Saturday, August 29, 2020

ಶ್ರೀರಂಗ ವಚನಾಮೃತ (Sriranga Vachanamruta) - 682

ಒಳಗೆ ಆನಂದವುಂಟಾದಾಗ ಆನಂದಬಾಷ್ಪದರೂಪದಲ್ಲಿ ಅದು ಹೊರಹೊರಡುವುದುಂಟು. ಕಣ್ಣೀರನ್ನು ನೋಡಿ ಮತ್ತು ಮುಖವಿಕಾಸಾದಿ ಇತರ ಲಕ್ಷಣಗಳಿಂದ ಆನಂದವೆಂದು ಹಿಡಿದು ಒಳ ಸಂತೋಷವನ್ನು ಗುರುತಿಸ ಬಹುದು. ಹಾಗೆಯೇ ಮಹಾತ್ಮರು ತಮ್ಮೊಳಗೆ ದೇವನನ್ನನುಭವಿಸಿ ಹೊರಗೆ ಅದರ ಗುರುತನ್ನು ಇಡಲು, ಹೊರಗಿನಿಂದ ಒಳಗೆಳೆಯಲು ದೇವಾಲಯಗಳನ್ನು ತಂದರು.



To know more about Astanga Yoga Vijnana Mandiram (AYVM) please visit our Official Website, Facebook and Twitter pages