ಜೀವನಕ್ಕೆ ಬೇಕಾದ ವೃತ್ತಿ ಬೇಕು. ಹೇಗೆ ವರ್ತಿಸಬೇಕು ಎಂದರೆ ಮನೆಯಿಂದ ನದಿಗೆ ಈಜುವುದಕ್ಕೆ ಹೋದರೆ ತಿರುಗಿ ದಡ ಸೇರುವಂತೆ. ಅದು ಬಿಟ್ಟು ಪ್ರವಾಹದಲ್ಲಿ ಬಿದ್ದು ಒದ್ದಾಡುತ್ತಾ ಕೈಕಾಲು ಬಡಿದ, ದುಬು ದುಬು ಎಂದು ನೀರು ಕುಡಿದ, ಆಮೇಲೆ ಬಾಯಿ ಬಡಿದ ಎಂದರೆ ಹಾಗೆ ಹೋಗುವುದೇ ಜೀವನವಾಗುತ್ತೆ. ಪ್ರವಾಹದಲ್ಲಿ ಸಿಕ್ಕಿಬಿದ್ದಾಗ ಅದರಲ್ಲಿ ಕೆಮ್ಮುವವರು ಕೆಲವರು, ಚಿತ್ರವಿಚಿತ್ರವಾಗಿ ಇರುವವರು ಕೆಲವರು, ಹೀಗೆ ಸಹಸ್ರಾರು ವಿಧಗಳನ್ನು ನೋಡಬಹುದು. ಯಾವುದೋ ಪ್ರವಾಹಕ್ಕೆ ಸಿಕ್ಕಿ ಅಲ್ಲಲ್ಲೇ ಕೈಕಾಲು ಆಡಿಸುತ್ತಾ ಇದ್ದರೆ ಜೀವನವಾಗುವುದಿಲ್ಲ. ಹಾಗೆಯೇ ಮಾಯೆಯ ಪ್ರವಾಹದಲ್ಲಿ ಬಿದ್ದು ಅಲ್ಲಲ್ಲೇ ಆಡುತ್ತಿದ್ದಾರೆ. ಅಷ್ಟಷ್ಟರಲ್ಲೇ ನಾ ಮುಂದು, ತಾ ಮುಂದು ಎನ್ನುವ ರೀತಿ ಹೋಗುತ್ತಿದೆ. ಇದರಲ್ಲಿ ಎಲ್ಲರೂ ಪ್ರವಾಹಕ್ಕೆ ಸಿಕ್ಕಿಬಿದ್ದವರೇ. ಇದರಲ್ಲಿ ಹಿಂದೂ ಇಲ್ಲ, ಮುಂದೂ ಇಲ್ಲ. ಇದಾವುದೂ ಆದರ್ಶವಲ್ಲ.
To know more about Astanga Yoga Vijnana Mandiram (AYVM) please visit our Official Website, Facebook and Twitter pages