Sunday, December 27, 2020

ತೀರ್ಥಕ್ಷೇತ್ರಗಳು - ಮಥುರಾ - ಬೃಂದಾವನ | Tirthakshetragalu - Mathura - Brindhavana

ತೀರ್ಥಕ್ಷೇತ್ರಗಳು - ಮಥುರಾ - ಬೃಂದಾವನ | Tirthakshetragalu - Mathura - Brindhavana Astanga Yoga Vijnana Mandiram (AYVM), Bangalore. Bharatheeya Samskruthi Karyagara - 37 (Part - 3) - Pradeshika Teertha Kshetragalu - Mathura - Brindhavana Discourse: Dr. K. S. Kannan Speaker Profile: https://articles.ayvm.in/2019/02/dr-k-s-kannan-profile.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 3) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಮಥುರಾ - ಬೃಂದಾವನ ಪ್ರವಚನ: ಡಾ. ಕೆ. ಎಸ್. ಕಣ್ಣನ್ ಮಥುರೆ ===== -ಹೆಸರುಗಳು - ಹಿರಿಮೆ - ಪ್ರಶಂಸಾತಾತ್ಪರ್ಯ - ಹಿನ್ನೆಲೆ : ಧ್ರುವ-ಶತ್ರುಘ್ನ - ಪಾಪಕ್ಷಯ-ಪ್ರಣವ - ಐತಿಹಾಸಿಕ ಬಿಂದುಗಳು - ಧ್ವಂಸ-ಪುನರುಜ್ಜೀವನ - ಕೃಷ್ಣಕಥಾಸಂಬಂಧ - ಧ್ರುವಘಾಟ್ ಬೃಂದಾವನ ======== - ಹಿರಿಮೆ - ರಾಸಕ್ರೀಡಾಸ್ಥಲ - ರಾಸಕ್ರೀಡಾತತ್ತ್ವ - ಕವಿದೃಷ್ಟಿ - ಸ್ನಾನ

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, December 20, 2020

ತೀರ್ಥಕ್ಷೇತ್ರಗಳು - ಪ್ರಯಾಗರಾಜ | Tirthakshetragalu - Prayagraj

ತೀರ್ಥಕ್ಷೇತ್ರಗಳು - ಪ್ರಯಾಗರಾಜ | Tirthakshetragalu - Prayagraj Astanga Yoga Vijnana Mandiram (AYVM), Bangalore. Bharatheeya Samskruthi Karyagara - 37 (Part - 2) - Pradeshika Teertha Kshetragalu - Prayagraj Discourse: Dr. K. S. Kannan Speaker Profile: https://articles.ayvm.in/2019/02/dr-k-s-kannan-profile.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 2) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಪ್ರಯಾಗರಾಜ ಪ್ರವಚನ: ಡಾ. ಕೆ. ಎಸ್. ಕಣ್ಣನ್ ಪ್ರಯಾಗರಾಜ (Prayagaraj) ================= ** ಶ್ರೇಷ್ಠತೆ ** ಎಷ್ಟು ಪ್ರಾಚೀನ ? ** ಐತಿಹಾಸಿಕ ನೋಟ ** ೫ ಪ್ರಯಾಗಗಳು ** ಮೊದಲ ಯಾಗವಾದುದೆಲ್ಲಿ? ** ಅಕ್ಷಯವಟ - ಆಲದೆಲೆಯ ಮೇಲೆ ಮಲಗಿದ ಶಿಶು ** ಮಾಘ-ಸ್ನಾನ ** ತ್ರಿವೇಣೀ-ಸಂಗಮ: ಜಡೆಯ ತತ್ತ್ವ ** ಕಾಳಿದಾಸ ಕಾಣಿಸಿದ ವೈಮಾನಿಕ ನೋಟ ** ದಾನ-ಅಭಿಷೇಕ-ಸ್ಮರಣೆಗಳು

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, December 13, 2020

ತೀರ್ಥಕ್ಷೇತ್ರಗಳು - ಕಾಶಿ | Tirthakshetragalu - Kaashi

ತೀರ್ಥಕ್ಷೇತ್ರಗಳು - ಕಾಶಿ | Tirthakshetragalu - Kaashi Astanga Yoga Vijnana Mandiram (AYVM), Bangalore. Bharatheeya Samskruthi Karyagara - 37 (Part - 1) - Pradeshika Teertha Kshetragalu - Kaashi Discourse: Dr. K. S. Kannan Speaker Profile: https://articles.ayvm.in/2019/02/dr-k-s-kannan-profile.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 1) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಕಾಶಿ ಪ್ರವಚನ: ಡಾ. ಕೆ. ಎಸ್ ಕಣ್ಣನ್ ಕಾಶಿ ** ಮೋಕ್ಷ-ದಾಯಕ-ಪುರಗಳು ** ಜಂಗಮ-ತೀರ್ಥಗಳಿಂದ ಸ್ಥಾವರ-ತೀರ್ಥಗಳ ಪಾವಿತ್ರ್ಯ ** ತೀರ್ಥ-ಲಕ್ಷಣ ** ಪವಿತ್ರಾಪವಿತ್ರ-ವಿಭಾಗ : ದೇಹದಲ್ಲಿ- ದೇಶದಲ್ಲಿ ** ಕಾಶಿ: ಹುಬ್ಬು-ಮೂಗುಗಳ ಸಂಧಿ ** ಮೋದೀಜಿಯವರಿಂದ ಕಾಶಿಯಲ್ಲಿ ಅಹಲ್ಯಾಬಾಯಿಯವರ ಸ್ಮರಣೆ ** ವಿದ್ಯಾಕೇಂದ್ರವಾಗಿ ಕಾಶಿ ** ಅನ್ನಪೂರ್ಣಾಷ್ಟಕ-ಕಾಲಭೈರವಾಷ್ಟಕ-ವಿಶ್ವನಾಥಾಷ್ಟಕಗಳು ** ಕಾಶಿಯ ದೇವಾಲಯಗಳು-ಘಟ್ಟಗಳು ** ಕಾಶಿಯ ವಿಶಿಷ್ಟ ಹೆಸರುಗಳು ** ಕಾಶಿಯಲ್ಲಿ ಮರಣವೇ? ** ಮಣಿಕರ್ಣಿಕಾಸ್ನಾನದ ಫಲ

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 788

ನಿಮ್ಮ ಜೀವನದಮೇಲೆಯೇ ಭಗವಂತನಿದ್ದರೂ, ಅದನ್ನು ಮರೆತು, ನಿಮ್ಮ ಜೀವನ ಹೇಗೆ ಸಾಗುತ್ತದೆ ಎಂಬುದನ್ನು ಕನ್ನಡಿಹಿಡಿದು ತೋರಿಸಲು ಅನುಗುಣವಾಗಿಯೇ ಕೆಳಗಣ ಚಿತ್ರಗಳಿವೆ. ಈ ಚಿತ್ರಗಳನ್ನು ನೋಡಿ ಮತ್ತೂ ಮೇಲಕ್ಕೆ ದೃಷ್ಟಿಯನ್ನು ಹತ್ತಿಸಿ, ಊರ್ಧ್ವದೃಷ್ಟಿಯಿಂದ ನೋಡಿದರೆ "ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ (ರಥದಲ್ಲಿರುವ ಕೇಶವನನ್ನು ದರ್ಶನಮಾಡಿದ ಬಳಿಕ ಪುನರ್ಜನ್ಮವಿಲ್ಲ) ಎಂಬುದಕ್ಕೆ ವಿಷಯವಾಗುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, December 12, 2020

ಶ್ರೀರಂಗ ವಚನಾಮೃತ (Sriranga Vachanamruta) - 787

ರಥದಲ್ಲಿ ಕೆಳಗಡೆ, ಜೀವನದ ಜಗತ್ತಿನಲ್ಲಿ ಕಂಡುಬರುವ ಎಲ್ಲಾ ಚಿತ್ರಗಳನ್ನೂ ಹಂತಹಂತವಾಗಿ ಚಿತ್ರಿಸಿ, ಆ ಎಲ್ಲದರ ಮೇಲೆ ಜಗನ್ನಾಥನನ್ನು ಕುಳ್ಳಿರಿಸಿದ್ದಾರೆ. ರಥದ ಕೆಳಭೂಮಿಕೆಯಲ್ಲಿ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿ, ಮೇಲೆಮೇಲೆ ಹೋದಂತೆ ಜ್ಞಾನಿಗಳು, ಋಷಿಗಳು, ದಿಕ್ಪಾಲಕರು, ಮೊದಲಾದ ಚಿತ್ರಗಳನ್ನು ಚಿತ್ರಿಸುವ ಕ್ರಮವುಂಟು. ಕೇವಲ ನಮ್ಮ ಮಟ್ಟದಲ್ಲಿಯೇ ನೋಡಿದರೆ ನಮಗೆ ಎಟಕುವುದು ವ್ಯಂಗ್ಯಚಿತ್ರವೇ. ಅದೇ ಸ್ವಲ್ಪ ಕತ್ತೆತ್ತಿನೋಡಿದರೆ ಮೇಲೆ ನಿಂತಿರುವ ಭಗವಂತನು ಕಾಣುತ್ತಾನೆ 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, December 11, 2020

ಶ್ರೀರಂಗ ವಚನಾಮೃತ (Sriranga Vachanamruta) - 786

ಎಲೆ ಹೂವು ಕಾಯಿ ಎಲ್ಲಕ್ಕೂ ಬೇರಿನೊಡನೆ ಬಾಳುವುದೇ ಉತ್ಸವ. ಬೇರಿನಿಂದ ಬೇರಾಗುತ್ತೇನೆ ಎಂದರೆ ಅಲ್ಲಿತಾನೇ ನಿರುತ್ಸವ. ಎಲ್ಲವೂ ಬಾಡಿ ಹೋಗುತ್ತದೆ. ಹಾಗೆಯೇ ಜೀವನವೃಕ್ಷಕ್ಕೂ ಇದು ತಪ್ಪಿದ್ದಲ್ಲ 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, December 10, 2020

ಶ್ರೀರಂಗ ವಚನಾಮೃತ (Sriranga Vachanamruta) - 785

ಮಗುವಿನ ಕೈಗೆ ಬೀದಿಯಲ್ಲಿ ಬಿದ್ದಿರುವ ಒಂದು ಹೆಂಚಿನಬಕ್ಕರೆ ಸಿಕ್ಕಿದರೂ ಅದರಲ್ಲಿ ಅದು ಒಂದು ಮಗುವಿನ ಉತ್ಸವ ಮಾಡಿಸುತ್ತೆ. "ಪಾಪ" ಎಂದು ಅದಕ್ಕೆ ತನ್ನ ಭಾವವನ್ನು ಅಂಟಿಸುತ್ತದೆ. ಆ ಹೆಂಚಿನ ಚೂರಿಗೆ ಜೀವವನ್ನು ತುಂಬುತ್ತದೆ. ಅದನ್ನು ಯಾರಾದರೂ ಕಿತ್ತುಎಸೆದರೆ ತನ್ನ ಮಗು ಹೋಯಿತು ಎಂದು ಅಳುತ್ತದೆ. ಏಕೆ? ಅಲ್ಲಿ ಅವುಗಳ ಹೃದಯವನ್ನು ತೆಗೆದುಕೊಳ್ಳಬೇಕು. ಮಗುವಿಗೆ ಅದು ಕೇವಲ ಹೆಂಚಿನ ಚೂರಲ್ಲ. ತನ್ನ ಮನಸ್ಸಿನಲ್ಲಿರುವ ಮಗುವನ್ನು ಅದರಲ್ಲಿಟ್ಟಿದೆ. ಆದ್ದರಿಂದ ಹಾಗೆ ಪ್ರೀತಿಪಡುವುದು, ಅಳುವುದು, ಎಲ್ಲಾಉಂಟು. ಹಾಗೆ ನಮ್ಮ ಜೀವನದ ತೊಟ್ಟಿಲಿನಲ್ಲಿ ಭಗವಂತನ ವಿಗ್ರಹವನ್ನಿಟ್ಟು ಅವನೊಡನೆ ಜೀವನಮಾಡಿದರೆ ಆಗತಾನೇ ಉತ್ಸವ 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, December 9, 2020

ಶ್ರೀರಂಗ ವಚನಾಮೃತ (Sriranga Vachanamruta) - 784

ಮೂಲವಿಗ್ರಹಕ್ಕೆ ಮೆರವಣಿಗೆ ಇಲ್ಲ. ಅದು ಗರ್ಭಗುಡಿಯಲ್ಲೇ ಇರುತ್ತದೆ. ಅದರ ಭಾವವನ್ನು ತೆಗೆದುಕೊಂಡು ಅದನ್ನು ಪ್ರತಿನಿಧಿಸುವ ಉತ್ಸವ-ಮೂರ್ತಿಗೇ ಮೇರವಣಿಗೆ. ಊರಲ್ಲೆಲ್ಲಾ ಮೆರೆದರೂ ಮತ್ತೆ ಬಂದುನಿಲ್ಲುವುದು ಮೂಲದಲ್ಲಿಯೇ. ಅಂತೆಯೇ ಹೃದಯಗರ್ಭದಲ್ಲಿ ಭಗವಂತನನ್ನು ತುಂಬಿಕೊಂಡು ಅದನ್ನು ಪ್ರತಿನಿಧಿಸುವ ನಡೆಯೇ ಉತ್ಸವ. ಜೀವನದಲ್ಲಿ ಎಲ್ಲಿದ್ದರಲ್ಲಿಯೂ ಅವನೊಡನೆ ಆಡಿ ಕೂಡಿ ನಲಿದಾಡುವುದೇ ಉತ್ಸವ  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, December 8, 2020

ಶ್ರೀರಂಗ ವಚನಾಮೃತ (Sriranga Vachanamruta) - 783

ಒಳಗಿರುವುದನ್ನು ಹೊರಗೆ ತರಲು ಉತ್ಸವ. ಮಹಾರಾಜರು ಒಳಗೆಮಲಗಿದ್ದರೆ ದ್ವಾರಪಾಲಕನು ಹೊರಗಿನಿಂದ ಬಂದವನಿಗೆ ಹಾಗೆಯೇ ಮಲಗಿರುವ ಅಭಿನಯದಿಂದ ಅದನ್ನು ಸೂಚಿಸುತ್ತಾನೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, December 7, 2020

ಶ್ರೀರಂಗ ವಚನಾಮೃತ (Sriranga Vachanamruta) - 782

ಫಲ-ಪುಷ್ಪಗಳೆಲ್ಲವೂ ತಮ್ಮತಮ್ಮ ಸಹಜಕಾಂತಿಯಿಂದ ಕೂಡಿ ಕಳೆದುಂಬಿ ಎಲ್ಲಕ್ಕೂ ಉತ್ಸವವಾಗಬೇಕಾದರೆ ಬೇರಿನಿಂದತಾನೆ? ಅಂತೆಯೇ ಜೀವಕ್ಕೆ ಉತ್ಸವ ಯಾವುದು ಎಂದರೆ ದೇವನ ಉತ್ಸವವೇ ಉತ್ಸವ 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, December 6, 2020

ಪುಣ್ಯ ತೀರ್ಥಗಳು | Punya Teerthagalu

ಪುಣ್ಯ ತೀರ್ಥಗಳು: Punya Teerthagalu Astanga Yoga Vijnana Mandiram (AYVM), Bangalore. Bharatheeya Samskruthi Karyagara - 36 (Part - 4) - Teertha kshetragalu Discourse: Dr. C. R. Ramaswamy Speaker Profile: https://articles.ayvm.in/2019/02/dr-cr-ramaswamy.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 4) - ತೀರ್ಥ ಕ್ಷೇತ್ರಗಳು ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ || ಶ್ರೀಃ || ಪುಣ್ಯತೀರ್ಥಗಳು * ಮಾನಸ ಸರೋವರ, ಗಂಗಾ-ಯಮುನಾ ..... ತುಂಗಭದ್ರಾ, ಕಾವೇರೀ..... * ಪ್ರಶ್ನೆಗಳು: ಪಾಪಪರಿಹಾರ - ಮೀನು, ಜಲಜಂತುಗಳು * ತೀರ್ಥ-ಧಾತು ತೃ-ತರಣಂ - ಪರಮಾತ್ಮನೇ – ಆತ್ಮೈವ ಸರ್ವ ತೇಏರ್ಥಾನಿ, ಎಲ್ಲ ತೀರ್ಥಗಳೂ ನವ್ಮ ಒಳಗೇ ಇವೆ ಪ್ರತೀಕ - ಸಾಮಾನ್ಯ ಜನರನ್ಮ್ನ ಒಳಗಿನ ತೀರ್ಥಕ್ಕೆ ಕೊಂಡೊಯ್ಯಲು ಹೊರಗಿನ ತೀರ್ಥಗಳು ತೀರ್ಥತ್ವ – ತೀರ್ಥೀ ಕುರ್ವಂತಿ ತೀರ್ಥಾನಿ ತೀರ್ಥಭೂತಾ ಹಿ ಸಾಧವಃ ಸಹಜ ತೀರ್ಥ - ನದಿಗಳು - ಜಂಗಮ ತೀರ್ಥ; ಸ್ಥಾವರ ತೀರ್ಥ * ಪ್ರಯೋಜನ: ಗಂಗಾ ನದಿಯ ರೋಗ ಪರಿಹಾರಕ + ಆರೋಗ್ಯ ವರ್ಧಕ ಶಕ್ತಿ - ಕಾರಣಗಳು ಪಾಪನಾಶಕ ಶಕ್ತಿ- ದರ್ಶನ, ಸ್ಮರಣ, ಸ್ನಾನ ದಿಂದ ಹೇಗೆ ? ಪಾಪ-ಪುಣ್ಯ - ಸ್ಥೂಲ ವಿವರಣೆ...... * ಗುರುತುಗಳನ್ನು ಅಳಿಸಲು ಸಾಧ್ಯವೇ ? ಹಾಗೆಯೇ ಜ್ಞಾನ/ಯೋಗ ದೃಷ್ಟಿಯಿಂದ - ಇದರ ವಿಜ್ಞಾನವನ್ನು ಬ್ರಹ್ಮಜ್ಞಾನಿಗಳು ಬಲ್ಲರು. ಸಹಜ ಶಕ್ತಿ + ಜ್ಞಾನಿಗಳ ಪಾದಸ್ಪರ್ಶ + ಸ್ನಾನ + ಸಂಕಲ್ಪದಿಂದ ವೃದ್ಧಿ * ನಮಗೆ ಏಕೆ ತಿಳಿಯುತ್ತಿಲ್ಲ? / ಪೂರ್ಣ ಪ್ರಯೋಜನ ಯಾವಾಗ ? ವಿಜ್ಞಾನಸಹಿತ ಮಾಡದಿರುವಿಕೆ - ಅವಗಾಹನ ಸ್ನಾನ ... ಕುಂಭಕ ... ಪಾದಸ್ಮರಣೆ ನಿತ್ಯ ಸ್ನಾನದಲ್ಲೂ ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು * ಶಕ್ತಿ ಸಂಕ್ರಮಣ ಸಾಧ್ಯವೇ? ಮಹಾಗುರುವಿನ ಪ್ರಯೋಗ.....

Watch this video in - YouTube

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 781

ಜೀವನಕ್ಕೆ ಊರ್ಧ್ವಮುಖವಾದ ಗತಿಯನ್ನು ಕೊಡುವ ಒಂದು ಸವನವೇ (ಉತ್+ಸವನ) (ಯಜ್ಞ) ಉತ್ಸವ  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, December 5, 2020

ಶ್ರೀರಂಗ ವಚನಾಮೃತ (Sriranga Vachanamruta) - 780

ದೇವರ ದರ್ಶನವಾದ ಮೇಲೆ ದೇವಾಲಯದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಕಾರಣ, ಭಗವಂತನ ದರ್ಶನ ಮಾಡಿಯಾದನಂತರ ಅದನ್ನು ಸ್ವಲ್ಪ ಹೊತ್ತು ಹಾಯಾಗಿ ಕುಳಿತು ಮನಸ್ಸಿಗೆ ತಂದುಕೊಳ್ಳಲು; ದರ್ಶನದಿಂದ ಕಣ್ಣಿಗೆ ಕಟ್ಟಿದಂತಿರುವ ಚಿತ್ರವನ್ನು ಹೃದಯಕ್ಕೆ ಕಟ್ಟುವಂತೆ ಮಾಡಿಕೊಳ್ಳಲು. ಹೊರಗಡೆ ಹೋದರೆ ತಾಪ, ಮುಳ್ಳು, ಕಲ್ಲು, ಮುಂತಾದದ್ದಿರುವುದರಿಂದ, ಅದನ್ನು ಪ್ರವೇಶಿಸುವುದಕ್ಕೆ ಮೊದಲು, ದೇವಾಲಯದ ವಾತಾವರಣದಲ್ಲಿರುವಾಗಲೇ ಅದನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, December 4, 2020

ಶ್ರೀರಂಗ ವಚನಾಮೃತ (Sriranga Vachanamruta) - 779

ಭಗವಂತನು ಭೂರ್ಭುವಸ್ಸುವರ್ಲೋಕಗಳನ್ನು ಅಳೆದು 'ತ್ರೇಧಾ ನಿದಧೇಪದಂ' ಎಂಬಂತೆ ತನ್ನ ಪಾದವಿನ್ಯಾಸ ಮಾಡಿದನೆಂದು ಶ್ರುತಿಯಲ್ಲೋ, ಸ್ಮೃತಿಯಲ್ಲೋ ಹಾಡಿದಪಕ್ಷದಲ್ಲಿ, ಅವನ ತಾದಾತ್ಮ್ಯ ಅನುಭವಿಸಬೇಕಾದರೆ ಅದಕ್ಕೆ ದರ್ಶನವೇ ಬೇಕು. ಇಲ್ಲದೆ ಕೇವಲ ಹೊರನೋಟದಲ್ಲಿ ಶಿಲೆಯನ್ನು ಹೇಳುವುದಾದರೆ, ನಮ್ಮ ಕಣ್ಣೆದುರಿಗೆ ಕಾಣುವಷ್ಟು ಎತ್ತರದಲ್ಲಿರುವ ಶಿಲೆ ಮೂರು ಲೋಕಗಳನ್ನೂ ವ್ಯಾಪಿಸಿನಿಂತಿದೆ ಎಂದರೆ ಹಾಸ್ಯಾಸ್ಪದವಾಗುತ್ತೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, December 3, 2020

ಶ್ರೀರಂಗ ವಚನಾಮೃತ (Sriranga Vachanamruta) - 778

ಈಗಿನ ಕಾಲದಲ್ಲಿ ಮನುಷ್ಯನು ಭೂಮಿಯ ಮೇಲೆ ವೇಗವಾಗಿ ಸಂಚರಿಸುತ್ತಾನೆ. ಆಕಾಶದಲ್ಲಿ ವಿಮಾನಗಳಿಂದ ಸಂಚಾರ ಮಾಡುತ್ತಿದ್ದಾನೆ. ಚಂದ್ರಲೋಕಕ್ಕೆ ಕೂಡಾ ಹೋಗುವ ಉತ್ಸಾಹ ತೋರಿಸುತ್ತಿದ್ದಾನೆ. ಈಗಿನ ಜನಗಳ ಮನಸ್ಸು ಹೀಗೆ ಓಡುತ್ತಿದೆ. ಹಿಂದೆ ಮಹರ್ಷಿಗಳ ಕಾಲದಲ್ಲಿ ದೇವಾಲಯಕ್ಕೂ, ಆತ್ಮಲೋಕಕ್ಕೂ ಹೋಗಿ ಅಲ್ಲಿನ ಸ್ಥಿತಿಗತಿಗಳನ್ನು ತಿಳಿದುಕೊಂಡು ಬರಬೇಕೆಂಬ ಆಸೆಯುಳ್ಳ ಜನರಿದ್ದರು. ತೀರ್ಥಕ್ಷೇತ್ರಗಳು ಮತ್ತು ದೇವಾಲಯಗಳೇ ಮಹರ್ಷಿಗಳು ದೇವಲೋಕ, ಆತ್ಮಲೋಕಗಳಿಗೆ ಹೋಗಲು ಇಚ್ಛೆಯುಳ್ಳವರಾಗಿ ತಯಾರು ಮಾಡಿಟ್ಟ ಯಾನಗಳೂ ನಕಾಶೆಗಳೂ ಆಗಿವೆ. ಅವರ ಮನಸ್ಸನ್ನು ಅರಿತವರು ಇದ್ದರೆ ತಾನೇ, ಅವುಗಳನ್ನು ಹೇಗೆ ಬಳಸಿಕೊಂಡು ಪ್ರಯೋಜನ ಪಡೆಯಬಹುದು ಎಂದು ಗೊತ್ತಾಗುತ್ತದೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, December 2, 2020

ಶ್ರೀರಂಗ ವಚನಾಮೃತ (Sriranga Vachanamruta) - 777

ಜ್ಞಾನಿಗಳು ಬಹಳ ಕರುಣೆಯಿಂದ ತುಂಬಿದವರಾಗಿ ತಮ್ಮ ಸುಖಕ್ಕೆ ಕಾರಣವಾದ ತಪಸ್ಯೆಯನ್ನು ಕಲ್ಲಿನ ಮೇಲಿಟ್ಟರು. ಸಾಹಿತ್ಯದ ಮೇಲೂ ಇಟ್ಟರು. ತಮ್ಮ ಮನೋಧರ್ಮವನ್ನು ವೀಣೆಯೇ ಮುಂತಾದ ವಾದ್ಯಗಳ ಮೇಲೂ ಇಟ್ಟರು. ಶಿಲ್ಪದ ಮೇಲೂ ಇಟ್ಟರು. ಅವರು ವೀಣೆಯಲ್ಲಿ ಶ್ರುತಿ ಮಾಡಿಟ್ಟಿದ್ದರು. ಯಾರೋ ಮಧ್ಯೆ ಶ್ರುತಿ ತಿರುಗುಸಿಬಿಟ್ಟಿದ್ದಾರೆ. ಆ ದಿವ್ಯವಾದ ಸದ್ದುಬರುತ್ತಿಲ್ಲ. ಯಾವನ ಒಂದು ಆತ್ಮಧರ್ಮವನ್ನು ಯಾವ ಪ್ರಕೃತಿಯ ಮೇಲೆ ಜ್ಞಾನಿಗಳು ಪ್ರತಿಷ್ಠೆಮಾಡಿದರೋ, ಅದರ ವ್ಯಾಖ್ಯಾನ ಅದಕ್ಕನುಗುಣವಾಗಿಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, December 1, 2020

ಶ್ರೀರಂಗ ವಚನಾಮೃತ (Sriranga Vachanamruta) - 776

ನಿದ್ರೆ ಮಾಡುತ್ತಿರುವವನು ಮೌನವಾಗಿ ನಿದ್ರೆ ಮಾಡುತ್ತಿದ್ದರೂ, ಆ ನಿದ್ರೆಯ ಮೌನವೇ ಅದರ ಸುಖವನ್ನು ವ್ಯಾಖ್ಯಾನ ಮಾಡುತ್ತೆ. ಪಕ್ಕದಲ್ಲಿದ್ದವನು 'ಸುಖವಾಗಿ ನಿದ್ರೆಮಾಡುತ್ತಿದ್ದಾನೆ' ಎಂದು ಕೊಳ್ಳುತ್ತಾನೆ. ಅಂತೆಯೇ ಕಲ್ಲಿಗೆ ಋಷಿಹೃದಯವನ್ನು ಕೊಟ್ಟಾಗ ಆ ಶಿಲೆಯ ಮೌನವೇ ಅದರ ವ್ಯಾಖ್ಯಾನವನ್ನು ಕೊಡುತ್ತದೆ. ಅಭಿಜ್ಞವಾದವನು ಅದನ್ನು ನೋಡಿದರೆ ಋಷಿಹೃದಯವನ್ನು, ಅದರ ಯೋಗನಿದ್ರೆಯನ್ನು, ಗುರುತಿಸುತ್ತಾನೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages