Thursday, December 10, 2020

ಶ್ರೀರಂಗ ವಚನಾಮೃತ (Sriranga Vachanamruta) - 785

ಮಗುವಿನ ಕೈಗೆ ಬೀದಿಯಲ್ಲಿ ಬಿದ್ದಿರುವ ಒಂದು ಹೆಂಚಿನಬಕ್ಕರೆ ಸಿಕ್ಕಿದರೂ ಅದರಲ್ಲಿ ಅದು ಒಂದು ಮಗುವಿನ ಉತ್ಸವ ಮಾಡಿಸುತ್ತೆ. "ಪಾಪ" ಎಂದು ಅದಕ್ಕೆ ತನ್ನ ಭಾವವನ್ನು ಅಂಟಿಸುತ್ತದೆ. ಆ ಹೆಂಚಿನ ಚೂರಿಗೆ ಜೀವವನ್ನು ತುಂಬುತ್ತದೆ. ಅದನ್ನು ಯಾರಾದರೂ ಕಿತ್ತುಎಸೆದರೆ ತನ್ನ ಮಗು ಹೋಯಿತು ಎಂದು ಅಳುತ್ತದೆ. ಏಕೆ? ಅಲ್ಲಿ ಅವುಗಳ ಹೃದಯವನ್ನು ತೆಗೆದುಕೊಳ್ಳಬೇಕು. ಮಗುವಿಗೆ ಅದು ಕೇವಲ ಹೆಂಚಿನ ಚೂರಲ್ಲ. ತನ್ನ ಮನಸ್ಸಿನಲ್ಲಿರುವ ಮಗುವನ್ನು ಅದರಲ್ಲಿಟ್ಟಿದೆ. ಆದ್ದರಿಂದ ಹಾಗೆ ಪ್ರೀತಿಪಡುವುದು, ಅಳುವುದು, ಎಲ್ಲಾಉಂಟು. ಹಾಗೆ ನಮ್ಮ ಜೀವನದ ತೊಟ್ಟಿಲಿನಲ್ಲಿ ಭಗವಂತನ ವಿಗ್ರಹವನ್ನಿಟ್ಟು ಅವನೊಡನೆ ಜೀವನಮಾಡಿದರೆ ಆಗತಾನೇ ಉತ್ಸವ 
 


To know more about Astanga Yoga Vijnana Mandiram (AYVM) please visit our Official Website, Facebook and Twitter pages