Monday, July 20, 2020

ಶ್ರೀರಂಗ ವಚನಾಮೃತ (Sriranga Vachanamruta) - 642

ಯಾವನು ಜ್ಞಾನರೂಪನಾಗಿಯೂ, ಆನಂದರೂಪನಾಗಿಯೂ, ಪರಿಶುದ್ಧರೂಪನಾಗಿಯೂ, ಅಂತೆಯೇ ಸತ್ಯರೂಪನಾಗಿಯೂ, ಸುಂದರರೂಪನಾಗಿಯೂ, ಮಂಗಳಾತ್ಮಕನಾಗಿಯೂ ಇದ್ದುಕೊಂಡು, ವಿಶ್ವವ್ಯಾಪಿಯಾಗಿದ್ದು ಕೊಂಡು, ತನ್ನ ಸತ್ಯ ಸಂಕಲ್ಪವನ್ನು ಜ್ಞಾನರೂಪವಾಗಿಯೂ, ಇಚ್ಛಾರೂಪವಾಗಿಯೂ, ಕ್ರಿಯಾರೂಪವಾಗಿಯೂ ತರಲೋಸುಗ ತನ್ನ ಅತ್ಯದ್ಭುತವಾದ ಶಿಲ್ಪವನ್ನು ಸೃಷ್ಟಿ ಸ್ಥಿತಿ ಲಯ ವ್ಯಾಪಾರಗಳ ಮೂಲಕ ಪ್ರಕಟಿಸುತ್ತಿದ್ದಾನೋ ಅಂತಹ ಮಹಾ ತೇಜಸ್ಸಿಗ, ನಾದ ಬಿಂದು ಕಲಾ ರೂಪನಿಗೆ ಮತ್ತು ಅವನ ಲೀಲಾವಿಭೂತಿಗೆ ನಿತ್ಯವೂ ಸತ್ಯವೂ ಆದ ಅನಂತ ನಮಸ್ಕಾರಗಳು.



To know more about Astanga Yoga Vijnana Mandiram (AYVM) please visit our Official Website, Facebook and Twitter pages