ಶಾಂತಿಧಾಮಕ್ಕೆ ಹೋಗಿ ಶಾಂತಿಯನ್ನು ತುಂಬಿಕೊಂಡು ಅದನ್ನು ಇಲ್ಲೂ ನಡೆಸುವಂತೆ ಆಗಬೇಕು. ಅಲ್ಲಿಗೆ ಹೋಗುವುದಾದರೂ ಏತಕ್ಕೆ? ಇಂದ್ರಿಯಗಳ ದ್ವಾರಾ ಅತೀಂದ್ರಿಯ ಜೀವನಕ್ಕೆ ಬೇಕಾದುದನ್ನು ಸಂಪಾದಿಸಲೋಸುಗ. ಹಾಗೆ ಹೋದಾಗ ಅಲ್ಲಿಯೂ ಇಂದ್ರಿಯಕ್ಕೆ ಬೇಕಾದ ವಿಷಯಗಳನ್ನು ಮಾತ್ರ ತೆಗೆದುಕೊಂಡು ಬರುವುದಾದರೆ ಏನು ಪ್ರಯೋಜನ? ತಿರಿಪ್ಪಲ್ಲಾಣಿಗೆ ಹೋಗಿದ್ದೆ. ತಿರುಪ್ಪಲ್ಲಾಣಿಯ ಪಾಯಸ ಬಲುಸೊಗಸು. ಹಾಗೆಯೇ ೪೦ ದೊನ್ನೆ ಬಗ್ಗಿಸಿ ಕೊಂಡುಬಿಟ್ಟೆ" ಎಂದು ಕೊಂಡಾಡುವುದು! "ಇಷ್ಟು ಖರ್ಚುಮಾಡಿ ಪಾಯಸಕುಡಿಯಲು ತಿರುಪ್ಪಲ್ಲಾಣಿಗೆ ಹೋಗಬೇಕಿತ್ತೇ? ಮನೆಯಲ್ಲಿ ಅಂತಹ ಪಾಯಸ ಮಾಡುತ್ತಿದ್ದೆವಲ್ಲಾ" ಎಂದು ಗೃಹಿಣಿ ಹೇಳಿದರೆ "ಏನೇ ಆಗಲಿ, ಇಷ್ಟು ಖರ್ಚುಮಾಡಿ ಪಾಯಸ ತಿಂದಂತೆ ಆಗುತ್ತಿತ್ತೇ?" ಎನ್ನ ಬಹುದು. ಒಟ್ಟಿನಲ್ಲಿ ಆದದ್ದೇನು ಅಂದರೆ ೪೦ ರೂಪಾಯಿ ಖರ್ಚುಮಾಡಿ ೪ ರೂಪಾಯಿ ಪಾಯಸ ತಿಂದದ್ದು, ೩೬ ರೂ. ನಷ್ಟ! ಇಷ್ಟುತಾನೆ, ಅದರಿಂದ ಆದ ಫಲಿತಾಂಶ? ಸರಿಯಾದ ದೃಷ್ಟಿಕೋಣವಿಲ್ಲದಿದ್ದರೆ ಅಷ್ಟರಲ್ಲೇ ಆಗುತ್ತೆ.
To know more about Astanga Yoga Vijnana Mandiram (AYVM) please visit our Official Website, Facebook and Twitter pages