ಶಿಲೆಯ ಮೇಲೆ ಕಲೆ ಇರುವಾಗ ಭಗವತ್ಸಂಬಂಧವಾದ ಸಂಸ್ಕಾರ ಕೊಡುತ್ತೆ. ತನ್ನ ನೆಲೆಯಲ್ಲಿ ನಿಲ್ಲಿಸುವುದಕ್ಕೆ ಪ್ರೇರಕ ಸಾಮಗ್ರಿಯನ್ನು ಕೊಡುತ್ತೆ. ನಿಮ್ಮಗಳಿಗೆ ಆನಂದ ಅನುಭವಿಸಲು ಒಂದು ವಾತಾವರಣ ರಚನೆ ಮಾಡಿಕೊಡುತ್ತೆ. ಅದರಿಂದ ಆನಂದವನ್ನು ಅನುಭವಿಸಬೇಕು. ಈ ಆನಂದಕ್ಕೆ ಮತ್ತಾವುದೂ ಸಮವಲ್ಲ. ಜಾಗೃದವಸ್ಥೆಯಿಂದ ನಿದ್ರೆಗೆ ಹೋಗಿ ಮತ್ತೆ ಜಾಗೃತ್ತಿಗೆ ಬಂದಾಗ ನಿದ್ರೆಯ ಕೊಂಡಾಟವಿರುತ್ತೆ. ಏಕೆ ಎಂದರೆ ಅದರಲ್ಲಿ ಸೌಖ್ಯವಿರುತ್ತೆ. ಅಂತೆಯೇ ಈ ಜಾಗ್ರದವಸ್ಥೆಯಿಂದ ವಿಶ್ರಾಂತಿಧಾಮವಾದ ಆತ್ಮಧಾಮದಲ್ಲಿ ನಿಲ್ಲಿಸಿ ಪಾಮರರನ್ನು ಒಳ್ಳೆಯ ಮಾರ್ಗಕ್ಕೆ ಎಳೆಯುವುದಕ್ಕೆ ಅವಕಾಶವಿದೆ. ವಿಷಯ ಹೊರವಿಗ್ರಹದಲ್ಲಿಯೇ ನಿಲ್ಲಬಾರದು. ಹೊರವಿಗ್ರಹವು ಪಾಮರರನ್ನು ಭಗವಂತನೆಡೆಗೆ ಎಳೆಯುವ ಸಾಧನ.
To know more about Astanga Yoga Vijnana Mandiram (AYVM) please visit our Official Website, Facebook and Twitter pages