Friday, September 11, 2020

ಶ್ರೀರಂಗ ವಚನಾಮೃತ (Sriranga Vachanamruta) - 695

ರಾಷ್ಟ್ರಧ್ವಜ ಒಂದು ಕಾಗದದ ರೂಪದಲ್ಲಿರಬಹುದು; ಬಟ್ಟೆಯ ರೂಪದಲ್ಲಿರಬಹುದು. ಅದನ್ನು ಹರಿದರೆ ರಾಷ್ಟ್ರದ್ರೋಹಿಗಳೆನ್ನುತ್ತಾರೆ. 'ಬರೀ ಬಟ್ಟೆ ಅಥವಾ ಕಾಗದ ಹರಿದರೆ ಅಷ್ಟೇಕೆ ಕೋಪ?' ಎಂದರೆ, ಅಲ್ಲಿ ಕೋಪ ಬಟ್ಟೆ ಅಥವಾ ಕಾಗದ ಹರಿದುದರ ಮೇಲಲ್ಲ, ಅದರ ಮೇಲಿರುವ ರಾಷ್ಟ್ರದ ಗುರುತಿನ ಭಾವಕ್ಕಾಗಿ, ಎನ್ನುವುದಿಲ್ಲವೇ? ಹಾಗೆಯೇ ಕಲ್ಲಿನ ಮೇಲೆ ಮಹರ್ಷಿಗಳ ಮನೋರಂಗದ ಗುರುತನ್ನು ಮೂಡಿಸಿದಾಗ ಅದು ಬರೀ ಕಲ್ಲಲ್ಲ. ಮಹರ್ಷಿಗಳ ಮನೋರಂಗದಲ್ಲಿ ಮೂಡಿದ ಚಿನ್ಮಯಮೂರ್ತಿಯ ಮುದ್ರೆ ಅದರ ಮೇಲೆ ಬಿದ್ದಿದೆ, ಅದಕ್ಕೇ ಅಲ್ಲಿ ಪೂಜೆ. 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages