Friday, July 17, 2020

ಶ್ರೀರಂಗ ವಚನಾಮೃತ (Sriranga Vachanamruta) - 639

ಭಾರತೀಯ ಸಂಸ್ಕೃತಿ ನಾಗರಿಕತೆಗಳೆಂದರೆ ಆ ರಹಸ್ಯವು ಆ ಸನಾತನ ಮಹರ್ಷಿಗಳ ಮುಷ್ಟಿಯಲ್ಲಿ ಅಡಗಿರುವ ಜೀವಮಣಿಯಾಗಿದೆ. ಅವರ ಮುಷ್ಟಿಯಲ್ಲಿ ಏನಡಗಿದೆ? ಎಂದು ಹೇಳಲು ಏಲ್ಲಿ ನೋಡಿದರೂ ನಾ ಮುಂದು ತಾ ಮುಂದು' ಎಂದು ಹೊರಟವರ ಭಾರತೀಯ ನಾಗರಿಕತೆ ಸಂಸ್ಕೃತಿಗಳ ಕೂಗೇ ಕೂಗಾಗಿದೆ. ಆದರೆ ಯಾರು ಪಾರದರ್ಶಕದ್ವಾರಾ ಆ ಋಷಿಗಳ ಮುಷ್ಟಿಯಲ್ಲಿರುವುದನ್ನು ನಿಶ್ಚಯವಾಗಿ ಹೇಳುವರೋ ಅವರು ಇಲ್ಲದಿರುವುದರಿಂದ ಅದು ಕಾಣದಾಗಿದೆ. ಋಷಿದೃಷ್ಟಿಮುಷ್ಟಿ ತೆಗೆದಾಗ ತಾನೇ ಅದು ಹೊರಪಡಬೇಕಾಗಿದೆ. ಅಂತೂ ಎಲ್ಲರೂ ತಮ್ಮ ತಮ್ಮ ಬಾಳಾಟದಲ್ಲಿ ಕಂಡುಬರುವ ವಸ್ತುಗಳ ಪೈಕಿ ಯಾವುದಾದರೂ ಒಂದನ್ನು ಆ ಋಷಿಗಳ ಮುಷ್ಟಿಯಲ್ಲಿರುವ ಜೀವಮಣಿ ಎಂದು ಹೇಳುತ್ತಿದ್ದಾರೆ. ಇಂದು ಆ ಸನಾತನ ಸಂಸ್ಕೃತಿ ನಾಗರಿಕತೆಗಳ ಬಗ್ಗೆ ನಡೆಯುತ್ತಿರುವ ವ್ಯಾಖ್ಯಾನಗಳೆಲ್ಲಾವೂ ಕುರುಡನಿಗೆ ಕುರುಡನು ದಾರಿ ತೋರಿಸುವಂತಾಗಿದೆ. ಉಭಯಾರಿಗೂ ಅಧೋಗತಿಯೇ ಗತಿಯಾಗಿದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages