ಜನಸಾಮಾನ್ಯರಲ್ಲಿ ಕಾಮ, ಕ್ರೋಧ ಮುಂತಾದುವು ಉಂಟಾದಾಗ ಅವು ಹೊರಕ್ಕೆ ಬರಲು ಅವಕಾಶವನ್ನು ಬಯಸುತ್ತವೆ. ಕೋಪ ಬಂದಾಗ ಕಣ್ಣು ಕೆಂಪಾಗುತ್ತದೆ. ತುಟಿ ನಡುಗುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಈ ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವರು ಒಂದು ಪರಮಶಾಂತಿಯನ್ನನುಭವಿಸಿದರೆ ಅದೂ ಸಹ ಹೊರಗೆ ಬರಲು ದಾರಿಯನ್ನು ಹುಡುಕುತ್ತದೆ. ಅಲ್ಲಿ ಅದಕ್ಕೆ ಸಾಧನವು ಇಂದ್ರಿಯಗಳಾಗಬಹುದು, ಬೆಟ್ಟದ ಮೇಲಿನ ಕಲ್ಲಾಗಬಹುದು, ಹಿಮಾಲಯದ ಮೇಲಿನ ಹಿಮರಾಶಿಯಾಗಬಹುದು. ಅಂತೂ ಅವುಗಳನ್ನು ತೆಗೆದುಕೊಂಡು ಮಹರ್ಷಿಗಳು ಅವುಗಳಿಗೆ ತಮ್ಮ ಮನೋಧರ್ಮದ ಮುದ್ರೆಯನ್ನೊತ್ತಿಬಿಟ್ಟರು.
To know more about Astanga Yoga Vijnana Mandiram (AYVM) please visit our Official Website, Facebook and Twitter pages