ಭಗವಂತನ ಮಹತ್ಪಾದವು ಬೆಳೆದು ಅದರ ಆಶಯವು ಬೆಳೆಯುವುದಕ್ಕನುಗುಣವಾಗಿ ನಡೆಯುವುದೇ ಸೇವೆ. ಹಾಗೆ ನಡೆದರೆ ಪೂರ್ವೋತ್ತರಗಳಿಗೆ ಅವಿರೊಧವಾಗಿ ಕ್ರಿಯೆ ಇರುತ್ತದೆ. ಬೀಜದ ಆಶಯದಂತೆ ಬೆಳೆದು ಬೀಜದಲ್ಲೇ ನಿಂತರೆ, ಮತ್ತೆ ಬೀಜವನ್ನು ನೆಟ್ಟರೆ ಧಾತಾ ಯಥಾ ಪೂರ್ವ ಮಕಲ್ಪಯತ್ ಎಂಬಂತೆ ಪುನಃ ಅದೇ ಸರಣಿಯೇ. [(ಪೂರ್ವೋತ್ತರ-ಹಿಂದಿನದು ಮತ್ತು ಮುಂದಿನದು) ಅಂದರೆ ಮೂಲಕ್ಕೆ ವಿರುದ್ಧವಾಗಿ, ಅನಂತರ ಕೃತಕವಾಗಿ ಬಂದು ಸೇರಿಕೊಂಡ ವಿಷಯಕ್ಕೆ ತಕ್ಕಂತೆ ಬೆಳೆಯಬಾರದು.] [ಮಹಾ ನಾರಾಯಣೀಯ ಸೃಷ್ಟಿ ಕರ್ತನಾದ ಭಗವಂತನು ಹಿಂದೆ ಹೇಗಿತ್ತೋ ಅದರಂತೆಯೇ ಸೃಷ್ಟಿಯನ್ನು ರಚಿಸಿದನು. ಎಂಬುದು ಈ ಶ್ರುತಿವಾಕ್ಯದ ಅರ್ಥ.]
To know more about Astanga Yoga Vijnana Mandiram (AYVM) please visit our Official Website, Facebook and Twitter pages