Monday, August 17, 2020

ಶ್ರೀರಂಗ ವಚನಾಮೃತ (Sriranga Vachanamruta) - 670

ಪ್ರಕೃತಿಯಲ್ಲಿ ಒಂದು ಭಾವವು ಮುದ್ರಿತವಾಗುತ್ತಿರುವುದೂ, ಇನ್ನೊಂದು ಭಾವವು ಹರಿದಾಗ ಮೊದಲನೆಯದು ಅಳಿದು ಅದು ಮುದ್ರಿತವಾಗುವುದೂ ಕಂಡುಬಂದಿದೆ. ಪ್ರಾಕೃತವಾದ ಮನುಷ್ಯನಲ್ಲಿ ಅಪ್ರಾಕೃತರಸವು ಮೂಡಿದಾಗ ಪ್ರಾಕೃತವಾದ ಹಿನ್ನೆಲೆಯಲ್ಲಿರುವ ಅಪ್ರಾಕೃತರೂಪವನ್ನೇ ನೋಡಬೇಕು. ಲೋಹಮಯ ನಟರಾಜರೂಪವೇ ಎದುರಿಗಿದ್ದರೂ ಹಿಂದಿರುವ ಅದರ ಚಿನ್ಮಯ ಮೂರ್ತಿಯನ್ನು ನೋಡಬೇಕು. ಅದರ ಹಿಂದಿರುವ, ಅದರ ಒಳಗಿರುವ ಚಿನ್ಮಯಮೂರ್ತಿ ಎಂದರೆ ಲೋಹವನ್ನು ಒಡೆದು "ಎಲ್ಲಿ, ಕಾಣಲೇ ಇಲ್ಲ ಎಂದರೆ, ಹಾಗೆ ಮೂರ್ತಿ ಮುರಿದರೆ ಒಳರೂಪ ಸಿಕ್ಕೋಲ್ಲ. ಬುದ್ಧಿಯ ಒಳಗಡೆ ಆಲೋಚನೆ ಸಿಕ್ಕೋಲ್ಲ. ಅದನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಹೊರಚೇಷ್ಟೆಗಳಿಂದ ಹೊರಗೆ ಅದು ಬಿಟ್ಟಿರುವ ಚಿಹ್ನೆಯಿಂದ ಅದನ್ನು ಗಮನಿಸಬೇಕು. ಶರೀರದೊಳಗೆ "ನಿನ್ನ ಶರೀರದಲ್ಲಿ ಮೂಳೆಯೇ ಇಲ್ಲ" ಎಂದರೆ ಅದನ್ನು ಹೇಗೆ ತೋರಿಸುವುದು? ಮೂಳೆ ಕಿತ್ತು ತೋರಿಸುವ ಹೊತ್ತಿಗೆ ಆಸಾಮಿಯೇ ಇರುವುದಿಲ್ಲ. ಹಾಗೆ ತೋರಿಸಬೇಕಾದರೆ ಮೂಳೆ ಕಿತ್ತು ತೋರಿಸುವುದಕ್ಕೆ ಹೋಗಬೇಕಾಗಿಲ್ಲ. ಎಕ್ಸ್ ರೆ ಪ್ರಕಾಶ ಬಿಟ್ಟು ನೋಡಿದರೆ ಒಳಗಡೆಯ ವಿಷಯ ತಿಳಿಯುತ್ತೆ. ಅಂತೆಯೇ ನಟರಾಜನ ವಿಷಯ ನೋಡಬೇಕಾದರೂ ಒಂದು ಪ್ರಕಾಶ ಬೇಕು. ಮಹರ್ಷಿಗಳ ಮನಸ್ಸಿನಿಂದ ಬಂದ ಮೂರ್ತಿಶಿಲ್ಪವನ್ನು ಅಂತೆಯೇ ತೆಗೆದುಕೊಳ್ಳಬೇಕು. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages