ಜೀವನವು ಜ್ಞಾನ-ಕರ್ಮ ಎರಡರ ಸಮ್ಮೇಳನದಿಂದ ಕೂಡಿದೆ. ಇವುಗಳಲ್ಲಿ ಜ್ಞಾನವು ಮುಖ್ಯ. ಜ್ಞಾನಕ್ಕನುಗುಣವಾದ ಕರ್ಮವಿರಬೇಕು. ವ್ಯತ್ಯಾಸವಾದರೆ ಜೀವನ ಕೆಡುತ್ತೆ. ಎಲ್ಲವೂ ತಮಗನುಗುಣವಾದ ಕ್ರಿಯೆಯನ್ನು ಮಾತ್ರ ಒಪ್ಪಿಕೊಳ್ಳುತ್ತವೆ. ಇಲ್ಲವಾದರೆ ಅದನ್ನು ಪ್ರತಿಭಟಿಸುತ್ತವೆ. ಕಣ್ಣು ಮೆಣಸಿನ ಪುಡಿಯನ್ನು ಹಾಕಿದರೆ ಇಷ್ಟಪಡುತ್ತದೆಯೇ? ಕಿವಿ ನಸ್ಯ ಹಾಕಿಕೊಳ್ಳಲು ಇಷ್ಟಪಡುತ್ತದೆಯೇ? ಜ್ಞಾನಸ್ವರೂಪಿಯಾದ ಆತ್ಮನೂ ತನಗೆ ವಿರುದ್ಧವಾದುದನ್ನು ಬಯಸುವುದಿಲ್ಲ. ಈ ಸ್ವರೂಪದ ಜ್ಞಾನ ಮತ್ತು ಅದಕ್ಕನುಗುಣವಾದ ಕರ್ಮ, ಹೀಗೆ ಜ್ಞಾನ-ಕರ್ಮ ಈ ಎರಡರ ಸಮ್ಮೇಳನದಿಂದ ಜೀವನ ನಡೆದ ಪಕ್ಷದಲ್ಲಿ ಜೀವನ ಸುವ್ಯವಸ್ಥಿತವಾಗಿರುತ್ತೆ.
To know more about Astanga Yoga Vijnana Mandiram (AYVM) please visit our Official Website, Facebook and Twitter pages