Saturday, July 11, 2020

ಶ್ರೀರಂಗ ವಚನಾಮೃತ (Sriranga Vachanamruta) - 633

ಜ್ಞಾನ ವಿಜ್ಞಾನ ತೃಪ್ತಾತ್ಮರಾದ ಸನಾತನಾರ್ಯ ಭಾರತ ಮಹರ್ಷಿಗಳಿಂದ ಪ್ರಕಾಶಿತವಾದ ಪ್ರವರ್ತಿತವಾದ ಸಂಸ್ಕೃತಿ ನಾಗರಿಕತೆಗಳಲ್ಲಿ ಭುವಿಯಿಂದ ದಿವಿಯವರೆಗೂ ನಿರಾಯಾಸವಾಗಿ ಅಡ್ಡಿ ಆತಂಕಗಳಿಲ್ಲದೆ ಕರೆದುಕೊಂಡುಹೋಗಿಬಿಡುವ ಒಂದು ಸುಮಾರ್ಗವಿದೆ. ಆ ಹಾದಿಯನ್ನು ಹಿಡಿದು ಹತ್ತಿದರೆ ಅದು ಎಲ್ಲಿಗೆ ಹೋಗುತ್ತೋ ನಾವೂ ಸಹ ಆ ನೆಲೆಗೆ ಹೋಗಿ ತಲುಪಬೇಕಾಗುತ್ತದೆ. ಅದರಲ್ಲಿ ಒಂದು ಗಂಭೀರಭಾವವಿದೆ. ಶಾಶ್ವತ ಸೌಂದರ್ಯವಿದೆ. ನಿತ್ಯಸುಖವಿದೆ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages