Thursday, September 15, 2022

ಶ್ರೀರಂಗ ವಚನಾಮೃತ (Sriranga Vachanamruta)

ಮಾವಿನ ಮಿಡಿಯಿಂದ ಹಿಡಿದು ಹಿಡಿಗಾತ್ರ ಹಣ್ಣಾಗುವವರೆಗೂ ಗಮನಿಸಿ. ಮೊದಲು ಕಹಿ, ಒಗರು, ಹುಳಿ, ಉಪ್ಪು, ಸ್ವಲ್ಪ ಕಟು ಹೀಗೆ, ಒಂದೊಂದಾಗಿ ರಸಗಳು ಪ್ರಕಟವಾಗಿ, ಕ್ರಮವಾಗಿ ಬೆಳೆದು ಬಂದು, ಮಧುರ ರಸದಲ್ಲಿ ನಿಲ್ಲುತ್ತದೆ. ಮಿಡಿಯಿಂದ ಹಿಡಿಗಾತ್ರದ ಹಣ್ಣಾಗುವಷ್ಟರಲ್ಲಿ ಷಡ್ರಸಗಳೂ ತಮ್ಮ ತಮ್ಮ ಪಾತ್ರವನ್ನು ವಹಿಸುತ್ತವೆ. ಹೀಗೆ ಒಂದು ಜೀವನದ ಬೆಳವಣಿಗೆಯಲ್ಲಿಯೂ ಷಡ್ರಸಗಳ ಪಾತ್ರವುಂಟು. ಷಡ್ರಸಗಳು ಮಧುರದಲ್ಲಿ ನಿಲ್ಲುವಂತೆ ಜೀವನವು ಮಧುರತಮವಾದ ನೆಲೆಯಲ್ಲಿ ನಿಲ್ಲಬೇಕು. ಇದು ಜೀವನದ ತಾತ್ಪರ್ಯ. ಸೃಷ್ಟಿಯಲ್ಲಿ ಸಿದ್ಧಾಂತವಾಗಿರುವ ನಿರ್ಣಯವಿದಾಗಿದೆ. ಸೃಷ್ಟಿ ಸಹಜವೂ, ಸತ್ಯ ಸಿದ್ಧವೂ, ಆತ್ಮ ಸಿದ್ಧವೂ ಆಗಿದೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages