Monday, September 28, 2020

ಶ್ರೀರಂಗ ವಚನಾಮೃತ (Sriranga Vachanamruta) - 712

ಯಾವುದನ್ನು 'ಸಬ್ರಹ್ಮಾ ಸಶಿವಃ ಸೇಂದ್ರಸ್ಸೋsಕ್ಷರಃ ಸ್ವರಾಟ್' ಎಂದು ಹೇಳಿದ್ದಾರೋ ಅದು ಅಂತರ್ದೃಷ್ಟಿಗೆ ವಿಷಯ; ಭೌತಿಕವಾದ ಇಂದ್ರಿಯಗಳಿಗಲ್ಲ. ಅದರ ಪರಿಮಳವನ್ನು ಹೊರಗೆ ಹಚ್ಚಿ ಕಲ್ಲು, ಮರ, ಮಣ್ಣು ಇವುಗಳೊಡನೆ ಭಗವಂತನನ್ನು ಬೆರಸಿ, ಭಗವಂತನ ಭಾವವನ್ನು ಅದರಲ್ಲಿ ತುಂಬಿ, ಜನರ ಮನಸ್ಸನ್ನು ತಮ್ಮ ಭಾವಕ್ಕೆ ಎಳೆಯುವ ಮನವನ್ನು ಅಲ್ಲಲ್ಲೇ ದಿವ್ಯಕ್ಷೇತ್ರಗಳಲ್ಲೂ, ತೀರ್ಥಕ್ಷೇತ್ರಗಳಲ್ಲೂ ಮಾಡಿರುವ ಸಂಪ್ರದಾಯವು ನಮ್ಮ ದೇಶದಲ್ಲಿ ಅಲ್ಲಲ್ಲೇ ಉಳಿದುಕೊಂಡಿದೆ. 'ಕಸ್ತೂರಿಡಬ್ಬಿ' ಎಂಬ ಪದವನ್ನುಪಯೋಗಿಸಿದಾಗ ಕೇವಲ ಡಬ್ಬಿಗೆ ಯಾವ ಪರಿಮಳವೂ ಇಲ್ಲ. ಕಸ್ತೂರಿ ತುಂಬಿಟ್ಟಿರುವುದರಿಂದ ಆ ವಾಸನೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages