Thursday, July 21, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದು ವೃಕ್ಷವನ್ನು ತೆಗೆದುಕೊಂಡು ನೋಡುವುದಾದರೆ- ಅದರ ಅಂಕುರದಿಂದ ಹಿಡಿದು ಕಾಂಡ, ಪರ್ಣ, ಶಾಖೆ, ಉಪಶಾಖೆ, ತೊಗಟೆ, ಹೂವು, ಮಿಡಿ, ಕಾಯಿ, ಹಣ್ಣು ಇಷ್ಟರಲ್ಲೂ ಹರಿಯುವ ರಸ ಕೊನೆಯಲ್ಲಿ ಬಂದು ನಿಲ್ಲುವ ಬೀಜ ಇವೆಲ್ಲವೂ ಸಹ ಬೇರಿಗೆ ಸುದ್ದಿ ಮುಟ್ಟಿಸಿಯೇ ತನ್ನ ಪ್ರಾರಂಭ, ವಿಕಾಸ, ವಿಲಯ ಗಳನ್ನು ನಡೆಸುತ್ತವೆ. ಅಂತೆಯೇ ಮನುಷ್ಯನ ಒಂದು ಜೀವನ ವೃಕ್ಷದಲ್ಲೂ ಸಹ ಅದರ ಪ್ರಾರಂಭ, ವಿಕಾಸ, ವಿಲಯಗಳೆಂಬ ಅವಸ್ಥಾತ್ರಯದಲ್ಲೂ ಕೂಡ ವೃಕ್ಷಕ್ಕೆ ಬೇರಾಗಿರುವ ಜೀವನದ ಮೂಲಜ್ಯೋತಿಯಿಂದ ಬೇರ್ಪಡದೆ ಎಲ್ಲವನ್ನೂ ಅದಕ್ಕೆ ನಿವೇದಿಸಿಕೊಂಡು ಮುಂದುವರಿಯುವುದು ಸಹಜಸಿದ್ಧವಾಗಿದೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages