Tuesday, March 31, 2020

Nectarine Nuggets of Mahaaguru - 454

The Prakrti evolved from Jnana is in the form of Vijnana. When the Prakrti is in Prakopa (fury), it becomes fatal; on the other hand, when it is in Prasannata (serenity), it at once becomes Taraka (redeeming).

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 531

ಭಗವಂತನ ಸತ್ಯಸಂಕಲ್ಪಕ್ಕೆ ದ್ವಾರವಾಗಿ ಕೆಲಸ ಮಾಡುವುದಾದರೆ, ಅದಕ್ಕೆ ಬೇಕಾದ ಸಾಧನ-ಸಂಪತ್ತಿಗಳು ಸಮಗ್ರವಾಗಿವೆಯೇ ನೋಡಿಕೊಳ್ಳಿ. ಹಾಗಿದ್ದರೆ ಅವನ ವಿದ್ಯಾವಿಲಾಸ ಬೆಳೆಯಲಿ. ನಿಮ್ಮಲ್ಲಿ ನ್ಯಾಸಮಾಡಿದ (ಇರಿಸಲ್ಪಟ್ಟ) ವಿಷಯ ಭಗವಂತನಲ್ಲಿ ನ್ಯಾಸವಾಗುವವರೆಗೂ ಬರುವಂತೆ ಕೆಲಸ ಸಾಗಬೇಕಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, March 30, 2020

Nectarine Nuggets of Mahaaguru - 453

If traversed back from Vijnana, Jnana is attained. On the other hand, when Jnana evolves downward it is called Vijnana.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 530

ಹೂವಿಗೆ ನೀರೆರೆದರೆ ಗಿಡ ಬೆಳೆಯುವುದಿಲ್ಲ. ಗಿಡ ಬೆಳೆಯಬೇಕಾದರೆ ಗಿಡದ ಪಾತಿಯಲ್ಲಿರುವ ಬೇರಿಗೆ ನೀರು ಹಾಕಬೇಕು. ಹಾಗೆಯೇ ಹೃದಯದ ಪಾತಿಯಲ್ಲಿರುವ ಮೂಲರೂಪನಾದ ಭಗವಂತನಿಗೆ ಚಿತ್ತಧಾರೆಯನ್ನೆರೆದರೆ ಇಡೀ ದೇಹವೃಕ್ಷಕ್ಕೆ ಅದು ತಲುಪುತ್ತದೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 29, 2020

Nectarine Nuggets of Mahaaguru - 452

Vijnana is actually the evolution of Jnana. Vijnana becomes Jnana when its "Vikara" (stain; syllable-Vi) vanishes!  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 529

ಹಣಕ್ಕಾಗಿ ಆಗಲೀ, ಇತರ ಯಾವುದೇ ವಿಷಯಕ್ಕಾಗಲೀ ಧ್ಯೇಯವನ್ನು, ಆದರ್ಶವನ್ನು ಮಾರಿಕೊಳ್ಳಬೇಡಿ. ಭಗವತ್ಕಾರ್ಯಕ್ಕಾಗಿ ಎಂದು ಭಗವದರ್ಪಣೆಯಾಗಿ ಬರುವುದನ್ನು, ಅದು ಪ್ರಮಾಣದಲ್ಲಿ ಸ್ವಲ್ಪವೇ ಆಗಿದ್ದರೂ ಸರಿ ಸ್ವೀಕರಿಸಿ. ಅದಕ್ಕಾಗಿ ಅಲ್ಲ- ಎಂದರೆ ಕೋಟಿ ಬಂದರೂ ಬೇಡಿ; ಕೊಟ್ಟರೂ ಹಿಂದಿರುಗಿಸಿಬಿಡಿ. ಹೆಚ್ಚಿಗೆ ಇಲ್ಲದಿದ್ದರೆ ಇರುವುದರಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿ. ಅನಾವಶ್ಯಕವಾದದ್ದನ್ನು ಕಟ್ಟಿಕೊಳ್ಳಬೇಡಿ; ಆತ್ಮಗತವಾದ ವಿಷಯಕ್ಕೆ ಎಂದಿಗೂ ಚ್ಯುತಿಯಿಲ್ಲ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 28, 2020

Nectarine Nuggets of Mahaaguru - 451

Having taken birth at the top of the lofty mountains, carrying only the icy waters in the purest form without the contact of soil, river Gangā descends from the celestial to the terrestrial plane. On reaching the earth, it picks up the heat and odour from a Sulphur-rich region and from another, the chill; in one place it is seen as pure white while in another it looks black – thus it exhibits varied properties according to the qualities of the terrain through which it flows. In the same way, Jnana-Ganga too, according to its very nature starts from the most elevated place and endeavors to manifest its true self, cascading down the seven regions and flowing to the rhythm of the resounding beats. Whenever an opportunity is presented, it continues to transform those regions and countries into holy lands.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 528

ಧ್ಯೇಯ ಧೋರಣೆಯಲ್ಲಿ ಮನುಷ್ಯನು ಅಳಿಯಲಿ, ಉಳಿಯಲಿ ವಿಷಯದತ್ತ ಹೆಜ್ಜೆಯಿಟ್ಟು, ಮೇಲೆ ಸ್ಥಿರವಾಗಿ ಕಾಲಿಟ್ಟು, ಯೋಧನಂತೆ ವರ್ತಿಸಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, March 27, 2020

Nectarine Nuggets of Mahaaguru - 450

On reaching the Samādhi state, all the sensory and motor organs cease to work; the breathing also stops!! But don't dread that state. Such a fear can be induced even in a person who has not experienced the joy of sleep by saying: "when you are asleep, your eyes can't see; your ears can't hear; everything is forgotten; even the money that you have lent to someone is forgotten! You rest like a corpse!" A fool may get bewildered by this. But it is true that all these things do happen during sleep. Does it then warrant foregoing sleep? No. For, sleep and deep sleep (Suṣupti) provide rest to all the tired senses. Compared to the peace that one obtains during deep sleep, one gets thousand-fold more joy, rest and tranquility (Samādhāna) in the Samādhi state.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 527

ಇಂದ್ರಿಯಗಳೇ ಪಶುಗಳು. ಅವುಗಳಿಗೆಲ್ಲಾ ಪತಿ ಭಗವಂತ. ಅವನ ಇಚ್ಛೆಗನುಸಾರವಾದ ಕ್ರಿಯೆ ನಡೆಸಿದಾಗ ಪಶುಪತಿಗೆ ಪ್ರೀತಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 26, 2020

Nectarine Nuggets of Mahaaguru - 449

Everyone has the practice of withdrawing the senses up to the heart. Only then, can one sleep. However, if they are withdrawn further upwards beyond the eye-brows, the state of Samādhi can be achieved. One gets complete Bliss there. You have all forgotten this aspect of reaching that state.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 526

ಅರಳೀಮರವು ಒಂದು ಋತುವಿನಲ್ಲಿ ಎಲ್ಲ ಎಲೆಗಳನ್ನೂ ಉದುರಿಸಿಕೊಂಡು ಬಿಡುತ್ತದೆ. ಏಕೆ ಈ ತ್ಯಾಗ? ಎಂದರೆ ಮುಂದಿನ ಚಿಗುರೆಲೆಗಳಿಗಾಗಿ, ಇಲ್ಲದಿದ್ದರೆ ಮುಂದಿನ ಚಿಗುರೆಲೆಗಳಿಗೆ ಜಾಗವಿರುವುದಿಲ್ಲ, ಹಾಗೆಯೇ ಸಾಧಕರು ಆತ್ಮ ವಿಕಾಸಕ್ಕಾಗಿ ತಮ್ಮ ಹಳೆಯದನ್ನು ಅನೇಕ ಹೆಜ್ಜೆಗಳಲ್ಲಿ ತ್ಯಾಗ ಮಾಡಬೇಕಾಗುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, March 25, 2020

Nectarine Nuggets of Mahaaguru - 448

Even in the physical domain, many things which are not visible to the naked eye are made visible through the microscope. Likewise, to make the most subtle form of the Lord in Paramdhama visible, one has to earn Divya- Dṛṣṭi through Sadhana (devout practice).

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಆಚರಣೆ ಅಂತರ್ಥ (Ugadi - Aacharaneya Antharartha) - 11

ಆಚರಣೆ ಅಂತರ್ಥ ದಕ್ಷಿಣಭಾರತದಲ್ಲಿ ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಪಕ್ಷಗಳಲ್ಲಿ ಶುಕ್ಲಪಕ್ಷವು ದೇವತೆಗಳಿಗೆ ಪ್ರಿಯವಾದದ್ದು. ಪಿತೃ ಪಕ್ಷವು ಪತೃಗಳಿಗೆ ಪ್ರಿಯವಾದುದು. ನವವರ್ಷದ ಪ್ರಥಮ ದೇವತಾ ಪೂಜೆಯೇ ಪ್ರಧಾನವಾಗಿರುವ ಯುಗಾದಿ ಶುಭಪರ್ವದ ಆಚರಣೆಗೆ ಶುಕ್ಲಪಕ್ಷವೇ ತಕ್ಕದಾದುದ್ದು. ಸೃಷ್ಟಿ ಮತ್ತು ಧಾರಣೆ ಪೋಷಣೆಗಳಿಗೆ ಅನ್ನ ಮತ್ತು ಔಷದಿಗಳು ಬೇಕು. ಆ ಔಷದಿಗಳಿಗೆಲ್ಲಾ ರಾಜನಾದ ಸೋಮ(ಚಂದ್ರ)ನು ವೃದ್ಧಿಯಾಗುವ ಪ್ರಥಮ ದಿವಸ. ಉಳಿದ ತಿಥಿಗಳಲ್ಲಿ ಚಂದ್ರನು ಅಪೂರ್ಣನಾಗಿರುತ್ತಾನೆ. ಅಥವಾ ಪೂರ್ಣನಾಗಿರುತ್ತಾನೆ. ಆರಂಭದ ದಿವಸಗಳಾಗುವುದಿಲ್ಲ. ಆದುದರಿಂದ ವರ್ಷದ ಪ್ರಥಮ ದಿನವನ್ನಾಗಿ ಚೈತ್ರ, ಶುಕ್ಲ ಪ್ರಥಮೆಯನ್ನೇ ಪರಿಗಣಿಸುವುದು ಯುಕ್ತವಾಗಿದೆ.

ಸೌರಮಾನ ಯುಗಾದಿಯಂದು ಸೂರ್ಯನು ರಾಶಿಚಕ್ರದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಇವುಗಳೆಲ್ಲವೂ ಪರ್ವಗಳೇ. ಅವುಗಳಲ್ಲಿ ಮೇಷ ಸಂಕ್ರಮಣವು ಅತ್ಯಂತ ಶುಭವಾದ ಕಾಲ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಲೇಖಕರು: ಡಾII ಯಶಸ್ವಿನೀ  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 525

ಸತ್ಯಕ್ಕಾಗಿ, ಭಗವತ್ಕಾರ್ಯಕ್ಕಾಗಿ ನಿಂತಮೇಲೆ ಶತಾಯು (ನೂರು ವರ್ಷ ಬದುಕುವವನು, ದೀರ್ಘಜೀವಿ), ಗತಾಯು(ಆಯುಸ್ಸು ಕಳೆದುಕೊಂಡವನು, ಪ್ರಾಣ ಹೋದವನು)ಗಳಾದರೂ ಚಿಂತೆಯಿಲ್ಲ. ಅಳ್ಳೆದೆಯಿಲ್ಲದೆ ದುಡಿಯಿರಿ. ಗೆದ್ದರೆ ಲಾಭ; ಮಡಿದರೆ ವೀರಸ್ವರ್ಗ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 24, 2020

Nectarine Nuggets of Mahaaguru - 447

The five sensory and the five motor organs do not function during sleep. Just as ordinary people use these organs, while awake, to get a grasp of external objects around them, the Yogi too, discerns the Mula-Tattva (Primordial principle) by opening his inner eye through the power of yoga. Such a vision is called Jnana Dṛṣṭi.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಚಾಂದ್ರಮಾನ-ಸೌರಮಾನ ಯುಗಾದಿ (Chandramana - Sauramana - Ugadi) - 10

ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನು ಮೇಷ, ವೃಷಭ, ಮಿಥುನಾದಿ 12 ನಕ್ಷತ್ರಗಳ ಗುಚ್ಛವನ್ನು ಸಂಕ್ರಮಿಸುತ್ತಾನೆ. ಮೇಷ ಸಂಕ್ರಮಣದಂದು ಸೂರ್ಯನ ಒಂದು ಆವರ್ತನೆ ಮುಗಿಯುತ್ತದೆ. ಹೊಸ ಆವರ್ತ ಪ್ರಾರಂಭವಾಗುತ್ತದೆ. ಈ ರೀತಿ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಹೆಚ್ಚಾಗಿ ಉತ್ತರ ಭಾರತದವರು ಸೌರಮಾನ ಯುಗಾದಿಯನ್ನು "ಚಿತ್ರವಿಪು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.

ನಾಳೆ ಮುಂದುವರೆಯುವುದು...
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 524

ದೇವನಿಗೋಸ್ಕರ ಗುರಿಯಿಟ್ಟು ಒಂದು ಜೀವ ಕೆಲಸ ಮಾಡುವುದಾದರೆ ಅಳಿಯಲಿ, ಉಳಿಯಲಿ ಅದಕ್ಕಾಗಿ ಮಾಡಬೇಕು ಅಥವಾ ಮಡಿಯಬೇಕು. ಹಲ್ಲಿಯ ಮುಂಭಾಗ ಕತ್ತರಿಸಿದರೂ ಬಾಲ ಆಡುತ್ತೆ. ಜೀವದ ಶಕ್ತಿ ಹಾಗೆ ಆಡಿಸುತ್ತೆ. ನಿಜವಾದ ನಿಷ್ಠೆಯಿಂದ ದುಡಿಯಿರಿ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, March 23, 2020

Nectarine Nuggets of Mahaaguru - 446

Darkness is not an object by itself. It simply 'manifests', in the absence of light! It vanishes as soon as the light appears. In the same way, Ajnana as such does not exist. As long as the light of Jnana does not shine, the darkness of Ajnana exists. The moment the gleam of Jnana enters, this gloom vanishes.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ (Ugadi) - 9

ಯುಗಾದಿ ಎಂಬ ಪದವೇ ಹೇಳುವಂತೆ, "ಯುಗಸ್ಯ ಆದಿ" ಯುಗಾದಿ, ಯುಗದ ಪ್ರಾರಂಭ ಎಂದರ್ಥ. ಯುಗ ಎಂದರೆ ಜೋಡಿ-ನೊಗ ಎಂಬ ಅರ್ಥಗಳಿವೆ. ಪ್ರಕೃತಿ-ಪುರುಷ ಶಕ್ತಿಗಳು ಕೂಡಿ ಸೃಷ್ಟಿ ಪ್ರಾರಂಭಿಸಿದ ದಿನ. ಯುಗಗಳು ನಾಲ್ಕು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು. ಶ್ರೀರಂಗಮಹಾಗುರುಗಳು ತಮ್ಮ ಯುಗಾದಿಯ ಸಂದೇಶಾಮೃತದಲ್ಲಿ ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಬ್ರಹ್ಮನು ಈ ದಿನ ಜಗತ್ತನ್ನು ಸೃಷ್ಟಿಸಿದನು.

ಅವನು ಪ್ರಾರಂಭಿಸಿದ್ದು ಸತ್ಯಯುಗವನ್ನು. ಅಂದರೆ ಸತ್ಯಧರ್ಮಮಯವಾದ ಬಾಳಾಟಕ್ಕೆ ತಕ್ಕ ಯೋಜನೆ ಹಾಕಿಕೊಂಡು ಅದನ್ನು ಪ್ರಾರಂಭಿಸಿವುದಕ್ಕೆ ಅನುಗುಣವಾದ ಧರ್ಮವುಳ್ಳ ದಿನ ಇಂದು. ಸಂಕ್ರಾಂತಿ ದಿನದಂದು "ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದು ಹೇಳುವಂತೆ ಯುಗಾದಿ ದಿನದಂದು "ಬೇವು ಬೆಲ್ಲ ತಿಂದು ಸತ್ಯಧರ್ಮದಿಂದ ಕೂಡಿದ ಬಾಳಾಟವನ್ನು ಮಾಡಿ" ಎಂಬ ಸಂದೇಶವನ್ನು ಈ ಆಚರಣೆಯ ಮಾತಿನಲ್ಲಿ ಅಡಗಿಸಿಟ್ಟಿದ್ದಾರೆ. ಹೊಸ ಸಂವತ್ಸರದ ಪ್ರಾರಂಭ ದಿನ.

ಸಂವತ್ಸರ ಎಂದರೆ ಋತುಗಳು ಪರಿವರ್ತನೆ ಹೊಂದುವ ಕಾಲ. ಆರು ಋತುಗಳಾದ ವಸಂತ, ಗ್ರೀಷ್ಮ ವರ್ಷ, ಶರತ್, ಹೇಮಂತ ಹಾಗೂ ಶಿಶಿರಗಳಲ್ಲಿ ವಸಂತ, ಗ್ರೀಷ್ಮ, ವರ್ಷ ಋತುಗಳು ದಕ್ಷಿಣಾಯನದಲ್ಲಿ ಬರುವ ಋತುಗಳು. ಇದನ್ನು ಆಯುರ್ವೇದದಲ್ಲಿ ವಿಸರ್ಗ ಕಾಲ ಎಂಬುದಾಗಿ ಪರಿಗಣಿಸಿದ್ದಾರೆ. ಅಂದರೆ ಶರತ್, ಹೇಮಂತ, ಶಿಶಿರ ಋತುಗಳು, ಉತ್ತಾರಾಯಣದಲ್ಲಿ ಬರುವ ಋತುಗಳು. ಯುಗಾದಿಯ ವಿಚಾರದಲ್ಲಿ ಜನರಲ್ಲಿ ದ್ವಂದ್ವ, ಗೊಂದಲ ಇದೆ.

ಯುಗಾದಿಯನ್ನು ಆಚರಿಸುವ ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಹಿಂದುಗಳಲ್ಲಿಯೇ ಈ ಗೊಂದಲ ದ್ವಂದ್ವಗಳು ಏಕೆ ಎಂಬ ಪ್ರಶ್ನೆ ಇದೆ. ಭಾರತದಲ್ಲಿ ಈ ಎರಡೂ ಯುಗಾದಿಯ ಆಚರಣೆ ವಾಡಿಕೆಯಲ್ಲಿದೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಿನಕ್ಕೆ ಚಂದ್ರನು ಭೂಮಿಯೊಂದಿಗೆ ಸೂರ್ಯನನ್ನು ಸುತ್ತಿ ಒಂದು ಆವರ್ತ ಸಮಾಪ್ತಿಯಾಗಿ ಮತ್ತೊಂದು ಆವರ್ತ ಪ್ರಾರಂಭವಾಗುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ    

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 523

ವೃಕ್ಷವು ಮೊದಲಿನ ಬೇರನ್ನು ಮರೆತರೆ ಹೇಗೋ ಮತ್ತು ಇಷ್ಟು ಅಂಗೋಪಾಂಗಗಳಲ್ಲಿ ನಡೆಯುವ ಎಲ್ಲಾ ಕೆಲಸಗಳೂ ಮೆದುಳಿಗೆ ತಲುಪದೇ ಹೋದರೆ ಹೇಗೋ ಅಂತೆಯೇ ನೀವು ನಡೆಸುವ ಎಲ್ಲಾ ಕೆಲಸಗಳೂ ಜಗದಾದಿಕಂದನಾದ ಪರಮಾನಂದ ಸ್ವರೂಪಿಯನ್ನು ಮುಟ್ಟದೇ ಹೋದರೆ ಅದರ ಬೆಳವಣಿಗೆಯಲ್ಲಿ ಒಂದು ಊನವು ಬಂದು ಸೇರುವುದು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, March 22, 2020

Nectarine Nuggets of Mahaaguru - 445

Since when does the Ajnana (ignorance) exist? Ajnana presents itself from the day of Jnana's existence. When did this shadow of the bright bed-lamp come into existence? It exists, right from the time the lamp started glowing.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ನೈವೇದ್ಯ (Ugadi - Naivedya) - 8

ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು" ಹೂವಿನೊಡನೆ ಕೂಡಿದ ಚಿಗುರಬೇವು, ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೇವಿನಿಂದ ಉಂಟಾಗುವ ವಾತ ವೃದ್ಧಿಯನ್ನು ಶಮನ ಮಾಡಲು ಸುಲಭವಾಗಿ ತಿನ್ನಲಾಗುವಂತೆ ಬೆಲ್ಲದೊಂದಿಗೆ ತಿನ್ನಬೇಕು. ಬೇವಿನ ಚಿಗುರೆಲೆಯ ಪಲ್ಯವು ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರಷನಿಗೆ ಅತಿಪ್ರಿಯವಾದುದು.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 522

ಭಗವಂತನ ಆಶಯಕ್ಕನುಗುಣವಾಗಿ ಕೆಲಸಮಾಡುವುದೇ ಆತ್ಮಚ್ಛಂದ (ಪರಮಾತ್ಮನ ಇಷ್ಟ, ಸಂಕಲ್ಪ). ಆ ಆಶಯಕ್ಕೆ ವಿರೊಧವಾದರೆ ಸ್ವಚ್ಛಂದ (ತನ್ನ ಮನಸೋ ಇಚ್ಛೆ).  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, March 21, 2020

Nectarine Nuggets of Mahaaguru - 444

Jnana without implementation (practice) and practice without Jnana are both ruinous; it is like a lame man with eyes and a blind man with legs (unable to reach the destination).  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಪಂಚಾಗ ಶ್ರವಣ (Ugadi - Panchanga Shravana) - 7

ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು. ಕಡೇಪಕ್ಷ ಅವುಗಳ ತಿಳುವಳಿಕೆಯಾದರೂ ಇರಬೇಕು. ಯುಗದ ಆದಿಯ ದಿನವಾದ ಇಂದು, ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ಈ ರೀತಿಯಾಗಿ ಪಂಚಾಂಗ ಶ್ರವಣ ಮಾಡುವ ಜ್ಯೋತಿಷರಿಗೆ ಕೃತಜ್ಞತೆಯಿಂದ ಯಥೋಚಿತ ಸಂಭಾವನೆ ನೀಡುವುದು ಕ್ರಮ.

ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನ ಮುಂತಾದವುಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 521

ಈಶ್ವರಸ್ಸರ್ವಭೂತಾನಾಂ ಹೃದ್ದೇಶೇ ಅರ್ಜುನ ತಿಷ್ಠತಿ ನಿಮ್ಮ ಹೃದಯದಲ್ಲೇ ನಿಮ್ಮ ಪ್ರಭುವಿದ್ದಾನೆ, ಹೃದಯವೆಂದರೆ ನಿಮಗೆ ಒಂದು ಗೇಣು. ಇಷ್ಟರಲ್ಲಿ ತಾನೇ ಅವನಿದ್ದಾನೆ ಎಂದರೆ, ನಿಮ್ಮ ಹೃದಯ ಒಂದು ಗೇಣಿರಬಹುದು. ಆದರೆ ಅಲ್ಲಿ ಅಂತರ್ಯಾಮಿಯಾಗಿದ್ದರೂ ವಾಸ್ತವವಾಗಿ ಆ ನನ್ನ ಪ್ರಭುವು ಭೂರ್ಭುವಸ್ಸುವರ್ಲೋಕಗಳನ್ನು ಮೀರಿ ನಿಂತಿದ್ದಾನೆ. ಅವನು ಅತ್ಯಂತ ಹತ್ತಿರದಲ್ಲಿಯೂ ಇದ್ದಾನೆ, ಅತಿದೂರದಲ್ಲಿಯೂ ಇದ್ದಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, March 20, 2020

Nectarine Nuggets of Mahaaguru - 443

When all the rotten thoughts, fit to be thrown into a dust-bin have filled our mind, how can a speech related to Jnana be relished by it? The room is filled with dirt; what to speak of a person who refuses to allow one to broom it up! Only the wind blowing over it should sweep it away. In the same way, it is enough to facilitate the Jnana-Maruta to blow over his mind which brushes all the dirt away.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಗೃಹಾಲಂಕಾರ-ಪೂಜೆ (Ugadi - Gruhaalakara pooje) - 6

ಗೃಹಾಲಂಕಾರ-ಪೂಜೆ: ಗೃಹಾಲಂಕಾರ:- ತಳಿರು ತೋರಣಗಳಿಂದ, ರಂಗವಲ್ಲಿ, ಹೂ ಅಲಂಕಾರಗಳಿಂದ ಇಂದು ಮನೆಯನ್ನೂ, ಪೂಜಾಗೃಹವನ್ನೂ ವಿಶೇಷವಾಗಿ ಅಲಂಕರಿಸಬೇಕು. ಕಣ್ಣುಗಳಿಗೆ ಹಬ್ಬವಾಗಿ ಮನಸ್ಸನ್ನು ಹಸಿರನ್ನಾಗಿ ಮಾಡುತ್ತದೆ. ಮನಸ್ಸನ್ನು ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದ ಅಲಂಕರಿಸಬೇಕು.

ಪೂಜೆ: ನಿತ್ಯವೂ ಪೂಜೆ ಮಾಡಬೇಕು. ಇಂದಿನ ದಿನ ಪ್ರಜಾಪತಿಯು ಸೃಷ್ಟಿಯ ಆರಂಭ ಮಾಡಿದ್ದರಿಂದ ಪ್ರಜಾಪತಿ/ಕಾಲಪುರುಷನನ್ನು ಇಂದು ಪೂಜಿಸಬೇಕು. ಭಗವಂತ, ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ.

ನಾಳೆ ಮುಂದುವರೆಯುವುದು......
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 520

ಸೀನು ಅಧಿಕಾರವುಳ್ಳವರಿಗೆ ಮಾತ್ರ ಬರೋದು, ಅನಧಿಕಾರಿಗಳಿಗಲ್ಲ. ಒಳಗೆ ನೆಗಡಿಯಾಗಿರಬೇಕು. ಲೈಟಿನ ಕಡೆ ತಿರುಗಿರಬೇಕು. ಕೊಡೋ ಟೈಮನ್ನೂ ಕೊಡಬೇಕು. ಇದೇ ರೀತಿ ಒಂದು ಪಕ್ಷ ಭಗವದಾಜ್ಞೆಯೇ ಒಂದು ರೀತಿ ಬಂದರೂ ಅದಕ್ಕೆ ಬೇಕಾದ ಮನೋಧರ್ಮವನ್ನೂ, ಕಾಲವನ್ನೂ ಅನುಸರಿಸಿಯೇ ಭಗವಂತ ಪ್ರಕಟವಾಗುತ್ತಾನೆ, ಸೀನ್ ಕ್ರಿಯೇಟ್ ಮಾಡುತ್ತಾನೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, March 19, 2020

Nectarine Nuggets of Mahaaguru - 442

The foot-prints of different animals get imprinted on the sands of the desert. However, when a hurricane blows over it, all these marks are wiped off. Likewise, if one exposes himself to the impending Jnana-Maruta, all the imprints of Ku-Samskṛti (evil impressions) formed in his brain are swept away.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿಯ ಆಚರಣೆ (Ugadiya Aacharane) - 5

ಯುಗಾದಿಯ ಶಾಸ್ತ್ರ ಸಂಪ್ರದಾಯಗಳ ಗುರಿಯು ಪುರಷಾರ್ಥಗಳ ಸಿದ್ಧಿ. ಅಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕೂ ಫಲಗಳನ್ನು ಪಡೆಯುವುದೇ ಆಗಿದೆ.

ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲದಕ್ಕೂ ಒಳ್ಳೆಯದನ್ನು ಮಾಡುವ ಪದಾರ್ಥಗಳನ್ನು ಅಂದು ಸೇವಿಸಬೇಕೆಂಬುದೇ ಇದರ ಉದ್ದೇಶ. ಯಾಂತ್ರಿಕವಾಗಿ ಸೇವನೆ ಮಾಡದೆ ಸಂಕಲ್ಪ ಸಹಿತವಾಗಿ, ಅಂತರಂಗದಲ್ಲಿರುವ ದೇವತೆಗಳ ಆರಾಧನೆಯೊಡನೆ ಸ್ವೀಕರಿಸಬೇಕೆಂದು ಋಷಿಗಳ ಆಶಯ.

ಅಭ್ಯಂಗ: ಪ್ರಾತ:ಕಾಲದಲ್ಲಿ "ಅಭ್ಯಂಗ" ಮಾಡಿಕೊಳ್ಳಬೇಕು. ಎಳ್ಳೆಣ್ಣೆಯಿಂದಲೇ ಅಭ್ಯಂಗ ಮಾಡಿಕೊಳ್ಳುವುದು ಪ್ರಶಸ್ತ. ಅಭ್ಯಂಗವನ್ನು ಪ್ರತಿದಿನವೂ ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು.

ದೃಷ್ಟಿಪಾಟವವನ್ನು ಕೂಡುವುದು. "ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯ ಇವುಗಳನ್ನುಂಟುಮಾಡುವುದು. ಚರ್ಮದ ಆರೋಗ್ಯ, ಸೌಂದರ್ಯ ಧೃಢತೆಗಳನ್ನು ತಂದುಕೊಡುವುದು ಎಂದು ಆಯುರ್ವೇದವು ಹೇಳುತ್ತದೆ. ಇದರಿಂದ ದೈಹಿಕ, ಮಾನಸಿಕ ಎರಡು ವಿಧವಾದ ಆರೋಗ್ಯವು ಕೂಡಿ ಬರುತ್ತದೆ. ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ. ದೇಹವು ಹಗುರವಾಗುತ್ತದೆ. ಅಂದು ಅಚರಿಸಬಹುದಾದ ಆರೋಗ್ಯವ್ರತಕ್ಕೂ ಇದು ನಾಂದಿಯಾಗುತ್ತದೆ. ಭೌತಿಕ ಲಾಭಗಳೊಂದಿಗೆ ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿಸುತ್ತದೆ.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 519

ಮಾನವ ತನ್ನ ಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋ ನಿಧಿಯು ತನ್ನ ಮಡಿಲಲ್ಲಿ ಅವನಿಗೆ ಜಾಗ ಕೊಡುತ್ತಾನೆ. ಆಗ ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ ಎಂದು ಪಲ್ಲವಿ ಹಾಡಬಹುದು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, March 18, 2020

Nectarine Nuggets of Mahaaguru - 441

A Purṇa-Jñāni (Perfect Jñāni) will never give up his Samskāra̅s, the impressions of the exalted, even though he may wander in any of the worlds.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಶಾರ್ವರಿ ವರ್ಷಾರಂಭ (Ugadi - Sharvari varsharambha) - 4

ಪ್ರಸ್ತುತ ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ. ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಇಂತಹ ಶುಭ ದಿನದಂದು ನಮ್ಮ ಶರೀರದಲ್ಲಿ ನವೀನತೆ ಉಂಟಾಗಲು ಎಳ್ಳೆಣ್ಣೆಯಿಂದ ಅಭ್ಯಂಜನವನ್ನು ಮಾಡುವುದಿದೆ. 

ಸೃಷ್ಟಿಕರ್ತನಾದ ಬ್ರಹ್ಮನು ಸೃಷ್ಟಿಯನ್ನು ಮೊದಲು ಮಾಡಿದ ದಿನ. ಕೃತಯುಗದ ಪ್ರಾರಂಭದ ದಿನ. ಆದ್ದರಿಂದಲೇ ಕೃತಯುಗದ ಲಕ್ಷಣಗಳು ಈ ಯುಗಾದಿ ದಿನದಂದು ಇರುತ್ತದೆ. ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ಕಾ ರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಒಂದು ಪದ್ಧತಿಯನ್ನು ತಂದಿದ್ದಾರೆ. 

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ||

ಬೇವಿನ ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ಲೆಕ್ಕರಸ, ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ.

ಹಬ್ಬವನ್ನು ಸತ್ಯ ವಿಧಾನವಾದ ಮನಸ್ಸಿನಿಂದ, ನಿಷ್ಠೆಯಿಂದ ಆಚರಿಸೋಣ. ಹಬ್ಬದ ಸಂಪೂರ್ಣ ಪ್ರಯೋಜನವನ್ನು ಪಡೆಯೋಣ. ವಿಶ್ವವನ್ನೆಲ್ಲಾ ವ್ಯಾಪಿಸಿ ಬೆಳಗುತ್ತಿರುವ ಲೋಕವಂದ್ಯನೂ ಮಹಾಯೋಗೇಶ್ವರನೂ, ಸುರೇಶ್ವರನೂ ಆದ ಭಗವಂತನನ್ನು ನಮ್ಮಲ್ಲಿ ನಾವು ಕಾಣುವಂತಾಗಲಿ. ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯು ದೊರಕಲಿ.

ನಾಳೆ ಮುಂದುವರೆಯುವುದು.......
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 518

ಭಗವಂತನು ವಿಶ್ವರಂಗದಲ್ಲಿ ಸದಾ ನರ್ತನ ಮಾಡುತ್ತಲೇ ಇರುತ್ತಾನೆ.  ಆದರೆ ಎಲ್ಲರೂ ಅದನ್ನು ಕಣ್ಣುಬಿಟ್ಟು ನೋಡುವುದಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, March 17, 2020

Nectarine Nuggets of Mahaaguru - 440

The lotus has a special property. Although born, grown and resident in water forever, the water does not stick to its leaf. In the same way, a Jnani too, though born and bred in Prakṛti (Creation, Cosmos) does not get stuck to the Prakṛta Bhava (worldly feelings) even though he is always moving in the company of Prakṛtas (ordinary mortals). {Lipyate na sa papena padmapatram ivambhasa}.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಹಿನ್ನೆಲೆ (Ugadi - Hinnele) - 3

ಯುಗಾದಿಯನ್ನು ಒಂದು ಪರ್ವ ಎಂದು ಕರೆಯುತ್ತಾರೆ. ಪರ್ವ ಎಂದರೆ ಗಿಣ್ಣು ಎಂದರ್ಥ. ಕಬ್ಬಿನಲ್ಲಿ ಗಿಣ್ಣುಗಳನ್ನು ನೋಡುತ್ತೇವೆ. ಈ ಗಿಣ್ಣುಗಳಿಗೆ ಪರ್ವ ಎಂದು ಹೆಸರು. ಇದು ಹಳೆಯದಕ್ಕೆ ಅಂತ್ಯ, ಮುಂದಿನದಕ್ಕೆ ಪ್ರಾರಂಭ. ಒಂದು ಸಂಧಿಯ ಕಾಲ.
ಇಂತಹ ಸಂಧಿಕಾಲದಲ್ಲಿ ನಮ್ಮ ಶರೀರದಲ್ಲಿ ಭಗವತ್ ಕಾರ್ಯಕ್ಕೆ ಅನುಕೂಲತೆ ಏರ್ಪಡುತ್ತದೆ. ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಅಂತಹ ವಿಶೇಷ ದಿನಗಳಲ್ಲಿ ಯುಗಾದಿ ಒಂದು. ರಾತ್ರಿ ಕಳೆದು ಹಗಲು, ಹಗಲು ಕಳೆದು ಮಧ್ಯಾಹ್ನ, ಮಧ್ಯಾಹ್ನ ಕಳೆದು ರಾತ್ರಿ. ಹೀಗೆ ಒಂದು ದಿನದಲ್ಲಿ ಮೂರು ಸಂಧ್ಯಾಕಾಲಗಳು ಸಂಭವಿಸುತ್ತದೆ. ಈ ಸಂಧ್ಯಾಕಾಲಗಳು ಯೋಗಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನ, ಪ್ರಾರ್ಥನೆ, ಭಜನೆ, ಪೂಜಾ, ಮಂಗಳಾರತಿಗೆ ಯೋಗ್ಯಕಾಲ. ಸಂಧ್ಯಾಕಾಲದಲ್ಲಿ ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಕಾಲ. ಹಾಗೆಯೇ ಇಡೀ ಒಂದು ವರ್ಷದಲ್ಲಿ ಆತ್ಮಸಾಧನೆಗೆ, ಭಗವಂತನ ಅನುಗ್ರಹಕ್ಕೆ ಯೋಗ್ಯ ಕಾಲಗಳು ಒದಗಿಬರುತ್ತದೆ. ಅಂತಹ ದಿನಗಳಲ್ಲಿ ಗ್ರಹ, ನಕ್ಷತ್ರಾದಿಗಳಲ್ಲಿ ಯೋಗ ಉಂಟಾದಾಗ ಅವುಗಳನ್ನು ಹಬ್ಬಗಳನ್ನಾಗಿ ಆಚರಿಸುತ್ತಿದ್ದೇವೆ. ಗಣೇಶನ ಅನುಗ್ರಹಕ್ಕೆ ಅನುಕೂಲವಾದ ತಿಥಿ, ಪಕ್ಷದಂದು ಗಣಪತಿ ವ್ರತ ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರಾದ ಆರ್ಯ ಋಷಿಗಳು ಆಯಾ ದೇವತಾ ಅನುಗ್ರಹಕ್ಕೆ ಸಹಜವಾಗಿ ಯೋಗ ಕೂಡಿಬರುವುದನ್ನು ಗುರುತಿಸಿ ಹಬ್ಬಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿರುತ್ತಾರೆ. ಹಬ್ಬ ಯಾವ ಋತುವಿನಲ್ಲಿರುತ್ತದೆಯೋ ಅದಕ್ಕೆ ತಕ್ಕಂತಹ ಆಹಾರ, ಭಕ್ಷ್ಯ ಅಂದು ಮಾಡುವ ಸಂಪ್ರದಾಯವಿದೆ. ಆಯಾ ದೇವತಾ ಪ್ರಸನ್ನತೆಗೆ ನಮ್ಮೀ ಶರೀರವು ಬಿಟ್ಟುಕೊಡುವಂತೆ ನಮ್ಮಲ್ಲಿ ಧಾತುಸಾಮ್ಯತೆ ಉಂಟಾಗುವಂತೆ ಮಾಡುವ ವ್ಯವಸ್ಥೆ ಇದು. ರಾಮನವಮಿಯಲ್ಲಿ ಬಿಸಿಲ ಬೇಗೆಗೆ ಶರೀರದಲ್ಲಿಯ ಉಷ್ಣತೆ ಕಡಿಮೆ ಮಾಡಿ ಧಾತು ಸಾಮ್ಯತೆ ತರಲು ಕೋಸಂಬರಿ, ಪಾನಕ, ಗಣೇಶ ಚತುರ್ಥಿಯಂದು ಮೂಲಾಧಾರಕ್ಕೆ ಪುಷ್ಟಿಯನ್ನು ನೀಡುವ ಚಕ್ಕಲಿ ಭಕ್ಷ್ಯ ಸೇವನೆ ಮಾಡುವ ಕ್ರಮ ಇರುವುದಾಗಿದೆ. ನಾಳೆ ಮುಂದುವರೆಯುವುದು....... ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 517

ಇಂದ್ರಿಯಗಳ ಹಿಂದಿದ್ದು ಜೀವವು ತನ್ನ ಇಚ್ಛೆಯನ್ನು ನಡೆಸಿಕೊಳ್ಳುವಂತೆ, ಜೀವನ ಹಿಂದೆ ಕುಳಿತು ಭಗವಂತನೂ ತನ್ನ ಸಂಕಲ್ಪವನ್ನು ನಡೆಸಿಕೊಳ್ಳುತ್ತಾನೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, March 16, 2020

ಯುಗಾದಿ - ಜಿಜ್ಞಾಸೆ (Ugadi - Jignase) - 2

ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ಮಾ ಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ಪ್ರ ವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ.

ನಾಳೆ ಮುಂದುವರೆಯುವುದು......
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಯುಗಾದಿ - ಋಷಿದೃಷ್ಟಿ (Ugadi - Rushi drusti) - 1

ಯುಗಾದಿಹಬ್ಬ ಎಂದರೆ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ, ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿ ಅನುಭವಗಳನ್ನು ಸಂಪೂರ್ಣ ಭಗವದರ್ಪಣೆ ಮಾಡುತ್ತೇವೆ. ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ಇಂದು ವರ್ಷಾದ್ಯಂತ ಆಚರಿಸುವ ಸತ್ಕಾರ್ಯ, ಜಪ ಮುಂತಾದ ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಲು, ಸಂಕಲ್ಪ ಮಾಡಲು ಪ್ರಶಸ್ತವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು.

ನಾಳೆ ಮುಂದುವರೆಯುವುದು....
ಲೇಖಕರು: ಡಾII ಯಶಸ್ವಿನೀ

To know more about Astanga Yoga Vijnana Mandiram (AYVM) please visit our Official Website, Facebook and Twitter pages

Nectarine Nuggets of Mahaaguru - 439

Jñāna does not reside in books, schools or monasteries; it has to be achieved within oneself over time through yoga.

To know more about Astanga Yoga Vijnana Mandiram (AYVM) please visit our Official Website, Facebook and Twitter pages