Tuesday, June 27, 2023

ಶ್ರೀರಂಗ ವಚನಾಮೃತ (Sriranga Vachanamruta)

ಧ್ಯೇಯ ಒಂದೇ ಆಗಿದ್ದರೆ ದೇಶದಲ್ಲಿ ಒಗ್ಗಟ್ಟು ಉಳಿಯುತ್ತದೆ. ಸಂಗೀತಗಾರನ ಮನೋಧರ್ಮವನ್ನು ಅನುಸರಿಸಿ ಮೃದಂಗ, ಪಿಟೀಲು, ಘಟ ಎಲ್ಲವನ್ನೂ ನುಡಿಸಿದರೆ ಪಕ್ಕವಾದ್ಯವಾಗುತ್ತದೆ. ಪಕ್ಕದಲ್ಲಿ ಕುಳಿತಿದ್ದರೂ ಸಂಗೀತಗಾರನು ಹಾಡುವುದೇ ಒಂದು, ಇವನು ನುಡಿಸುವುದೇ ಒಂದಾದರೆ ಪಕ್ಕವಾದ್ಯ ವಾಗಲಾರದು. ಸಂಗೀತಗಾರನು ಹಾಡುವ ಹಾಡನ್ನು ವಾದ್ಯಗಳ ಮೂಲಕ ತರುವ ಧ್ಯೇಯ ಒಂದಾಗಿದ್ದರೆ ಅಲ್ಲಿ ಒಡಕಿಗೆ ಅವಕಾಶವಿಲ್ಲ. ಅಂತೆಯೇ ಪುರುಷಾರ್ಥಕ್ಕನುಗುಣವಾದ ಬಾಳಾಟವೇ ಧ್ಯೇಯವಾಗಿದ್ದರೆ ಅಲ್ಲಿ ಒಡಕಿಗೆ ಅವಕಾಶವಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 22, 2023

ಶ್ರೀರಂಗ ವಚನಾಮೃತ (Sriranga Vachanamruta)

ನಾವು ಕಟ್ಟುವ ನಾಡೇ ಆಗಲೀ, ಬೀಡೇ ಆಗಲೀ ನಮ್ಮ ಜೀವನದ ಮಹಾಧ್ಯೇಯಕ್ಕೆ ತಕ್ಕಂತಿರಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 20, 2023

ಶ್ರೀರಂಗ ವಚನಾಮೃತ (Sriranga Vachanamruta)

ಬುದ್ಧಿ ಚೆನ್ನಾಗಿರುವಾಗ ಒಂದು ರೀತಿ ಕೆಲಸ ಮಾಡುತ್ತಾನೆ. ಕುಡಿದು ಮತ್ತೇರಿದಾಗ ಮತ್ತೊಂದು ರೀತಿ ಕೆಲಸ ಮಾಡುತ್ತಾನೆ. ಕೆಲಸ ಮಾಡುವ ವಿಚಾರದಲ್ಲಿ ತೆಗೆದುಕೊಂಡರೆ ಕುಡುಕನದೇ ಒಂದು ಕೈ ಮೇಲು ಎಂದು ಹೇಳಬೇಕು. ಆದರೆ ಬುದ್ಧಿ ಚೆನ್ನಾಗಿದ್ದಾಗ  ಗುರಿ  ಅಥವಾ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುತ್ತಾನೆ. ಹಾಗೆ ಅಜ್ಞಾನಕ್ಕೆ ಸಿಕ್ಕಿದ ಬುದ್ಧಿ, ಕುಡುಕ ಬುದ್ಧಿಯಂತಾಗುತ್ತೆ. ಕೆಲಸವೇನೋ ಹಗಲು ರಾತ್ರೆ ನಡೆಯುತ್ತಿದ್ದರೂ ಗೊತ್ತುಗುರಿ ಇರುವುದಿಲ್ಲ. ಆದರೆ ವಿವೇಕಿಗಳ ಜೀವನ ಒಂದು ಧ್ಯೇಯದೊಡನೆ ಕೂಡಿರುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 15, 2023

ಶ್ರೀರಂಗ ವಚನಾಮೃತ (Sriranga Vachanamruta)

ಇಡೀ ಜೀವನವನ್ನು ಆಮೂಲಾಗ್ರವಾಗಿ ನೋಡಿ, ಜೀವನದ ಗುಟ್ಟೇನೆಂಬುದನ್ನು ಅರಿತು ಅದಕ್ಕನುಗುಣವಾಗಿ ಜೀವನವನ್ನು ಅಳವಡಿಸಿಕೊಳ್ಳುವುದೇ ಜೀವನದ ಮಹಾಧ್ಯೇಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 13, 2023

ಶ್ರೀರಂಗ ವಚನಾಮೃತ (Sriranga Vachanamruta)

ಆತ್ಮಸಾಕ್ಷಾತ್ಕಾರವು ಮಹಾಧ್ಯೇಯ. ಅದಕ್ಕಾಗಿ ಶರೀರ ರಕ್ಷಣೆ ಮಾಡಿಕೊಳ್ಳುವುದು ಅವಾಂತರಧ್ಯೇಯ. ಈ ಅವಾಂತರಧ್ಯೇಯಕ್ಕೆ ಎಲ್ಲ ಗಮನವನ್ನೂ ಕೊಟ್ಟು  ಧ್ಯೇಯವನ್ನು ಮರೆಯಬೇಡಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 8, 2023

ಶ್ರೀರಂಗ ವಚನಾಮೃತ (Sriranga Vachanamruta)

ಮಹಾಧ್ಯೇಯದ ಸಾಧನೆಗಾಗಿ ಅವಾಂತರಧ್ಯೇಯಗಳನ್ನು ಇಟ್ಟುಕೊಳ್ಳ ಬೇಕಾಗುವುದು. ಆದರೆ ಅವಾಂತರಧ್ಯೇಯಗಳ ಗೊಂದಲದಲ್ಲಿ ಮಹಾಧ್ಯೇಯವನ್ನು ಮರೆತುಬಿಡಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 6, 2023

ಶ್ರೀರಂಗ ವಚನಾಮೃತ (Sriranga Vachanamruta)

ಮನುಷ್ಯನು ನಡೆಯಲಾರದಾದಾಗ ದೊಣ್ಣೆಯನ್ನು ಊರಿಕೊಂಡು ನಡೆಯುವುದುಂಟು. ಊರಿಕೊಂಡು ನಡೆಯದಿದ್ದರೆ ಶರೀರಕ್ಕೆ ಅಪಾಯ. ಆದ್ದರಿಂದ ಊರಿಕೊಂಡೇ ನಡೆಯಬೇಕು. ಹಾಗೆ ಹೆಜ್ಜೆ ಹೆಜ್ಜೆಗೂ ಆ ದೊಣ್ಣೆಯ ಅವಲಂಬನ ಬೇಕಾದಂತೆ, ಜೀವಕ್ಕೆ ಅವಲಂಬನವಾದ ಭಗವಂತನನ್ನೂ ಹೆಜ್ಜೆಹೆಜ್ಜೆಗೂ ನೆನೆಸಿಕೊಳ್ಳುತ್ತಾ  ನಡೆಯಬೇಕಾದದ್ದೇ ಮಾನವನ ಧ್ಯೇಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 1, 2023

ಶ್ರೀರಂಗ ವಚನಾಮೃತ (Sriranga Vachanamruta)

ಮಹಾಧ್ಯೇಯಬದ್ಧವಾದ ಜೀವನ ಮಾಡಲು ಜೀವಕ್ಕೆ ಸ್ವಾತಂತ್ರ್ಯ ಬೇಕು. ಸತ್ಯವನ್ನುಳಿಸಿಕೊಂಡು, ಸತ್ಯದೊಡಗೂಡಿ ಬಾಳಾಟ ಮಾಡಲನುಗುಣವಾದ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages