Wednesday, April 22, 2020

ಶ್ರೀರಂಗ ವಚನಾಮೃತ (Sriranga Vachanamruta) - 553

ಜ್ಞಾನವೃದ್ಧ, ವಯೋವೃದ್ಧ ಎರಡೂ ಆಗಿರುವ ವ್ಯಕ್ತಿಯ ಸೇವೆ ಮಾಡುವುದು ಒಳ್ಳೆಯದು. ಜ್ಞಾನವೃದ್ಧತೆ ವಯೋವೃದ್ಧತೆ ಎರಡೂ ಒಂದೇ ಜಾಗದಲ್ಲಿದ್ದರೆ ವಿಶೇಷ ಲಾಭ. ವಯೋವೃದ್ಧನ ಸೇವೆ ಮಾಡುವುದು ಒಳ್ಳೆಯದು. ಏಕೆಂದರೆ ಬಾಲ್ಯ, ಯೌವನ, ವಾರ್ಧಕ್ಯ ಮೂರು ಅವಸ್ಥೆಗಳಲ್ಲಿರುವ ಸುಖ, ದುಃಖ, ಚಿಂತೆ, ಮೋಹ, ಸಂತೋಷಗಳ್ಳೆಲ್ಲದರ ಅನುಭವವಿರುವುದರಿಂದ, ಅವನ ಉಪದೇಶ ಕಾರ್ಯಶಾಲಿಯೂ, ಸಾಧನಾಪರನೂ ಆದವನಿಗೆ ಉಪಯುಕ್ತ ವಾಗುತ್ತದೆ. ಆದರೆ ಜ್ಞಾನಕ್ಕೇ ಬೆಲೆ ಹೆಚ್ಚು. ವಯಸ್ಸು ಕಡಿಮೆ ಇದ್ದರೂ ಜ್ಞಾನವಿದ್ದರೆ ಬೆಲೆ ಹೆಚ್ಚು. ಚಿತ್ರಂ ವಟತರೋರ್ಮೂಲೇ ಶಿಷ್ಯಾ ವೃದ್ಧಾ ಗುರುರ್ಯುವಾ | ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಚ್ಛಿನ್ನಸಂಶಯಾಃ||[ಆಲದ ಮರದ ಬುಡದಲ್ಲಿ ಒಂದು ಅದ್ಭುತ ದೃಶ್ಯ ಕಂಡುಬರುತ್ತದೆ. ಗುರು-ಶಿಷ್ಯರು ಒಟ್ಟಿಗೆ ಇದ್ದಾರೆ. ಆದರೆ ಅವರಲ್ಲಿ ಶಿಷ್ಯರು ಮುದುಕರು, ಗುರುವು ತರುಣ. ಮೌನವೇ ಗುರುವಿನ ಪಾಠ. ಆದರೆ ಶಿಷ್ಯರ ಸಂಶಯವೆಲ್ಲ ಪರಿಹಾರವಾಗಿಬಿಟ್ಟಿದೆ ಎಂದು ಈ ಶ್ಲೋಕದ ಅಭಿಪ್ರಾಯ.ಮೇಲಿನ ಶ್ಲೋಕವು ಶ್ರೀ ಶಂಕರಾಚಾರ್ಯರಿಂದ ರಚಿತವೆಂದು ಪ್ರಸಿದ್ಧವಾದ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಪಠಿತವಾಗುತ್ತದೆ. ಆದರೆ ಶ್ಲೋಕದ ಅಭಿಪ್ರಾಯವನ್ನು ಗಮನಿಸಿದರೆ ಅದು ದಕ್ಷಿಣಾಮೂರ್ತಿ, ಶುಕಮಹರ್ಷಿ, ಶ್ರೀ ಶಂಕರಾಚಾರ್ಯರು ಮೂವರಿಗೂ ಅನ್ವಯಿಸುತ್ತದೆ.]


To know more about Astanga Yoga Vijnana Mandiram (AYVM) please visit our Official Website, Facebook and Twitter pages