರಾಶಿಯನ್ನು ಮೇಯಬಾರದೇ? ಭಕ್ತನನ್ನೇ ಒಂದು ದಳ ತುಳಸಿಯನ್ನೇಕೆ ಕೇಳುತ್ತಾನೆ? ಅವನಿಗೆ ಕೃತಜ್ಞತೆಯ ಧರ್ಮ ಬೆಳೆಯುವಂತೆ ಮಾಡುವುದಕ್ಕೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 30, 2020

Nectarine Nuggets of Mahaaguru - 514

Where there is Jeeva and where there is Deva (God), it is only there that the Devaalaya, the meeting point of Jeeva and Deva (Sangama-sthaana), exists.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 591

ಬ್ರಹ್ಮಾರ್ಪಿತವಾಗಬೇಕಾದರೆ ಅದಕ್ಕೆ ತಕ್ಕ ಯುಕ್ತಿ, ಆ ಯುಕ್ತಿಯನ್ನು ರೂಪಿಸುವ ಉಕ್ತಿ, ಇದರಲ್ಲಿ ಬೇಕಾದ ನೈಜವಾದ ಅನುರಕ್ತಿ, ಕೊನೆಯಲ್ಲಿ ಮುಕ್ತಿ. ಅದಕ್ಕೆ ಅನುಕೂಲವಾದ ಅವಿರೋಧವಾದ ಭುಕ್ತಿ ಇವೆಲ್ಲಾ ಧರ್ಮಗಳೊಡನೆಯೇ ಹೊಂದಿಕೊಂಡ ಒಬ್ಬ ವ್ಯಕ್ತಿ-ಇಷ್ಟು ಇರಬೇಕು. ಇಷ್ಟು ಇದ್ದರೆ ಸರ್ವತೋಭದ್ರವಾದ, ಚತುರ್ಭದ್ರವಾದ ಒಂದು ಜೀವನ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, May 29, 2020

Nectarine Nuggets of Mahaaguru - 513

Every human being of this universe is in fact a Devaalaya. To experience the Lord in their Devaalaya, the external temple acts as a guide.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 590

ಒಂದೇ ದ್ರವ್ಯವನ್ನೇ ಅನೇಕ ವಿಧವಾಗಿ ಉಪಯೋಗಿಸಬಹುದು. ಆದರೆ ಅದು ಭಗವದರ್ಪಣವಾಯಿತೇ ಎನ್ನುವುದು ಮುಖ್ಯ. ಉದಾಹರಣೆಗೆ ಕೆರೆ ಇದೆ. ಅದರಲ್ಲಿ ಎಮ್ಮೆ ತೊಳೆಯುವುದು, ಬಟ್ಟೆ ಒಗೆಯುವುದೂ ಉಂಟು. ಇದರ ಮಧ್ಯೆ ಸ್ನಾನ ಮಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡುವವರೂ ಇರುತ್ತಾರೆ. ಆ ನೀರನ್ನು ಕೊಡದಿದ್ದರೂ, ಅಷ್ಟು ನೀರನ್ನು ಶೋಷಿಸಿ ತೆಗೆದುಕೊಳ್ಳುವ ಶಕ್ತಿ ಸೂರ್ಯನಿಗಿದೆ, ಆದರೆ ಕೆಳಗಿರುವವರು ಕೊಡುತ್ತಾರೆಯೇ? ಇಲ್ಲವೇ? ಎಂದು ಭಗವಂತನು ನೋಡುತ್ತಾನೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 28, 2020

Nectarine Nuggets of Mahaaguru - 512

While the mothers give birth to babies from their udara (womb), those who bring out Daamodara from their hearts are the Jnaanis.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 589

ಅಷ್ಟು ದೊಡ್ಡ ಐಶ್ವರ್ಯವಂತನಾದ ಭಗವಂತನು ನಮ್ಮ ಸೇವಾರ್ಥವನ್ನು ಕೇಳಲು ಕಾರಣವೇನು? ತಂದೆ ಮಗುವಿಗೆ ಏನಾದರೂ ತಿಂಡಿ ಕೊಟ್ಟು ಮತ್ತೆ ತನಗೆ ಅದರಲ್ಲಿ ಸ್ವಲ್ಪವನ್ನು ಕೊಡಲು ಕೇಳುತ್ತಾನೆ. ಅದು ಮಗುವಿನಿಂದ ಕಿತ್ತು ತಿನ್ನಬೇಕೆಂದಾಗಲೀ ಅಥವಾ ಅವನ ಹತ್ತಿರ ಅದು ಇಲ್ಲವೆಂದಾಗಲೀ ಅಲ್ಲ. ಮಗುವಿನಲ್ಲಿ ಕೊಡುವ ಧರ್ಮವಿದೆಯೇ? ಎಂದು ಪರೀಕ್ಷಿಸಲು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, May 27, 2020

Nectarine Nuggets of Mahaaguru - 511

Pruthvi Maataa; Dyauh Pitaa (Earth is Mother and Heaven is Father) is the Vedic saying. That which bridges these two is the Devaalaya (Temple).  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 588

ದ್ರವ್ಯಯಜ್ಞ, ತಪೋಯಜ್ಞ, ಜ್ಞಾನಯಜ್ಞ ಎಲ್ಲವೂ ಉಂಟು. ಸತ್ಪುರುಷರ ಜೀವನದಲ್ಲಿ ತಪಸ್ಸು ಭಗವನ್ಮಯವಾಗಿರಬೇಕು. ದ್ರವ್ಯವು ಭಗವಂತನಿಗೆ ಅರ್ಪಿತವಾಗಬೇಕು. ಆಗ ಅದು ಜ್ಞಾನಯಜ್ಞವಾಗುತ್ತದೆ. ಹಾಗಾದರೆ ತಾನೇ ದ್ರವ್ಯ ಮತ್ತು ತಪಸ್ಸುಗಳ ಸಾರ್ಥಕತೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 26, 2020

Nectarine Nuggets of Mahaaguru - 510

One should operate under the conditions enunciated by the Creator - this is 'Vidhi' (dictum). Everything else is Avidhi, Ucchāstra (wrong shaastra) - don't go after this. Follow the Vidhi of Veda-Vedya (Supreme Being) alone. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 587

ಸಮರ್ಪಣೆಗಾಗಿ ತಟ್ಟೆಯಲ್ಲಿ ತಂದಿರಿಸಲ್ಪಟ್ಟಿದ್ದ ಫಲಗಳ ಕಡೆ ನಿರ್ದೇಶಿಸಿ:- ಲೋಕದಲ್ಲಿ ಅನೇಕ ವಸ್ತುಗಳು ತಮ್ಮತಮ್ಮ ಸೌಕರ್ಯಕ್ಕನುಗುಣವಾಗಿ ಹುಟ್ಟುತ್ತವೆ. ತಮಗನುಗುಣವಾದ ಗುಣವನ್ನೇ ಮುಂದುವರೆಸಿಕೊಳ್ಳುತ್ತವೆ, ಆ ಗುಣಗಳೇನಿವೆಯೋ ಅವು ಒಂದೊಂದಾಗಿ ವಿಕಾಸವಾಗುತ್ತ ತಮ್ಮನ್ನು ಪ್ರಕಟಗೊಳಿಸುತ್ತವೆ. ಉದಾಹರಣೆಗೆ ನಿಂಬೆ, ಸೀಬೆ, ಬಾಳೆಹಣ್ಣು ಎಲ್ಲವೂ ತನ್ನ ಒಂದು ಗುಣವೆಷ್ಟಿದೆಯೋ ಅದಕ್ಕನುಗುಣವಾಗಿ ಭಗವಂತನ ಸೇವೆಗೆ ಬಂದಿವೆ. ಇದೆಲ್ಲದರ ಹಿಂದೆ ನೋಡಿದಾಗ ಒಂದು ಸದ್ರೂಪ ಪದಾರ್ಥ ಅವುಗಳನ್ನು ಆ ಮೂಲ ರೂಪಕ್ಕೆಳೆದುಕೊಳ್ಳಲು ಸಿದ್ಧವಾಗಿದೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, May 25, 2020

Nectarine Nuggets of Mahaaguru - 509

Body, mind and intellect keep changing over time and space. The rules governing the change, code of law that "that is how it should change" is Vidhi. When these transformations caused by Time and Space are linked to the individual's goal and method and tailored appropriately then the resulting regulations and conditions also become Vidhis. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 586

ಕೊಡುವುದನ್ನು ಪರಿಷ್ಕಾರಮಾಡಿ ಕೊಡಬೇಕು, ಕಣ್ಣಿಗೆ ಅಳಲೆಕಾಯಿಯನ್ನೇ ಹಾಕಲು ಹೋದರೆ ಅದು ತೆಗೆದುಕೊಳ್ಳುವುದಿಲ್ಲ. ಅದನ್ನು ಹಾಲಿನಲ್ಲಿ ತೇಯ್ದು ಕಣ್ಣಿಗೆ ಲೇಪಿಸಬೇಕು. ಕೊಡುವಾಗ ಪರಿಷ್ಕೃತವಾಗಿದ್ದರೆ ಆಗಲೇ ಅದು ದ್ರವ್ಯವಾಗುತ್ತದೆ, ವಿಲೀನವಾಗುತ್ತದೆ. ಈ ವಿಲೀನತೆಯಲ್ಲೂ ಬೇರೆಬೇರೆ ಮಟ್ಟಗಳುಂಟು. ಹಾಲು-ಸಕ್ಕರೆ ಸೇರಿದರೆ ಸಕ್ಕರೆ ಪೂರ್ತಿ ಲೀನವಾಗುತ್ತದೆ. ಹಾಲು-ಕಲ್ಲುಸಕ್ಕರೆ ಸೆರಿದರೆ ವಿಲೀನವಾಗಲು ವಿಳಂಬವಾಗುತ್ತದೆ. ಹಾಲು-ಕಲ್ಲು ವಿಲೀನವೇ ಆಗುವುದಿಲ್ಲ. ನಾವು ಸಮರ್ಪಿಸುವ ದ್ರವ್ಯವೂ ಹಾಲು-ಸಕ್ಕರೆಯಂತೆ ಕರಗಿ ಭಗವಂತನಲ್ಲಿ ಸೇರಿಹೋಗುವಂತಿರಬೇಕು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 24, 2020

Nectarine Nuggets of Mahaaguru - 508

The one to be understood (Vedya) really exists on its own in the recesses of the heart, in the form of Jyoti and also appears as Veda. Because, this is the one which has to be understood, it is the "One to be known - Vedya". That alone is "Vidhi" which are the rules and conditions for realizing the "to be known – Vedya"

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 585

ಒಬ್ಬ ಕುಂಬಾರನು ಭಗವಂತನಿಗೆ ತನ್ನಲ್ಲಿರುವ ಮಣ್ಣಿನಿಂದಲೇ ಸಂಪಿಗೆ ಹೂವನ್ನು ಮಾಡಿ, ಆ ಮಣ್ಣು ಹೂವನ್ನೇ ಕೃಷ್ಣಾ ಎಂದು ಅರ್ಪಿಸಬಹುದು, ಅಲ್ಲಿಯೂ ಒಂದು ಭಗವಂತನ ಒಲವು ಇದ್ದೇಇರುವುದು. ಆದರೆ ಒಬ್ಬ ನಿಜವಾದ ಹೂವನ್ನೇ ಆ ಭಕ್ತಿ ಎಂಬ ಪರಿಶುದ್ಧವಾದ, ಅವನೊಡನೆ ಹೊಂದಿಕೊಳ್ಳುವ ಭಾವವಿಲ್ಲದೇ ಅರ್ಪಿಸಿದರೆ ಆ ಜಾಗದಲ್ಲಿ ಆತ್ಮಗಂಧಕ್ಕೆ ದೂರವಾದ ಕೇವಲ ಭೌತಿಕ ಗಂಧಕ್ಕೆ ಭಗವಂತನು ಮನಸೋಲುವುದಿಲ್ಲ ವೆಂಬುದು ನಿಜ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 23, 2020

Nectarine Nuggets of Mahaaguru - 507

The key is simply rotating but the lock is not opening. Since it fits into the key-hole, it puts us under an illusion that the lock might open sometime! The interpretations offered today by many, for varied problems with Śāstra̅s are very much similar in nature to this. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 584

ಭಗವಂತನಿಗೆ ಅರ್ಪಿಸುವಾಗ ಹಗುರವಾಗಿ ದ್ರವ್ಯವನ್ನು ಅರ್ಪಿಸಬೇಕು. ಮನಸ್ಸಿನ ಪರಿಪಕ್ವತೆಯಿಲ್ಲದೆ ಬಲವಂತಕ್ಕೆ ಅರ್ಪಿಸಿದರೆ ಪ್ರಯೋಜನವಿಲ್ಲ. ಉದಾಹರಣೆಗೆ- ಮೊಗ್ಗನ್ನು ಬಲವಂತವಾಗಿ ಕಿತ್ತರೆ ಭಕ್ತ ಬಿಡೋಲ್ಲ, ಗಿಡ ಕೊಡೋಲ್ಲ ಎಂಬಂತೆ ಅದರಲ್ಲಿ ಸುವಾಸನೆ ಇರುವುದಿಲ್ಲ. ಅದೇ ಪೂರ್ತಿ ಹೂವಾದಾಗ ಬಹಳ ಹಗುರವಾಗಿ ಭಗವಂತನ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, May 22, 2020

Nectarine Nuggets of Mahaaguru - 506

The Śāstras propounded by Maharṣi̅s were capable of warding off the Manku (gloom) of mankind. But alas! Today the very same Śāstras, being meddled by Ajñāni̅s (unenlightened) and getting distorted, are flinging Manku-Bu̅di (mesmerizing powder) at us. Their real import is not understood.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 583

ಭಗವಂತನ ಪದಾರ್ಥದ ಮೇಲೆ ಪರಕೀಯರ (ಅನಧಿಕಾರಿಗಳ) ಕೈವಾಡ ಕೂಡದು. ಅದಕ್ಕೆ ಅವಕಾಶ ಕೊಟ್ಟರೆ ಸಾಂಕರ್ಯ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 21, 2020

Nectarine Nuggets of Mahaaguru - 505

Currency has value as long as it is in vogue. On demonetization, it is nothing but a piece of paper. In the same way, scriptural text also has worth only as long as it goes along with experimentation. However, if the text alone survives without the association of analysis and trials, it becomes useless like demonetized currency.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 582

ಹಣ್ಣು ಪರಿಪಕ್ವವಾಗಿಬಿಟ್ಟಾಗ ಅದರ ತೊಟ್ಟು ಇದು ನನಗಲ್ಲ ಭೂಮಾತೆಗೆ ಎಂದು ಹೇಗೆ ಹಗುರವಾಗಿ ಮತ್ತು ಸಹಜವಾಗಿ ಅದನ್ನು ಬಿಟ್ಟು ಕೊಡುತ್ತದೆಯೋ ಹಾಗೆ ಹಗುರವಾದ ಮನಸ್ಸಿನಿಂದ ಭಗವಂತನಿಗೆ ಕೃಷ್ಣಾರ್ಪಣ ಬುದ್ಧಿಯಿಂದ ಸಮರ್ಪಣೆ ಮಾಡಬೇಕು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, May 20, 2020

Nectarine Nuggets of Mahaaguru - 504

There exists a region on the tongue for each of the six flavours of taste. Each flavour is relished only when the food item comes in contact with the corresponding region. Even when it is displaced slightly the flavour is not recognized. In the same manner, the Śāstras and Vidya̅s can be relished only on reaching the same centers from where they originated. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 581

ಫಲದಲ್ಲಿ ಭೋಗ್ಯವಾದ ಮಾಧುರ್ಯವು ತುಂಬಿರುತ್ತದೆ. ಆದರೆ ಆ ಮಾಧುರ್ಯಕ್ಕೆ ಪೂರ್ಣತೆ ಬರುವುದು, ಅದು ಮಾಧವನಿಗೆ ನಿವೇದನ ವಾದಾಗಲೇ. ಹಾಗೆಯೇ ನಮ್ಮಲ್ಲಿರುವ ಶ್ರೇಷ್ಠವಾದ ಭೋಗ್ಯವಸ್ತುಗಳೆಲ್ಲಕ್ಕೂ ಕೃತಕೃತ್ಯತೆ ಉಂಟಾಗುವುದು ಅವು ಮಾಧವನಿಗೆ ಸಮರ್ಪಿತವಾದಾಗಲೇ ಶೇಷಿಗೆ೯ ಸಮರ್ಪಿತವಾದಾಗಲೇ ಶೇಷ೧೦ ಪದಾರ್ಥಕ್ಕೆ ಕೃತಕೃತ್ಯತೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 19, 2020

Nectarine Nuggets of Mahaaguru - 503

The Ji̅vi does not tolerate the pinch to the toe; nor does he keep quite when the hair of his beard is pulled. No wise man would be prepared to accept the pain inflicted on any part of his body. Likewise, when any of the Śāstras, which form the organ of the Supreme Lord, is disparaged it becomes an offence against the Lord Himself. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 580

ಜೇನು ಹುಳು ತಾನು ಸಂಗ್ರಹಿಸಿದ ಜೇನನ್ನು ಕುಡಿಯುತ್ತಾ ಬಂದರೂ ದೇವರ ತೊಟ್ಟನ್ನು೮ ಮಾತ್ರ ಎಂದಿಗೂ ಮುಟ್ಟುವುದಿಲ್ಲ. ಭಗವಂತನಿಗಾಗಿ ತೆಗೆದಿಟ್ಟಿರುವ ದ್ರವ್ಯದ ವಿಷಯದಲ್ಲೂ ಹಾಗೆಯೇ ಇರಬೇಕು. ಆ ತೊಟ್ಟು ಬಹಳ ಶುದ್ಧವಾಗಿರುತ್ತದೆ. ಪ್ರತ್ಯೇಕವಾಗಿರುತ್ತದೆ. ಅದನ್ನು ಬೇರೆ ಯಾವುದಕ್ಕೂ ಬಳಸಿಕೊಳ್ಳಬಾರದು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, May 18, 2020

Nectarine Nuggets of Mahaaguru - 502

The subject matter of the (scriptural) text truly exists in the Ji̅vi and not in the library. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 579

ಭಗವಂತನಿಗೆ ಅರ್ಪಿತವಾಗುವ ದ್ರವ್ಯ ಯಾವುದು? ಎಂದರೆ- ಯಾವುದು ಭಗವಂತನ ಭಾವದಿಂದ ದ್ರವೀಭೂತವಾಗಿ ಅವನಲ್ಲಿ ಹರಿಯುವುದೋ ಅದೇ ತಾನೆ ಆ ದ್ರವ್ಯ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 17, 2020

Nectarine Nuggets of Mahaaguru - 501

All that which has been uttered by the Maharṣis in a special condition of an exalted state cannot be understood as such in our own condition. For example, I sing the verse "Tāraka nāma Tyāgarāja nuta" in a high pitch; and if I ask you to render it the same way with your body bent forward, can you do it?

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 578

ಸಮರ್ಪಿಸುವ ಪದಾರ್ಥ ನಿರುಪಾಧಿಕವಾಗಿರಬೇಕು. ಅಜೀರ್ಣವಾಗಿ ಹಾಗೆಯೇ ಹಿಂದಕ್ಕೆ ಬರುವಂತಾಗಬಾರದು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 16, 2020

Nectarine Nuggets of Mahaaguru - 500

Mirror no doubt reflects your face. But, being excited if you breathe on the mirror and then look at your reflection, how would you see your face? The mirror would be masked by the mist. In the same way, when the Śāstra-Darpaṇa (the Source mirroring the Śāstras) is blinded by the 'fumes' of wrong interpretations, the reflection of the Ātman will not be seen in it.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 577

ಬಾಹ್ಯಾಂತರಿಕ್ಷಕ್ಕೆ ಹೋದಾಗ ಚಿನ್ನದ ಗಟ್ಟಿ ಮತ್ತು ಹತ್ತಿಯ ಪಂಜಿ ಒಂದೇ ರೀತಿಯಾಗಿ ಬಿಡುತ್ತದೆ ಎರಡೂ ಭಾರ ಕಳೆದುಕೊಂಡು ಒಂದೇ ರೀತಿಯಾಗಿ ಬಿಡುತ್ತದೆ: ಎರಡಕ್ಕೂ ಭಾರದ ಅಭಾವ (weightlessness) ಉಂಟಾಗುತ್ತದೆ. ಹಾಗೆಯೇ ಭಗವಂತನಿಗೆ ಶುದ್ಧಭಾವದಿಂದ ಅರ್ಪಣೆಯಾದ ನಯಾ ಪೈಸಾ ಮತ್ತು ಸ್ವರ್ಣರಾಶಿ ಎರಡಕ್ಕೂ ಒಂದೇ ರೂಪ. ಎರಡೂ ತಮ್ಮ ಮೌಲ್ಯವನ್ನು ಕಳೆದುಕೊಂಡು ಬ್ರಹ್ಮರೂಪವನ್ನು ಹೊಂದಿಬಿಡುತ್ತವೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, May 15, 2020

Nectarine Nuggets of Mahaaguru - 499

With the intention of building the house on a perfectly flat plane the architect had erected two pillars and placed a beam over them. The house so built was no doubt uniform and safe too. Now, when we inspect the house it is found that the beam has slipped and the ground has turned uneven. We may wonder and comment: "People say that the house was built by an expert architect; then why is it in this condition?" Actually, over a period of time, the ground under the pillar has given way due to termites. The present condition of the house is because of the fault in the ground (Kṣétra) and not because of the architect. In the same way, it is our flaw in spoiling the condition of our Kṣétra (body) and not that of the Maharṣi̅s who have bestowed the Śāstras on us.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 576

ಹೊರಟಿದ್ದು ದೈವದ ಬೀಡಿನಿಂದ. ಏನೋ, ಇಂದ್ರಿಯಗಳ ಜೊತೆ ವ್ಯಾಪಾರಕ್ಕೆ ಬಂತಪ್ಪಾ. ಈ ವ್ಯಾಪಾರದಲ್ಲಿ ಬಂದ ಸಾಮಾನುಗಳನ್ನು ಅವನಿಗೇ ನಿವೇದನೆ ಮಾಡಿದರೆ ನಮ್ಮ ಬಾಳು ಪೂರ್ಣವಾಗುತ್ತದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಏನೇನಿವೆಯೋ ಅವೆಲ್ಲವನ್ನೂ ಈ ಜೀವವು ಭಗವಂತನಿಗೇ ಅರ್ಪಿಸಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 14, 2020

Nectarine Nuggets of Mahaaguru - 498

Śāstra should only be treated as a guide; it is not everything. The hand-post guides a traveler; in the same way, for a pilgrim set towards Brahmapura the Śāstra is the hand-post.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 575

ಒಂದು ಬೆಂಕಿಕಡ್ಡಿ ತನ್ನ ತಲೆಯನ್ನು ಮದ್ದಿನ ಕಾಗದದ ಮೇಲಿಟ್ಟು ಉಜ್ಜಿ ಎಳೆದಾಗ ಅಲ್ಲ್ಲಿ ಒಂದು ಬೆಳಕಾಗುತ್ತದೆ. ಆದರೆ ಕೂದಲೆಳೆಯಷ್ಟು ಜಾಗ ಬಿಟ್ಟು, ಇಷ್ಟು ಬಾಗಿದ್ದೇನೆ, ಇನ್ನು ಸ್ವಲ್ಪತಾನೇ ಬಿಟ್ಟಿರುವುದು ಎಂದರೆ ಒಳಗಿರುವ ಬೆಳಕು ತಿಳಿಯುವುದಿಲ್ಲ. ಆದ್ದರಿಂದ ಭಗವಂತನ ಪಾದದಲ್ಲಿ ತನ್ನ ತಲೆಯನ್ನು ಪೂರ್ತಿ ಇಟ್ಟುಕೊಂಡುಬಿಡಬೇಕು. ಆಗತಾನೆ ಪ್ರಕಾಶ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, May 13, 2020

Nectarine Nuggets of Mahaaguru - 497

Angry over the Geography lesson, if you break the globe, the world will not be destroyed! Globe is only a tool to help us in understanding Geography. Likewise, nobody can ever destroy the Śāstras; it is the property of the Supreme Lord. Benefit can indeed be derived with an understanding of the Śāstras; if not, there is none.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 574

ನ ಮಮ ಎಂದು ಹೇಳಿದ ಮಾತ್ರಕ್ಕೆ ಮಮತ್ವವೆಲ್ಲಾ ಬಿಟ್ಟುಹೋಗಿರ ಬೇಕೆಂಬ ನಿರ್ಬಂಧವಿಲ್ಲ. ಕಂಟಕವಿದ್ದರೆ೬ ಹೇಗೆ ನಮ್ಮದು ಆದೀತು? ಬೇಲಿ ದಾಟಿದಾಗ ಮುಳ್ಳು ನಮ್ಮ ಬಟ್ಟೆಗೆ ಸಿಕ್ಕಿ ಹಾಕಿಕೊಂಡರೆ, ಆ ಸಮಯಕ್ಕೆ ಸರಿಯಾಗಿ ಪುರೋಹಿತರು ಬಂದು ನ ಮಮ ಎಂದ ಮಾತ್ರಕ್ಕೆ ಬಟ್ಟೆಯನ್ನು ಮುಳ್ಳು ಬಿಡುತ್ತದೆಯೇ?

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 12, 2020

Nectarine Nuggets of Mahaaguru - 496

When even those Śāstras which emanated from the Jnana-Bhāskara are tarnished (sullied, stained, blemished) then one has to go to Him, the unblemished one. The Praṇava changing hands over many generations has undergone many changes. Therefore, one has to approach the one who possesses the Original. Is He not the 'Śāstra-Yoni' (Source of all Śāstras)?

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 573

ಭಗವಂತನಿಗೆ ಅರ್ಪಿಸುವಾಗ ಒಂದು ಹೃದಯಬೇಕು. ನಿರ್ಲಿಪ್ತರಾಗಿ ಕೊಡಬೇಕು. ಉದಾಹರಣೆಗೆ ತುಪ್ಪ ಬಡಿಸುವುದು: spoonಗೇ (ಚಮಚಕ್ಕೆ) ಅದು ಅಂಟಿಕೊಳ್ಳುವಂತಿದ್ದರೆ ಇವರು ಬಡಿಸಿದರೂ, ಅದು ಎಲೆಯ ಮೇಲೆ ಬೀಳುವುದಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, May 11, 2020

Nectarine Nuggets of Mahaaguru - 495

The text should truthfully proclaim the sentiments of the heart. It should not mislead. It should also describe them faithfully. Only then do such books serve as guides for people undertaking the pilgrimage of life.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 572

ಭಗವಂತನಿಗೆ ಅರ್ಪಿಸುವ ಪದಾರ್ಥ ನಿರ್ಲಿಪ್ತವಾಗಿರಬೇಕು,೪ ನಿರಂಜನ ವಾಗಿರಬೇಕು,೫ ನಿಮಗೇ ಗೊತ್ತಿಲ್ಲದೆ ಲೇಪ, ಅಂಜನ ಅದರಲ್ಲಿ ಕಿಂಚಿತ್ತಾದರೂ ಇದ್ದೀತು ಜೋಕೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 10, 2020

Nectarine Nuggets of Mahaaguru - 494

The text required for the Ji̅va is indeed coming along with the Ji̅va itself. When this is understood, one gets to know the meaning of Life.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 571

ಫ್ರಾನ್ಸ್‌ನ ಫ್ರಾಂಕ್‌ಗೆ ಇಂಡಿಯಾದಲ್ಲಿ ಚಲಾವಣೆ ಇಲ್ಲ. ಅದಕ್ಕಾಗಿ ಅದು ಇಲ್ಲಿಗೆ ಬಂದು ಇಲ್ಲಿಯವರಿಗೆ ಉಪಯೋಗವಾಗಬೇಕಾದರೆ ಇಲ್ಲಿ ಚಲಾವಣೆಯಲ್ಲಿರುವ ರೂಪಾಯಿನ ರೂಪವನ್ನು ತಾಳಬೇಕು. ಇಲ್ಲದಿದ್ದರೆ ಅದನ್ನು ತಂದರೂ, ಪಕ್ಕದಲ್ಲಿಯೇ ಇಟ್ಟುಕೊಂಡಿದ್ದರೂ, ಪೆಟ್ಟಿಗೆ ತುಂಬಾ ಇದ್ದರೂ ನಮಗೆ ಭಿಕ್ಷೆಯೇ ಗತಿ, ಅಂತೆಯೇ ಒಂದು ಧನವನ್ನು ಭಗವದರ್ಪಣ ಮಾಡುತ್ತೇನೆಂದು ಯತ್ನಿಸಿ ಭಗವಂತನ ಗೌರ್ನ್‌ಮೆಂಟಿನಲ್ಲಿ ಚಲಾವಣೆಯಿರುವ ಅಮೃತರೂಪಕ್ಕೆ ನಮ್ಮ ಧನವನ್ನು ಬದಲಾಯಿಸುವ ವಿಧಾನ ಗೊತ್ತಿಲ್ಲದಿದ್ದರೆ ಅದು ಭಗವದರ್ಪಣವಾಗಲು ಅರ್ಹವಾಗುವುದಿಲ್ಲ. ಭಗವಂತನು ಅದನ್ನು ಸರ್ವಥಾ ಸ್ವೀಕರಿಸಲಾರನು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 9, 2020

Nectarine Nuggets of Mahaaguru - 493

That which is held by Vidyārāja (Lord Hayagreeva) in His hand is actually the Original Book of Śāstra. It is the eternal Book of Ṛta and Satya; it is the most sacred and the purest. That alone is Śāstra. If any other text has to be called a Śāstra it must necessarily be compared with this Original Book alone. If it agrees, then it qualifies to be called a Śāstra; otherwise it is not a Śāstra.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 570

ನೀವು ಸಮರ್ಪಿಸುವ ನೋಟುಗಳು ಅಥವಾ ನಾಣ್ಯಗಳು ಭಗವದರ್ಪಿತ ವಾಗುವುದು ಹೇಗೆ? ಭಗವಂತನ ದಿವ್ಯರಾಜ್ಯದಲ್ಲಿ ಇವುಗಳಿಗೆ ಚಲಾವಣೆಯುಂಟೇ? ಈ ಪ್ರಪಂಚದಲ್ಲೇ ಒಂದು ದೇಶದ ನಾಣ್ಯಕ್ಕೆ ಮತ್ತೊಂದು ದೇಶದಲ್ಲಿ ಚಲಾವಣೆ ಇಲ್ಲ. ಅದನ್ನು ಬೇರೆ ದೇಶದ ನಾಣ್ಯವನ್ನಾಗಿ ಬದಲಾಯಿಸಿಕೊಳ್ಳಲು ಒಂದು ಬ್ಯಾಂಕು ಇದೆ. ಹೀಗೆಯೇ ಜ್ಞಾನಿಗೆ ಸಮರ್ಪಿತವಾದರೆ ಈ ಭೌತಿಕ ಪದಾರ್ಥವು ಬ್ರಾಹ್ಮ ಮನೋಧರ್ಮವೆಂಬ ರೂಪವನ್ನು ತಾಳುತ್ತದೆ. ಅದಕ್ಕೆ ತಾನೇ ಭಗವಂತನ ರಾಜ್ಯದಲ್ಲಿ ಚಲಾವಣೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, May 8, 2020

Nectarine Nuggets of Mahaaguru - 492

If you ask me, honestly, I do not have any delusion for these (scriptural) books. What is eternally illuminating the inner-most recesses of my heart, that indestructible book alone is verily my (Śāstra) Book. That which does not get destroyed in the entire world, even on the explosion of a bomb, but which keeps shining eternally on its own is indeed my inner Book.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 569

ಊರ್ಧ್ವಮೂಲವಾಗಿ೨ ಅಧಶ್ಶಾಖವಾಗಿ೩ ಬೆಳೆಯುವ ಈ ಶರೀರದ ಅಂಗೋಪಾಂಗಗಳ ಎಲ್ಲಾ ಆಗುಹೋಗುಗಳ ಸುದ್ದಿಗಳೂ ಸಹ ಇವೆಲ್ಲದರ ಬೇರಾದ ಮೆದುಳಿಗೆ ತಲುಪುತ್ತವೆಯಷ್ಟೆ, ಯಾವುದೇ ಆದರೂ ಹಾಗೆ ಮೂಲಕ್ಕೆ ತಲುಪುವಂತೆ ಇದ್ದರೆ ಪೂರ್ಣ; ಇಲ್ಲದಿದ್ದರೆ ಅಪೂರ್ಣ. ಅಂತೆಯೇ ನಿಮ್ಮ ಧನವೇ ಆದರೂ ತನ್ನ ಹೊರಬೀಳುವಿಕೆಗೆ ಮೂಲಭೂತವಾದ ಪರಮಾತ್ಮನನ್ನು ತಲುಪಿದರೆ ಪೂರ್ಣತೆಯನ್ನು ಹೊಂದುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, May 7, 2020

Nectarine Nuggets of Mahaaguru - 491

Any idea emanating through gestures and words gets imprinted in the mind first. This is how Śāstra gets stamped. However, if the stamp of Ātman is not embossed, no Śāstra can throw any light.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 568

ಜೀವಲೋಕದಲ್ಲಿ ಕಾಣುವ ಎಷ್ಟೋ ದುಡಿಮೆಗಳು ಪರಾರ್ಥವನ್ನು ಅಂತೆಯೇ ಪರಮಾರ್ಥವನ್ನು ಉದ್ದೇಶಿಸಿ ಹೊರಡುತ್ತವೆ. ಉದಾಹರಣೆಗೆ ಒಬ್ಬ ತಾಯಿಯಾದವಳು ತಾನು ಆಹಾರವನ್ನು ಸೇವಿಸಿ ಅದನ್ನೆಲ್ಲಾ ಅಂಶಾಂಶ ಪಚನಮಾಡಿ ತನ್ನ ಜೀರ್ಣಾಂಗಗಳಿಗೆ, ಜಠರಾಗ್ನಿಗೆ ಕೆಲಸ ಕೊಟ್ಟು, ತನ್ನ ಅಂಗಗಳ ದುಡಿಮೆಯಿಂದ ಶುದ್ಧವಾದ ಸ್ತನ್ಯವನ್ನು ತಯಾರಿಸಿಕೊಂಡು ಅದನ್ನು ತನ್ನ ಮುದ್ದು ಕಂದನಿಗೆ ಕೊಡುತ್ತಾಳಲ್ಲವೇ! ಅಲ್ಲಿ ಎಷ್ಟು ನಿಸ್ಸ್ವಾರ್ಥತೆ ಇದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, May 6, 2020

Nectarine Nuggets of Mahaaguru - 490

Those who visualize only the body and the senses and indulge in them alone would formulate Śāstra̅s accordingly. When the body is the sole consideration, this may be the Śāstra: "Bhasmibhu̅tasya déhasya punarāgamanam kutaḥ? Yāvajji̅vam sukham ji̅vet, ṛnam kṛtvā ghṛtam pibét" [When the body has been turned into ashes where is the question of its return? Be merry as long as you live; borrow ghee and drink it merrily]
But when questions such as "Is the sensual pleasure alone the be-all and end-all of life? Is there nothing beyond this?" are asked and pondered deeply, accepting the existence of an Ātman, surpassing this body, becomes inevitable. Based on this vision and the consequent design of life, the Śāstra that gets evolved would obviously be different. This way, depending on the view and vision of the people of different Nations, their Śāstra̅s also would be varied and be limited.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 567

ಐಶ್ವರ್ಯ ಎಂಬುದು ಈಶ್ವರ ಎಂಬ ಪದದಿಂದಲೇ ಬಂದಿದೆ. ಅವನು ಕೊಟ್ಟಿದ್ದನ್ನು ಅವನಿಗೇ ಕೊಡುವುದೇ ಐಶ್ವರ್ಯದ ಸದುಪಯೋಗ. ದೈವ ಕೊಟ್ಟಿದ್ದನ್ನು ದೈವಕ್ಕೆ ಉಪಯೋಗಿಸಬೇಕು. ಅದೇ ಸಮರ್ಪಣೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, May 5, 2020

Nectarine Nuggets of Mahaaguru - 489

When the seed is in the granary, the rules namely "water it, fence it, remove the weed etc." do not apply. The Śāsana (dictate) is applicable only when the seed is to be grown. In the same way, when Jnana remains in its Source no mandate operates. All regulations come into effect, when it begins to evolve in the universe.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 566

ಕೊಡುವ ಕ್ರಿಯೆಯಿಂದಲೇ ಲೋಕ ನಡೆಯುತ್ತಿರುವುದು. ಬೀಜ ಮೊಳಕೆಗೆ ಮೊಳಕೆ ಕಾಂಡಕ್ಕೆ, ಕಾಂಡ ಶಾಖೆಗೆ, ಶಾಖೆ ಉಪಶಾಖೆಗೆ, ಉಪಶಾಖೆ ಚಿಗುರಿಗೆ, ಚಿಗುರು ಹೂವಿಗೆ, ಹೂವು ಕಾಯಿಗೆ, ಮತ್ತೆ ಕಾಯಿ ಬೀಜಕ್ಕೆ-ಹೀಗೆ ಕೊಡುವ ಕ್ರಿಯೆ ಎಲ್ಲದರಲ್ಲೂ ಉಂಟು. ದೈವಿಕವಾಗಿ, ಆಧ್ಯಾತ್ಮವಾಗಿ, ಲೌಕಿಕವಾಗಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, May 4, 2020

Nectarine Nuggets of Mahaaguru - 488

While light has the potentiality to make things visible, darkness has an equal proficiency to hide things. While beings which like to be in light exist, there are beings which delight to remain in darkness. Guru, Śāstras would work only for the most deserving pupil who makes the statement "let the Śāstras throw Light (the light of Vijnana) to me" and certainly not with others.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 565

ಒಂದು ಬೆರಳಿನಲ್ಲಿ ಸ್ಟೂಲ್ ಎತ್ತಲು ಆಗುತ್ತದೆಯೇ? ಎಲ್ಲಿ ಬನ್ನಿ, ನೀವು ನಾಲ್ಕು ಜನ ನಿಮ್ಮ ಒಂದು ಬೆಟ್ಟನ್ನು ಹಾಕಿ ಎತ್ತಿ ನೋಡೋಣ. ನೀವು ಬೆಟ್ಟು ಹಾಕಿ. ನಮಗೆ ಈಗ ಸಮಯವಿಲ್ಲ ಎಂದರೆ ಆಗೋಲ್ಲ. ಒಂದು ಪಕ್ಷ ಒಂದೇ ಬೆಟ್ಟು ಎತ್ತುವ ಸಾಮರ್ಥ್ಯವನ್ನು ಹೊಂದಿದ್ದರೂ ಅದಕ್ಕೆ ಹೊರೆ (ಭಾರ) ಜಾಸ್ತಿ ಆಗುತ್ತೆ. ಅನೇಕ ಜನ ಸೇರಿದಾಗ ಕೆಲಸ ಹಗುರವಾಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, May 3, 2020

Nectarine Nuggets of Mahaaguru - 487

As long as the Triad "Creation-Sustenance-Dissolution" continues its journey, the Veda-Śāstras which form the secrets of Sṛṣṭi-Vidya̅ (the secrets behind creation) would also exist.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 564

ಸಾಗರದಲ್ಲಿ ಒಂದು ಅಲೆ ಎದ್ದಾಗ ಅದರ ಪಕ್ಕದಲ್ಲಿ ಇನ್ನೊಂದು ಅಲೆ ಏಳದಿದ್ದರೆ ಎದ್ದ ಅಲೆ ಅಲ್ಲಿಯೇ ಶಾಂತವಾಗಿಬಿಡುತ್ತದೆ. ಉಬ್ಬರ ಬರಬೇಕಾದರೆ ಅಲೆಯ ಮೇಲೆ ಅಲೆ ಏಳಬೇಕು. ಚಿಮ್ಮಿ ಏಳಬೇಕು ಅಂತೆಯೇ ನೀವುಗಳು ಭಗವತ್ಕಾರ್ಯದಲ್ಲಿ ಒಬ್ಬರಿಗೊಬ್ಬರು ಒತ್ತಾಸೆಯನ್ನು ಕೊಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, May 2, 2020

Nectarine Nuggets of Mahaaguru - 486

One should decide on the goal of life and must have suitable plans to achieve that. It is there that the Śāstra emanates. The Śāstra evolved thus presents a "Ramaṇi̅yata (pleasantness)". But alas! Now it has reversed leading to "Maraṇi̅yata (fatal)". There should never be any scope for such a thing.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 563

ಪ್ರಾಮಾಣಿಕವಾದ ಯಾವ ಕ್ರಿಯೆಗಾದರೂ ತ್ರಿಕರಣಸಾರೂಪ್ಯವಿರಬೇಕು. ಕಾಯ-ವಾಕ್-ಮನಸ್ಸುಗಳಲ್ಲಿ ಹೊಂದಾಣಿಕೆ ಬೇಕು. ಮನಸ್ಸಿನಲ್ಲಿ ಬಾ ಎನ್ನುವ ಅಭಿಪ್ರಾಯವಿದ್ದಾಗ ಮಾತ್ರವೇ ಕೈ ಅದಕ್ಕೆ ತಕ್ಕಂತೆ ಆಡಬೇಕು. ಮತ್ತು ಆ ಕ್ರಿಯೆಯು ವಿವೇಕಪೂರ್ಣವೂ ಆಗಿರಬೇಕು, ಇಂತಹ ಕ್ರಿಯೆ ತಾನೇ ನಿಜವಾದ ಸಹಕಾರವಾಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, May 1, 2020

Nectarine Nuggets of Mahaaguru - 485

Understanding the Śāsana (mandate) imposed on the Ji̅va, one has to shape one's life such that, it brings happiness in this life while leading us to the Supreme State.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 562

ಯಾವ ಕೆಲಸಕ್ಕಾದರೂ ಪರಸ್ಪರ ಸಾಮರಸ್ಯ ಬೇಕು. ನೆಲದ ಮೇಲಿರುವ ಕನ್ನಡಕವನ್ನು ತೆಗೆದುಕೊಳ್ಳಬೇಕೆಂದು ಮನಸ್ಸು ಇಚ್ಚಿಸಿದರೆ ಅದಕ್ಕೆ ತಕ್ಕಂತೆ ಕೈ ಆಡಬೇಕು. ಅದರ ಜೊತೆಗೆ ಬೆರಳೂ ಆಡಬೇಕು. ನೀವು ತಾನೇ ಇಚ್ಛೆ ಪಟ್ಟವರು, ನೀವೇ ತೆಗೆದುಕೊಳ್ಳಿ ಎಂದರೆ ಮನಸ್ಸೇ ನೇರವಾಗಿ ಕನ್ನಡಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಇತರ ಅಂಗಗಳ ಸಹಕಾರವೂ ಅದಕ್ಕೆ ಬೇಕು. ಅಂತೆಯೇ ದೇಶದಲ್ಲಿ ಜ್ಞಾನವೃದ್ಧರೂ, ವಯೋವೃದ್ಧರೂ ಆದ ಜನಗಳು ಬೇಕಪ್ಪಾ. ಅಂತಹವರ ನೇತೃತ್ವದಲ್ಲಿ ಸಂವಿಧಾನದೊಡಗೂಡಿ ಪರಸ್ಪರ ಸಹಕಾರದೊಡನೆ ಕೆಲಸ ನಡೆಯಬೇಕಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages