Thursday, October 27, 2022

ಶ್ರೀರಂಗ ವಚನಾಮೃತ (Sriranga Vachanamruta)

ದೇಹವು ವಿಶ್ವಶಿಲ್ಪಿಯ ಅದ್ಭುತ ಶಿಲ್ಪವಾಗಿದೆ. ನಾಭಿಚಕ್ರದಲ್ಲಿ ಸಂಚರಿಸಿದರೆ ಕಾಯವ್ಯೂಹ ಜ್ಞಾನವನ್ನು ಪಡೆಯಬಹುದು. ಪಾಪಪುಣ್ಯವಿವರ್ಜಿತವಾಗಿ ಬಾಳಲೂ ಎಡೆಯಿದೆ. ಜ್ಞಾನವನ್ನು ಪಡೆದು ಜ್ಞಾನಿಯಾಗಿ, ಸುಷುಮ್ನಾ ಮಾರ್ಗದಲ್ಲಿ, ಆನಂದ ಗುಹೆಯಲ್ಲಿ ಹೋಗಿ ಇರಲೂ ಜಾಗವಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 25, 2022

ಶ್ರೀರಂಗ ವಚನಾಮೃತ (Sriranga Vachanamruta)

ಶರೀರವು ಯೋಗಭೋಗಾಯತನವಾಗಿದೆ. ಜೀವಪರಮಾತ್ಮರನ್ನು ಒಂದು ಗೂಡಿಸುವುದೇ ಯೋಗಾಯತನ. ಭಗವಂತನ ಲೀಲಾವಿಭೂತಿಗನುಗುಣವಾಗಿ ಅವನು ಕೊಟ್ಟ ಐಶ್ವರ್ಯವನ್ನು ಅನುಭವಿಸುವಾಗ ಭೋಗಾಯತನ. ಸೃಷ್ಟಿ ಅರ್ಥವತ್ತಾಗಿದೆ. ಅದನ್ನರಿತು ವಿವೇಕದಿಂದ ಬಾಳಬೇಕಾಗಿದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 20, 2022

ಶ್ರೀರಂಗ ವಚನಾಮೃತ (Sriranga Vachanamruta)

ಮಥನ ಮಾಡಿದರೆ ಜೀವನದಲ್ಲಿ ವಿಷ, ಅಮೃತ ಎರಡೂ ಬರುತ್ತೇಪ್ಪಾ! ಊರ್ಧ್ವಮುಖವಾಗಿ ಹೋದರೆ ಅಮೃತವಪ್ಪಾ! ಅಲ್ಲಿಂದ ಕೆಳಕ್ಕೆ ಪ್ರವೃತ್ತಿ ಮಾರ್ಗಕ್ಕೆ ಬಂದಾಗ - ಮಾರ್ಗವು ಭಗವದ್ವಿರೋಧವಾದಾಗ - ವಿಷವಾಗುತ್ತೇಪ್ಪಾ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 18, 2022

ಶ್ರೀರಂಗ ವಚನಾಮೃತ (Sriranga Vachanamruta)

ನಮ್ಮ ಅಂತರ್ದೇಶದಿಂದ ನಾವಿರುವ ದೇಶದವರೆಗೂ ಒಂದು ಸಂಬಂಧವಿದೆ. ಸಂಬಂಧವನ್ನು ಕೆಡಿಸಿಕೊಳ್ಳದೆ ಬೆಳೆಯಬೇಕು. ನಾಡು ಚೆನ್ನಾಗಿರಬೇಕು, ಬೀಡೂ ಚೆನ್ನಾಗಿರಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 13, 2022

ಶ್ರೀರಂಗ ವಚನಾಮೃತ (Sriranga Vachanamruta)

ನಿಸರ್ಗದಲ್ಲಿ ಮಹಾಮೌನವಿದ್ದರೂ ಅದು ತನ್ನದೇ ಆದ ವಿವರಣೆಯನ್ನಿಟ್ಟುಕೊಂಡಿದೆ. ಅದನ್ನರಿತು ವಿವರಣೆ ಕೊಡಬೇಕು. ಹಲಸಿನಹಣ್ಣು ವಾಸನೆಯಿಂದಲೇ ತನ್ನ ವಿಚಾರವನ್ನು ಹೊರಚೆಲ್ಲುತ್ತೆ. ಆದರೆ ಮೇಲೆ ನೆಕ್ಕಿದರೆ ಬರೀ ಮುಳ್ಳು. ಸವಿ ದೊರಕದು. ಅದನ್ನು ಭೇದಿಸಿ ಒಳಹೊಕ್ಕು ನೋಡಿದರೆ ಅದರ ಸವಿ ತಿಳಿಯುತ್ತೆ. ಅಂತೆಯೇ ಜೀವನದ ಒಳಹೊಕ್ಕು ಅದರ ಸೊಬಗೇನು ಎನ್ನುವುದನ್ನರಿತು ಬಾಳಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 11, 2022

ಶ್ರೀರಂಗ ವಚನಾಮೃತ (Sriranga Vachanamruta)

ನಾವು ನಮ್ಮ ಜೀವಮಾನದಲ್ಲಿ ಯಾವುದೇ ಕಾರ್ಯವನ್ನು ಮಾಡಿದರೂ ಅದರ ಹಿನ್ನೆಲೆಯಲ್ಲಿ ಒಂದು ಮಹತ್ವದ ಉದ್ದೇಶವಿರಬೇಕು, ಮೂಲಕ್ಕೆ ಕರೆದೊಯ್ಯುವಂತಿರಬೇಕು. ಪ್ರತಿನಿತ್ಯದ ನಮ್ಮ ಕಾರ್ಯಗಳೂ ಕೂಡ ನಮ್ಮನ್ನು ಭಗವಂತನೆಡೆಗೆ ಕರೆದೊಯ್ಯುವಂತಿರಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, October 6, 2022

ಶ್ರೀರಂಗ ವಚನಾಮೃತ (Sriranga Vachanamruta)

ಪ್ರಕಾಶಕ್ಕೆ ಮರೆ ಇಲ್ಲದ ವಿಕಾಸವಿರಬೇಕು. ಅಂತಹ ಜೀವನ ಮಾಡುವ ವಿಧಾನವು ಸನಾತನ ಆರ್ಯ ಭಾರತೀಯರಲ್ಲಿ ಕಂಡುಬರುತ್ತದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, October 4, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕನುಗುಣವಾದ ಸಂಸ್ಕೃತಿ ಬೆಳೆಸಿಕೊಳ್ಳಿ. ಬೇರಿನಿಂದ ಎಲ್ಲಕ್ಕೂ ರಸ ಹರಿದೇ ಗಿಡ ಬೆಳೆಯುತ್ತಿದೆ. ಬೇರನ್ನು ಮುಟ್ಟಿಯೇ ಗಿಡದ ರಸ ಎಲ್ಲೆಡೆಗೂ ಹರಿಯುತ್ತದೆ. ಆತ್ಮವನ್ನು ಮುಟ್ಟಿಯೇ ನಮ್ಮ ಬಾಳಾಟ ಸಾಗಬೇಕಾಗಿದೆ. ರಸವನ್ನು ತುಂಬಿ ಹರಿಸಿದರೇ ಭೌತಿಕ-ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳ ಬೆಳವಣಿಗೆ ಚೆನ್ನಾಗಿ ಆಗಿರುವುದು. ಅಂತಹ ಮೂರು ಕ್ಷೇತ್ರಗಳಿಂದೊಡಗೂಡಿದ ಜೀವನ ನಮ್ಮದು ಎಂದು ಜೀವನದ ಬಗ್ಗೆ ತೀರಮಾನಕ್ಕೆ ಬಂದ ಬಳಿಕ ಅದಕ್ಕನುಗುಣವಾದ ಸಂಸ್ಕೃತಿಯನ್ನು ನಾವು ಬೆಳೆಸಿಕೊಳ್ಳಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, October 2, 2022

Sriranga Mahaguru - Nectarine Nuggets

Truly there is an Artha (meaning) for Life; not just an Artha but Paramārtha (ultimate value) exists.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, October 1, 2022

Sriranga Mahaguru - Nectarine Nuggets

The Puruṣārtha (four-fold values) indeed is the Artha (meaning) of Life. Among all the Beings, the human being is the most superior; among the human beings the Brahmajñāni is the noblest.

To know more about Astanga Yoga Vijnana Mandiram (AYVM) please visit our Official Website, Facebook and Twitter pages