Wednesday, July 15, 2020

ಶ್ರೀರಂಗ ವಚನಾಮೃತ (Sriranga Vachanamruta) - 637

ಜ್ಞಾನವನ್ನು ಹೊಂದಲು ಯೋಗ, ಸಾಂಖ್ಯ, ಸ್ವಾಧ್ಯಾಯ, ಯೋಗ ಮುಂತಾದ ಅನೇಕ ದಾರಿಗಳು ಋಷಿಗಳಿಂದ ಉಪದೇಶಿಸಲ್ಪಟ್ಟಿದೆ. ಆದರೆ ಅವು ಅವುಗಳ ರಹಸ್ಯವನ್ನು ತಿಳಿದು ಸಾಧಿಸಬಲ್ಲ ಸಾಧನಾಪರರೂ, ಸಮರ್ಥರೂ, ಬುದ್ಧಿಶಾಲಿಗಳೂ ಆದವರಿಗೆ ಮಾತ್ರ ಸಾಧನ. ಜ್ಞಾನಿಗಳು ಜ್ಞಾನದೀಪವನ್ನು ನಾನಾ ವಿಧವಾಗಿ ಬೆಳಗಿಸಿಕೊಂಡು ಬಂದಿರುತ್ತಾರೆ. ಅದನ್ನು ಉಜ್ವಲವಾಗಿರಿಸಲು ಅನೇಕ ಸಾಧನೆಗಳುಂಟು. ಅವುಗಳಲ್ಲೆಲ್ಲಾ ಜ್ಞಾನಿಗಳ ಸಂಗವೂ ಮತ್ತು ಸೇವೆಯೂ ಅತ್ಯಂತ ಸುಲಭವಾದ ಉಪಾಯ. ನಾರದ, ಪ್ರಹ್ಲಾದ ಮುಂತಾದ ಅನೇಕರು ಜ್ಞಾನವನ್ನು ಪಡೆದ ಕಥೆಯನ್ನು ನಾವು ಕೇಳುತ್ತೇವೆ. ಸತ್ಸಂಗ ಮೂಲವಾದ ಗುರುಭಕ್ತಿ ಮತ್ತು ಗುರುಸೇವೆಗಳು ನಮ್ಮ ಸಂಸ್ಕೃತಿಯೊಡನೆ ಹೆಣೆದುಕೊಂಡಿರುವ ಜ್ಞಾನ ಸಂಪ್ರದಾಯದ ಮುಖ್ಯರೂಪಗಳಾಗಿವೆ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages