ಢಕ್ಕೆಯಲ್ಲಿರುವುದು ಕಪ್ಪೆ ಚರ್ಮವೇ ಆದರೂ ಅದು ನಟರಾಜನ ಕೈಯಲ್ಲಿದ್ದಾಗ ದಿವ್ಯನಾದದ ಹರಿವಿಗೆ ಸಾಧನವಾಗುತ್ತೆ. ವೀಣೆಯಲ್ಲಿ ಮರತಂತಿಗಳಿದ್ದರೂ ಅದರಲ್ಲಿ ಗಾಯಕನ ಮನೋಧರ್ಮ ಹರಿದಾಗ ಮಧುರಗಾನವನ್ನು ಕೇಳಬಹುದು. ಹೀಗೆ ಜ್ಞಾನಿಗಳು ತಮ್ಮ ಒಂದು ಬೆಲೆಯರಿತು ಶಿಲೆಯಮೇಲೆ ಕಲೆಯನ್ನು ಮೂಡಿಸಿ ಮಾಡಿರುವ ಕೆಲಸವುಂಟು. ಅದರ ಪೈಕಿ ನಟರಾಜನ ಮೂರ್ತಿಯು ಒಂದಾಗಿದೆ.
To know more about Astanga Yoga Vijnana Mandiram (AYVM) please visit our Official Website, Facebook and Twitter pages