ನಾವು ಒಂದೆಡೆಯಿಂದ ಒಂದೆಡೆಗೆ ಹೋಗಲು ವಿವಿಧ ರೀತಿಯ ಯಾನಗಳನ್ನು ಉಪಯೋಗಿಸುತ್ತೇವೆ. ಸೈಕಲ್ನಲ್ಲಿ ಹೋಗುವುದು ಉಂಟು. ರೈಲಿನಲ್ಲಿಯೂ ಹೋಗಬಹುದು. ಕಾರ್ ಉಪಯೋಗಿಸಬಹುದು. ನೀರಿನಲ್ಲಿ ದೋಣಿ-ಹಡಗುಗಳ ಮೂಲಕ ಹೋಗಬಹುದು. ಆಕಾಶದಲ್ಲಿ ಏರೋಪ್ಲೇನುಗಳ ಮೂಲಕ ಹೋಗಬಹುದು. ಇನ್ನೂ ಬಾಹ್ಯಾಂತರಿಕ್ಷಕ್ಕೆ ರಾಕೆಟ್ ಮೂಲಕ ಹೋಗಬಹುದು. ಹಾಗೆಯೇ ವೈಕುಂಠಲೋಕಕ್ಕೆ ಹೋಗಲು ಒಂದು ಯಾನವಿರಬಹುದಲ್ಲವೇ? ನಮ್ಮ ದೇಹವೇ ಆ ರೀತಿಯಾದ ಒಂದು ಯಾನವಾಗಿದೆ. ಒಂದೇ ಯಂತ್ರ-ಆಕಾಶದಲ್ಲಿ ಹಾರಿದರೆ ಏರೋಪ್ಲೇನ್ ಆಗಬೇಕು, ಭೂಮಿಯ ಮೇಲೆ ಬಿದ್ದರೆ ರೈಲು, ಬಸ್ಗಳಾಗಬೇಕು. ನೀರಿನಲ್ಲಿ ಬಿದ್ದರೆ ಹಡಗಿನಂತೆ ಆಗಬೇಕು. ಒಳಗೆ ಮುಳುಗಿದರೆ ಸಬ್ಮೆರಿನ್ ಆಗಬೇಕು. ಅಷ್ಟನ್ನೂ ಒಂದೇ ಯಂತ್ರದಲ್ಲಿ ಅಳವಡಿಸಿದರೆ ಎಲ್ಲಿ ಬಂದರೂ ಚ್ಯುತಿಯಿಲ್ಲ. ತನ್ನ ಗತಿ ತಪ್ಪುವುದಿಲ್ಲ ಅಲ್ಲವೇ? ಆ ಯಂತ್ರ ಯಾವುದಪ್ಪಾ ಅಂದರೆ ನಾವೇ. ಅದು ನಮ್ಮ ದೇಹವೇ ಆಗಿದೆ. ಎಲ್ಲೋ ಕುಳಿತು ಭೌತಿಕವಾದ ವ್ಯವಹಾರದಲ್ಲಿದ್ದರೆ ಭೂಲೋಕದಲ್ಲಿರಬಹುದು. ಹಾಗೆ ಸ್ವಲ್ಪ ಸುರಲೋಕಕ್ಕೆ ಹೋಗುತ್ತೇನೆ ಎಂದರೆ ಅದಕ್ಕೂ ಜಾಗವುಂಟು. ವೈಕುಂಠಲೋಕಕ್ಕೆ ಹೋಗಲೂ ಜಾಗವುಂಟು. ಎಲ್ಲಿದ್ದರೂ ಆ ಯಂತ್ರ ನಡೆಯುತ್ತಿರಬೇಕು. ಪತಿತನಾಗಬಾರದು. ಪತನಭೀತಿ ಇರಬಾರದು. ದಿವಿಯೋ ಭುವಿಯೋ ಎಲ್ಲೇ ಇರಲಿ, ತನ್ನ ಗುರಿಯ ಕಡೆಗೆ ಲಕ್ಷ್ಯವಿರಬೇಕು.
To know more about Astanga Yoga Vijnana Mandiram (AYVM) please visit our Official
Website,
Facebook
and
Twitter
pages