Saturday, October 10, 2020

ಶ್ರೀರಂಗ ವಚನಾಮೃತ (Sriranga Vachanamruta) - 724

(ತೀರ್ಥಕ್ಷೇತ ಒಂದರಲ್ಲಿದ್ದ ಅಶ್ವತ್ಥವೃಕ್ಷ ವೇದಾಂತ ದೇಶಿಕರ ಕಾಲದ್ದು ಎಂಬ ಐತಿಹ್ಯದ ಆಧಾರದ ಮೇಲೆ ಆಡಿದ ಮಾತು) ಊರ್ಧ್ವಮೂಲವೂ, ಅಧಶ್ಶಾಖವೂ ಆದ ಸನಾತನ ಅಶ್ವತ್ಥವುಂಟು. ಅದನ್ನು ಸೂಚಿಸುವ ಹೊರಗಿನ ಅರಳಿಯಮರದ ಬುಡದಲ್ಲಿ ಜ್ಞಾನಿಯೊಬ್ಬನು ತಪಸ್ಸುಮಾಡಿ ಪಾವನವಾದ ಅಶ್ವತ್ಥವೂ ಇರಬಹುದು. ಆದರೆ ಸಾವಿರಾರು ವರ್ಷಕಾಲವಾದಮೇಲೂ ಅದೇ ಮರ ಹಾಗೆಯೇ ಇರುವುದೇ? 'ದೇಶಿಕರಕಾಲದಿಂದಲೂ ಹಾಗೆಯೇ ಇರುವ ಅಶ್ವತ್ಥ ಇದು'-ಎಂದರೆ ಮೂಢನಂಬಿಕೆ. ದೇವಾಲಯದವರು ಈಗ ತೋರಿಸುವ ಮರಕ್ಕೆ ೩೦ ವರ್ಷಗಳಾಗಿರಬಹುದು ಅಷ್ಟೇ. ಆದರೆ ಈ ಮರವು ಯಾವುದರ ಪ್ರತೀಕವಾಗಿದೆಯೋ ಆ ಅಶ್ವತ್ಥವು ಸನಾತನ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages